RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಬೆಂಗಳೂರಿನಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ನಗರದ ವಿವಿಧಡೆ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಸಾರಿಗೆ ನಿಯಮಗಳನ್ನು ವಿರುದ್ದ ಸಂಚರಿಸುವ ಹಲವಾರು ವಾಹನಗಳನ್ನು ಪತ್ತೆ ಹಚ್ಚುತ್ತಿದ್ದು, ವಿಶೇಷ ಕಾರ್ಯಾಚರಣೆಯಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce Phantom ಕಾರು ಸಿಕ್ಕಿ ಬಿದ್ದಿದೆ.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

RTO ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಹತ್ತುಕ್ಕೂ ಹೆಚ್ಚು ಸೂಪರ್ ಕಾರುಗಳು ಸಾರಿಗೆ ಇಲಾಖೆಯ ನಿಯಮಗಳ ವಿರುದ್ದವಾಗಿ ಸಂಚರಿಸಿ ಸಿಕ್ಕಿಬಿದ್ದಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಒಡೆತನದಲ್ಲಿದ್ದ Rolls Royce Phantom ಕಾರು ಕೂಡಾ ಸಾರಿಗೆ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಹೊಸ ಮೋಟಾರ್ ವೆಹಿಕಲ್ ಆಕ್ಟ್ ಜಾರಿ ನಂತರ ಸಂಚಾರಿ ನಿಯಮಗಳ ಉಲ್ಲಂಘನೆ ವಿರುದ್ದ ಕಠಿಣ ಕ್ರಮ ಜರುಗಿಸಲಾಗುತ್ತಿದ್ದು, ವಾಹನಗಳ ದಾಖಲೆ ಪರಿಶೀಲನೆ ವೇಳೆ ಸಾರಿಗೆ ಇಲಾಖೆಯ ಅಧಿಕಾರಿಗಳು ನಿಯಮ ಬಾಹಿರವಾಗಿ ಸಂಚರಿಸುತ್ತಿದ್ದ Rolls Royce Phantom ಕಾರನ್ನು ವಶಕ್ಕೆ ಪಡೆದಿದ್ದಾರೆ.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ನಗರದ ಪ್ರತಿಷ್ಠಿತ ಯುಬಿ ಸಿಟಿ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಐಷಾರಾಮಿ ಕಾರುಗಳ ಪರಿಶೀಲನೆ ಮಾಡಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳು ರೋಲ್ಸ್ ರಾಯ್ಸ್, ಫೋರ್ಷೆ, ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್, ಆಡಿ ಸೇರಿದಂತೆ ಹಲವು ಸೂಪರ್ ಕಾರುಗಳನ್ನು ತಡೆದು ದಾಖಲೆ ಪರಿಶೀಲನೆ ಮಾಡಿ ಸಾರಿಗೆ ನಿಯಮ ಉಲ್ಲಂಘಿಸಿರುವ ಮಾಲೀಕರಿಗೆ ಶಾಕ್ ನೀಡಿದರು.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್‌ ನೇತೃತ್ವದಲ್ಲಿ ನಗರದ ವಿವಿಧಡೆ ನಡೆದ ಕಾರ್ಯಾಚರಣೆಯಲ್ಲಿ ತೆರಿಗೆ ಕಟ್ಟದ ಹಾಗೂ ಮಾಲೀಕತ್ವ ಬದಲಾವಣೆ ಮಾಡಿಕೊಳ್ಳದೆ ಸಂಚಾರ ಮಾಡುತ್ತಿರುವ ವಾಹನಗಳನ್ನು ಸೀಜ್ ಮಾಡಿದ್ದಾರೆ.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ದಾಖಲೆಗಳ ಪರಿಶೀಲನೆ ವೇಳೆ ಯುಬಿ ಸಿಟಿಯತ್ತ ಸಂಚರಿಸುತ್ತಿದ್ದ Rolls Royce Phantom ಕಾರನ್ನು ತಡೆದ ಆರ್‌ಟಿಓ ಅಧಿಕಾರಿಗಳು ಕಾರಿನ ದಾಖಲೆ ಪರಿಶೀಲಿಸಿದಾಗ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಆದರೆ ನಟ ಅಮಿತಾಬ್ ಬಚ್ಚನ್ ಅವರು Rolls Royce Phantom ಕಾರನ್ನು 2019ರಲ್ಲಿಯೇ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಬಾಬು ಎಂಬುವರಿಗೆ ಮಾರಾಟ ಮಾಡಿದ್ದರು.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಹಲವಾರು ಹಿಟ್ ಚಿತ್ರಗಳೊಂದಿಗೆ ಹತ್ತಾರು ಬಗೆಯ ಸೂಪರ್ ಕಾರುಗಳ ಕಲೆಕ್ಷನ್ ಹೊಂದಿರುವ ಅಮಿತಾಬ್ ಬಚ್ಚನ್ ಅವರು ಹೊಸ ಕಾರು ಖರೀದಿಗಾಗಿ ತಮ್ಮ ಬಳಿಯಿದ್ದ 2007ರ Rolls Royce Phantom ಕಾರನ್ನು ಮಾರಾಟ ಮಾಡಿದ್ದರು.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

2007ರಲ್ಲಿ ಏಕಲವ್ಯ ಎನ್ನುವ ಥ್ರಿಲ್ಲರ್ ಚಿತ್ರದಲ್ಲಿ ಅದ್ಬುತ ಅಭಿಯನಕ್ಕಾಗಿ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಅಮಿತಾಬ್ ಬಚ್ಚನ್ ಅವರಿಗೆ ಸಿಲ್ವರ್ ಕಲರ್ ಹೊಂದಿದ್ದ Rolls Royce Phantom ಉಡುಗೊರೆಯಾಗಿ ಸಿಕ್ಕಿತ್ತು.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಏಕಲವ್ಯ ಚಿತ್ರವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ತೆರೆ ಕಾಣುವ ಮೂಲಕ ಉತ್ತಮ ಗಳಿಕೆ ಕಂಡಿದ್ದಕ್ಕಾಗಿ ಸಿಕ್ಕ ಉಡುಗೊರೆಯನ್ನು ನಟ ಅಮಿತಾಬ್ ಬಚ್ಚನ್ ಅವರು 2019ರಲ್ಲಿ ಉಮ್ರಾ ಡೆವೆಲಪರ್ ಮಾಲೀಕರಾದ ಬಾಬು ಎಂಬುವವರಿಗೆ ರೂ. 6 ಕೋಟಿ ಮಾರಾಟ ಮಾಡಿದ್ದರು.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಸೆಲೆಬ್ರಿಟಿ ಕಾರು ಎಂಬ ಕಾರಣಕ್ಕೆ ಮೂಲ ಬೆಲೆಗಿಂತಲೂ ದುಪ್ಪಟ್ಟು ಹಣ ಕೊಟ್ಟು ಖರೀದಿಸಿದ್ದ ಬಾಬು ಕಾರಿನ ಮಾಲೀಕತ್ವ ಬದಲಾವಣೆ ಮಾಡದೆ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಅಮಿತಾಬ್ ಬಚ್ಚನ್ ಅವರಿಂದ Rolls Royce Phantom ಖರೀದಿಸಿ ಮೂರು ವರ್ಷಗಳಾದರೂ ಮಾಲೀಕತ್ವ ಬದಲಾವಣೆ ಮಾಡದೆ ಸಂಚರಿಸುತ್ತಿರುವ ಕಾರಣಕ್ಕೆ ಸೀಜ್ ಮಾಡಲಾಗಿದ್ದು, ಸಾರಿಗೆ ನಿಯಮಗಳ ಪ್ರಕಾರ ಈ ಪ್ರಕರಣದಲ್ಲಿ ಬಾಬು ಅವರಿಗೆ ಭಾರೀ ಪ್ರಮಾಣದ ದಂಡ ಭರಿಸಬೇಕಾಗಬಹುದು.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಸದ್ಯ ಸೀಜ್ ಮಾಡಲಾಗಿರುವ Rolls Royce Phantom ಕಾರು ನೆಲಮಂಗಲದಲ್ಲಿರುವ ಆರ್‌ಟಿಓ ಕಚೇರಿಯಲ್ಲಿದ್ದು, ಮಾಲೀಕತ್ವ ಬದಲಾವಣೆಗಾಗಿ ಹೆಚ್ಚಿನ ಮಟ್ಟದ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಹೋಗಿ ಇದೀಗ ಭಾರೀ ದಂಡ ತೆತ್ತಬೇಕಾದ ಪರಿಸ್ಥಿತಿ ಎದುರಾಗಿದೆ.

Rolls Royce Phantom ಕಾರು ಖರೀದಿಸುವಾಗ ಬಾಬು ಅವರು ಡೀಲರ್ಸ್ ಮೂಲಕ ಕಾರು ಖರೀದಿಸುವಾಗ ಐಟಿ ಇಲಾಖೆಗೆ ಕೇವಲ 1.50 ಕೋಟಿ ಲೆಕ್ಕ ತೋರಿಸಿದ್ದು, ರೂ. 6 ಕೋಟಿಯ ಬೆಲೆಯ ಕಾರನ್ನು ಖರೀದಿಸಲು ಕಪ್ಪು ಹಣ ಬಳಕೆಯಾಗಿರುವ ಬಗೆಗೆ ಇದೀಗ ಐಟಿ ಅಧಿಕಾರಿಗಳು ಕೂಡಾ ಪರಿಶೀಲನೆ ಮಾಡುವ ಸಾಧ್ಯತೆಗಳಿವೆ.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ಜೊತೆಗೆ ವಶಪಡಿಸಿಕೊಳ್ಳಲಾದ Rolls Royce Phantom ಕಾರಿನ ಥರ್ಡ್ ಪಾರ್ಟಿ ಇನ್ಸುರೆನ್ಸ್ ಮುಗಿದು ಕೆಲ ತಿಂಗಳುಗಳೇ ಕಳೆದಿದ್ದು, ಭರ್ಜರಿ ಕಾರ್ಯಾಚರಣೆ ವೇಳೆ ಹಲವು ಐಷಾರಾಮಿ ಕಾರುಗಳ ಮಾಲೀಕರ ಕಳ್ಳಾಟಗಳು ಬಯಲಾಗುತ್ತಿವೆ.

RTO Raid: ಬೆಂಗಳೂರಿನಲ್ಲಿ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ Rolls Royce ಕಾರು ಸೀಜ್

ನಿನ್ನೆ ನಡೆದ ಆರ್‌ಟಿಓ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ದ್ವಿಚಕ್ರ ವಾಹನವೊಂದರ ಇನ್ಸುರೆನ್ಸ್ ಸೂಪರ್ ಕಾರಿನ ಇನ್ಸುರೆನ್ಸ್‌ನೊಂದಿಗೆ ಜೋಡಣೆ ಮಾಡಿರುವುದನ್ನು ಪತ್ತೆಹಚ್ಚಲಾಗಿದ್ದು, ಸೂಪರ್ ಕಾರುಗಳ ಮಾಲೀಕರ ಕಳ್ಳಾಟಗಳಿಗೆ ಅಧಿಕಾರಿಗಳನ್ನೇ ತಬ್ಬಿಬ್ಬಾಗುವಂತೆ ಮಾಡಿದೆ.

More from DriveSpark

Article Published On: Monday, August 23, 2021, 16:52 [IST]
English summary
Rolls royce car seized by rto registered in amitabh bachchan name details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+