ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಹೋಂಡಾ ಕಾರ್ಸ್ ಇಂಡಿಯಾ ತನ್ನ ಅಮೇಜ್ ಸಬ್ ಕಾಂಪ್ಯಾಕ್ಟ್ ಸೆಡಾನ್‌ನ ಎರಡನೇ ತಲೆಮಾರಿನ ಮಾದರಿ 2 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಘೋಷಿಸಿದೆ. ಎರಡನೇ ತಲೆಮಾರಿನ ಅಮೇಜ್ ಅನ್ನು ಏಪ್ರಿಲ್ 2018 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಮೂರು ವರ್ಷಗಳಲ್ಲಿ ಹೋಂಡಾ 2 ಲಕ್ಷ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಅಮೇಜ್ ಭಾರತದಲ್ಲಿ ಹೋಂಡಾದ ಅತ್ಯಂತ ಯಶಸ್ವಿ ಮಾದರಿಯಾಗಿದೆ ಮತ್ತು 2013ರ ಏಪ್ರಿಲ್ ತಿಂಗಳಿನಲ್ಲಿ ಮೊದಲ ಬಾರಿ ಬಿಡುಗಡೆಗೊಂಡ ಈ ಮಾದರಿ ಒಟ್ಟು 4.6 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಸಿಇಒ ಗಕು ನಕಾನಿಶಿ ಅವರು ಮಾತನಾಡಿ, 2ನೇ ತಲೆಮಾರಿನ ಅಮೇಜ್‌ನ 200,000 ನೇ ಯೂನಿಟ್ ವಿತರಣೆಯು ಹೋಂಡಾ ಕಾರ್ಸ್ ಇಂಡಿಯಾ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಅಂತಹ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪರಿಚಯಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ತಮ್ಮ ಮೊದಲ ಕಾರಿನಿಂದ ಉತ್ತಮ ಗುಣಮಟ್ಟ, ಸೌಕರ್ಯ ಮತ್ತು ಉತ್ತಮ ಸಬ್ ಕಾಂಪ್ಯಾಕ್ಟ್ ಸೆಡಾನ್ ಕಾರು ನಿರೀಕ್ಷಿಸುವ ಗ್ರಾಹಕರಿಗೆ ಅಮೇಜ್ ಉತ್ತಮ ಆಯ್ಕೆಯಾಗಿದೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದರು. ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಹೋಂಡಾ ಕಂಪನಿಯು ಅಮೇಜ್‌ನ ಫೇಸ್‌ಲಿಫ್ಟ್ ಅನ್ನು ಬಿಡುಗಡೆಗೊಳಿಸಿತ್ತು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಹೋಂಡಾ ಕಾಂಪ್ಯಾಕ್ಟ್-ಸೆಡಾನ್ ನ ಹಳೆಯ ಮಾದರಿಯ ಮೇಲೆ ಅಮೇಜ್ ಫೇಸ್‌ಲಿಫ್ಟ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿದೆ. ಹೊಸ ಮುಂಭಾಗದ ಬಂಪರ್, ಹೊಸ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸಿ-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಹೊಂದಿವೆ. ಇದರೊಂದಿಗೆ ಮರುವಿನ್ಯಾಸಗೊಳಿಸಿದ

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಕ್ರೋಮ್ ಫ್ರಂಟ್ ಗ್ರಿಲ್, ಕ್ರೋಮ್ ಡೋರ್ ಹ್ಯಾಂಡಲ್‌ಗಳು, 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಫೇಸ್‌ಲಿಫ್ಟೆಡ್ ಕಾರಿನ ಒಟ್ಟಾರೆ ಸಿಲೂಯೆಟ್ ಬದಲಾಗದೆ ಉಳಿದಿದೆ. ಇನ್ನು ಈ ಹೊಸ ಅಮೇಜ್ ಕಾರಿನ ಒಳಭಾಗವು ಹೊಸ ಸೀಟ್ ಅಪ್‌ಹೋಲ್ಸ್ಟರಿ ಸೇರಿದಂತೆ ಹಲವು ಅಪ್‌ಗ್ರೇಡ್‌ಗಳನ್ನು ಮಾಡಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಇದರ ಒಳಭಾಗದಲ್ಲಿ ಶುದ್ಧ ಗಾಳಿಗಾಗಿ ಅಪ್‌ಗ್ರೇಡ್ ಕ್ಯಾಬಿನ್ ಫಿಲ್ಟರ್ ಅನ್ನು ಸೇರಿಸಿದೆ. ಇತರ ಅಪ್‌ಗ್ರೇಡ್‌ಗಳು ಸೇರಿವೆ. ಡ್ಯಾಶ್‌ಬೋರ್ಡ್‌ನಲ್ಲಿ ಸ್ಯಾಟಿನ್ ಸಿಲ್ವರ್ ಅಸ್ಸೆಂಟ್, ಕ್ಲೈಮೇಂಟ್ ಕಂಟ್ರೋಲ್, ಹೋಂಡಾ ಸ್ಮಾರ್ಟ್ ಕೀ ಮತ್ತು ಪುಶ್-ಬಟನ್ ಸ್ಟಾರ್ಟ್ ಅನ್ನು ಹೊಂದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಇದರೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವಾಯ್ಸ್ ಕಮಾಂಡ್‌ಗಳು ಸೇರಿದಂತೆ ಇತರ ಫೀಚರ್ಸ್ ಗಳನ್ನು ಕೂಡ ಒಳಗೊಂಡಿದೆ, ಇನ್ನು ಈ ಹೊಸ ಅಮೇಜ್ ಕಾರು ಮೆಟಿರಾಯ್ಡ್ ಗ್ರೇ, ಪ್ಲಾಟಿನಂ ಪರ್ಲ್ ವೈಟ್, ಲೂನಾರ್ ಸಿಲ್ವರ್, ಗೋಲ್ಡನ್ ಬ್ರೌನ್ ಮತ್ತು ರೇಡಿಯಂಟ್ ರೆಡ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ,

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಹೋಂಡಾ ಅಮೇಜ್ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್ ಗಳನ್ನು ನೀಡಿದ್ದಾರೆ. ಸುರಕ್ಷತೆಗಾಗಿ ಇಬಿಡಿ, ISOFIX ಚೈಲ್ಡ್ ಸೀಟ್ ಆಂಕರ್‌ಗಳೊಂದಿಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸೀಟ್-ಬೆಲ್ಟ್ ರಿಮೈಂಡರ್ ಗಳನ್ನು ಒಳಗೊಂಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಈ ಹೊಸಹೋಂಡಾ ಅಮೇಜ್ ಫೇಸ್‌ಲಿಫ್ಟ್‌ ಕಾರಿನ ಆಯಾಮದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ, ಇದು ಒಟ್ಟಾರೆ 3,995 ಮಿಮೀ ಉದ್ದ, 1,695 ಮಿಮೀ ಅಗಲ ಮತ್ತು 1,498 ಮಿಮೀ ಎತ್ತರವನ್ನು ಉಳಿಸಿಕೊಂಡಿದೆ. ಇನ್ನು ಈ ಕಾರು 2,470 ಮಿಮೀ ವ್ಹೀಲ್‌ಬೇಸ್ ಉದ್ದವನ್ನು ಒಳಗೊಂಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಈ ಹೋಂಡಾ ಅಮೇಜ್ ಫೇಸ್‌ಲಿಫ್ಟ್‌ ಕಾಂಪ್ಯಾಕ್ಟ್ ಸೆಡಾನ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು 1.2ಎಲ್ ಪೆಟ್ರೋಲ್ ಮತ್ತು 1.5ಎಲ್ ಡೀಸೆಲ್ ಎಂಬ ಎಂಜಿನ್ ಗಳಾಗಿವೆ. ಇನ್ನು ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 110 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಇನ್ನು 1.5ಎಲ್ ಡೀಸೆಲ್ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಡೀಸೆಲ್ ಆಟೋಮ್ಯಾಟಿಕ್ ರೂಪಾಂರರವು 78 ಬಿಹೆಚ್‍ಪಿ ಪವರ್ ಮತ್ತು 160 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎರಡನೇ ತಲೆಮಾರಿನ Honda Amaze

ಹೋಂಡಾ ಕಂಪನಿಯು 2021ರ ಅಮೇಜ್ ಕಾರನ್ನು ಒಳಗೆ ಮತ್ತು ಹೊರಗೆ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಖರೀದಿದಾರರಿಗೆ ತನ್ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಗಳೊಂದಿಗೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. .ಇನ್ನು ಹೋಂಡಾ ಕಂಪನಿಯು ಹೊಸ ಅಮೇಜ್ ಕಾರಿಗಾಗಿ ಅಕ್ಸೆಸರೀಸ್ ಗಳನ್ನು ಪರಿಚಯಿಸಿದೆ. ಇದರೊಂದಿಗೆ ಬೇಸಿಕ್ ಕಿಟ್, ಕ್ರೋಮ್ ಪ್ಯಾಕೇಜ್ ಮತ್ತು ಯುಟಿಲಿಟಿ ಪ್ಯಾಕೇಜ್ ಎಂಬ ಮೂರು ಕ್ಯುರೇಟೆಡ್ ಆಕ್ಸೆಸರಿ ಪ್ಯಾಕೇಜ್‌ಗಳನ್ನು ಸಹ ನೀಡುತ್ತದೆ.

Most Read Articles

Kannada
Read more on ಹೋಂಡಾ honda
English summary
Second generation honda amaze sub compact sedan achieves 2 lakh sales milestone details
Story first published: Friday, December 17, 2021, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X