ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು, ಜನರು ಸಾಂಪ್ರದಾಯಿಕ ಇಂಧನ ವಾಹನಗಳಿಗೆ ಪರ್ಯಾಯವಾದ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದರ ಜೊತೆಗೆ ಪೆಟ್ರೋಲ್, ಡೀಸೆಲ್ ವಾಹನಗಳು ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಿವೆ. ಜೊತೆಗೆ ಕಚ್ಚಾ ತೈಲ ಆಮದಿನಿಂದ ಆರ್ಥಿಕ ಹೊರೆಯು ಎದುರಾಗುತ್ತಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಹಂತ ಹಂತವಾಗಿ ಪೆಟ್ರೋಲ್, ಡೀಸೆಲ್ ವಾಹನಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಈ ಹಿನ್ನೆಲೆಯಲ್ಲಿ ಪರ್ಯಾಯ ಇಂಧನ ವಾಹನಗಳ ಬಳಕೆಗಾಗಿ ವಿವಿಧ ಯೋಜನೆಗಳನ್ನು ಆರಂಭಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯ ಆಯ್ಕೆ ಎಂದು ಹೇಳಲಾಗಿದ್ದರೂ, ಹೈಡ್ರೋಜನ್ ಇಂಧನ ವಾಹನಗಳ ಬಳಕೆಗೂ ಆದ್ಯತೆ ನೀಡಲಾಗುತ್ತಿದೆ. ಹೈಡ್ರೋಜನ್ ಇಂಧನದಿಂದ ವಿದ್ಯುತ್ ಉತ್ಪಾದಿಸುವ ಹಾಗೂ ಬ್ಯಾಟರಿಯಲ್ಲಿ ಸಂಗ್ರಹಿಸುವ ತಂತ್ರಜ್ಞಾನದಿಂದ ಈ ಬಸ್ ಚಾಲನೆಯಾಗಲಿದೆ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಹೈಡ್ರೋಜನ್ ಇಂಧನ ಕೋಶ ಹೊಂದಿರುವ ವಾಹನಗಳು ಬ್ಯಾಟರಿಯಲ್ಲಿನ ವಿದ್ಯುತ್ ಬಳಸಿ ವಿದ್ಯುತ್ ಮೋಟರ್‌ಗಳಿಂದ ನಿಯಂತ್ರಿಸಲ್ಪಡುತ್ತವೆ. ಇವು ಬಹುತೇಕ ಎಲೆಕ್ಟ್ರಿಕ್ ವಾಹನಗಳಂತಿರುತ್ತವೆ. ಆದರೆ ಗಾಳಿಯಿಂದ ಬರುವ ಆಮ್ಲಜನಕದ ಮೂಲಕ ಹೈಡ್ರೋಜನ್ ಅನ್ನು ಕೆಮಿಕಲ್ ಆಗಿ ವಿದ್ಯುತ್ ಉತ್ಪಾದಿಸಲು ಪರಿವರ್ತಿಸಲಾಗುತ್ತದೆ. ಈ ವಿದ್ಯುತ್ ಅನ್ನು ಬ್ಯಾಟರಿಯಲ್ಲಿ ಸಂಗ್ರಹಿಸಲಾಗುತ್ತದೆ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಇವುಗಳನ್ನು ಎಲೆಕ್ಟ್ರಿಕ್ ವಾಹನಗಳಿಗಿಂತ ಉತ್ತಮವೆಂದು ಪರಿಗಣಿಸಲಾಗಿದೆ. ಹೈಡ್ರೋಜನ್ ಇಂಧನವು ಕಡಿಮೆ ಬೆಲೆಯನ್ನು ಹೊಂದಿದೆ. ಜೊತೆಗೆ ಕೆಲವೇ ನಿಮಿಷಗಳಲ್ಲಿ ಈ ಇಂಧನವನ್ನು ತುಂಬಿಸಬಹುದು. ಎಲೆಕ್ಟ್ರಿಕ್ ವಾಹನಗಳಂತೆ ಹಲವಾರು ಗಂಟೆಗಳ ಕಾಲ ಚಾರ್ಜ್ ಮಾಡುವ ಅಗತ್ಯವಿಲ್ಲ. ಆದರೆ ಹೈಡ್ರೋಜನ್ ಅನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ನಿಜಕ್ಕೂ ಸವಾಲಿನ ಕೆಲಸ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಕೇಂದ್ರ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ದೆಹಲಿ - ಜೈಪುರ ಮಾರ್ಗದಲ್ಲಿ ಭಾರತದ ಮೊದಲ ಹೈಡ್ರೋಜನ್ ಚಾಲಿತ ಬಸ್ ಅನ್ನು ಪರಿಚಯಿಸಲು ನಿರ್ಧರಿಸಿತ್ತು. ಈಗಾಗಲೇ ಮುಂಬೈನಲ್ಲಿ ಹೈಡ್ರೋಜನ್ ಬಸ್‌ನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಎರಡು ದೂರದ ನಗರಗಳ ಮಧ್ಯೆ ಈ ಮಾರ್ಗದಲ್ಲಿ ಹೊಸ ಬಸ್ ಅನ್ನು ಪರಿಚಯಿಸಲು ನಿರ್ಧರಿಸಲಾಗಿದೆ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ವಿಶಿಷ್ಟವಾದ ಆರ್ ಅಂಡ್ ಡಿ ಲ್ಯಾಬ್ ಆದ ಸೆಂಟಿನೆಂಟ್ ಲ್ಯಾಬ್ಸ್, ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಫ್ಯೂಲ್ ಸೆಲ್ ಬಸ್ ಅನ್ನು ಪರಿಚಯಿಸಿದೆ. ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನವನ್ನು ದೇಶದ ಕೆಲವು ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ತಂತ್ರಜ್ಞಾನವನ್ನು CSIR (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ), NCL (ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ) ಮತ್ತು CSIR-CECRI (ಸೆಂಟ್ರಲ್ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಇತ್ತೀಚೆಗೆ ಸೆಂಟಿನೆಂಟ್ ಲ್ಯಾಬ್ಸ್ ಈ ತಂತ್ರಜ್ಞಾನದ ಬಗ್ಗೆ ಘೋಷಿಸಿತು. ಈ ತಂತ್ರಜ್ಞಾನವು ಇಂಧನ ಕೋಶ ಚಾಲಿತ ವಾಹನಗಳಲ್ಲಿ ಬಳಸಲು ಕೃಷಿ ಅವಶೇಷಗಳಿಂದ ನೇರವಾಗಿ ಹೈಡ್ರೋಜನ್ ಅನ್ನು ಉತ್ಪಾದಿಸುತ್ತದೆ. ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದ ಜೊತೆಗೆ, ಸೆಂಟಿನೆಂಟ್ ಲ್ಯಾಬ್ಸ್ ಪ್ಲಾಂಟ್, ಪವರ್‌ಟ್ರೇನ್ ಮತ್ತು ಬ್ಯಾಟರಿ ಪ್ಯಾಕ್ ಅನ್ನು ಸಮತೋಲನಗೊಳಿಸುವಂತಹ ಇತರ ಪ್ರಮುಖ ಅಂಶಗಳನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಈ ಎಲ್ಲಾ ಅಂಶಗಳನ್ನು 9 ಮೀಟರ್ ಉದ್ದದ 32 ಸೀಟುಗಳನ್ನು ಹೊಂದಿರುವ ಹವಾನಿಯಂತ್ರಿತ ಬಸ್‌ಗಳಲ್ಲಿ ಬಳಸಬಹುದು. ಮಾಹಿತಿಯ ಪ್ರಕಾರ, ಈ ತಂತ್ರಜ್ಞಾನವನ್ನು 30 ಕೆ.ಜಿ ಹೈಡ್ರೋಜನ್ ಬಳಸಿ 450 ಕಿ.ಮೀ ವ್ಯಾಪ್ತಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ತಂತ್ರಜ್ಞಾನವು ಮಾಡ್ಯುಲರ್ ಆರ್ಕಿಟೆಕ್ಚರ್ ಸರಣಿ ಹಾಗೂ ಆಪರೇಟಿಂಗ್ ಷರತ್ತುಗಳ ಅವಶ್ಯಕತೆಗಳಿಗೆ ಅನುಗುಣವಾಗಿ ವಿನ್ಯಾಸ ಬದಲಾವಣೆಗಳನ್ನು ಅನುಮತಿಸುತ್ತದೆ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಫ್ಯೂಲ್ ಸೆಲ್ ಬಸ್‌ಗೆ ಪವರ್ ನೀಡಲು ಹೈಡ್ರೋಜನ್ ಹಾಗೂ ಗಾಳಿಯನ್ನು ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತದೆ. ಬಸ್ಸಿನಿಂದ ನಿರ್ಗಮಿಸುವ ಏಕೈಕ ಅಂಶವೆಂದರೆ ನೀರು. ಈ ಮೂಲಕ ಈ ಬಸ್ ಬಹುಶಃ ಅತ್ಯಂತ ಪರಿಸರ ಸ್ನೇಹಿಯಾದ ಸಾರಿಗೆ ವಿಧಾನವಾಗಿದೆ. ಇದರೊಂದಿಗೆ ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನವು ರೈತರಿಗೆ ಪರ್ಯಾಯ ಆದಾಯ ಮೂಲವನ್ನು ಒದಗಿಸಲಿದೆ ಎಂಬುದು ಗಮನಾರ್ಹ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಇದಲ್ಲದೆ ಡೀಸೆಲ್ ಬಸ್‌ಗಳನ್ನು ಹೈಡ್ರೋಜನ್ ಫ್ಯೂಲ್ ಸೆಲ್ ಬಸ್‌ಗಳೊಂದಿಗೆ ಬದಲಾಯಿಸುವುದರಿಂದ ಗಾಳಿಯ ಗುಣಮಟ್ಟವು ತೀವ್ರವಾಗಿ ಸುಧಾರಿಸುತ್ತದೆ. ಜೊತೆಗೆ ಕಚ್ಚಾ ತೈಲ ಆಮದು ವೆಚ್ಚವೂ ಕಡಿಮೆಯಾಗುತ್ತದೆ. ಸೆಂಟಿನೆಂಟ್ ಲ್ಯಾಬ್ಸ್ ನ ಅಧ್ಯಕ್ಷರಾದ ರವಿ ಪಂಡಿತ್ ಈ ತಂತ್ರಜ್ಞಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಫ್ಯೂಲ್ ಸೆಲ್ ಪವರ್ ಬಸ್ ಅನ್ನು ಆರಂಭಿಸಲು ನಾವು ಹೆಮ್ಮೆಪಡುತ್ತೇವೆ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

CSIR-NCL ನೊಂದಿಗೆ ಪ್ರಬಲ ತಾಂತ್ರಿಕ ತಂಡವು ವಿವಿಧ ತಾಂತ್ರಿಕ ಘಟಕಗಳಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು. ಈ ಹೈಡ್ರೋಜನ್ ಮಿಷನ್ ಸ್ವಾವಲಂಬಿ ಭಾರತವನ್ನು, ಮುಖ್ಯವಾಗಿ ಸುಸ್ಥಿರ ಚಲನಶೀಲತೆಯನ್ನು ಸಶಕ್ತಗೊಳಿಸುವಲ್ಲಿ ಬಹಳ ದೂರ ಸಾಗುತ್ತದೆ. ಪರಿಹಾರವು ಬಹು ಪಾಲುದಾರಿಕೆಗಳಿಂದ ವ್ಯಾಪಕವಾದ ಅಳವಡಿಕೆಯನ್ನು ನೋಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಭಾರತದಲ್ಲಿ ನಿವ್ವಳ ಶೂನ್ಯ ಕಾರ್ಬನ್ ಮಾರ್ಗವನ್ನು ನಿರ್ಮಿಸಲು ವಾಹನ ತಯಾರಕ ಕಂಪನಿಗಳು ಹಾಗೂ ಪೂರೈಕೆದಾರರಿಗೆ ಅನುವು ಮಾಡಿಕೊಡುವಲ್ಲಿ ನಮ್ಮ ಪ್ರಯತ್ನಗಳು ಸಹಕಾರಿಯಾಗಲಿವೆ ಎಂದು ರವಿ ಪಂಡಿತ್ ಹೇಳಿದ್ದಾರೆ.

ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನದಿಂದ ಚಾಲಿತವಾಗುವ ಬಸ್ ಅಭಿವೃದ್ಧಿಪಡಿಸಿದ ಸೆಂಟಿನೆಂಟ್ ಲ್ಯಾಬ್ಸ್

ಇನ್ನು ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ವೈಯಕ್ತಿಕ ವಾಹನಗಳ ಬಳಕೆಗೆ ಆದ್ಯತೆ ನೀಡಿದರು. ಸ್ವಂತ ವಾಹನಗಳನ್ನು ಖರೀದಿಸುವ ಸಂದರ್ಭದಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಹೆಚ್ಚು ಆಸಕ್ತಿಯನ್ನು ತೋರಿಸಿದರು.

ಗಮನಿಸಿ: ಈ ಲೇಖನದಲ್ಲಿರುವ ಕೊನೆಯ ನಾಲ್ಕು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Sentient labs develops hydrogen fuel cell and water powered buses details
Story first published: Friday, December 17, 2021, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X