ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2022ರ Skoda Karoq ಎಸ್‍ಯುವಿ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಹೊಸ ಕರೋಕ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಜಾಗತಿಕವಾಗಿ ಪರಿಚಯಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಸ್ಕೋಡಾ ಕರೋಕ್(Skoda Karoq) ಫೇಸ್‌ಲಿಫ್ಟ್ ಎಸ್‍ಯುವಿಯು ಇದೇ ತಿಂಗಳ 30 ರಂದು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ.

ಕಂಪನಿಯು ಭಾರತದಲ್ಲಿ ಸ್ಕೋಡಾ ಕರೋಕ್ ಅನ್ನು ಸ್ಥಗಿತಗೊಳಿಸಿತು. ಹೊಸ ಕರೋಕ್‌ಗಾಗಿ ಕಾಯಬೇಕೇ ಅಥವಾ ಕುಶಾಕ್ ಅನ್ನು ಪಡೆಯಬೇಕೇ ಎಂದು ಟ್ವೀಟರ್ ನಲ್ಲಿ ಸ್ಕೋಡಾ ಅಭಿಮಾನಿಯು ಪ್ರಶ್ನೆಯನ್ನು ಕೇಳಿದ್ದರು. ಈ ಪ್ರಶ್ನೆಗೆ ಸ್ಕೊಡಾ ಕಂಪನಿಯ ಡೈರೆಕ್ಟರ್, ಝಾಕ್ ಹೋಲಿಸ್ ಉತ್ತರಿಸಿ, ಪ್ರಸ್ತುತ ಭಾರತದಲ್ಲಿ ಮುಂದಿನ ಕರೋಕ್ ಅನ್ನು ಬಿಡುಗಡೆಗೊಳಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದಿದ್ದಾರೆ. ಸ್ಕೋಡಾ ಕಂಪನಿಯು ಭಾರತದಲ್ಲಿ ಕುಶಾಕ್ ಎಸ್‍ಯುವಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದ್ದಾರೆ.

ನವೀಕರಿಸಿದ ಸ್ಕೋಡಾ ಕರೋಕ್ ಎಸ್‍ಯುವಿ ವಿನ್ಯಾಸ ರೇಖಾಚಿತ್ರಗಳ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದು ಮುಂಬರುವ ಎಸ್‍ಯುವಿ ವಿನ್ಯಾಸದ ಬಗ್ಗೆ ನಮಗೆ ಸುಳಿವುಗಳನ್ನು ನೀಡಿತು. ಈಗ ಜೆಕ್ ಕಾರು ತಯಾರಕರು ಕರೋಕ್ ಫೇಸ್‌ಲಿಫ್ಟ್ ಎಸ್‌ಯುವಿಗಾಗಿ ವೀಡಿಯೊ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ನಮಗೆ ಉತ್ಪಾದನೆಗೆ ಸಿದ್ಧವಾಗಿರುವ ಮಾದರಿಯ ನೋಟವನ್ನು ನೀಡುತ್ತದೆ.

ಕರೋಕ್ ಫೇಸ್‌ಲಿಫ್ಟ್ ಮೊದಲಿಗಿಂತ ತೆಳ್ಳಗಿನ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ ಮತ್ತು ಮುಂಭಾಗದ ಗ್ರಿಲ್ ಈಗ ಅಗಲವಾಗಿರುವಂತೆ ತೋರುತ್ತಿದೆ.ಟೈಲ್‌ಲೈಟ್‌ಗಳನ್ನು ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ. ಟೈಲ್‌ಗೇಟ್‌ನಲ್ಲಿ, ಸ್ಕೋಡಾ ಲೋಗೋವನ್ನು ತಯಾರಕರ ಹೆಸರನ್ನು ಬರೆಯುವ ದಪ್ಪ ಬ್ಯಾಡ್ಜ್‌ನಿಂದ ಬದಲಾಯಿಸಲಾಗಿದೆ.

ಎಸ್‍ಯುವಿ ವಿಶಿಷ್ಟವಾಗಿ ಕಾಣುವ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇದು ಸಾಕಷ್ಟು ಗಮನ ಸೆಳೆಯುತ್ತದೆ. ಅದರ ಹೊರತಾಗಿ, ಕೆಳಭಾಗದಲ್ಲಿ ಬ್ಲ್ಯಾಕ್ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಪ್ರಮುಖವಾದ ರೂಫ್ ರೈಲ್ ಗಳನ್ನು ಸಹ ನಾವು ನೋಡುತ್ತೇವೆ. ಹಿಂದಿನ ಬಂಪರ್ ಸ್ಪೋರ್ಟ್ಸ್ ಇಂಟಿಗ್ರೇಟೆಡ್ ಫಾಕ್ಸ್ ಎಕ್ಸಾಸ್ಟ್ ಟಿಪ್ಸ್, ಮತ್ತು ನಾವು ಟೀಸರ್‌ನಲ್ಲಿ ಎಸ್‍ಯುವಿ 4×4 ಬ್ಯಾಡ್ಜ್ ಅನ್ನು ಸಹ ನೋಡುತ್ತೇವೆ.

ಇದರ ಹೊರತಾಗಿ, ನವೀಕರಣದೊಂದಿಗೆ ಹೊಸ ಬಣ್ಣದ ಆಯ್ಕೆಗಳು ಮತ್ತು ಅಲಾಯ್ ವ್ಹೀಲ್ ವಿನ್ಯಾಸಗಳನ್ನು ನಾವು ನಿರೀಕ್ಷಿಸಬಹುದು. ಟೀಸರ್‌ನಲ್ಲಿ ಪ್ರದರ್ಶಿಸಲಾದ ಮಾದರಿಯು ಟಾಪ್-ಸ್ಪೆಕ್ 'ಸ್ಪೋರ್ಟ್‌ಲೈನ್' ಟ್ರಿಮ್ ಆಗಿದೆ ಎಂದು ಇದು ಸೂಚಿಸುತ್ತದೆ. ಮುಂಬರುವ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ನ ಒಳಭಾಗದ ಮಾಹಿತಿಗಳನ್ನು ಒಳಗೊಂಡಿದೆ.

ಒಳಭಾಗದಲ್ಲಿ, ಹೊಸ ಆಕ್ಟೀವಿಯಾ ಮತ್ತು ಕೊಡಿಯಾಕ್‌ನಲ್ಲಿ ಸ್ಕೋಡಾ ನೀಡುತ್ತಿರುವ ಹೊಸ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಆಪರೇಟಿಂಗ್ ಸಿಸ್ಟಮ್‌ನ ಸೇರ್ಪಡೆ ಇರಬಹುದು. ಆದರೆ ಕ್ಯಾಬಿನ್ ಹೆಚ್ಚು ಅಥವಾ ಕಡಿಮೆ ಬದಲಾಗದೆ ಉಳಿಯಬಹುದು ಎಂದು ನಿರೀಕ್ಷಿಸುತ್ತೇವೆ,

ಇನ್ನು ಎಂಜಿನ್ ಆಯ್ಕೆಗಳು ಬದಲಾಗದೆ ಉಳಿಯಬಹುದು ಎಂದು ನಿರೀಕ್ಷಿಸುತ್ತೇವೆ, ಲೈನ್-ಅಪ್‌ಗೆ ಸೇರ್ಪಡೆಗೊಳ್ಳುವ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿ ಇರುತ್ತದೆ ಎಂಬ ಮಾಹಿತಿಯು ಬಹಿರಂಗವಾಗಿಲ್ಲ. ಸ್ಕೋಡಾ ಕರೋಕ್ ಫೇಸ್‌ಲಿಫ್ಟ್ ಎಸ್‍ಯುವಿ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆಯುತ್ತದೆ, ಇದರ ಜೊತೆಗೆ ಹೊಸ ಫೀಚರ್ಸ್ ಗಳನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ,

ಪ್ರಸ್ತುತ ಸ್ಕೋಡಾ ಕರೋಕ್ ಎಸ್‍ಯುವಿಯಲ್ಲಿ 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍ಜಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಈ ಸ್ಕೋಡಾ ಕರೋಕ್ ಎಸ್‍ಯುವಿ ಕಂಪನಿಯ ಎಂಕ್ಯೂಬಿ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ಎಸ್‍ಯುವಿಯಲ್ಲಿ ಎಎಫ್ಎಸ್ (ಅಡಾಪ್ಟಿವ್ ಫ್ರಂಟ್ ಲೈಟಿಂಗ್), ಸಿಗ್ನೇಚರ್ ಬಟರ್ಫ್ಲೈ ಗ್ರಿಲ್, ಸ್ಕ್ವೇರ್ ವೀಲ್ ಆರ್ಚ್, ಆರ್ 17 ಅರೋನಿಯಾ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಮತ್ತು ಸಿ-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್‌ಗಳೊಂದಿಗೆ ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿದೆ.

ಪ್ರಸ್ತುತ ಕರೋಕ್ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಯಲ್ಲಿ ದೊಡ್ಡ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂಗಳಿವೆ. ಇದರೊಂದಿಗೆ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಸನ್‍ರೂಫ್ ಮತ್ತು ಲೆದರ್ ಅಪ್‍ಹೋಲೆಸ್ಟರಿ ಸೀಟುಗಳನ್ನು ಕೂಡ ಹೊಂದಿವೆ. ಈ ಎಸ್‍ಯುವಿಯಲ್ಲಿ ಸುರಕ್ಷತಾ ಫೀಚರ್ ಗಳಾಗಿ, 9 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಇಎಸ್‌ಸಿ, ಹಿಲ್-ಸ್ಟಾರ್ಟ್ ಅಸಿಸ್ಟ್ ಫ್ರಂಟ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.

ವಿಡಬ್ಕ್ಯು ಗ್ರೂಪ್‌ಗೆ ಕರೋಕ್ ಅತ್ಯಂತ ಯಶಸ್ವಿ ಉತ್ಪನ್ನವಾಗಿದೆ. ಮಾರಾಟವನ್ನು ಇನ್ನಷ್ಟು ಸುಧಾರಿಸುವ ಸಲುವಾಗಿ ಕರೋಕ್ ಎಸ್‍ಯುವಿಯನ್ನು ಹೊಸ ಬದಲಾವಣೆಗಳೊಂದಿಗೆ ಪರಿಚಯಿಸುತ್ತಿದೆ. ಸ್ಕೋಡಾ ಕಂಪನಿಯು ಮೊದಲ ಬಾರಿಗೆ ಕರೋಕ್ ಎಸ್‍ಯುವಿಯನ್ನು 2017 ರಲ್ಲಿ ಪರಿಚಯಿಸಲಾಯಿತು, ಕರೋಕ್‌ನ ಐದು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಜಾಗತಿಕ ಮಟ್ಟದಲ್ಲಿ ಉತ್ಪಾದಿಸಲಾಗಿದೆ. ಇದು ಪ್ರಸ್ತುತ 60 ದೇಶಗಳಲ್ಲಿ ಮಾರಾಟದಲ್ಲಿದೆ ಮತ್ತು ಜೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾದಲ್ಲಿ ಹಾಗೂ ರಷ್ಯಾ ಮತ್ತು ಚೀನಾದಲ್ಲಿ ಉತ್ಪಾದಿಸಲಾಗುತ್ತಿದೆ.

ಸ್ಕೋಡಾ ಕರೋಕ್ ಈ ವರ್ಷದ ಆರಂಭದವರೆಗೂ ಭಾರತದಲ್ಲಿ ಮಾರಾಟವಾಗಿತ್ತು. ಇದನ್ನು CBU (ಸಂಪೂರ್ಣವಾಗಿ ನಿರ್ಮಿಸಿದ ಯುನಿಟ್) ಎಂದು ಪ್ರಾರಂಭಿಸಲಾಯಿತು ಬಿಡುಗಡೆಗೊಂಡ ಬಳಿಕ ಆರಂಭಿಕವಾಗಿ ಬಹಳಷ್ಟು ಮಾರಾಟವಾಯಿತು. ನಂತರ ಕಂಪನಿಯು ಭಾರತದಲ್ಲಿ ಈ ಕರೋಕ್ ಅನ್ನು ಸ್ಥಗಿತಗೊಳಿಸಿತ್ತು. ಏಕೆಂದರೆ ಇದೀಗ ಸ್ಕೋಡಾ ಹೊಸ ಸ್ಕೋಡಾ ಕುಶಾಕ್‌ನತ್ತ ಗಮನ ಹರಿಸಲಾಗಿದೆ. ಇನ್ನು ಈ ಹೊಸ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್ ಮಾದರಿಯು ಈ ತಿಂಗಳ ಕೊನೆಯಲ್ಲಿ ಜಾಗತಿಕವಾಗಿ ಅನಾವರಣಗೊಂಡ ಬಳಿಕ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.


Click it and Unblock the Notifications








