ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಸ್ಕೋಡಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟ ಸುಧಾರಣೆಗಾಗಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೋರ್ಕ್ಸ್‌ವ್ಯಾಗನ್ ಕಂಪನಿ ಜೊತೆಗೂಡಿ ಆರಂಭಿಸಲಾಗಿರುವ ಇಂಡಿಯಾ 2.0 ಯೋಜನೆ ಅಡಿಯಲ್ಲಿ ರೀಬ್ಯಾಡ್ಜಿಂಗ್ ಮೂಲಕ ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿದೆ.

ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಭಾರತದ ಪ್ರಮುಖ ಮಾಹಾನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿರುವ ಸ್ಕೋಡಾ ಕಂಪನಿಯು 2021ರ ಅಂತ್ಯಕ್ಕೆ ಹೊಸದಾಗಿ 30 ಶೋರೂಂಗಳಿಗೆ ಚಾಲನೆ ನೀಡುತ್ತಿದ್ದು, ಹೊಸ ಶೋರೂಂಗಳ ಮೂಲಕ 150 ಶೋರೂಂ ಗುರಿತಲುಪುವ ಸಿದ್ದತೆಯಲ್ಲಿದೆ.

ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಹೊಸ ಮಾರಾಟ ಮಳಿಗೆಗಳನ್ನು ಹಲವಾರು ಸುಧಾರಿತ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲಾಗುತ್ತಿದ್ದು, ಒಂದೇ ಸೂರಿನಡಿ ಮಾರಾಟ ಮಳಿಗೆ ಮತ್ತು ಗ್ರಾಹಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಮಾರಾಟ ಮಳಿಗೆಗಳನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ.

ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಸ್ಕೋಡಾ ಕಂಪನಿಯು ಭಾರತದಲ್ಲಿ ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗೂಡಿ ಹೊಸ ಕಾರುಗಳು ಉತ್ಪಾದನೆಯಲ್ಲಿ ಭಾರೀ ಬದಲಾವಣೆ ಪರಿಚಯಿಸುತ್ತಿದ್ದು, ಮಾರಾಟ ಮಳಿಗೆಗಳ ಹೆಚ್ಚಳದೊಂದಿಗೆ ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಹೊಸ ಯೋಜನೆಗೆ ಪೂರಕವಾಗಿ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಬ್ರಾಂಡ್ ಅನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರು ಮಾರಾಟ ಮಳಿಗೆಗಳ ಉನ್ನತೀಕರಣ ಮತ್ತು ಹೊಸ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಿಸಲಾಗುತ್ತಿದ್ದು, ಹೊಸ ಯೋಜನೆಗಾಗಿ ಬರೋಬ್ಬರಿ ರೂ.120 ಕೋಟಿ ಖರ್ಚು ಮಾಡಲಾಗುತ್ತಿದೆ.

ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಕಾರು ಮಾರಾಟ ಶೋರೂಂಗಳ ನವೀಕರಣವು ಭಾರತದಲ್ಲಿ ಇದುವರೆಗೂ ಮಾಡಲಾದ ಅತಿ ದೊಡ್ಡ ನವೀಕರಣವಾಗಿದ್ದು, ಸ್ಕೋಡಾ ಕಂಪನಿಯು ತನ್ನ ಹೊಸ ಕಾರ್ಪೋರೆಟ್ ಐಡೆಂಟಿಟಿ ಹಾಗೂ ಡಿಸೈನ್ (ಸಿ‍ಐ‍‍ಸಿ‍‍ಡಿ) ಅನುಸಾರ ತನ್ನ ಶೋರೂಂಗಳನ್ನು ನವೀಕರಿಸುತ್ತಿದೆ.

ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಇನ್ನು ಸ್ಕೋಡಾ ಕಂಪನಿಯು ಸದ್ಯ ರ‍್ಯಾಪಿಡ್ ಸೆಡಾನ್, ಕರೋಕ್ ಎಸ್‌ಯುವಿ, ಸೂಪರ್ಬ್ ಸೆಡಾನ್, ಆಕ್ಟಿವಿಯಾ ಸೆಡಾನ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ತಿಂಗಳಷ್ಟೇ ಬಿಡುಗಡೆ ಮಾಡಿರುವ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಆರಂಭದಲ್ಲೇ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಪ್ರತಿಸ್ಪರ್ಧಿಗಳಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಿರುವ ಕುಶಾಕ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.59 ಲಕ್ಷ ಬೆಲೆ ಹೊಂದಿದೆ.

ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ವರ್ಷಾಂತ್ಯಕ್ಕೆ ದೇಶಾದ್ಯಂತ 30 ಹೊಸ ಶೋರೂಂ ತೆರೆಯಲಿದೆ ಸ್ಕೋಡಾ ಇಂಡಿಯಾ

ಕುಶಾಕ್ ಕಾರು ಮಾದರಿಯು ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆ ಸೇಫ್ಟಿ ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Auto India has revealed plans to open thirty new dealerships across the country. Read in Kannada.
Story first published: Saturday, July 10, 2021, 23:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X