ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

Skoda Auto ಇಂಡಿಯಾ ತನ್ನ ಗ್ರಾಹಕರಿಗೆ ಹಿಂದೆಂದಿಗಿಂತಲೂ ಉತ್ತಮ ಸೇವೆಯನ್ನು ಒದಗಿಸಲು ಮುಂದಾಗಿದೆ. ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದಾಗಿ ಭರವಸೆ ನೀಡಿತ್ತು. ಕಂಪನಿಯು ಇತ್ತೀಚೆಗೆ ಬಿಡುಗಡೆಗೊಳಿಸಿದ Skoda Kushaq ಕಾಂಪ್ಯಾಕ್ಟ್ ಎಸ್‌ಯುವಿಯು ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

ಈಗ Skoda ಆಟೋ ಇಂಡಿಯಾ ಕಂಪನಿಯು ಮೆಟ್ರೋ ನಗರವಲ್ಲದ ಸ್ಥಳಗಳಲ್ಲಿ ಕಾಂಪ್ಯಾಕ್ಟ್ ವರ್ಕ್ ಶಾಪ್ ಗಳನ್ನು ತೆರೆಯುವುದಾಗಿ ಘೋಷಿಸಿದೆ. ಈ ಕಾಂಪ್ಯಾಕ್ಟ್ ವರ್ಕ್ ಶಾಪ್ ಗಳು ಈ ಸ್ಥಳಗಳಲ್ಲಿ ಮಾರಾಟ ಹಾಗೂ ಡೀಲರ್ ಶಾಖೆಗಳೊಂದಿಗೆ ಸಂಯೋಜಿಸಲ್ಪಟ್ಟು ಗ್ರಾಹಕರಿಗೆ ಮಾರಾಟದ ನಂತರದ ಸೇವಾ ಅವಶ್ಯಕತೆಗಳನ್ನು ಪೂರೈಸಲಿವೆ.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

ಈ ವರ್ಷದ ಅಂತ್ಯದ ವೇಳೆಗೆ Skoda ಕಂಪನಿಯು ಈ 30 ಕಾಂಪ್ಯಾಕ್ಟ್ ವರ್ಕ್ ಶಾಪ್ ಗಳನ್ನು ದೇಶದಲ್ಲಿ ತೆರೆಯಲು ನಿರ್ಧರಿಸಿದೆ. ಇವುಗಳು ನಿಯಮಿತ ಮೆಂಟೆನೆನ್ಶ್ ಹಾಗೂ ಸಾಮಾನ್ಯ ಸರ್ವೀಸ್ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತವೆ. ಜೆಕ್ ಮೂಲದ ಕಾರು ತಯಾರಕ ಕಂಪನಿಯಾದ Skoda ಆಟೋ ಈ ಪ್ರತಿಯೊಂದು ಸ್ಥಳಗಳಲ್ಲಿ ಟೂ ಬೇ ಗಳ ಕನಿಷ್ಠ ಸೇವಾ ಸೌಲಭ್ಯವನ್ನು ನೀಡಲಿದೆ.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

ಈ ಬಗ್ಗೆ ಮಾತನಾಡಿರುವ Skoda ಆಟೋ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಜಾಕ್ ಹಾಲಿಸ್ ರವರು, ಈ ವರ್ಕ್ ಶಾಪ್ ಗಳು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಹಾಗೂ ಸಂಭಾವ್ಯ ಗ್ರಾಹಕರಿಗೆ ಕಂಪನಿಯ ಬಗ್ಗೆ ವಿಶ್ವಾಸ ಮೂಡಿಸಲು ನೆರವಾಗುತ್ತವೆ. Kushaq ಎಸ್‌ಯುವಿಯನ್ನು ಬಿಡುಗಡೆಯೊಂದಿಗೆ ನಮ್ಮ ಮಾರಾಟ ಪ್ರಮಾಣವು ಗಣನೀಯವಾಗಿ ಹೆಚ್ಚಾಗಿದೆ. ಸವಾಲಿನ ನಡುವೆಯೂ ನಾವು ಉಡಾವಣೆಯಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

ನಮ್ಮ ಮಾರಾಟ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ, ನಮ್ಮ ಗ್ರಾಹಕರ ಅನುಭವವನ್ನು ಹೆಚ್ಚಿಸುವುದು ಸಹ ಮುಖ್ಯವಾಗಿದೆ. ನಮ್ಮ ಗ್ರಾಹಕರ ಕೇಂದ್ರಿತತೆಯ ಪ್ರಯಾಣವು ಭಾರತದಲ್ಲಿ ನಮ್ಮ ಯಶಸ್ಸಿಗೆ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಇದು ನಿಜವಾಗಿಯೂ ಮುಖ್ಯವಾಗಿದೆ ಏಕೆಂದರೆ Skoda ಇಂಡಿಯಾ ಭಾರತದಲ್ಲಿ ಆಫ್ಟರ್ ಮಾರ್ಕೆಟ್ ಸರ್ವೀಸ್ ನೀಡುವುದರಲ್ಲಿ ಜನಪ್ರಿಯವಾಗಿಲ್ಲ.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

Skoda Kushaq ಎಸ್‌ಯುವಿಯಂತಹ ವಾಹನವನ್ನು ಮಾರಾಟ ಮಾಡುವುದು ಕಂಪನಿಗೆ ಕೇವಲ ಅರ್ಧದಷ್ಟು ಯುದ್ಧವಾಗಿದೆ. ಜಾಕ್ ಹೊಲ್ಲಿಸ್, ಭಾರತದಲ್ಲಿ ಗ್ರಾಹಕರನ್ನು ಹೆಚ್ಚು ತಲುಪಲು ಸೇವಾ ಜಾಲವನ್ನು ವಿಸ್ತರಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದ್ದಾರೆ. ಜೂನ್ ತಿಂಗಳಿನಲ್ಲಿ Kushaq ಎಸ್‌ಯು‌ವಿಯು ಬಿಡುಗಡೆಯಾದಾಗಿನಿಂದ ತನ್ನ ನೆಟ್ವರ್ಕ್ 25% ನಷ್ಟು ಬೆಳೆದಿದೆ ಎಂದು Skoda ಕಂಪನಿ ಹೇಳಿಕೊಂಡಿದೆ.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

100 ಕ್ಕೂ ಹೆಚ್ಚು ನಗರಗಳಲ್ಲಿ ಹಾಗೂ 170 ಟಚ್ ಪಾಯಿಂಟ್‌ಗಳ ಮೂಲಕ ಈ ಪ್ರಕ್ರಿಯೆ ಅದ್ಭುತವಾಗಿ ಮುಂದುವರಿಯುತ್ತಿದೆ ಎಂದು ಕಂಪನಿ ಹೇಳಿದೆ. ಕಂಪನಿಯ ಮಾರಾಟದ ಬಗ್ಗೆ ಹೇಳುವುದಾದರೆ ಆಗಸ್ಟ್ ತಿಂಗಳಿನಲ್ಲಿ Skoda ಕಂಪನಿಯ ಮಾರಾಟದಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ. Skoda ಆಟೋ ಕಳೆದ ತಿಂಗಳು ಒಟ್ಟು 3,829 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

2020ರ ಆಗಸ್ಟ್ ನಲ್ಲಿ Skoda ಕಂಪನಿಯು ಕೇವಲ 1,003 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಂಪನಿಯ ಮಾರಾಟ ಪ್ರಮಾಣವು 282% ನಷ್ಟು ಹೆಚ್ಚಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ಕಂಪನಿಯ ಆಗಸ್ಟ್ ತಿಂಗಳ ಮಾರಾಟಕ್ಕೆ ಹೊಸ Skoda Kushaq ಕಾಂಪ್ಯಾಕ್ಟ್ ಎಸ್‌ಯುವಿ ದೊಡ್ಡ ಕೊಡುಗೆ ನೀಡಿದೆ.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

ಕಳೆದ ತಿಂಗಳು ಕಂಪನಿಯು Kushaq ಎಸ್‌ಯು‌ವಿಯ 2,700 ಯುನಿಟ್ ಗಳನ್ನು ಮಾರಾಟ ಮಾಡಿದೆ. Kushaq ಎಸ್‌ಯು‌ವಿಯು ಪ್ರತಿ ಸ್ಪರ್ಧಿ ಎಸ್‌ಯು‌ವಿಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಫೀಚರ್ ಹಾಗೂ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ ಗಳನ್ನು ಹೊಂದಿದೆ. ಬಿಡುಗಡೆಯಾದಾಗಿನಿಂದ ಇದುವರೆಗೂ Kushaq ಎಸ್‌ಯು‌ವಿಯ ಸುಮಾರು 5 ಸಾವಿರ ಯುನಿಟ್‌ಗಳು ಗ್ರಾಹಕರ ಕೈಸೇರಿವೆ.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

Kushaq ಎಸ್‌ಯು‌ವಿಯ ಮೂಲ ಮಾದರಿಯ ಬೆಲೆ ದೆಹಲಿಯ ಎಕ್ಸ್‌ಶೋರೂಂ ದರದಂತೆ ರೂ. 10.49 ಲಕ್ಷಗಳಾದರೆ ಟಾಪ್ ಎಂಡ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 17.59 ಲಕ್ಷಗಳಾಗಿದೆ. ಟಾಪ್ ಎಂಡ್ ಮಾದರಿಯು ದುಬಾರಿ ಬೆಲೆಯನ್ನು ಹೊಂದಿದ್ದರೂ ಹೆಚ್ಚು ಬೇಡಿಕೆಯನ್ನು ಹೊಂದಿದೆ ಎಂಬುದು ಗಮನಾರ್ಹ. Kushaq ಎಸ್‌ಯು‌ವಿಯನ್ನು ಆಕ್ಟಿವ್, ಆ್ಯಂಬಿನೇಷನ್ ಹಾಗೂ ಸ್ಟೈಲ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ವರ್ಷಾಂತ್ಯದ ವೇಳೆಗೆ 30 ಕಾಂಪ್ಯಾಕ್ಟ್ ವರ್ಕ್'ಶಾಪ್'ಗಳನ್ನು ತೆರೆಯಲಿದೆ Skoda Auto

ಹೊಸ Kushaq ಎಸ್‌ಯು‌ವಿಯನ್ನು 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಎಸ್‌ಯು‌ವಿಯ ಪ್ರತಿ ಮಾದರಿಯಲ್ಲೂ 6 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ ಆಟೋಮ್ಯಾಟಿಕ್ ನೀಡಲಾಗಿದ್ದರೆ ಹೈ ಎಂಡ್ ಮಾದರಿಯಲ್ಲಿ 7 ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ನೀಡಲಾಗಿದೆ. ಈಗ ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಕಾಗಿದೆ. Skoda ಕಂಪನಿಯು ಸಹ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು Skoda ಕಂಪನಿ ಸಿಇಒ ಜಾಕ್ ಹೋಲಿಸ್ ಟ್ವಿಟರ್ ನಲ್ಲಿ ಗ್ರಾಹಕರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

Most Read Articles

Kannada
Read more on ಸ್ಕೋಡಾ skoda
English summary
Skoda auto india to open 30 compact workshop by end of 2021 details
Story first published: Tuesday, September 14, 2021, 14:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X