ನ್ಯೂ ಜನರೇಷನ್ ಸ್ಕೋಡಾ ಫ್ಯಾಬಿಯಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಈ ಹೊಸ ಫ್ಯಾಬಿಯಾ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇದೀಗ ಸ್ಕೋಡಾ ಕಂಪನಿಯು ತನ್ನ ಫ್ಯಾಬಿಯಾದ ಇಂಟಿರಿಯರ್‍ನ ಅಧಿಕೃತ ವಿನ್ಯಾಸ ಸ್ಕೆಚ್ ಅನ್ನು ಬಿಡುಗಡೆ ಮಾಡಿದೆ.

ಮುಂಬರುವ ಫ್ಯಾಬಿಯಾ ಹ್ಯಾಚ್‌ಬ್ಯಾಕ್‌ನ ಪೂರ್ವವೀಕ್ಷಣೆಯನ್ನು ಈ ಸ್ಕೆಚ್ ಮೂಲಕ ನೀಡಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಫ್ಯಾಬಿಯಾ ಕ್ಯಾಬಿನ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತದೆ, ಸ್ಕಲಾ ಹ್ಯಾಚ್‌ಬ್ಯಾಕ್ ಮತ್ತು ಕಾಮಿಕ್ ಕ್ರಾಸ್‌ಒವರ್‌ನಿಂದ ಸಾಕಷ್ಟು ವಿನ್ಯಾಸ ಸ್ಫೂರ್ತಿ ಪಡೆದಿದೆ. ಇನ್ನು ಈ ಹೊಸ ಕಾರಿನಲ್ಲಿ ಇತರ ಸ್ಕೋಡಾ ಮಾದರಿಗಳಂತೆ 2-ಸ್ಪೋಕ್ ಸ್ಟಿಯರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ.

ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಇತರ ಕನೆಕ್ಟಿವಿಟಿ ತಂತ್ರಜ್ಞಾನಗಳೊಂದಿಗೆ ಬರಲಿರುವ ದೊಡ್ಡ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನ್ನು ಸಹ ಚಿತ್ರ ಬಹಿರಂಗಪಡಿಸುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಹೊಸ ಫ್ಯಾಬಿಯಾವು ಬ್ರ್ಯಾಂಡ್‌ನ ಕಸ್ಟಮೈಸ್ ಮಾಡಿದ ವರ್ಚುವಲ್ ಕಾಕ್‌ಪಿಟ್, ಎರಡೂ ತುದಿಯಲ್ಲಿ ವೃತ್ತಾಕಾರದ ಏರ್ ವೆಂಟ್ಸ್ ಮತ್ತು ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್‌ಗಳಲ್ಲಿ ಲೆದರ್ ಅಂಶಗಳನ್ನು ಒಳಗೊಂಡಿರಬಹುದು.

ಈ ಹೊಸ ಕಾರಿನ ಮುಂಭಾಗದ ಗ್ರಿಲ್ ಮೊದಲಿಗಿಂತ ದೊಡ್ಡದಾಗಿದೆ, ಮತ್ತು ಹೆಡ್‌ಲೈಟ್‌ಗಳು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ತೀಕ್ಷ್ಣವಾಗಿ ಕಾಣುತ್ತವೆ. ಎಲ್ಇಡಿ ಟೈಲ್‌ಲೈಟ್‌ಗಳು ಸುಂದರವಾಗಿ ಕಾಣುತ್ತವೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಹಿಂಭಾಗದ ವಿಂಡ್‌ಸ್ಕ್ರೀನ್ ಕೂಪ್ ತರಹದ ಶೈಲಿಯನ್ನು ಹೊಂದಿದೆ. ಒಳಾಂಗಣ ವಿನ್ಯಾಸವನ್ನು ಇನ್ನೂ ಅನಾವರಣಗೊಳಿಸಲಾಗಿಲ್ಲ, ಆದರೆ ಕಂಪನಿಯು ಕೆಲವು ಫೀಚರ್ ಗಳ ಮಾಹಿತಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ಇನ್ನು ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖತೆ ನೀಡಲಾಗಿದೆ. ಇದಕ್ಕಾಗಿ ಇದರಲ್ಲಿ 9 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ.

ಈ ಸ್ಕೋಡಾ ಫ್ಯಾಬಿಯಾ ಕಾರು ಈ ವರ್ಷದ ಅಂತ್ಯದಲ್ಲಿ ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಹೊಸ ಕಾರು ವಿಡಬ್ಲ್ಯೂ ಸಮೂಹದ ಎಮ್‌ಕ್ಯೂಬಿ ಎಒ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಪ್ರಸ್ತುತದ ಮಾದರಿಗಿಂತ ಗಾತ್ರಕ್ಕಿಂತ ದೊಡ್ಡದಾಗಿದೆ.
MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಹೊಸ ಸ್ಕೋಡಾ ಫ್ಯಾಬಿಯಾ ಕಾರು 4,107 ಎಂಎಂ ಉದ್ದ, 1,780 ಎಂಎಂ ಅಗಲ ಮತ್ತು 2,564 ಎಂಎಂ ಉದ್ದದ ವೀಲ್‌ಬೇಸ್ ಹೊಂದಿದೆ. ಇನ್ನು ಹೊಸ ಸ್ಕೋಡಾ ಫ್ಯಾಬಿಯಾ ಕಾರಿನಲ್ಲಿ 380 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಹಿಂಭಾಗದ ಸೀಟುಗಳನ್ನು ಮಡಿಚಿದಾಗ 1,190 ಲೀಟರ್ ನಷ್ಟು ಬೂಟ್ ಸ್ಪೇಸ್ ಲಭ್ಯವಿರುತ್ತದೆ.

ಹೊಸ ಸ್ಕೋಡಾ ಫ್ಯಾಬಿಯಾ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ 1.0-ಲೀಟರ್, ಇನ್-ಲೈನ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿರುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಇದರೊಂದಿಗೆ 1.0-ಲೀಟರ್, ಟರ್ಬೋಚಾರ್ಜ್ಡ್ ಎಂಜಿನ್ ಆಗಿದೆ. ಈ ಎಂಜಿನ್ ಅನ್ನು ಕೂಡ ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗುತ್ತದೆ. ಇನ್ನು 1.5 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿರುತ್ತದೆ. ಇನ್ನು ಈ ಹೊಸ ಸ್ಕೋಡಾ ಫ್ಯಾಬಿಯಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.


Click it and Unblock the Notifications








