ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಸ್ಕೋಡಾ ಇಂಡಿಯಾ ಕಂಪನಿಯು ವಿವಿಧ ಕಾರು ಮಾದರಿಗಳ ಮಾರಾಟದೊಂದಿಗೆ ಉತ್ತಮ ಮಾರಾಟ ಸೌಲಭ್ಯ ಹೊಂದಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹೊಸ ಕಾರು ಉತ್ಪನ್ನಗಳೊಂದಿಗೆ ಪ್ರಬಲ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಮಧ್ಯಮ ಗಾತ್ರದ ವಿವಿಧ ಕಾರು ಮಾರಾಟದೊಂದಿಗೆ ತನ್ನ ಆದ ಗ್ರಾಹಕ ವರ್ಗವನ್ನು ಹೊಂದಿರುವ ಸ್ಕೋಡಾ ಕಂಪನಿಯು ತನ್ನ ಮಾತೃಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗೂಡಿ ಭಾರತದಲ್ಲಿ ಹಲವು ಹೊಸ ಯೋಜನೆಗಳನ್ನು ಆರಂಭಿಸಿದ್ದು, ಸಿ ಸೆಗ್ಮೆಂಟ್ ಸೆಡಾನ್ ಮತ್ತು ಬಿ ಸೆಗ್ಮೆಂಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಉತ್ಪನ್ನಗಳೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಿದ್ದತೆ ನಡೆಸಿದೆ.

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕುಶಾಕ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿರುವ ಸ್ಕೋಡಾ ಕಂಪನಿಯು ಸೆಡಾನ್ ಮಾದರಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಮಾದರಿಗಿಂತಲೂ ಉತ್ತಮ ವಿನ್ಯಾಸದ ಕಾರು ಮಾದರಿಯೊಂದನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಹೊಸ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಇದೇ ತಿಂಗಳು ಬಿಡುಗಡೆಗೊಳಿಸುತ್ತಿರುವ ಸ್ಕೋಡಾ ಕಂಪನಿಯು ತದನಂತರಷ್ಟೇ ಹೊಸ ಸೆಡಾನ್ ಕಾರಿನ ರೋಡ್ ಟೆಸ್ಟಿಂಗ್ ಮತ್ತು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲಿದ್ದು, ಹೊಸ ಸೆಡಾನ್ ಕಾರು ಮಾದರಿಯು ಹೋಂಡಾ ಸಿಟಿ ಕಾರಿಗೆ ಅತ್ಯುತ್ತಮ ಪೈಪೋಟಿ ನೀಡಲಿದೆ.

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಸಿ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಮಾರಾಟ ದಾಖಲೆ ಹೊಂದಿರುವ ಹೋಂಡಾ ಸಿಟಿಗೆ ಪೈಪೋಟಿ ನೀಡುವ ಉದ್ದೇಶ ಹೊಂದಿರುವ ಸ್ಕೋಡಾ ಕಂಪನಿಯು ಹೊಸ ಕಾರು ನಿರ್ಮಾಣಕ್ಕಾಗಿ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ನಡೆಸುತ್ತಿದ್ದು, ಸಿಟಿ ಕಾರಿಗಿಂತಲೂ ರೂ.1 ಲಕ್ಷಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಸಿಟಿ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡುವ ಸುಳಿವು ನೀಡಿದೆ.

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಸದ್ಯ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಮಾದರಿಯನ್ನೇ ಉನ್ನತೀಕರಿಸುವ ಕುರಿತಂತೆ ಪ್ರಕ್ರಿಯೆಯಿಸಿರುವ ಸ್ಕೋಡಾ ಕಂಪನಿಯು ನ್ಯೂ ಜನರೇಷನ್ ರ‍್ಯಾಪಿಡ್ ಬದಲಾಗಿ ಗ್ರಾಹಕರ ಆದ್ಯತೆಯೆಂತೆ ಸಂಪೂರ್ಣವಾಗಿ ಹೊಸ ಮಾದರಿಯನ್ನು ಸಿದ್ದಪಡಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಹೊಸ ಸೆಡಾನ್ ಕಾರು ಈ ವರ್ಷಾಂತ್ಯದೊಳಗೆ ಮಾರುಕಟ್ಟೆ ಪ್ರವೇಶಿಸುವ ಬಹುತೇಕ ಖಚಿತವಾಗಿದೆ.

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಹಾಗೆಯೇ ಹೊಸ ಕಾರನ್ನು ಫೋಕ್ಸ್‌ವ್ಯಾಗನ್ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಸಿದ್ದಪಡಿಸಲಾದ ಎಂಕ್ಯೂಬಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಿಎಸ್ಐ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಮಾರಾಟ ಮಾಡಲಿದೆ.

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಹೊಸ ಸೆಡಾನ್ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇರಲಿದೆಯಾ ಎನ್ನುವ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಸ್ಕೋಡಾ ಕಂಪನಿಯು ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಯಾದ ಹೋಂಡಾ ಸಿಟಿ ಕಾರಿನಲ್ಲಿರುವ ಬಹುತೇಕ ತಾಂತ್ರಿಕ ಅಂಶಗಳನ್ನು ಸ್ಕೋಡಾ ಸೆಡಾನ್ ಕಾರು ಕೂಡಾ ಪಡೆದುಕೊಳ್ಳಲಿದೆ.

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಸದ್ಯ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಕಾರು ಸಿಂಗಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.29 ಲಕ್ಷ ಬೆಲೆ ಹೊಂದಿದ್ದು, ಹೊಸ ಸೆಡಾನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.10 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಹೋಂಡಾ ಸಿಟಿ ಕಾರು ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.03 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.88 ಲಕ್ಷ ಬೆಲೆ ಹೊಂದಿದ್ದು, ಸಿಟಿ ಕಾರಿಗೆ ಪೈಪೋಟಿಯಾಗಿ ಸ್ಕೋಡಾ ಕಂಪನಿಯು ಹೊಸ ಕಾರನ್ನು ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಅಭಿವೃದ್ದಿಗೊಳಿಸುತ್ತಿದೆ.

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಸ್ಕೋಡಾ ಸೆಡಾನ್ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇಲ್ಲವಾದರೂ ಗ್ರಾಹಕರ ಬೇಡಿಕೆಯೆಂತೆ ಎರಡು ಪೆಟ್ರೋಲ್ ಎಂಜಿನ್ ಹೊಂದಲಿದ್ದು, ಆರಂಭಿಕ ಮಾದರಿಗಳಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.6-ಲೀಟರ್ ಸಾಮಾನ್ಯ ಪೆಟ್ರೋಲ್ ಮಾದರಿಗಳನ್ನು ಪರಿಚಯಿಸುವ ಸಾಧ್ಯತೆಗಳಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೋಂಡಾ ಸಿಟಿ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ ಸ್ಕೋಡಾ ಹೊಸ ಸೆಡಾನ್ ಕಾರು!

ಒಟ್ಟಿನಲ್ಲಿ ಹೊಸ ಸೆಡಾನ್ ಕಾರಿನೊಂದಿಗೆ ಹೋಂಡಾ ಸಿಟಿಗೆ ಪ್ರಬಲ ಪೈಪೋಟಿ ನೀಡಲು ನಿರ್ಧರಿಸಿರುವ ಸ್ಕೋಡಾ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳು ಸ್ಕೋಡಾ ಕಾರು ಮಾರಾಟ ಸಂಖ್ಯೆಯಲ್ಲಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿವೆ.

Most Read Articles

Kannada
Read more on ಸ್ಕೋಡಾ skoda
English summary
Skoda Planning To Introduce New Successor For Rapid, Rival Honda City. Read in Kannada.
Story first published: Tuesday, March 16, 2021, 22:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X