ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಸ್ಕೋಡಾ(Skoda) ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕುಶಾಕ್(Kushaq) ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಹೊಸ ಕಾರಿನಲ್ಲಿ ಈ ಬಾರಿ ಹೊಸ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಟಾಪ್ ಎಂಡ್ ಸ್ಟೈಲ್ ಡಿಎಸ್‌ಜಿ ವರ್ಷನ್ ಉನ್ನತೀಕರಿಸಿ ಬಿಡುಗಡೆ ಮಾಡಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಸ್ಕೋಡಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕಳೆದ ತಿಂಗಳ ಹಿಂದಷ್ಟೇ 1.0-ಲೀಟರ್ ಹೈ ಎಂಡ್ ಮಾದರಿಯಲ್ಲಿ ಪ್ರಮುಖ ಬದಲಾವಣೆ ಪರಿಚಯಿಸುವುದರ ಜೊತೆಗೆ ಹಲವಾರು ಸೇಫ್ಟಿ ಫೀಚರ್ಸ್‌ಗಳನ್ನು ಉನ್ನತೀಕರಿಸಿತ್ತು. ಇದೀಗ ಕಂಪನಿಯು 1.5 ಡಿಎಸ್‌ಜಿ ಮಾದರಿಯಲ್ಲೂ ಸಹ ಹೊಸ ಸೇಫ್ಟಿ ಫೀಚರ್ಸ್ ಬದಲಾವಣೆಗೊಳಿಸಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಕುಶಾಕ್ ಕಾರು ಬಿಡುಗಡೆಯ ಸಂದರ್ಭದಲ್ಲಿ 6 ಏರ್‌ಬ್ಯಾಗ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಆಯ್ಕೆ ಪರಿಚಯಿಸಿದ್ದ ಕಂಪನಿಯು 4 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿತ್ತು. ಆದರೆ ಗ್ರಾಹಕರ ಅಭಿಪ್ರಾಯ ಮತ್ತು ಸಲಹೆ ಮೇರೆ 6 ಏರ್‌ಬ್ಯಾಗ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಇದೀಗ ಸ್ಟ್ಯಾಂಡರ್ಡ್ ಆಗಿ ಜೋಡಿಸಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವ ಕುಶಾಕ್ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ದುಬಾರಿ ಬೆಲೆ ನಡುವೆಯೂ ಹೊಸ ಕಾರು ಖರೀದಿಗಾಗಿ ನೀರಿಕ್ಷೆಗೂ ಮೀರಿ ಬುಕ್ಕಿಂಗ್ ದಾಖಲಾಗುತ್ತಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಪ್ರತಿಸ್ಪರ್ಧಿ ಕಾರುಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಫೀಚರ್ಸ್ ಮತ್ತು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಕೋಡಾ ಕುಶಾಕ್ ಮಾದರಿಯು ಅತಿ ಕಡಿಮೆ ಅವಧಿಯಲ್ಲಿ 12 ಸಾವಿರಕ್ಕೂ ಬುಕ್ಕಿಂಗ್‌ ಗುರಿತಲುಪಿದ್ದು, ಹೊಸ ಕಾರು ವಿತರಣೆ ಆರಂಭಿಸಿದ ನಂತರ ಇದುವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ಯುನಿಟ್ ಗ್ರಾಹಕರ ಕೈಸೇರಿವೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ಹೊಸ ಸೇಫ್ಟಿ ಫೀಚರ್ಸ್‌ನೊಂದಿಗೆ ರೂ. 18 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಹೊಸ ಕಾರಿನ ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಆಟೋಮ್ಯಾಟಿಕ್ ಮಾದರಿಗಳು ಉತ್ತಮ ಬೇಡಿಕೆ ಹೊಂದಿವೆ.

ಹೊಸ ಸೇಫ್ಟಿ ಫೀಚರ್ಸ್‌ ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಹೊಸ ಕಾರು ಸ್ಕೋಡಾ ಬಟರ್ ಪ್ಲೈ ಗ್ರಿಲ್‌ನೊಂದಿಗೆ ಆಕರ್ಷಕವಾದ ಮುಂಭಾಗದ ವಿನ್ಯಾಸ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದೆ.

ಹೊಸ ಸೇಫ್ಟಿ ಫೀಚರ್ಸ್‌ ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಕುಶಾಕ್ ಕಾರಿನ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ವಿಶಾಲವಾದ ಕ್ಯಾಬಿನ್‌ನೊಂದಿಗೆ ವರ್ಚುವಲ್ ಕಾಕ್‌ಪಿಟ್‌ ಹೊಂದಿದೆ. ಇದರಲ್ಲಿ ಟು ಸ್ಪೋಕ್ ಸ್ಟೀರಿಂಗ್ ವೀಲ್ಹ್, ವೆಂಟಿಲೆಟೆಡ್ ಲೆದರ್ ಆಸನಗಳು, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 10.1 ಇಂಚಿನ ಇನ್ಟೋಟೈನ್‌ಮೆಂಟ್ ಸ್ಕ್ರೀನ್ ಸೌಲಭ್ಯವಿದೆ.

ಹೊಸ ಸೇಫ್ಟಿ ಫೀಚರ್ಸ್‌ ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಜೊತೆಗೆ ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಮಲ್ಟಿ ಫಂಕ್ಷನಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಸನ್‌ರೂಫ್, ಮೈ ಸ್ಕೋಡಾ ಕಾರ್ ಕನೆಕ್ಟ್ ಆ್ಯಪ್, ಸ್ಮಾರ್ಟ್ ಬಾಟಲ್ ಹೋಲ್ಡರ್ ಮತ್ತು ಸ್ಕೋಡಾ ಸೌಂಡ್ ಸಿಸ್ಟಂ ಸೌಲಭ್ಯವಿದ್ದು, ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್‌ ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಇದರೊಂದಿಗೆ ಕಂಪನಿಯು ಕುಶಾಕ್ ಕಾರಿನ ಎಂಟ್ರಿ ಲೆವಲ್ ಮಾದರಿಗಳಲ್ಲಿ ಆಟೋಮ್ಯಾಟಿಕ್ ವರ್ಷನ್‌ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಶೀಘ್ರದಲ್ಲೇ ಹೊಸ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರಿನ ಆಕ್ಟಿವಾ ವೆರಿಯೆಂಟ್‌ನಲ್ಲಿ ಆಟೋಮ್ಯಾಟಿಕ್ ಮಾದರಿಯನ್ನು ಪರಿಚಯಿಸುತ್ತಿದೆ.

ಹೊಸ ಸೇಫ್ಟಿ ಫೀಚರ್ಸ್‌ ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಸ್ಕೋಡಾ ಕಂಪನಿಯು ಆಕ್ಟಿವ್ 1.0 ಲೀಟರ್ ಟಿಎಸ್ಐ ಎಂಟಿ ಮತ್ತು ಆಂಬಿನೇಷನ್ 1.0 ಲೀಟರ್ ಎಂಟಿ ಮಾದರಿಯ ನಡುವಿನ ಸ್ಥಾನದಲ್ಲಿ ಹೊಸ ಮಾದರಿ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್‌ ಗಳೊಂದಿಗೆ ಬಿಡುಗಡೆಗೊಂಡ ಸ್ಕೋಡಾ ಕುಶಾಕ್ ಸ್ಟೈಲ್ ಡಿಎಸ್‌ಜಿ ವರ್ಷನ್

ಹೊಸ ವೆರಿಯೆಂಟ್ 1.0-ಲೀಟರ್ ಟಿಎಸ್ಐ ಎಂಜಿನ್‌ನೊಂದಿಗೆ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 13 ಲಕ್ಷದಿಂದ ರೂ. 13.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Most Read Articles

Kannada
Read more on ಸ್ಕೋಡಾ skoda
English summary
Skoda india launched kushaq 1 5 dsg with 6 airbags and tpms details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X