ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಸ್ಕೋಡಾ(Skoda) ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ಶೀಘ್ರದಲ್ಲೇ ತನ್ನ ಪ್ರಮುಖ ಕಾರು ಮಾದರಿಗಳ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಭಾರತದಲ್ಲೂ ಇವಿ ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾಡುವ ಯೋಜನೆ ರೂಪಿಸಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಭಾರತದಲ್ಲಿ ಫೋಕ್ಸ್‌ವ್ಯಾಗನ್ ಜೊತೆಗೂಡಿ ಸಹಭಾಗಿತ್ವ ಯೋಜನೆಯಡಿಯಲ್ಲಿ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿರುವ ಸ್ಕೋಡಾ ಕಂಪನಿಯು ಹಲವಾರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಪೆಟ್ರೋಲ್ ಕಾರುಗಳ ಜೊತೆಗೆ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ವಿವಿಧ ರಾಷ್ಟ್ರಗಳು 2030ರಿಂದಲೇ ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸಹ ಹೆಚ್ಚಿಸಲಾಗುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ನಿರ್ಣಯದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಕಳೆದ ವರ್ಷ 2020ರಲ್ಲೇ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, 2021ರ ಅವಧಿಗೆ ಇದು ಇನ್ನಷ್ಟು ಹೆಚ್ಚಳವಾಗಿರಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಜೆಕ್ ಕಾರು ಉತ್ಪಾದನಾ ಕಂಪನಿಯಾಗಿರುವ ಸ್ಕೋಡಾ ಕಂಪನಿಯು ಸಹ ಈಗಾಗಲೇ ವಿವಿಧ ಮಾದರಿಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಜ್ಜುಗೊಂಡಿದ್ದು, 2025 ವೇಳೆಗೆ ಶೇ.30 ರಷ್ಟು ಕಾರುಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳ ಮಾರಾಟವನ್ನು ಹೊಂದಲು ಯೋಜನೆ ಹೊಂದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಸ್ಕೋಡಾ ಕಂಪನಿಯು ಭಾರತದಲ್ಲೂ ಸಹ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಇವಿ ಕಾರು ಬಿಡುಗಡೆ ಯಾವಾಗ ಎನ್ನುವ ಕುರಿತಂತೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

2022ರ ಮಧ್ಯಂತರದಲ್ಲಿ ಮೊದಲ ಇವಿ ಬಿಡುಗಡೆಯ ಸಾಧ್ಯತೆ ಕುರಿತಾಗಿ ಮಾರುಕಟ್ಟೆ ಅಧ್ಯಯನ ನಡೆಸುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಹೆಚ್ಚಿನ ಸಂಖ್ಯೆಯ ಫಾಸ್ಟ್ ಚಾರ್ಜಿಂಗ್ ನಿರ್ಮಾಣ ಮಾಡುವ ಗುರಿಹೊಂದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತಂತೆ ಈ ಹಿಂದೆಯೂ ಪ್ರಕ್ರಿಯಿಸಿದ್ದ ಸ್ಕೋಡಾ ಕಂಪನಿಯು ಚಾರ್ಜಿಂಗ್ ಮೂಲಭೂತ ಸೌಲಭ್ಯಗಳ ಬೆಳವಣಿಗೆಯ ಆಧಾರದ ಮೇಲೆ ಇವಿ ಕಾರುಗಳ ಪರಿಚಯಿಸುವುದಾಗಿ ಹೇಳಿಕೊಂಡಿತ್ತು.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಭಾರತದಲ್ಲಿ ಸದ್ಯ ಕೆಲವೇ ಕೆಲವು ನಗರಗಳಲ್ಲಿ ಸಾರ್ವಜನಿಕ ಬಳಕೆಯ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳ ಸೌಲಭ್ಯಗಳಿರುವುದು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯು ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಸ್ಕೋಡಾ ಕಂಪನಿಯು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಹೆಚ್ಚುತ್ತಿರುವ ಹಿನ್ನಲೆ ಮುಂಬರವು ಕೆಲ ವರ್ಷಗಳಲ್ಲಿ ವಿವಿಧ ಇವಿ ಮಾದರಿಗಳನ್ನು ಬಿಡುಗಡೆ ಮಾಡಬಹುದಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯಗಳಿಲ್ಲದೆ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯು ನಷ್ಟ ಉಂಟು ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿರುವ ಆಟೋ ಕಂಪನಿಗಳು ನಿಗದಿತ ಮಟ್ಟದ ಇವಿ ಮಾರಾಟಕ್ಕಾಗಿ ಅಗತ್ಯ ಪ್ರಮಾಣದ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೆ ಕಾಯುತ್ತಿವೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಲಾಸ್ಟ್ ಮೈಲ್ ಕನೆಕ್ವಿಟಿವಾಗಿ ಚಾರ್ಜಿಂಗ್ ಸೌಲಭ್ಯಗಳಿಲ್ಲದಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಗ್ರಾಹಕರು ಕೂಡಾ ಹಿಂದೇಟು ಹಾಕುತ್ತಿರುವ ಬಗ್ಗೆ ಹಲವಾರು ಅಧ್ಯಯನ ವರದಿ ಬಹಿರಂಗಗೊಳಿಸಿದ್ದು, ಎಲೆಕ್ಟ್ರಿಕ್ ವಾಹನಗಳ ಭವಿಷ್ಯವು ಚಾರ್ಜಿಂಗ್ ಸೌಲಭ್ಯಗಳು ಮತ್ತು ಬ್ಯಾಟರಿ ದರ ಇಳಿಕೆಯ ಮೇಲೆ ಅವಲಂಬಿತವಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಅದರಲ್ಲೂ ಎಲೆಕ್ಟ್ರಿಕ್ ವೆಹಿಕ್ ಮೊಲಿಬಿಟಿಯಲ್ಲಿ ಪ್ರಾಥಮಿಕ ಹಂತದಲ್ಲಿರುವ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯು ಆರ್ಥಿಕವಾಗಿ ಭಾರೀ ನಷ್ಟ ಎಂದೇ ಭಾವಿಸಿರುವ ಆಟೋ ಕಂಪನಿಗಳು ಇನ್ನು ಕೆಲವು ವರ್ಷ ಕಾಯ್ದು ನಂತರ ತಮ್ಮ ಭವಿಷ್ಯದ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿವೆ.

ಸ್ಕೋಡಾ ಕಂಪನಿಯು ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗಣವಾಗಿ ಯುರೋಪ್‌ನ ಪ್ರಮುಖ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿರುವ ಎನ್ಯಾಕ್(Enyaq) ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಬಹುದಾಗಿದ್ದು, ಇದು ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಮೈಲೇಜ್‌ನಲ್ಲೂ ಗಮನಸೆಳೆಯುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾದ ಸ್ಕೋಡಾ ಇಂಡಿಯಾ

ಹೊಸ ಎಲೆಕ್ಟ್ರಿಕ್ ಕಾರು ಪ್ರತಿ ಚಾರ್ಜ್‌ಗೆ ಆರಂಭಿಕ ಆವೃತ್ತಿಯು 389ಕಿ.ಮೀ, ಮಧ್ಯಮ ಕ್ರಮಾಂಕದ ಕಾರು ಮಾದರಿಯು 509 ಕಿ.ಮೀ ಮತ್ತು ಟಾಪ್ ಎಂಡ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 459ಕಿ.ಮೀ ಮೈಲೇಜ್ ರೇಂಜ್‌ನೊಂದಿಗೆ ಮೊದಲೆರಡು ಮಾದರಿಗಿಂತಲೂ ಉತ್ತಮ ಪರ್ಫಾಮೆನ್ಸ್ ಹೊಂದಿದೆ.

ಹೊಸ ಕಾರಿನಲ್ಲಿ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 179ಕಿ.ಮೀ ಸಿಮಿತಗೊಳಿಸಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 38 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಪಡೆದುಕೊಳ್ಳಬಹುದಾಗಿದೆ. ಎನ್ಯಾಕ್ ಕಾರು ಬ್ಯಾಟರಿ ಸಾಮರ್ಥ್ಯ ಮತ್ತು ಐಷಾರಾಮಿ ಫೀಚರ್ಸ್‌ಗಳಿಗೆ ಅನುಗುಣವಾಗಿ ಹೊಸ ಕಾರು ಆರಂಭಿಕವಾಗಿ ಭಾರತೀಯ ಮಾರುಕಟ್ಟೆಯಲ್ಲಿ ರೂ.30 ಲಕ್ಷದಿಂದ ರೂ. 35 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda india planning to introduce all new enyaq iv electric suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X