Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 3 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- News
ಅಭಿವೃದ್ಧಿ ಯೋಜನೆಗಳು; ಪರಿಸರವಾದಿಗಳ ವಿರುದ್ಧ ಜನಾಕ್ರೋಶ
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಕೋಡಾ ವೆಬ್‌ಸೈಟ್‌ನಿಂದ ಮರೆಯಾಯ್ತು ಕರೋಕ್ ಎಸ್‍ಯುವಿಯ ಹೆಸರು
ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಕರೋಕ್ ಎಸ್‍ಯುವಿಯ ಹೆಸರನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಕಲಾಗಿದೆ. ಈ ಕರೋಕ್ ಎಸ್‍ಯುವಿಯನ್ನು ಸ್ಕೋಡಾ ಭಾರತೀಯ ಮಾರುಕಟ್ಟೆಯಲ್ಲಿ 2020ರ ಮೇ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು.

ಸ್ಕೋಡಾ ಕಂಪನಿಯು ಭಾರತದಲ್ಲಿ ಕರೋಕ್ ಮಾದರಿಯ 1,000 ಯುನಿಟ್ ಗಳನ್ನು ಮಾತ್ರ ಬಿಡುಗಡೆಗೊಳಿಸಿತ್ತು. ಮೊದಲ ಬ್ಯಾಚ್ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಮಾರಾಟವಾಯ್ತು. ಸ್ಕೋಡಾ ಕರೋಕ್ ಪ್ರೀಮಿಯಂ ಮಿಡ್ ಎಸ್‍ಯುವಿಯ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿತ್ತು. ಇನ್ನು ಭಾರತದಲ್ಲಿ ಕರೋಕ್ ಎಸ್‍ಯುವಿಯನ್ನು ಸ್ಕೊಡಾ ಸ್ಥಳೀಯ ಅಭಿವೃದ್ಧಿಪಡಿಸಲಿದೆ ಎಂಬ ವರದಿಗಳು ಪ್ರಕಟವಾಗಿತ್ತು.

ಹೆಚ್ಚುವರಿಯಾಗಿ, ಸ್ಕೋಡಾ ಮುಂದಿನ ಬ್ಯಾಚ್ ಕರೋಕ್ ಎಸ್‍ಯುವಿಯನ್ನು ಸ್ಥಳೀಯವಾಗಿ ಜೋಡಣೆಯನ್ನು ಮಾಡಬಹುದು ಎಂದು ಹಲವರು ನಿರೀಕ್ಷಿಸಿದ್ದರು. ಅಲ್ಲದೇ ಸ್ಕೋಡಾ ಇಂಡಿಯಾ ಕಂಪನಿಯ ನಿರ್ದೇಶಕ ಝಾಕ್ ಹೋಲಿಸ್ ಬಿಡುಗಡೆಯ ಸಮಯದಲ್ಲಿ, ಕರೋಕ್ ಎಸ್‌ಯುವಿ ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾದರೆ, ಕಂಪನಿಯು ಸ್ಥಳೀಯವಾಗಿ ಜೋಡಿಸುವುದನ್ನು ನೋಡಬಹುದು ಎಂದು ಹೇಳಿದ್ದರು.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಆದರೆ ಸ್ಕೋಡಾ ಕಂಪನಿಯು ಸ್ಥಳೀಯವಾಗಿ ಕರೋಕ್ ಎಸ್‍ಯುವಿಯನ್ನು ಜೋಡಣೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಸ್ಕೋಡಾ ತನ್ನ ಕುಶಾಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವುದರಲ್ಲಿ ನಿರತರಾಗಿದ್ದಾರೆ.

ಸ್ಕೋಡಾ ಕರೋಕ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಹಲವಾರು ಆಧುನಿಕ ಫೀಚರ್ಸ್‍ಗಳನ್ನು ಒಳಗೊಂಡಿದೆ. ಈ ಸ್ಕೋಡಾ ಕರೋಕ್ ಎಸ್‍ಯುವಿಯಲ್ಲಿ ಎಎಫ್ಎಸ್ (ಅಡಾಪ್ಟಿವ್ ಫ್ರಂಟ್ ಲೈಟಿಂಗ್), ಸಿಗ್ನೇಚರ್ ಬಟರ್ಫ್ಲೈ ಗ್ರಿಲ್, ಸ್ಕ್ವೇರ್ ವೀಲ್ ಆರ್ಚ್, ಆರ್ 17 ಅರೋನಿಯಾ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಮತ್ತು ಸಿ-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್‌ಗಳೊಂದಿಗೆ ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಈ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಆ್ಯಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಯಲ್ಲಿ ದೊಡ್ಡ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂಗಳಿವೆ. ಇದರೊಂದಿಗೆ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಸನ್‍ರೂಫ್ ಮತ್ತು ಲೆದರ್ ಅಪ್‍ಹೋಲೆಸ್ಟರಿ ಸೀಟುಗಳನ್ನು ಕೂಡ ಹೊಂದಿವೆ.

ಸ್ಕೋಡಾ ಕರೋಕ್ ಎಸ್‍ಯುವಿ ಕಂಪನಿಯ ಎಂಕ್ಯೂಬಿ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ಈ ಎಸ್‍ಯುವಿಯಲ್ಲಿ 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍ಜಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಸ್ಕೋಡಾ ಕರೋಕ್ ಎಸ್‍ಯುವಿಯಲ್ಲಿ ಸುರಕ್ಷತಾ ಫೀಚರ್ ಗಳಾಗಿ, 9 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಇಎಸ್‌ಸಿ, ಹಿಲ್-ಸ್ಟಾರ್ಟ್ ಅಸಿಸ್ಟ್ ಫ್ರಂಟ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ನೀಡಲಾಗಿದೆ

ಸ್ಕೋಡಾ ಕರೋಕ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಫೋಕ್ಸ್ ವ್ಯಾಗನ್ ಟಿ-ರಾಕ್ ಮತ್ತು ಹ್ಯುಂಡೈ ಟ್ಯೂಸಾನ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಸ್ಕೋಡಾ ತನ್ನ ಕರೋಕ್ ಎಸ್‍ಯುವಿಯನ್ನು ಮತ್ತೆ ಭಾರತಕ್ಕೆ ತರುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ, ಆದರೆ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿರುವುದರಿಂದ ಮತ್ತೆ ಕರೋಕ್ ಎಸ್‍ಯುವಿಯನ್ನು ಭಾರತಕ್ಕೆ ತರಬಹುದು ಎಂದು ನಿರೀಕ್ಷಿಸುತ್ತೇವೆ.