ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

Skoda India ಕಂಪನಿಯು ತನ್ನ ಹೊಸ Kuhaq ಕಾರಿನೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರಿನ Ambition ಆವೃತ್ತಿಯಲ್ಲಿ ಮತ್ತೊಂದು ಹೊಸ ಆವೃತ್ತಿಯನ್ನ ಶೀಘ್ರದಲ್ಲೇ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

Kushaq ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು Active, Ambition ಮತ್ತು Style ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಆಗಿ ಪ್ರತಿ ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಿದೆ. ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಹೊಸ ಕಾರಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಲು ನಿರ್ಧರಿಸಿರುವ Skoda ಕಂಪನಿಯು Ambition ವೆರಿಯೆಂಟ್‌ನಲ್ಲಿ 1.5-ಲೀಟರ್ ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಹಾಗೆಯೇ Kushaq ಕಾರಿನ ಎಂಟ್ರಿ ಲೆವಲ್ ಮಾದರಿಗಳಲ್ಲಿ ಆಟೋಮ್ಯಾಟಿಕ್ ವರ್ಷನ್‌ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಶೀಘ್ರದಲ್ಲೇ ಹೊಸ ಮಾದರಿಯನ್ನು ಬಿಡುಗಡೆ ಮಾಡಲಿರುವ Skoda ಕಂಪನಿಯು Active ವೆರಿಯೆಂಟ್‌ನಲ್ಲಿ ಆಟೋಮ್ಯಾಟಿಕ್ ಮಾದರಿಯನ್ನು ಪರಿಚಯಿಸುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

Ambition ವೆರಿಯೆಂಟ್ ಸದ್ಯ 1.0-ಲೀಟರ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸದಾಗಿ ಬಿಡುಗಡೆ ಮಾಡಲಾಗುತ್ತಿರುವ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮಾದರಿಯು ಖರೀದಿಗೆ ಲಭ್ಯವಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿರುವ Ambition ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಮಾದರಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 14.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಹೊಸ Kushaq ಕಾರಿನಲ್ಲಿ Skoda ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.59 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಹೊಸ ಕಾರಿನಲ್ಲಿ ಸದ್ಯ ಆರಂಭಿಕ ಆಟೋಮ್ಯಾಟಿಕ್ ಮಾದರಿಯ ಬೆಲೆಯು ರೂ. 14.19 ಲಕ್ಷ ಬೆಲೆ ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

Ambition ಹೊಸ ವೆರಿಯೆಂಟ್ ಜೊತೆಗೆ ಬಿಡುಗಡೆಯಾಗಲಿರುವ ಮತ್ತೊಂದು Active ಆಟೋಮ್ಯಾಟಿಕ್ ಕೂಡಾ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಇದು ರೂ. 12 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮುಂಬರುವ ದಿನಗಳಲ್ಲಿ ಹಲವಾರು ಹೊಸ ಅಪ್‌ಡೆಟ್ ಪಡೆದುಕೊಳ್ಳಲಿದ್ದು, Ambition ಮತ್ತು Active ಹೊಸ ವೆರಿಯೆಂಟ್‌ಗಳ ಕುರಿತು ಈಗಾಗಲೇ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಇನ್ನು ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವ Skoda Kushaq ಕಾರು ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರು ಖರೀದಿಗಾಗಿ ಈಗಾಗಲೇ 7 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆ ಸೇಫ್ಟಿ ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರಿನ ಟಾಪ್ ಎಂಡ್ ಮಾದರಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಹೊಸ ಕಾರು ಸ್ಕೋಡಾ ಬಟರ್ ಪ್ಲೈ ಗ್ರಿಲ್‌ನೊಂದಿಗೆ ಆಕರ್ಷಕವಾದ ಮುಂಭಾಗದ ವಿನ್ಯಾಸ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಕುಶಾಕ್ ಕಾರಿನ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ವಿಶಾಲವಾದ ಕ್ಯಾಬಿನ್‌ನೊಂದಿಗೆ ವರ್ಚುವಲ್ ಕಾಕ್‌ಪಿಟ್‌ ಹೊಂದಿದೆ. ಇದರಲ್ಲಿ ಟು ಸ್ಪೋಕ್ ಸ್ಟೀರಿಂಗ್ ವೀಲ್ಹ್, ವೆಂಟಿಲೆಟೆಡ್ ಲೆದರ್ ಆಸನಗಳು, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 10.1-ಇಂಚಿನ ಇನ್ಪೋಟೈನ್‌ಮೆಂಟ್ ಸ್ಕ್ರೀನ್ ಸೌಲಭ್ಯವಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ Skoda Kushaq ಕಾರಿನ ಹೊಸ Ambition ವೆರಿಯೆಂಟ್

ಹೊಸ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಮಲ್ಟಿ ಕೂಲಿಷನ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, 6-ಏರ್‌ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್‌ಗಳಿವೆ.

Article Published On: Friday, August 27, 2021, 14:02 [IST]
English summary
Skoda kushaq 1 5 litre engine ambition variant to launch soon details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+