ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವ ಸ್ಕೋಡಾ ಕುಶಾಕ್(Skoda Kushaq) ಮಾದರಿಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ದಾಖಲಾಗಿದ್ದು, ಹೊಸ ಕಾರು ದುಬಾರಿ ಬೆಲೆ ನಡುವೆಯೂ ಭರ್ಜರಿ ಬುಕ್ಕಿಂಗ್ ಹರಿದುಬಂದಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಕುಶಾಕ್ ಕಾರು ಪ್ರತಿಸ್ಪರ್ಧಿ ಕಾರುಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಫೀಚರ್ಸ್ ಮತ್ತು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹೊಸ ಕಾರು ಮಾದರಿಯು ಅತಿ ಕಡಿಮೆ ಅವಧಿಯಲ್ಲಿ 20 ಸಾವಿರ ಬುಕ್ಕಿಂಗ್‌ ಗುರಿತಲುಪಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಹೊಸ ಕಾರಿನ ಬುಕ್ಕಿಂಗ್ ಆಧರಿಸಿ ವಿತರಣೆಯನ್ನು ಆರಂಭಿಸಿರುವ ಸ್ಕೋಡಾ ಕಂಪನಿಯು ಇದುವರೆಗೆ ಸುಮಾರು 8 ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ವಿತರಣೆ ಮಾಡಿದ್ದು, ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ಮಾರಾಟ ಮಳಿಗೆಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಪ್ರತಿಸ್ಪರ್ಧಿಗಳಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಿರುವ ಕುಶಾಕ್ ಕಾರು ಮಾದರಿಯು ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರಿನ ಟಾಪ್ ಎಂಡ್ ಮಾದರಿಗೆ ಹೆಚ್ಚಿನ ಮಟ್ಟದ ಬೇಡಿಕೆ ದಾಖಲಾಗಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಹೊಸ ಕಾರಿನ ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಆಟೋಮ್ಯಾಟಿಕ್ ಮಾದರಿಗಳು ಉತ್ತಮ ಬೇಡಿಕೆ ಹೊಂದಿವೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಹೊಸ ಕಾರು ಸ್ಕೋಡಾ ಬಟರ್ ಪ್ಲೈ ಗ್ರಿಲ್‌ನೊಂದಿಗೆ ಆಕರ್ಷಕವಾದ ಮುಂಭಾಗದ ವಿನ್ಯಾಸ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಕುಶಾಕ್ ಕಾರಿನ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ವಿಶಾಲವಾದ ಕ್ಯಾಬಿನ್‌ನೊಂದಿಗೆ ವರ್ಚುವಲ್ ಕಾಕ್‌ಪಿಟ್‌ ಹೊಂದಿದೆ. ಇದರಲ್ಲಿ ಟು ಸ್ಪೋಕ್ ಸ್ಟೀರಿಂಗ್ ವೀಲ್ಹ್, ವೆಂಟಿಲೆಟೆಡ್ ಲೆದರ್ ಆಸನಗಳು, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 10.1 ಇಂಚಿನ ಇನ್ಟೋಟೈನ್‌ಮೆಂಟ್ ಸ್ಕ್ರೀನ್ ಸೌಲಭ್ಯವಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಜೊತೆಗೆ ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಮಲ್ಟಿ ಫಂಕ್ಷನಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಸನ್‌ರೂಫ್, ಮೈ ಸ್ಕೋಡಾ ಕಾರ್ ಕನೆಕ್ಟ್ ಆ್ಯಪ್, ಸ್ಮಾರ್ಟ್ ಬಾಟಲ್ ಹೋಲ್ಡರ್ ಮತ್ತು ಸ್ಕೋಡಾ ಸೌಂಡ್ ಸಿಸ್ಟಂ ಸೌಲಭ್ಯವಿದ್ದು, ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಇದರೊಂದಿಗೆ ಕಂಪನಿಯು ಕುಶಾಕ್ ಕಾರಿನ ಎಂಟ್ರಿ ಲೆವಲ್ ಮಾದರಿಗಳಲ್ಲಿ ಆಟೋಮ್ಯಾಟಿಕ್ ವರ್ಷನ್‌ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಶೀಘ್ರದಲ್ಲೇ ಹೊಸ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರಿನ ಆಕ್ಟಿವಾ ವೆರಿಯೆಂಟ್‌ನಲ್ಲಿ ಆಟೋಮ್ಯಾಟಿಕ್ ಮಾದರಿಯನ್ನು ಪರಿಚಯಿಸುತ್ತಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ತನ್ನ ಕಾರು ಮಾದರಿಗಳಲ್ಲೂ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಮಾಂಟೆ ಕಾರ್ಲೊ ಎಡಿಷನ್ ಮಾರಾಟ ಹೊಂದಿರುವ ಸ್ಕೋಡಾ ಕಂಪನಿಯು ಇದೀಗ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಕುಶಾಕ್ ಮಾದರಿಯಲ್ಲೂ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಎಡಿಷನ್‌ನಲ್ಲಿ ಸ್ಟ್ಯಾಂಡರ್ಡ್ ಟಾಪ್ ಎಂಡ್ ವೆರಿಯೆಂಟ್‌ಗಳಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಜೊತೆ ಸ್ಪೋರ್ಟಿ ಬ್ಯಾಡ್ಜ್ ಹೊಂದಿರಲಿದೆ.

ದುಬಾರಿ ಬೆಲೆ ನಡುವೆಯೂ 20 ಸಾವಿರ ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಮಾಂಟೆ ಕಾರ್ಲೊ ವಿಶೇಷ ಆವೃತ್ತಿಗಳು ಸ್ಕೋಡಾ ವಿವಿಧ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದ್ದು, ಇದೀಗ ಕುಶಾಕ್ ಮಾದರಿಯಲ್ಲೂ ಹೊಸ ಎಡಿಷನ್ ಬಿಡುಗಡೆಗೆ ಸಿದ್ದಗೊಂಡಿದೆ.

More from DriveSpark

Article Published On: Tuesday, December 14, 2021, 8:45 [IST]
English summary
Skoda kushaq compact suv booking crosses 20 000 units
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+