ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ವಿಡಿಯೋ ರಿವ್ಯೂ
ಎಸ್‌ಯುವಿ ವಿಭಾಗದಲ್ಲಿನ ಹೊಸ ಕಾರುಗಳ ಬಿಡುಗಡೆ ಪ್ರಕ್ರಿಯೆ ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಸ್ಕೋಡಾ ಇಂಡಿಯಾ ಕಂಪನಿಯು ಸಹ ತನ್ನ ಹೊಚ್ಚ ಹೊಸ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡುವ ತವಕದಲ್ಲಿದೆ.
ಸಬ್ ಫೋರ್ ಮೀಟರ್ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಫುಲ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ವಿವಿಧ ಕಾರು ಕಂಪನಿಗಳು ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಸ್ಕೋಡಾ ಕಂಪನಿಯು ಸಹ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೊಂದಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.
ಇದೇ ತಿಂಗಳು 28ರಂದು ಬಿಡುಗಡೆಯಾಗಲಿರುವ ಹೊಸ ಕುಶಾಕ್ ಕಾರು ಮಾದರಿಯು ಆಕ್ಟಿವ್, ಆಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆ ಸೇಫ್ಟಿ ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.
ಪ್ರತಿಸ್ಪರ್ಧಿಗಳಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಲಿರುವ ಕುಶಾಕ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದೆಂದು ನೀರಿಕ್ಷಿಸಲಾಗಿದೆ.


Click it and Unblock the Notifications








