ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

ಶೀಘ್ರದಲ್ಲೇ ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ವಿಷನ್-ಇನ್ ಕಾನ್ಸೆಪ್ಟ್ ಮಾದರಿಯನ್ನು ಕುಶಾಕ್ ಹೆಸರಿನೊಂದಿಗೆ ಅನಾವರಣಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರು ಅನಾವರಣಕ್ಕೂ ಮುನ್ನ ಉತ್ಪಾದನಾ ಆವೃತ್ತಿಯೊಂದಿಗೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್‌ಗಳೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದ್ದು, ಕುಶಾಕ್ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿರುವ ಸ್ಕೋಡಾ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರು ಮಾದರಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿ ಮಾರಾಟ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಿದೆ.

ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹೊಸ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಕಾಮಿಕ್ ಎಸ್‍‍ಯುವಿಯ ಮಾದರಿಯನ್ನು ಆಧರಿಸಿ ಅಭಿವೃದ್ದಿಗೊಂಡಿದೆ.

ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

ಹೊಸ ಎಸ್‍‍ಯುವಿ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಮತ್ತು ಬಲಿಷ್ಠ ವಿನ್ಯಾಸದ ಬಂಪರ್ ಜೋಡಣೆ ಹೊಂದಿದ್ದು, ಡ್ಯುಯಲ್ ಹೆಡ್‍‍ಲ್ಯಾಂಪ್‍, ಏರ್ ಇನ್‍‍ಟೆಕ್ ಮತ್ತು ಮುಂಭಾಗದ ಬಂಪರ್‌ನಲ್ಲಿ ಸ್ಕಫ್ ಪ್ಲೇಟ್‍ಗಳೊಂದಿಗೆ ದೊಡ್ಡ ಗ್ರಿಲ್ ವಿನ್ಯಾಸ ಹೊಂದಿದೆ.

ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

ಕುಶಾಕ್ ಎಸ್‍‍ಯುವಿಯ ಎರಡು ಬದಿಲ್ಲೂ ಮತ್ತು ಹಿಂಭಾಗದ ಪೊಫೈಲ್‌ನಲ್ಲಿ ಸ್ಪೋರ್ಟಿ ಥೀಮ್ ನೀಡಲಾಗಿದ್ದು, ಹೊಸ ಎಸ್‍‍ಯುವಿಯ ಇಂಟಿರಿಯರ್ ಕೂಡಾ ಆಕರ್ಷಕವಾಗಿದೆ. ಇಂಟಿರಿಯರ್‍‍‍ನಲ್ಲಿ ಮಲ್ಟಿ ಲೆಯರ್ಡ್ ಡ್ಯಾಶ್‍‍‍ಬೋರ್ಡ್ ಮತ್ತು ವಿವಿಧ ಬಣ್ಣಗಳನ್ನು ಹೊಂದಿರುವ ಆ್ಯಂಬಿಯೆಂಟ್ ಲೈಟಿಂಗ್ಸ್ ಮತ್ತು ಆರಾಮದಾಯಕ ಆಸನ ಸೌಲಭ್ಯಗಳನ್ನು ನೀಡಲಾಗಿದ್ದು, ಎಂಜಿನ್ ಮಾದರಿಗೆ ಅನುಗುಣವಾಗಿ ಕಾರಿನ ತಾಂತ್ರಿಕ ಅಂಶಗಳನ್ನು ಹೊಂದಿರಲಿದೆ.

ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

ಮಾಹಿತಿಗಳ ಪ್ರಕಾರ ಹೊಸ ಕುಶಾಕ್ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಮಾದರಿಯಾಗಿ 1.-0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪರಿಚಯಿಸಲಾಗುತ್ತಿದೆ.

ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

1.0-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು ಮೂರು ಸಿಲಿಂಡರ್ ಸೌಲಭ್ಯದೊಂದಿಗೆ 120-ಬಿಎಚ್‌ಪಿ ಉತ್ಪದನೆ ಮಾಡಿದ್ದಲ್ಲಿ 1.5-ಲೀಟರ್ ಪೆಟ್ರೋಲ್ ಮಾದರಿಯು ನಾಲ್ಕು ಸಿಲಿಂಡರ್ ಸೌಲಭ್ಯದೊಂದಿಗೆ 150-ಬಿಎಚ್‍‌ಪಿ ಉತ್ಪಾದನೆಯೊಂದಿಗೆ ಕಂಪ್ಯಾಕ್ಟ್ ಎಸ್‌‌ಯುವಿ ಕಾರಿನಲ್ಲಿಯೇ ಪವರ್‍‌ಫುಲ್ ಕಾರು ಮಾದರಿಯಾಗಿರಲಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

ಎಂಜಿನ್ ಆಯ್ಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗುತ್ತಿದ್ದು, ಟರ್ಬೋ ಮಾದರಿಯು 7-ಸ್ಪೀಡ್ ಡ್ಯಯುಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಳ್ಳಬಹುದಾಗಿದೆ.

ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

ಈ ಕಂಪ್ಯಾಕ್ಟ್ ಎಸ್‌ಯುವಿಯು ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿರುವ ಕುಶಾಕ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17 ಲಕ್ಷ ಬೆಲೆ ಅಂತರದೊಂದಿಗೆ ಮಾರಾಟಗೊಳ್ಳಬಹುದಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು

ಹೊಸ ಕಾರು ಎಂಜಿನ್ ಮತ್ತು ಬೆಲೆಗೆ ಆಧರಿಸಿ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಎಸ್-ಕ್ರಾಸ್ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ಇದು ಭರ್ಜರಿ ಪೈಪೋಟಿ ನೀಡಲಿದ್ದು, ಫೆಬ್ರುವರಿ ಆರಂಭದಲ್ಲಿ ಹೊಸ ಕಾರಿನ ಉತ್ಪಾದನಾ ಮಾದರಿಯು ಜಾಗತಿಕ ಮಾರುಕಟ್ಟೆಗಳಿಗಾಗಿ ಅನಾವರಣಗೊಳ್ಳಲಿದೆ.

Article Published On: Wednesday, January 27, 2021, 18:08 [IST]
English summary
Skoda Kushaq Production Prototype Images Released. Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+