ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಸ್ಕೋಡಾ

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆಯು ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದೇ ವೇಳೆ ಸ್ಕೋಡಾ ಆಟೋ ಕಂಪನಿಯು ಹೆಚ್ಚಿನ ಎಲೆಕ್ಟ್ರಿಕ್ ಕಾರನ್ನು ತಯಾರಿಸಲು ಮುಂದಾಗಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಸ್ಕೋಡಾ

ಸ್ಕೋಡಾ ಆಟೋ ಕಂಪನಿಯು ಇತ್ತೀಚೆಗೆ ವಿಶೇಷ ಕಾರ್ಯಕ್ರಮವೊಂದರಲ್ಲಿ, ‘ನೆಕ್ಸ್ಟ್ ಲೆವೆಲ್ ಸ್ಟ್ರಾಟಜಿ 2030' ಅನ್ನು ಘೋಷಿಸಿದೆ. ಈ ತಂತ್ರಗಾರಿಕೆ ಯೋಜನೆಯಲ್ಲಿ 2030ರ ಅಂತ್ಯದ ವೇಳೆಗೆ ಮೂರು ಆಲ್-ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಭವಿಷ್ಯದ ಯೋಜನೆಗಳನ್ನು ಪ್ರಕಟಿಸಿದೆ. ಇತ್ತೀಚೆಗೆ ಸ್ಕೋಡಾ ಆಟೋ ಸಿಇಒ ಥಾಮಸ್ ಸ್ಕೋಫರ್ ಅವರು ಇದನ್ನು ಖಚಿತಪಡಿಸಿದ್ದಾರೆ.

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಸ್ಕೋಡಾ

ಜೆಕ್ ರಿಪಬ್ಲಿಕನ್ ವಾಹನ ತಯಾರಕರು ಯುರೋಪ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಅಗ್ರ ಐದು ಕಾರು ತಯಾರಕರಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದೆ. ಇನ್ನು ಸ್ಕೋಡಾ ಕಂಪನಿಯು ಎಂಟ್ರಿ ಲೆವೆಲ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ.

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಸ್ಕೋಡಾ

ಸ್ಕೋಡಾ ಕಂಪನಿಯು ಈಗಾಗಲೇ ಎನ್ಯಾಕ್ ಐವಿ ಅನ್ನು ಮಾರಾಟ ಮಾಡಿದೆ ಮತ್ತು 2030ರ ವೇಳೆಗೆ ಇನ್ನೂ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಆದರೆ ಸ್ಕೋಡಾ ಕಂಪನಿಯು ಆ ಮೂರು ಎಲೆಕ್ಟ್ರಿಕ್ ಕಾರುಗಳು ಯಾವುದು ಎಂಬುವುದನ್ನು ಖಚಿತಪಡಿಸಿಲ್ಲ.

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಸ್ಕೋಡಾ

ಸ್ಕೋಡಾ ಸರಣಿಯಲ್ಲಿ ವಿಶ್ವದಾದ್ಯಂತ ಹೆಚ್ಚು ಮಾರಾಟವಾದ ಮಾದರಿ ಆಕ್ಟೀವಿಯಾ ಆಗಿದೆ. ಕಳೆದ ವರ್ಷ ಸ್ಕೋಡಾ ಆಕ್ಟೀವಿಯಾ ಕಾರಿನ ನಾಲ್ಕನೇ ತಲೆಮಾರಿನ ಮಾದರಿಯನ್ನು ಪರಿಚಯಿಸಲಾಗಿತ್ತು. ಇನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿಯು ಕೂಡ ಈ ಹೊಸ ಆಕ್ಟೀವಿಯಾ ಕಾರನ್ನು ಪರಿಚಯಿಸಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಸ್ಕೋಡಾ

ಕೆಲವು ವರದಿಗಳ ಪ್ರಕಾರ, ಸ್ಕೋಡಾ ಕಂಪನಿಯು ಆಕ್ಟೀವಾ ಕಾರನ್ನು ಎಲೆಕ್ಟ್ರಿಕ್ ಮಾದರಿಯಾಗಿ ಪರಿಚಯಿಸುವ ಸಾಧ್ಯತೆಗಳಿದೆ. ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಎನ್ಯಾಕ್ ಐವಿಗಿಂತ ಬೆಲೆ ಮತ್ತು ಗಾತ್ರ ಕೂಡ ಕಡಿಮೆಯಾಗಿರುತ್ತದೆ ಎಂದು ಹೇಳಲಾಗುತ್ತಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಸ್ಕೋಡಾ

ತನ್ನ ಯೋಜನೆಗಳ ಭಾಗವಾಗಿ, ಸ್ಕೋಡಾ ಮುಂಬರುವ ವಾಹನಗಳ ಬಿಡುಗಡೆಯೊಂದಿಗೆ ಯುರೋಪಿನ ಮಾರುಕಟ್ಟೆಶೇ.50 ರಿಂದ 70 ರಷ್ಟು ಪಾಲನ್ನು ವಶಪಡಿಸಿಕೊಳ್ಳವ ಗುರಿಯನ್ನು ಹೊಂದಿದೆ. ಸ್ಕೋಡಾ ‘ಪವರ್‌ಪಾಸ್' ಅನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಆಲ್-ಇನ್-ಒನ್ ಚಾರ್ಜಿಂಗ್ ಅಪ್ಲಿಕೇಶನ್ ಆಗಿದೆ,

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಸ್ಕೋಡಾ

ಸ್ಕೋಡಾ ಕಂಪನಿಗಯು 2030ರ ವೇಳೆಗೆ ಭಾರತ, ರಷ್ಯಾ ಮತ್ತು ಉತ್ತರ ಆಫ್ರಿಕಾದಂತಹ ಅಭಿವೃದ್ಧಿಶೀಲ ಮಾರುಕಟ್ಟೆಗಳತ್ತ ಗಮನ ಹರಿಸುತ್ತದೆ ಎಂದು ಹೇಳಿದೆ ಇನ್ನು. ಸ್ಕೋಡಾ ಆಟೋ ಕಂಪನಿಯು ವೈವಿಧ್ಯಮಯ ಡಿಜಿಟಲ್ ಗ್ರಾಹಕರ ಅನುಭವ ಮತ್ತು ತರಬೇತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿರುವುದರಿಂದ ‘ನೆಕ್ಸ್ಟ್ ಲೆವೆಲ್ ಸ್ಟ್ರಾಟಜಿ 2030' ಯೋಜನೆಯಲ್ಲಿ ಇದರ ಬಗ್ಗೆ ಕೂಡ ಹೆಚ್ಚಿನ ಗಮನವನ್ನು ಹರಿಸುತ್ತಾರೆ.

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಸ್ಕೋಡಾ

ಸ್ಕೋಡಾ ಆಟೋ ಕಂಪನಿಯು ಆನ್‌ಲೈನ್ ಮೂಲಕ ಕಾರುಗಳ ಮಾರಾಟವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದಾರೆ. ಇದರೊಂದಿಗೆ ಜಾಗತಿಕವಾಗಿ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಒಟ್ಟಾರೆಯಾಗಿ ಸ್ಕೋಡಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವುದರಿಂದ ಮಾರಾಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
Skoda Planning To Launch Three Fully Electric Cars By 2030. Read In Kannada.
Story first published: Saturday, June 26, 2021, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X