ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಸ್ಕೋಡಾ ಕಂಪನಿಯು ರ‍್ಯಾಪಿಡ್ ಕಾರಿನ ರೈಡರ್ ಪ್ಲಸ್ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ಸ್ಥಗಿತಗೊಳಿಸಿದೆ. ಸ್ಖೋಡಾ ಕಂಪನಿಯು ಕಳೆದ ವರ್ಷ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್(Skoda Rapid Rider Plus) ವೆರಿಯೆಂಟ್ ಅನ್ನು ಪರಿಚಯಿಸಿತು, ಇದು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಲ್ಲಿ ಲಭ್ಯವಿತ್ತು.

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಸ್ಕೋಡಾ ರ‍್ಯಾಪಿಡ್ ಅನ್ನು ಶೀಘ್ರದಲ್ಲೇ ಹೊಸ ಸೆಡಾನ್ ಮಾದರಿಯೊಂದಿಗೆ ಬದಲಾಯಿಸಲಾಗುವುದು. ರ‍್ಯಾಪಿಡ್ ರೈಡರ್ ಪ್ಲಸ್ ವೆರಿಯೆಂಟ್ ಅನ್ನು ಸ್ಥಗಿತಗೊಳಿಸಿದ ಹಿಂದಿನ ಕಾರಣವನ್ನು ಕಂಪನಿಯು ಅಧಿಕೃತವಾಗಿ ಘೋಷಿಸಬೇಕಿದೆ. ಆದರೆ ದೇಶದಲ್ಲಿ ನಡೆಯುತ್ತಿರುವ ಸೆಮಿ ಕಂಡಕ್ಟರ್‌ಗಳ ಕೊರತೆಯೇ ಇದಕ್ಕೆ ಕಾರಣ ಎಂದು ನಿರೀಕ್ಷಿಸುತ್ತೇವೆ. ಹಲವು ವಾಹನ ತಯಾರಕ ಕಂಪನಿಗಳು ವಾಹನ ಉತ್ಪಾದನೆ ಮಾಡಲು ಸೆಮಿ ಕಂಡಕ್ಟರ್‌ಗಳ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದೆ.

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಸದ್ಯಕ್ಕೆ, ಭಾರತದಲ್ಲಿ ಬ್ರ್ಯಾಂಡ್‌ಗೆ ಅತಿ ಹೆಚ್ಚು ಮಾರಾಟವಾಗುವ ಮಾದರಿ ರ‍್ಯಾಪಿಡ್ ಆಗಿದೆ. ಈ ರ‍್ಯಾಪಿಡ್ ಸೆಡಾನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.79 ಲಕ್ಷದಿಂದ ರೂ.13.29 ಲಕ್ಷದವರೆಗೆ ಆಗಿದೆ. ರ‍್ಯಾಪಿಡ್ ರೈಡರ್ ಪ್ಲಸ್ ವೆರಿಯೆಂಟ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಾದರಿಗಳ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,8.19 ಲಕ್ಷದಿಂದ ರೂ.9.69 ಲಕ್ಷಗಳಾಗಿದೆ,

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಈ ಸ್ಕೋಡಾ ರ‍್ಯಾಪಿಡ್ ಪ್ಲಸ್ ಎಟಿ ಸೆಡಾನ್ ಲೈನ್‌ಅಪ್‌ನಲ್ಲಿ ಲಭ್ಯವಿರುವ ಬೇಸ್-ಸ್ಪೆಕ್ ಆಟೋಮ್ಯಾಟಿಕ್ ಟ್ರಿಮ್ ಆಗಿದೆ. ಇದನ್ನು ಸ್ಥಗಿತಗೊಳಿಸಿದ ನಂತರ, ಬೇಸ್-ಸ್ಪೆಕ್ ರ‍್ಯಾಪಿಡ್ ಎಟಿ ವೆರಿಯಂಟ್ ಬೆಲೆಯು ರೂ.1.8 ಲಕ್ಷಗಳಷ್ಟು ಏರಿಕೆಯಾಗಿದೆ,

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ರ‍್ಯಾಪಿಡ್ ಪ್ಲಸ್ ಎಟಿ ಸೆಡಾನ್‌ನ ಸರಣಿಯಲ್ಲಿನ ಬೇಸ್-ಸ್ಪೆಕ್ ಟ್ರಿಮ್‌ಗಳಲ್ಲಿ ಒಂದಾಗಿದ್ದರೂ, ಇದು ಒಂದೆರಡು ಸೌಕರ್ಯಗಳನ್ನು ಒಳಗೊಂಡಿತ್ತು. ಈ ವೆರಿಯೆಂಟ್ ಮುಂಭಾಗ ಮತ್ತು ಆರ್ಮ್‌ರೆಸ್ಟ್ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀಯರಿಂಗ್ ವ್ಹೀಲ್, 6.5-ಇಂಚಿನ ಇನ್ಫೋಟೈನ್‌ಮೆಂಟ್ 4 ಸ್ಪೀಕರ್ ಆಡಿಯೋ ಸಿಸ್ಟಂ, ಕ್ಲೈಮೇಂಟ್ ಕಂಟ್ರೋಲ್ ಮತ್ತು ರೇರ್ ಎಸಿ ವೆಂಟ್‌ಗಳನ್ನು ಹೊಂದಿವೆ

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಈ ರ‍್ಯಾಪಿಡ್ ಪ್ಲಸ್ ಎಟಿ ವೆರಿಯೆಂಟ್ ನಲ್ಲಿ ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಎತ್ತರ ಹೊಂದಾಣಿಕೆ ಸೀಟ್-ಬೆಲ್ಟ್, ರಫ್ ರೋಡ್ ವೈಶಿಷ್ಟ್ಯಗಳೊಂದಿಗೆ ರೈಡರ್ ಪ್ಲಸ್ ವೆರಿಯೆಂಟ್ ಅನ್ನು ನೀಡಲಾಗಿದೆ.

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಆದರೆ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಸೆಡಾನ್‌ನ ಸಾಲಿನಲ್ಲಿರುವ ಇತರ ಟ್ರಿಮ್‌ಗಳಂತೆಯೇ ಉಳಿದಿವೆ. ಸ್ಕೋಡಾ ರ‍್ಯಾಪಿಡ್ ಅನ್ನು ಬ್ರಾಂಡ್‌ನ 1.0-ಲೀಟರ್ ಟಿಎಸ್ಐ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಯುನಿಟ್ ಅನ್ನು ಜೋಡಿಸಲಾಗಿದೆ. ಈ ಎಂಜಿನ್ 108.6 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಮೊದಲೇ ಹೇಳಿದಂತೆ, ಸ್ಕೋಡಾ ರಾಪಿಡ್ ಅನ್ನು ಶೀಘ್ರದಲ್ಲೇ ಎಲ್ಲಾ ಹೊಸ ಸೆಡಾನ್ ಸ್ಲಾವಿಯಾ ಸಂಕೇತನಾಮದಿಂದ ಬದಲಾಯಿಸಲಾಗುವುದು, ಇದು ಮುಂದಿನ ವರ್ಷದಲ್ಲಿ ಬರುವ ನಿರೀಕ್ಷೆಯಿದೆ. ಹೊಸ ಸೆಡಾನ್‌ನ ಒಟ್ಟಾರೆ ಆಯಾಮಗಳು ರಾಪಿಡ್‌ನಂತೆಯೇ ಇರುತ್ತವೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಬಾಹ್ಯ ಮತ್ತು ಒಳಾಂಗಣಗಳು ಸಂಪೂರ್ಣವಾಗಿ ಹೊಸದಾಗಿರುತ್ತವೆ.

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಮೊದಲೇ ಹೇಳಿದಂತೆ, ಸ್ಕೋಡಾ ರ‍್ಯಾಪಿಡ್ ಕಾರನ್ನು ಶೀಘ್ರದಲ್ಲೇ ಬದಲಾಯಿಸಿ ಹೊಸ ಮಿಡ್‌ಸೈಜ್ ಸೆಡಾನ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಸ್ಕೋಡಾ ಮಿಡ್ ಸೈಜ್ ಸೆಡಾನ್ ಕಾರಿಗೆ ಸ್ಲಾವಿಯಾ ಎಂಬ ಹೆಸರನ್ನು ನೀಡಬಹುದು. ಸ್ಕೋಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರನ್ನು ಈ ವರ್ಷದ ಅಂತ್ಯದ ಮೊದಲು ಅನಾವರಣಗೊಳಿಸಿಸಲಿದೆ ಎಂದು ಹೇಳಿದೆ.

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಸ್ಕೋಡಾ ಸ್ಲಾವಿಯಾ ಸೆಡಾನ್ ಮಾದರಿಯನ್ನು ಹೊಸ ವಿನ್ಯಾಸ ರೂಪದಲ್ಲಿ ಬಿಡುಗಡೆಗೊಳಿಸಲಿದೆ. ಮುಂಬರುವ ಮಿಡ್ ಸೈಜ್ ಸೆಡಾನ್‌ನ ವಿನ್ಯಾಸ ರೇಖಾಚಿತ್ರವನ್ನು ಕಂಪನಿಯು ಬಿಡುಗಡೆ ಮಾಡಿದೆ.ಮುಂಬರುವ ಸ್ಲಾವಿಯಾ ಸೆಡಾನ್ ಇಂಡಿಯನ್ 2.0 ಕಾರ್ಯತಂತ್ರದ ಅಡಿಯಲ್ಲಿ ಬಿಡುಗಡೆಯಾದ ಬ್ರಾಂಡ್‌ನ ಎರಡನೇ ಮಾದರಿಯಾಗಿದೆ. ಇದರ ಪರಿಣಾಮವಾಗಿ ಸೆಡಾನ್ ಅದೇ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ.

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಇದು ಇತ್ತೀಚೆಗೆ ಬಿಡುಗಡೆಯಾದ ಸ್ಕೋಡಾ ಕುಶಾಕ್ ಎಸ್‍ಯುವಿಗೆ ಆಧಾರವಾಗಿದೆ. ಇದರ ಒಳಭಾಗದಲ್ಲಿ ಹೆಚ್ಚಿನ ಸ್ಪೇಸ್ ಅನ್ನು ಹೊಂದಿರುತ್ತದೆ. ಇದು ಅತಿದೊಡ್ಡ ಬೂಟ್‌ಸ್ಪೇಸ್ ಮತ್ತು ವಿಭಾಗದ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ. ಸದ್ಯ ಮಾರಾಟವಾಗುತ್ತಿರುವ ರ‍್ಯಾಪಿಡ್ ಕಾರು ಪಿಕ್ಯೂ 25 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿ ಕುಸಿತವಾಗಿದೆ.

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಈ ರ‍್ಯಾಪಿಡ್ ಕಾರು 2011ರಲ್ಲಿ ಭಾರತದಲ್ಲಿ ಬಿಡುಗಡೆಯಾದಗಿನಿಂದ ಯಾವುದೇ ಬದಲಾಗದೆ ಉಳಿದಿವೆ. ಸ್ಲಾವಿಯಾದ ಒಳಭಾಗದಲ್ಲಿ ಇತ್ತೀಚಿನ ಕನೆಕ್ಟಿವಿಟಿ ತಂತ್ರಜ್ಞಾನ ಮತ್ತು ಕುಶಾಕ್ ಮಾದರಿಯಿಂದ ಎರವಲು ಪಡೆಯಬಹುದಾದ ಟಚ್‌ಸ್ಕ್ರೀನ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ. ಅಲ್ಲದೇ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿರುತ್ತದೆ.ಇನ್ನು ಈ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ನಲ್ಲಿ 1.0-ಲೀಟರ್ ಮೂರು ಸಿಲಿಂಡರ್ ಟಿಎಸ್ಐ ಟರ್ಬೊ ಪೆಟ್ರೋಲ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ Rapid Rider Plus ವೆರಿಯೆಂಟ್ ಸ್ಥಗಿತಗೊಳಿಸಿದ Skoda

ಸ್ಕೋಡಾ ಹೊಸದಾಗಿ ಬಿಡುಗಡೆ ಮಾಡಿದ ಟ್ರಿಮ್ ರ‍್ಯಾಪಿಡ್ ಲೈನ್‌ಅಪ್ ರೈಡರ್ ಪ್ಲಸ್‌ ವೆರಿಯೆಂಟ್ ಅನ್ನು ಸ್ಥಗಿತಗೊಳಿಸಿದೆ. ಭಾರತದಲ್ಲಿ ವೆರಿಯೆಂಟ್ ಅನ್ನು ಸ್ಥಗಿತಗೊಳಿರುವುದನ್ನು ಕಂಪನಿಯು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಟ್ರಿಮ್ ಅನ್ನು ತೆಗೆದ ನಂತರ, ಬೇಸ್-ಸ್ಪೆಕ್ ಎಟಿ ರೂಪಾಂತರವು ಈಗ ರೂ.10 ಲಕ್ಷಗಳಿಗಿಂತ ಹೆಚ್ಚಿನ ಬೆಲೆ ಹೊಂದಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda rapid rider plus variant discontinued in india find here details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X