ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿರಲಿದೆ ಸ್ಕೋಡಾ ಸ್ಲಾವಿಯಾ

ಸ್ಕೋಡಾ ಕಂಪನಿಯು ಹೊಸ ಸ್ಲಾವಿಯಾ ಕಾರನ್ನು ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗಿನ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಅಭಿವೃದ್ದಿಗೊಳಿಸಿದ್ದು, ಹೊಸ ಯೋಜನೆ ಅಡಿ ಒಟ್ಟು ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಯೋಜಿಸಲಾಗಿದೆ. ಹೊಸ ಯೋಜನೆ ಅಡಿ ಎರಡು ಕಂಪನಿಗಳು ಜೊತೆಗೂಡಿ ಕುಶಾಕ್, ಟೈಗುನ್ ಕಂಪ್ಯಾಕ್ಟ್ ಎಸ್‍ಯುವಿ ಬಿಡುಗಡೆ ಮಾಡಿವೆ. ಇದೀಗ ಮೂರನೇ ಕಾರು ಮಾದರಿಯಾಗಿ ಸ್ಲಾವಿಯಾ ಕಾರು ಬಿಡುಗಡೆಯಾಗಲಿದ್ದು, ಇದೇ ಕಾರು ಮಾದರಿಯನ್ನು ಆಧರಿಸಿ ಫೋಕ್ಸ್‌ವ್ಯಾಗನ್ ಹೊಸ ವರ್ಚಸ್ ಸೆಡಾನ್ ಕೂಡಾ ಬಿಡುಗಡೆಯಾಗಲಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಕುಶಾಕ್ ನಂತರ ಟೈಗುನ್ ಬಿಡುಗಡೆ ಮಾಡಿದ್ದ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಇದೀಗ ಮೊದಲ ಹಂತವಾಗಿ ಸ್ಲಾವಿಯಾ ಹಾಗೂ ಸ್ಲಾವಿಯಾ ಬಿಡುಗಡೆಯಾದ ಕೆಲ ತಿಂಗಳಿನ ನಂತರ ವರ್ಚಸ್ ಸೆಡಾನ್ ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.

ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಸ್ಲಾವಿಯಾ ಕಾರು ರ‍್ಯಾಪಿಡ್ ಸೆಡಾನ್ ಬದಲಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಸ್ಲಾವಿಯಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಪ್ರಮುಖ ಮಧ್ಯಮ ಶ್ರೇಣಿಯಲ್ಲಿರುವ ಸೆಡಾನ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಸದ್ಯ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿರುವ ಸ್ಕೋಡಾ ಕಂಪನಿಯು ಹೊಸ ಕಾರನ್ನು ಅಧಿಕೃತವಾಗಿ 2022ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಬಿಡುಗಡೆಯ ನಂತರ ರ‍್ಯಾಪಿಡ್ ಸೆಡಾನ್ ಕಾರು ಮಾರಾಟವು ಸ್ಥಗಿತಗೊಳ್ಳಲಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

2011ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ರ‍್ಯಾಪಿಡ್ ಸೆಡಾನ್ ಮಾದರಿಯು ಕೆಲವೇ ಕೆಲವು ಬದಲಾವಣೆಗಳ ಹೊರತಾಗಿ ಯಾವುದೇ ಹೊಸ ತಲೆಮಾರಿನ ಆವೃತ್ತಿಗಳನ್ನು ಪಡೆದುಕೊಂಡಿರಲಿಲ್ಲ. 2020ರಲ್ಲಿ ರ‍್ಯಾಪಿಡ್ ಹೊಸ ತಲೆಮಾರಿನ ಬಿಡುಗಡೆಗೆ ಸಿದ್ದವಾಗಿದ್ದ ಸ್ಕೋಡಾ ಕಂಪನಿಯು ಕೊನೆಯ ಹಂತದಲ್ಲಿ ಹೊಸ ತಲೆಮಾರಿನ ಮಾದರಿಯ ಬದಲಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಸ್ಲಾವಿಯಾ ಬಿಡುಗಡೆ ಮಾಡಲು ನಿರ್ಧರಿಸಿತು.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಹೀಗಾಗಿ ರ‍್ಯಾಪಿಡ್ ಮಾದರಿಯಲ್ಲಿ ಯಾವುದೇ ಬದಲಾವಣೆಗಳನ್ನು ತರದೆ ಮಾರಾಟ ಮಾಡುತ್ತಿರುವ ಸ್ಕೋಡಾ ಕಂಪನಿಯು ಸ್ಲಾವಿಯಾ ಬಿಡುಗಡೆ ನಂತರ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಹೊಸ ಸ್ಲಾವಿಯಾ ಕಾರು ವಿವಿಧ ಎಂಜಿನ್ ಆಯ್ಕೆ, ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಗರಿಷ್ಠ ಮಟ್ಟದ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಹೊಸ ಸೆಡಾನ್ ಕಾರು ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್‌ಗಿಂತಲೂ ಆಕರ್ಷಕ ವಿನ್ಯಾಸದೊಂದಿಗೆ ಲಾಂಗ್‌ವೀಲ್ಹ್ ಬೆಸ್ ಪಡೆದುಕೊಂಡಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಸ್ಲಾವಿಯಾ ಕಾರು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್‌ನೊಂದಿಗೆ 560 ಲೀಟರ್ ಬೂಟ್‌‌ಸ್ಪೆಸ್ ಹೊಂದಿದ್ದು, ಹೊಸ ಕಾರು ಹೋಂಡಾ ಸಿಟಿ ಸೆಡಾನ್ ಮಾದರಿಯಷ್ಟೇ ಉದ್ದಳತೆಯೊಂದಿಗೆ ತುಸು ಅಗಲವಾಗಿರುವುದಲ್ಲದೆ 51 ಎಂಎಂ ನಷ್ಟು ಹೆಚ್ಚುವರಿ ವ್ಹೀಲ್ ಬೆಸ್ ಹಾಗೂ ಹೆಚ್ಚುವರಿ 15 ಲೀಟರ್‌ನಷ್ಟು ಬೂಟ್‌ಸ್ಪೆಸ್ ಹೊಂದಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಎಂಜಿನ್ ಮತ್ತು ಪರ್ಫಾಮೆನ್ಸ್

ಸ್ಲಾವಿಯಾ ಕಾರು ಕುಶಾಕ್ ಮಾದರಿಯಂತೆ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ ಟಿಎಸ್ಐ ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿರಲಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಹೊಸ ಕಾರಿನ 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಯ್ಕೆಯನ್ನು ನೀಡಲಾಗುತ್ತದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಹೈ ಎಂಡ್ ಮಾದರಿಯಲ್ಲಿರುವ 1.5-ಲೀಟರ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಅಲ್ಲದೆ ಹೊಸ ಕಾರು ಕುಶಾಕ್‌ನಲ್ಲಿರುವಂತೆ 1.5-ಲೀಟರ್ ಎಂಜಿನ್ ಹೊಂದಿರುವ ಸ್ಲಾವಿಯಾ ಸಕ್ರಿಯ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುತ್ತದೆ (ACT) ಇದು ಎಂಜಿನ್ ವೇಗದಲ್ಲಿದ್ದಾಗ ಎರಡು ಸಿಲಿಂಡರ್‌ಗಳನ್ನು ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳಿಸುವ ಮೂಲಕ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಹಾಗೆಯೇ ಹೊಸ ಕಾರು ಸಿಗ್ನಿಚೆರ್ ಬಟರ್‌ಪ್ಲೈ ಗ್ರಿಲ್, ಸ್ಲಿಕ್ ಹೆಡ್‌ಲ್ಯಾಂಪ್, ಎಲ್ ಆಕಾರದಲ್ಲಿರುವ ಡೇ ಟೈಮ್ ರನ್ನಿಂಗ್ ಲ್ಯಾಂಪ್ ಸ್ಟ್ರೀಪ್, ಸ್ಪೋರ್ಟಿ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ ಹೌಸ್, ಎಲ್ಇಡಿ ಟೈಲ್ ಲೈಟ್ಸ್‌ನೊಂದಿಗೆ ಒಳಾಂಗಣವು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಹೊಸ ಕಾರಿನ ಒಳಾಂಗಣ ಸೌಲಭ್ಯವು ಆಕ್ಟಿವಿಯಾ ಮಾದರಿಯನ್ನು ನೆನಪಿಸಲಿದ್ದು, 10 ಇಂಚಿನ ಇನ್ಪೋಟೈನ್‌ಮೆಂಟ್, 8 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮೈ ಸ್ಕೋಡಾ ಕಾರ್ ಕನೆಕ್ಟೆಡ್ ನೊಂದಿಗೆ ವೆಂಟಿಲೆಟೆಡ್ ಲೆದರ್ ಆಸನಗಳು, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಆಟೋ ಡಿಮ್ಮಿಂಗ್ ಹೊಂದಿರುವ ರಿಯರ್ ವ್ಯೂ ಮಿರರ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಸ್ಲಾವಿಯಾ ಹೈ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್‌ಗಳು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಎರಡು ಎಂಜಿನ್, ಮೂರು ವೆರಿಯೆಂಟ್ ಮತ್ತು ಐದು ಬಣ್ಣಗಳ ಆಯ್ಕೆ ಹೊಂದಿದೆ ಸ್ಕೋಡಾ ಸ್ಲಾವಿಯಾ

ಹೊಸ ಕಾರು ಟೊರ್ನಾಟ್ ರೆಡ್, ಕ್ರಿಸ್ಟಲ್ ಬ್ಲ್ಯೂ, ಕ್ಯಾಂಡಿ ವೈಟ್, ರೆಫ್ಲೆಕ್ಸರ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

Article Published On: Friday, November 19, 2021, 17:17 [IST]
English summary
Skoda slavia variants colour options details revealed
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+