ಭಾರತದಲ್ಲಿ ಹೊಸ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಸ್ಕೋಡಾ
ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಮಿಡ್ ಸೆಡಾನ್ ಅನ್ನು ಬದಲಾಯಿಸಿ ಹೊಸ ಸೆಡಾನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಸ್ಕೋಡಾ ಕಂಪನಿಯು ಈ ಹೊಸ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸಬಹುದು.

ಹೊಸ ಸ್ಕೋಡಾ ಸೆಡಾನ್ ಕಾರು ಲಾರಾ ಅಥವಾ ಸ್ಲಾವಿಯಾ ಎಂಬ ಹೆಸರಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಮುಂಬರುವ ವಾರಗಳಲ್ಲಿ ಕುಶಾಕ್ ಮಾರಾಟಕ್ಕೆ ಬರಲಿರುವ ಕಾರಣ ಇದು ಸ್ಕೋಡಾದ ಎರಡನೇ ಮಾದರಿಯಾಗಿದ್ದು, ಇದು ಎಂಕ್ಯೂಬಿ ಎಒ ಐನ್ ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿದೆ. ಇವೆರಡೂ ಇಂಡಿಯಾ 2.0 ಯೋಜನೆಯಡಿ ಬರುತ್ತವೆ, ಇದಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಒಂದು ಬಿಲಿಯನ್ ಯುರೋಗಳಷ್ಟು ಹೂಡಿಕೆ ಮಾಡಲಾಗಿದೆ.

ಸದ್ಯ ಮಾರಾಟವಾಗುತ್ತಿರುವ ರ‍್ಯಾಪಿಡ್ ಪಿಕ್ಯೂ 25 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿ ಕುಸಿತವಾಗಿದೆ. ರ‍್ಯಾಪಿಡ್ ಕಾರು 2011ರಲ್ಲಿ ಭಾರತದಲ್ಲಿ ಬಿಡುಗಡೆಯಾದಗಿಣಿಂಅ ಮಾಡಿದಾಗಿನಿಂದ ಯಾವುದೇ ಬದಲಾಗದೆ ಉಳಿದಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಿಡ್ ಸೈಜ್ ಸೆಡಾನ್ ವಿಭಾಗದಲ್ಲಿ ಕಳೆದ ವರ್ಷ ಐದನೇ ತಲೆಮಾರಿನ ಹೋಂಡಾ ಸಿಟಿಯನ್ನು ಪರಿಚಯಿಸಿದ್ದರು. ಇನ್ನು ಈ ವಿಭಾಗದಲ್ಲಿ ಟೊಯೊಟಾ ಕಂಪನಿಯು ಯಾರಿಸ್ ಸೆಡಾನ್ ಅನ್ನು ಬೆಲ್ಟಾ ಎಂಬ ಹೆಸರಿನೊಂದಿಗೆ ಬಿಡುಗಡೆಗೊಳಿಸಲಾಗುತ್ತಿದೆ.

ಇನ್ನು ಫೋಕ್ಸ್‌ವ್ಯಾಗನ್ ಜಾಗಾತಿಕ ಮಾರುಕಟ್ಟೆಯಲ್ಲಿ ಹೊಸ ವರ್ಟಿಸ್ ಮಾದರಿ ಆಧಾರಿತ ಸೆಡಾನ್ ಅನ್ನು ಬಿಡುಗಡೆಗೊಳಿಸಲಿದೆ. ಈ ಎರಡೂ ಸೆಡಾನ್‌ಗಳು ಈಗಾಗಲೇ ಸಾರ್ವಜನಿಕ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ರ‍್ಯಾಪಿಡ್ ಬದಲಿ ಸೆಡಾನ್ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿರುತ್ತದೆ. ಇದರ ಒಳಭಾಗದಲಿ ಹೆಚ್ಚಿನ ಸ್ಪೇಸ್ ಅನ್ನು ಹೊಂದಿರುತ್ತದೆ. ಇದು ಅತಿದೊಡ್ಡ ಬೂಟ್‌ಸ್ಪೇಸ್ ಮತ್ತು ವಿಭಾಗದ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.

ಸ್ಟೈಲಿಂಗ್‌ಗೆ ಸಂಬಂಧಿಸಿದಂತೆ, ವಿದೇಶದಲ್ಲಿ ಮಾರಾಟವಾಗುವ ಮಾದರಿಗಳ ಅಂಶಗಳನ್ನು ಹೊಸ ಸೆಡಾನ್ ಹೊಂದಿರುತ್ತದೆ. ಇದು ಮರುವಿನ್ಯಾಸಗೊಳಿಸಲಾದ ಬಟರ್‌ಫ್ಲೈ ಫ್ರಂಟ್ ಗ್ರಿಲ್, ಸ್ಪೋರ್ಟಿ ಫಾಗ್ ಲ್ಯಾಂಪ್‌ಗಳು ಮತ್ತು ವಿಶಾಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ತೆಳ್ಳನೆಯ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ.
MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಇನ್ನು ಈ ಹೊಸ ಸ್ಕೋಡಾ ಸೆಡಾನ್ ನಲ್ಲಿ 1.0-ಲೀಟರ್ ಮೂರು ಸಿಲಿಂಡರ್ ಟಿಎಸ್ಐ ಟರ್ಬೊ ಪೆಟ್ರೋಲ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 110 ಬಿಹೆಚ್‌ಪಿಗಿಂತ ಹೆಚ್ಚು ಪವರ್ ಅನ್ನು ಉತ್ಪಾದಿಸುತ್ತದೆ.

ಇದರೊಂದಿಗೆ ಈ ಹೊಸ ಸೆಡಾನ್ ಟಾಪ್-ಎಂಡ್ ರೂಪಾಂತರಗಳಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್, 6-ಸ್ಪೀಡ್ ಟಾರ್ಕ್ ಕರ್ನ್'ವಾಟರ್ ಮತ್ತು 7-ಸ್ಪೀಡ್ ಡಿಎಸ್ಜಿ ಆಯ್ಕೆಗಳನ್ನು ನೀಡಲಾಗುತ್ತದೆ.


Click it and Unblock the Notifications