ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

Suzuki ಕಂಪನಿಯು ತನ್ನ WagonR Smile ಕಾರನ್ನು ತಮ್ಮ ತವರು ಮಾರುಕಟ್ಟೆ ಜಪಾನ್ ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಂಟ್ರಿ ಲೆವೆಲ್ Suzuki WagonR Smile ಕಾರಿನ ವಿತರಣೆಯನ್ನು ಸೆಪ್ಟೆಂಬರ್ 10 ರಿಂದ ಆರಂಭವಾಗಲಿದ್ದು, ಬ್ರ್ಯಾಂಡ್ ವಾರ್ಷಿಕವಾಗಿ ಸುಮಾರು 60,000 ಯೂನಿಟ್‌ಗಳನ್ನು ಮಾರಾಟ ಮಾಡುವ ನಿರೀಕ್ಷೆಯಲ್ಲಿದೆ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಈ ಹೊಸ Suzuki WagonR Smile ಕಾರಿನ ಬೆಲೆಯು ಜಪಾನ್ ಮಾರುಕಟ್ಟೆಯಲ್ಲಿ 1.29 ಮಿಲಿಯನ್ ಯೆನ್ (ಅಂದಾಜು ರೂ. 8.30 ಲಕ್ಷ) ಬೆಲೆಯನ್ನು ಹೊಂದಿದೆ. ಈ ಕಾರಿನ ಹೊರಭಾಗವು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಅದರ ಪೆಟ್ಟಿಗೆಯ ಗುಣಲಕ್ಷಣಗಳೊಂದಿಗೆ, ಇದು ಮಿನಿವ್ಯಾನ್ ತರಹದ ಸಿಲೂಯೆಟ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಒಂದು ಸುತ್ತಿನ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ, ಆದರೆ ರೇಡಿಯೇಟರ್ ಗ್ರಿಲ್ ಅನ್ನು ಕ್ರೋಮ್‌ನ ಫಿನಿಶಿಂಗ್ ಅನ್ನು ಹೊಂದಿದೆ, ಒಟ್ಟಾರೆ ವಿನ್ಯಾಸವು ಕನಿಷ್ಠ ವಿಧಾನವನ್ನು ಅನುಸರಿಸುತ್ತದೆ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಈ ಕಾರಿನ ಸೈಡ್ ಪ್ರೋಫೈಲ್ ಹಿಂಭಾಗದಲ್ಲಿ ಹತ್ತಲು ಮತು ಇಳಿಯಲು ಸೈಲಿಡಿಂಗ್ ಡೋರುಗಳೊಂದಿಗೆ ಬರುತ್ತದೆ, ಇದು ಸ್ಟ್ಯಾಂಡರ್ಡ್ WagonR ಸುಮಾರು 45 ಮಿಮೀ ಎತ್ತರವಿದೆ. ಈ ಕಾರಿನ ರೂಫ್ ಸಮತಟ್ಟಾಗಿದೆ ಮತ್ತು ಹಿಂಭಾಗವು ಲಂಬವಾಗಿ ಜೋಡಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ. ಅದಲ್ಲದೆ, ಕಾರು ತಯಾರಕರು ವ್ಯಾಗನಾರ್ ಸ್ಮೈಲ್‌ಗಾಗಿ ಬೆರಳೆಣಿಕೆಯಷ್ಟು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳನ್ನು ನೀಡುತ್ತಿದ್ದಾರೆ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಇನ್ನು ವಾಸ್ತವವಾಗಿ 'ಸ್ಮೈಲ್' ಅದರ ಒಟ್ಟಾರೆ ಆಕರ್ಷಣೆಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದು ಹೇಳುವುದು ತಪ್ಪಾಗುವುದಿಲ್ಲ. ಕ್ಯಾಬಿನ್ ಕೂಡ ಸ್ವಚ್ಛವಾದ ಮತ್ತು ಅಸ್ತವ್ಯಸ್ತಗೊಳಿಸದ ಲೇಔಟ್ ಅನ್ನು ಒಳಗೊಂಡಿದೆ. ಆದರೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಇನ್ನು ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಆಫರ್‌ನಲ್ಲಿದೆ. ಡ್ಯಾಶ್‌ಬೋರ್ಡ್‌ಗಾಗಿ ಡ್ಯುಯಲ್-ಟೋನ್ ಥೀಮ್ ಅನ್ನು ನೀಡಲಾಗಿದೆ, Smile ಹಲವಾರು ಅಪ್‌ಹೋಲ್ಸ್ಟರಿ ಆಯ್ಕೆಗಳು ಮತ್ತು ಓಲ್ಡ್ ಸ್ಕೂಲ್ ಅನಲಾಗ್ ಕ್ಲಸ್ಟರ್ ಬಿನ್ನಾಕಲ್‌ನೊಂದಿಗೆ ಸಣ್ಣ ಮಲ್ಟಿ-ಇನ್ ಪ್ಯೂಟೆಯೆನ್ ಸಿಸ್ಟಂ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಇದಲ್ಲದೆ WagonR Smile ಪ್ಯಾಕೇಜ್‌ಗಳನ್ನು ಬ್ರ್ಯಾಂಡ್ ನೀಡುತ್ತದೆ, ಇದರಲ್ಲಿ ಡೆಕಲ್ಸ್, ಬಾಡಿ ಕಿಟ್‌ಗಳು, ರೂಫ್ ರೇಲ್‌ಗಳು, ಅಲಾಯ್ ವ್ಹೀಲ್‌ಗಳು ಮತ್ತು ಇತರ ಅಕ್ಸೆಸರೀಸ್ ಸೇರಿವೆ ಮತ್ತು ಮಾಲೀಕರಿಗೆ ಕಸ್ಟಮೈಸ್ ಮಾಡಲು ಅವಕಾಶ ನೀಡುತ್ತದೆ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಇನ್ನು Suzuki WagonR Smile ಕಾರಿನಲ್ಲಿ ಸಿಸಿ ಮೂರು ಸಿಲಿಂಡರ್ ನೆಚ್ಯುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 47 ಬಿಎಚ್‌ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 58 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸಿವಿಟಿಗೆ ಮಾತ್ರ ಜೋಡಿಸಲಾಗುತ್ತದೆ. ಮ್ಯಾನುಯಲ್ ಗೇರ್ ಬಾಕ್ಸ್ ಆಯ್ಕೆ ಇಲ್ಲ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಆದರೆ ಖರೀದಿದಾರರು FWD ಮತ್ತು AWD ವಿನ್ಯಾಸಗಳ ನಡುವೆ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಆಫರ್ ನಲ್ಲಿ ಮೂರು ವೆರಿಯಂಟ್ ಗಳು ಇರಲಿವೆ. ಇದರಲ್ಲಿ ಟಾಪ್ ವೆರಿಯೆಂಟ್ ಹೈಬ್ರಿಡ್ ಪವರ್ ಟ್ರೈನ್ ಅನ್ನು ಸಹ ಪಡೆಯುತ್ತದೆ.. ಈ Suzuki WagonR Smile ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ,

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಇನ್ನು ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಆಗಸ್ಟ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಗಳ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಒಟ್ಟು 130,699 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 124,624 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.5 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಒಟ್ಟು ವಾರ್ಷಿಕ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದರು ದೇಶಿಯಾ ಮಾರುಕಟ್ಟೆಯಲ್ಲಿ ಕುಸಿತವನ್ನು ಕಂಡಿದೆ, ಇನ್ನು ಮಾರುತಿ ಸುಜುಕಿ ಕಂಪನಿಗೆ ಎಲೆಕ್ಟ್ರಾನಿಕ್ ಯುನಿಟ್ ನಿಂದಾಗಿ ಕೊರತೆಯಿಂದಾಗಿ ಆಗಸ್ಟ್ ತಿಂಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿ ಹೇಳಿದೆ. ಇದು ಹಲವಾರು ವಾಹನ ತಯಾರಕರು ಜಾಗತಿಕವಾಗಿ ಎದುರಿಸುತ್ತಿರುವ ಸಮಸ್ಯೆಯಾಗಿದೆ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಹೊಸ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯಾಪಕವಾಗಿ ಪರಿಣಾಮ ಬೀರುತ್ತಿದೆ. ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದೆ. ಪೂರೈಕೆ ಪ್ರಮಾಣವು ಕಡಿಮೆಯಿರುವುರಿಂದ ಪರಿಸ್ಥಿತಿ ತಿಳಿಗೊಳ್ಳಲು ಇನ್ನು ಕೆಲ ತಿಂಗಳುಗಳೇ ಬೇಕಗಿದೆ. ಇದರಿಂದ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಉತ್ಪಾದನೆಗೆ ನೇರ ಪರಿಣಾಮ ಬೀರಿದೆ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ಇನ್ನು ಮಾರುತಿ ಸುಜುಕಿ ಕಂಪನಿಯು ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೈಬ್ರಿಡ್ ಕಾರ್ ಅನ್ನು ರಸ್ತೆ ಬದಿಯ ಚಾರ್ಜಿಂಗ್ ಮೂಲಸೌಕರ್ಯವನ್ನು ಅವಲಂಬಿಸದೆ ಪ್ರಯಾಣದಲ್ಲಿರುವಾಗಲೇ ಚಾರ್ಜ್ ಮಾಡಬಹುದು. ಈ ಆಟೋ ಚಾರ್ಜಿಂಗ್ ಕಾರಿನಲ್ಲಿ ಎಂಜಿನ್ ಬ್ಯಾಟರಿಗೆ ಶಕ್ತಿಯನ್ನು ಕೂಡ ನೀಡುತ್ತದೆ.

ಆಕರ್ಷಕ ವಿನ್ಯಾಸದ WagonR Smile ಕಾರನ್ನು ಬಿಡುಗಡೆಗೊಳಿಸಿದ Suzuki

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಜನಪ್ರಿಯ ಕಾರು ತಯಾರಕ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿವೆ. ಇದರ ಜೊತೆಗೆ ಅನೇಕ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈ ಕಂಪನಿಗಳಿಗೆ ಹೊಲಿಸಿದರೆ ಮಾರುತಿ ಸುಜುಕಿ ಕಂಪನಿಯು ಹೈಬ್ರಿಡ್ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ.

Most Read Articles

Kannada
English summary
Suzuki launched new wagonr smile in japan features design details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X