24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಆಲ್ಟ್ರೋಜ್ ಕಾರ್ ಅನ್ನು 2020ರ ಜನವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ತನ್ನ ಸೆಗ್'ಮೆಂಟಿನಲ್ಲಿ ಹ್ಯುಂಡೈ ಎಲೈಟ್ ಐ 20 ಹಾಗೂ ಮಾರುತಿ ಸುಜುಕಿ ಬಲೆನೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಟಾಟಾ ಆಲ್ಟ್ರೋಜ್ ಕಾರು ಒಂದೇ ದಿನದಲ್ಲಿ ಅತಿ ಹೆಚ್ಚು ದೂರ ಚಲಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಈ ದಾಖಲೆಯನ್ನು ಪುಣೆಯ ದೇವ್ ಜಿತ್ ಸಹಾ ತಮ್ಮ ಆಲ್ಟ್ರೋಜ್ ಕಾರಿನ ಮೂಲಕ ಮಾಡಿದ್ದಾರೆ. ಅವರು 24 ಗಂಟೆಗಳಲ್ಲಿ ಆಲ್ಟ್ರೋಜ್ ಕಾರಿನ ಮೂಲಕ 1,603 ಕಿ.ಮೀ ಪ್ರಯಾಣಿಸಿದ್ದಾರೆ. ಈ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಅವರು 2020ರ ಡಿಸೆಂಬರ್ 15ರಂದು ಆಲ್ಟ್ರೋಜ್ ಕಾರಿನ ಮೂಲಕ ಸತಾರಾದಿಂದ ಪ್ರಯಾಣವನ್ನು ಆರಂಭಿಸಿದರು. ಅಲ್ಲಿಂದ ಬೆಂಗಳೂರಿಗೆ ತೆರಳಿ ಡಿಸೆಂಬರ್ 16ರಂದು ಪುಣೆಗೆ ವಾಪಸ್ಸಾದರು. ಈ ಪ್ರಯಾಣದಲ್ಲಿ ಅವರು 1,603 ಕಿ.ಮೀ ಚಲಿಸಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಟಾಟಾ ಆಲ್ಟ್ರೋಜ್ ಕಾರು ಈ ಪ್ರಯಾಣದಲ್ಲಿ ಯಾವುದೇ ದಣಿದ ಅನುಭವವನ್ನು ನೀಡಲಿಲ್ಲವೆಂದು ದೇವ್ ಜಿತ್ ಹೇಳಿದರು. ಈ ಕಾರು ಶಕ್ತಿಯುತವಾಗಿದ್ದು, ಚಲಾಯಿಸಲು ಸುಲಭವಾಗಿದೆ.

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಈ ಕಾರು ಚಾಲಕನ ಚಾಲನಾ ಅನುಭವವನ್ನು ಸುಧಾರಿಸಿ ದೀರ್ಘಕಾಲದವರೆಗೆ ಕಾರನ್ನು ಚಾಲನೆ ಮಾಡುವ ಧೈರ್ಯವನ್ನು ನೀಡುತ್ತದೆ. ಟಾಟಾ ಆಲ್ಟ್ರೋಜ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಒಂದು ವರ್ಷವಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಆಲ್ಟ್ರೋಜ್'ನ ಟರ್ಬೊ ಪೆಟ್ರೋಲ್ ಮಾದರಿಯನ್ನು ಕಳೆದ ತಿಂಗಳು ಬಿಡುಗಡೆಗೊಳಿಸಿತು. ಟರ್ಬೊ ಪೆಟ್ರೋಲ್ ಮಾದರಿಯು ಮಾರುಕಟ್ಟೆಯಲ್ಲಿರುವ ಮಾದರಿಗಿಂತ ಹೆಚ್ಚು ಶಕ್ತಿಶಾಲಿ ಹಾಗೂ ಆಕ್ರಮಣಕಾರಿಯಾಗಿದೆ.

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಟಾಟಾ ಆಲ್ಟ್ರೋಜ್ ಐ-ಟರ್ಬೊ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.7.73 ಲಕ್ಷಗಳಾಗಿದೆ. ಈ ಕಾರ್ ಅನ್ನು ಎಕ್ಸ್‌ಟಿ, ಎಕ್ಸ್‌ ಝಡ್ ಹಾಗೂ ಎಕ್ಸ್‌ ಝಡ್ ಪ್ಲಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.8.85 ಲಕ್ಷಗಳಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಟಾಟಾ ಆಲ್ಟ್ರೋಜ್ ಐ-ಟರ್ಬೊ ಕಾರಿನಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 108 ಬಿಹೆಚ್‌ಪಿ ಪವರ್ ಹಾಗೂ 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆಲ್ಟ್ರೋಜ್ ಐಟೆರ್ಬೊ 11.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಬಿಡುಗಡೆಯಾದ ಒಂದು ವರ್ಷದಲ್ಲಿ ಟಾಟಾ ಆಲ್ಟ್ರೋಜ್‌ ಕಾರಿನ 50,000 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಆಲ್ಟ್ರೋಜ್‌ ಕಾರಿನ ಪೆಟ್ರೋಲ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಇದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಟಾಟಾ ಮೋಟಾರ್ಸ್ ತನ್ನ ಎಲ್ಲಾ ಕಾರು ಮಾದರಿಗಳ ಬೆಲೆಯನ್ನು ಜನವರಿ 26ರಿಂದ ರೂ.26,000ಗಳವರೆಗೆ ಹೆಚ್ಚಿಸಿದೆ. ಜನವರಿ 21ಕ್ಕೂ ಮುನ್ನ ಬುಕ್ಕಿಂಗ್ ಮಾಡಲಾದ ಕಾರುಗಳಿಗೆ ಈ ಬೆಲೆ ಏರಿಕೆ ಅನ್ವಯವಾಗುವುದಿಲ್ಲ.

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಟಾಟಾ ಮೋಟಾರ್ಸ್ ಫೆಬ್ರವರಿ 22ರಂದು ತನ್ನ ಹೊಸ ಸಫಾರಿ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಿದೆ. ಟಾಟಾ ಸಫಾರಿ ಎಸ್‌ಯುವಿಯ ಪ್ರೀ-ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ. ಈ ಎಸ್‌ಯುವಿಯ ಬೆಲೆಯನ್ನು ಬಿಡುಗಡೆ ಸಮಾರಂಭದಲ್ಲಿ ಬಹಿರಂಗ ಪಡಿಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

24 ಗಂಟೆಗಳಲ್ಲಿ 1,600 ಕಿ.ಮೀಗಳಿಗೂ ಹೆಚ್ಚು ದೂರ ಚಲಿಸಿ ದಾಖಲೆ ಬರೆದ ಟಾಟಾ ಆಲ್ಟ್ರೋಜ್

ಟಾಟಾ ಸಫಾರಿ ಟಾಟಾ ಹ್ಯಾರಿಯರ್‌ನ 7 ಸೀಟುಗಳ ಮಾದರಿಯಾಗಿದೆ. ಈ ಎಸ್‌ಯುವಿಯು ಟಾಟಾ ಹ್ಯಾರಿಯರ್‌ ಅನ್ನು ಹೋಲುತ್ತದೆ. ಕಂಪನಿಯು ಈ ಎಸ್‌ಯುವಿಯನ್ನು 6 ಹಾಗೂ 7 ಸೀಟುಗಳ ಆಯ್ಕೆಯಲ್ಲಿ ಮಾರಾಟ ಮಾಡಲಿದೆ.

Most Read Articles

Kannada
English summary
Tata Altroz creates new record by travelling more than 1600 kms in 24 hours. Read in Kannada.
Story first published: Wednesday, February 17, 2021, 16:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X