ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಆಲ್‌ಟ್ರೊಜ್ ಡಾರ್ಕ್ ಎಡಿಷನ್
ಟಾಟಾ ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೊಜ್ ಕಾರು ಮಾದರಿಗಳಲ್ಲಿ ಶೀಘ್ರದಲ್ಲೇ ಡಾರ್ಕ್ ಎಡಿಷನ್‌ಗಳು ಬಿಡುಗಡೆಯಾಗುತ್ತಿದ್ದು, ಹೊಸ ಬಣ್ಣದ ಆಯ್ಕೆ ಹೊಂದಿರು ಸ್ಪೆಷಲ್ ಕಾರುಗಳು ಈಗಾಗಲೇ ಡೀಲರ್ಸ್ ಯಾರ್ಡ್ ತಲುಪಿವೆ.

ಹ್ಯಾರಿಯರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡಾರ್ಕ್ ಎಡಿಷನ್ ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಹ್ಯಾರಿಯರ್ 2021ರ ಮಾದರಿಯ ಡಾರ್ಕ್ ಎಡಿಷನ್‌ನೊಂದಿಗೆ ಹೊಸದಾಗಿನೆಕ್ಸಾನ್ ಮತ್ತು ಆಲ್‌ಟ್ರೊಜ್ ಮಾದರಿಗಳಲ್ಲೂ ಹೊಸ ಬಣ್ಣದ ಆಯ್ಕೆ ಪರಿಚಯಿಸುತ್ತಿದ್ದು, ಹೊಸ ಬಣ್ಣದ ಆಯ್ಕೆಯೊಂದಿಗೆ ಸ್ಪೆಷಲ್ ಎಡಿಷನ್ ಐಷಾರಾಮಿ ಕಾರು ಮಾದರಿಯಲ್ಲಿ ಗಮನಸೆಳೆಯುತ್ತಿವೆ.

ಡಾರ್ಕ್ ಎಡಿಷನ್ ಮಾದರಿಗಳ ಟೀಸರ್ ಚಿತ್ರವನ್ನು ಸಹ ಈಗಾಗಲೇ ಬಿಡುಗಡೆ ಮಾಡಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರುಗಳು ಡಾರ್ಕ್ (ಕಡುಗಪ್ಪು) ಬಣ್ಣದ ಆಯ್ಕೆಯೊಂದಿಗೆ ಸ್ಟ್ಯಾಂಡರ್ಡ್ ಮಾದರಗಳಿಂತಲೂ ಹೆಚ್ಚು ಆಕರ್ಷಣಿಯವಾಗಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬದಲಾವಣೆಗಳೊಂದಿಗೆ ಕಾರು ಉತ್ಪನ್ನಗಳನ್ನು ಉನ್ನತೀಕರಿಸುತ್ತಿರುವ ಟಾಟಾ ಕಂಪನಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದು, ಆಲ್‌ಟ್ರೊಜ್ ಮತ್ತು ನೆಕ್ಸಾನ್ ಕಾರು ಮಾದರಿಗಳ ಹೊಸ ಬಣ್ಣದ ಆಯ್ಕೆ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗುವ ನೀರಿಕ್ಷೆಗಳಿವೆ.

ಹ್ಯಾರಿಯರ್ ಮಾದರಿಯ ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ಮಾದರಿಗಳಲ್ಲಿ ಈಗಾಗಲೇ ಡಾರ್ಕ್ ಎಡಿಷನ್ ಮಾದರಿಯು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಮಾದರಿಯ ಮೂಲಕ ಕೆಲವು ಬದಲಾವಣೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಟಾಟಾ ಮೋಟಾರ್ಸ್ ಕಂಪನಿಯು ಡಾರ್ಕ್ ಎಡಿಷನ್ ಮಾದರಿಗಳನ್ನು ಹ್ಯಾರಿಯರ್ ಮಾದರಿಯ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದು, ನೆಕ್ಸಾನ್ ಮತ್ತು ಆಲ್‌ಟ್ರೊಜ್ ಮಾದರಿಗಳಲ್ಲೂ ಡಾರ್ಕ್ ಎಡಿಷನ್ ಹೈ ಎಂಡ್ ಮಾದರಿಗಳಲ್ಲಿ ಮಾತ್ರವೇ ಮಾರಾಟಗೊಳ್ಳಬಹುದಾಗಿದೆ.

ಡಾರ್ಕ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದರೂ ಹೊಸ ಬಣ್ಣದ ಆಯ್ಕೆಗಾಗಿ ತುಸು ದುಬಾರಿಯಾಗಿರಲಿದ್ದು, ಹೊಸ ಬಣ್ಣದ ಆಯ್ಕೆಯೊಂದಿಗೆ ಹೊಸ ಕಾರುಗಳು ಐಷಾರಾಮಿ ಅನುಭವ ನೀಡುತ್ತವೆ.

ಹೊಸ ಕಾರು ಮಾದರಿಗಳಲ್ಲಿ ಕೇವಲ ಹೊರಭಾಗದಲ್ಲಿ ಮಾತ್ರವಲ್ಲ ಕ್ಯಾಬಿನ್ ಸಹ ಸಂಪೂರ್ಣವಾಗಿ ಕಪ್ಪುಬಣ್ಣದೊಂದಿಗೆ ಕೂಡಿರಲಿದ್ದು, ಹೊಸ ಕಾರುಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ. 20 ಸಾವಿರದಿಂದ ರೂ. 35 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿವೆ.

ಹೊಸ ಎಡಿಷನ್‌ಗಳು ಟಾಟಾ ಕಾರು ಮಾರಾಟ ಹೆಚ್ಚಳಕ್ಕೆ ಮತ್ತಷ್ಟು ಸಹಕಾರಿಯಾಗಲಿದ್ದು, ಹೊಸ ಕಾರುಗಳ ಈ ತಿಂಗಳಾಂತ್ಯಕ್ಕೆ ಅಧಿಕೃತವಾಗಿ ಬಿಡುಗಡೆಗೊಳ್ಳುವುದು ಬಹುತೇಕ ಖಚಿತವಾಗಿದೆ.


Click it and Unblock the Notifications