ಫೆಬ್ರವರಿ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಕಾರು ಮಾರಾಟದಲ್ಲಿ ಶೇ.143ರಷ್ಟು ಹೆಚ್ಚಳ

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಳೆದ ತಿಂಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ವರ್ಷದಿಂದ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳು ಭರ್ಜರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ.

ಫೆಬ್ರವರಿ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಕಾರು ಮಾರಾಟದಲ್ಲಿ ಶೇ.143ರಷ್ಟು ಹೆಚ್ಚಳ

ಟಾಟಾ ಕಾರುಗಳ ಸರಣಿಯಲ್ಲಿರುವ ಜನಪ್ರಿಯ ಆಲ್‌‌ಟ್ರೊಜ್ ಕಾರಿನ ಮಾರಾಟದಲ್ಲಿಯು ಭರ್ಜರಿಯಾಗಿ ಬೇಡಿಕೆಯನ್ನು ಪಡೆದುಕೊಂಡಿದೆ. 2021ರ ಫೆಬ್ರವರಿ ತಿಂಗಳಲ್ಲಿ ಆಲ್‌‌ಟ್ರೊಜ್ ಮಾದರಿಯ 6,832 ಯುನಿಟ್‌ಗಳು ಮಾರಾಟವಾಗಿವೆ. ಇನ್ನು 2020ರ ಫೆಬ್ರವರಿ ತಿಂಗಳಲ್ಲಿ ಆಲ್‌‌ಟ್ರೊಜ್ 2,806 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.143.48 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಫೆಬ್ರವರಿ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಕಾರು ಮಾರಾಟದಲ್ಲಿ ಶೇ.143ರಷ್ಟು ಹೆಚ್ಚಳ

ಇನ್ನು ತಿಂಗಳ ಮಾರಾಟದ ಆಧಾರದ ಮೇಲೆ ಆಲ್‌‌ಟ್ರೊಜ್ ಕಾರಿನ ಮಾರಾಟದಲ್ಲಿ ಶೇ.7.4 ರಷ್ಟು ಸಣ್ಣ ಮಟ್ಟದ ಕುಸಿತವನ್ನು ಕಂಡಿದೆ. 2021ರ ಜನವರಿ ತಿಂಗಳಲ್ಲಿ ಆಲ್‌‌ಟ್ರೊಜ್ ಮಾದರಿಯ 7,378 ಯುನಿಟ್‌ಗಳು ಮಾರಾಟವಾಗಿತ್ತು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಫೆಬ್ರವರಿ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಕಾರು ಮಾರಾಟದಲ್ಲಿ ಶೇ.143ರಷ್ಟು ಹೆಚ್ಚಳ

ಟಾಟಾ ಆಲ್‌‌ಟ್ರೊಜ್ ಹೊಸ 'ಐ-ಟರ್ಬೊ' ರೂಪಾಂತರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಮಾರಾಟದಲ್ಲಿ ಮತ್ತಷ್ಟು ಬೂಸ್ಟ್ ಮಾಡಿದೆ. ವಿಶೇಷವೆಂದರೆ ಭಾರತದಲ್ಲಿ ವಾಹನ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಅರಿವಿನೊಂದಿಗೆ ಟಾಟಾ ಕಾರುಗಳು ಖರೀದಿದಾರರಲ್ಲಿ ಬೇಡಿಕೆಯ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ

ಫೆಬ್ರವರಿ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಕಾರು ಮಾರಾಟದಲ್ಲಿ ಶೇ.143ರಷ್ಟು ಹೆಚ್ಚಳ

2020ರಲ್ಲಿ, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಟಾಟಾ ಆಲ್‌‌ಟ್ರೊಜ್ ಅನ್ನು ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಹ್ಯಾಚ್‌ಬ್ಯಾಕ್ ವಯಸ್ಕರ ವಿಭಾಗದಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಮಕ್ಕಳ ಸುರಕ್ಷತೆಗಾಗಿ 3-ಸ್ಟಾರ್ ರೇಟಿಂಗ್ ಗಳಿಸಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಫೆಬ್ರವರಿ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಕಾರು ಮಾರಾಟದಲ್ಲಿ ಶೇ.143ರಷ್ಟು ಹೆಚ್ಚಳ

ಟಾಟಾ ಆಲ್‌‌ಟ್ರೊಜ್ ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಆಗಿದೆ. ಹೊಸ ಟಾಟಾ ಆಲ್‌‌ಟ್ರೊಜ್ ಕಾರಿನ ಬೆಲೆಯು ನವದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.5.69 ಲಕ್ಷದಿಂದ ರೂ.9.45 ಲಕ್ಷಗಳಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಕಾರು ಮಾರಾಟದಲ್ಲಿ ಶೇ.143ರಷ್ಟು ಹೆಚ್ಚಳ

ಟಾಟಾ ಆಲ್‌‌ಟ್ರೊಜ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲನೆಯದು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 86 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಫೆಬ್ರವರಿ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಕಾರು ಮಾರಾಟದಲ್ಲಿ ಶೇ.143ರಷ್ಟು ಹೆಚ್ಚಳ

ಎರಡನೆಯದು 1.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಆಗಿದ್ದು, ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಮೂರನೆಯದು 1.2-ಲೀಟರ್ ಪವರ್ ಫುಲ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, ಇದು 110 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಫೆಬ್ರವರಿ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಕಾರು ಮಾರಾಟದಲ್ಲಿ ಶೇ.143ರಷ್ಟು ಹೆಚ್ಚಳ

ಟಾಟಾ ಆಲ್‌‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದೆ. ಟಾಟಾ ಆಲ್‌‌ಟ್ರೊಜ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಬಲೆನೊ, ಹ್ಯುಂಡೈ ಐ20, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Monday, March 8, 2021, 9:28 [IST]
English summary
Tata Altroz Sales Grow By Over 143% In February 2021. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+