ಹೊಸ ಫೀಚರ್ಸ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಆಲ್‌ಟ್ರೊಜ್ ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಹೊಸ ಕಾರಿನ ಬೆಸ್ ವೆರಿಯೆಂಟ್‌ನಲ್ಲಿದ್ದ ಎಕ್ಸ್ಎಂ ಮಾದರಿಯನ್ನು ಇದೀಗ ಕಂಪನಿಯು ಎಕ್ಸ್ಇ ಪ್ಲಸ್ ಮಾದರಿಯಾಗಿ ಮಾರಾಟಗೊಳಿಸುತ್ತದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಆಲ್‌ಟ್ರೊಜ್ ಮಾದರಿಯ ಬೆಸ್ ವೆರಿಯೆಂಟ್‌ ಎಕ್ಸ್ಎಂ ಮಾದರಿಯನ್ನು ಎಕ್ಸ್ಇ ಪ್ಲಸ್ ಮಾದರಿಗೆ ಬದಲಾಯಿಸಿದ ನಂತರ ಹಲವಾರು ತಾಂತ್ರಿಕ ಅಂಶಗಳನ್ನು ಉನ್ನತೀಕರಿಸಿದ್ದು, ಹೊಸ ಕಾರು ಮಾದರಿಗೆ ಕಂಪನಿಯು ವಿವಿಧ ತಾಂತ್ರಿಕ ಅಂಶಗಳನ್ನು ಒಳಗೊಂಡಿರುವ ಆಕ್ಸೆಸರಿಸ್ ಪ್ಯಾಕೇಜ್ ಅನ್ನು ಸಹ ನೀಡುತ್ತಿದೆ. ಆಲ್‌ಟ್ರೊಜ್ ಕಾರು ಮಾದರಿಯು ಸದ್ಯ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಹೊಸ ಕಾರುಗಳಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಉನ್ನತೀಕರಿಸುವುದಾಗಿ ಹೇಳಿಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಬದಲಾವಣೆಗಳೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಎಕ್ಸ್ಇ ಪ್ಲಸ್ ವೆರಿಯೆಂಟ್ ಫೀಚರ್ಸ್ ಮಾಹಿತಿಯನ್ನು ಒಳಗೊಂಡ ವಿಡಿಯೋದಲ್ಲಿ ಹಲವಾರು ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಆಲ್‌ಟ್ರೊಜ್ ಎಕ್ಸ್ಇ ಪ್ಲಸ್ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.34 ಲಕ್ಷದಿಂದ ರೂ. 7.54 ಲಕ್ಷ ಬೆಲೆ ಹೊಂದಿದ್ದು, ಎಕ್ಸ್ಇ ಪ್ಲಸ್ ಮಾದರಿಯಲ್ಲಿ ಫ್ಲಿಪ್ ಕೀ, ಲಾಕ್, ಅನ್‌ಲಾಕ್, ಫಾಲೋ ಮಿ ಹೆಡ್‌ಲ್ಯಾಂಪ್, ಎಲೆಕ್ಟ್ರಿಕ್ ಮೂಲಕ ಮಡಿಕೆ ಮಾಡಬಹುದಾದ ರಿಯರ್ ವ್ಯೂ ಮಿರರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹರ್ಮನ್ ಸೌಂಡ್ ಸಿಸ್ಟಂ, ಯುಎಸ್‌ಬಿ ಫೋರ್ಟ್ ಈ ವೆರಿಯೆಂಟ್‌‌ನ ಪ್ರಮುಖ ಗುಣಲಕ್ಷಣವಾಗಿದೆ.

ಈ ಹಿಂದಿನ ಎಕ್ಸ್ಎಂ ರೂಪಾಂತರದ ನಡುವೆ ಗಮನಾರ್ಹ ಬೆಲೆಯ ಅಂತರವಿದ್ದ ಕಾರಣ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಹೆಚ್ಚು ಕೈಗೆಟುಕುವ ಬೆಲೆಯ ಎಕ್ಸ್ಇ ಪ್ಲಸ್ ಆವೃತ್ತಿಯನ್ನು ಪರಿಚಯಿಸಿದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಹೊಸ ಮಾದರಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಖರೀದಿ ನಿರ್ಧಾರಗಳ ಮೇಲೆ ಪರಿಣಾಮ ಬೀರದ ಕೆಲವು ವೈಶಿಷ್ಟ್ಯಗಳನ್ನು ತೆಗೆದುಹಾಕಲಾಗಿದ್ದು, ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗಿದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಆಲ್‌ಟ್ರೊಜ್ ಬೇಸ್ ಮಾದರಿಯಾದ ಎಕ್ಸ್ಇ ರೂಪಾಂತರಕ್ಕೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ 4 ಸ್ಪೀಕರ್‌ಗಳು, ಬ್ಲೂಟೂತ್ ಸಂಪರ್ಕ, ಎಫ್ಎಂ/ ಎಎಂ ರೇಡಿಯೋ, ಯುಎಸ್‌ಬಿ ಪೋರ್ಟ್ ಮತ್ತು ಸ್ಪೀಡ್ ಯುಎಸ್‌ಬಿ ಚಾರ್ಜರ್‌ನೊಂದಿಗೆ ಬರುತ್ತದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಹೊಸ ಮಾದರಿಯಲ್ಲಿ ಬೇಸ್ ರೂಪಾಂತರದಲ್ಲಿರುವಂತೆಯೇ ಕೆಲವು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಹೊಸ ಮಾದರಿಯ ಆಗಮನದ ಜೊತೆಗೆ ಟಾಟಾ ಮೋಟಾರ್ಸ್ ಆಲ್‌ಟ್ರೊಜ್ ಬೆಲೆ ಹೆಚ್ಚಿಸಿದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಆಲ್‌ಟ್ರೊಜ್ ಕಾರು ಮಾದರಿಯು ಹೊಸದಾಗಿ ಬಿಡುಗಡೆ ಮಾಡಲಾದ ಎಕ್ಸ್‌ಇ ಪ್ಲಸ್ ಜೊತೆಗೆ ಎಕ್ಸ್‌ಇ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲ್ಲಾ ರೂಪಾಂತರಗಳು 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಬೆಲೆ ಹೆಚ್ಚಳದ ನಂತರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ. 5.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.64 ಲಕ್ಷ ಬೆಲೆ ಹೊಂದಿದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಹೊಸ ಟಾಟಾ ಆಲ್‌‌ಟ್ರೊಜ್ ಐಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ ನೀಡಲಾಗಿರುವ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಗರಿಷ್ಠ 108-ಬಿಹೆಚ್‍ಪಿ ಮತ್ತು 140-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಐ-ಟರ್ಬೊ ಮಾದರಿಯು ಸಿಟಿ ಮತ್ತು ಸ್ಟೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಸದ್ಯಕ್ಕೆ ಹೊಸ ಮಾದರಿಯಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಕಂಪನಿಯು ಶೀಘ್ರದಲ್ಲೇ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ನೀಡಲಿದೆಯೆಂತೆ.

ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಮಿಂಚಿದ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಪ್ಲಸ್ ವೆರಿಯೆಂಟ್

ಟಾಟಾ ಮೋಟಾರ್ಸ್ ಕಂಪನಿಯು ಆಲ್‌ಟ್ರೊಜ್ ಕಾರಿನ ಟರ್ಬೊ ಮಾದರಿಗಳಲ್ಲಿ ಮತ್ತು ಸಾಮಾನ್ಯ ಪೆಟ್ರೋಲ್ ಮಾದರಿಯ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ಕನೆಕ್ಟೆಡ್ ಟೆಕ್ನಾಲಜಿ ಬಳಕೆ ಮಾಡಿದ್ದು, ಹೊಸ ತಂತ್ರಜ್ಞಾನವು ಕಾರಿಗೆ ಗರಿಷ್ಠ ಭದ್ರತೆ ನೀಡುತ್ತದೆ.

Most Read Articles

Kannada
English summary
Tata altroz xe plus variant features video
Story first published: Saturday, December 18, 2021, 21:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X