ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಟಾಟಾ ಗ್ರೂಪ್ (Tata Group) ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ತೆರೆಯಲು ಸ್ಥಾಪಿಸಲು ನಿರ್ಧರಿಸಿದೆ. ಇದಕ್ಕಾಗಿ ಕಂಪನಿಯು 300 ಮಿಲಿಯನ್ ಡಾಲರ್ ಅಂದರೆ ಸುಮಾರು ರೂ. 2,200 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಈ ಉತ್ಪಾದನಾ ಘಟಕಗಾಗಿ ಟಾಟಾ ಗ್ರೂಪ್ ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

2022ರ ಅಂತ್ಯದ ವೇಳೆಗೆ ಈ ಉತ್ಪಾದನಾ ಘಟಕವನ್ನು ಆರಂಭಿಸಬಹುದು ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆ ಕಂಪನಿಯು ಸೆಮಿಕಂಡಕ್ಟರ್ ಉದ್ಯಮಕ್ಕೆ ಪ್ರವೇಶಿಸಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಇನ್ನೂ ದೃಢೀಕರಿಸಲ್ಪಟ್ಟಿರಲಿಲ್ಲ. ಆದರೆ ಈಗ ಇದಕ್ಕೆ ಸಂಬಂಧಿಸಿದ ಮಾಹಿತಿ ಹೊರ ಬಿದ್ದಿದೆ. ಟಾಟಾ ಗ್ರೂಪ್‌ನ ಹೈಟೆಕ್ ಉತ್ಪಾದನಾ ವಲಯಕ್ಕೆ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಇದು ಹೊರಗುತ್ತಿಗೆ ಸೆಮಿಕಂಡಕ್ಟರ್ ಜೋಡಣೆ ಹಾಗೂ ಪರೀಕ್ಷಾ ಘಟಕವಾಗಿರಲಿದೆ. ಇಂತಹ ಘಟಕಗಳಲ್ಲಿ, ಸಿಲಿಕಾನ್ ಬಿಲ್ಲೆಗಳನ್ನು ಪ್ಯಾಕ್ ಮಾಡಿ, ಜೋಡಿಸಲಾಗುತ್ತದೆ, ಪರೀಕ್ಷಿಸಲಾಗುತ್ತದೆ. ನಂತರ ಸೆಮಿಕಂಡಕ್ಟರ್ ಚಿಪ್ಸ್ ಆಗಿ ಪರಿವರ್ತಿಸಲಾಗುತ್ತದೆ. ಮೂಲಗಳ ಪ್ರಕಾರ, ಟಾಟಾ ಕಂಪನಿಯು ಸಾಫ್ಟ್‌ವೇರ್ ಉದ್ಯಮದಲ್ಲಿಯೂ ಪ್ರಬಲವಾಗಿದೆ. ಈಗ ಹಾರ್ಡ್‌ವೇರ್ ವಲಯದಲ್ಲಿಯೂ ಪ್ರಾಬಲ್ಯ ಹೊಂದಲು ಬಯಸಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಇದು ದೀರ್ಘಾವಧಿಯಲ್ಲಿ ಕೆಲಸ ಮಾಡಲಿದೆ. ಆದರೆ ಇದುವರೆಗೂ ಟಾಟಾ ಸಮೂಹ ಅಥವಾ ಈ ಮೂರು ರಾಜ್ಯ ಸರ್ಕಾರಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮುಂದಿನ ವರ್ಷಾಂತ್ಯದೊಳಗೆ ಈ ಘಟಕದ ಕಾಮಗಾರಿ ಆರಂಭವಾಗಬಹುದೆಂದು ಅಂದಾಜಿಸಲಾಗಿದ್ದು, ಸುಮಾರು 4000 ಜನರಿಗೆ ಉದ್ಯೋಗ ಸಿಗಲಿದೆ. ಟಾಟಾ ಈ ಘಟಕವನ್ನು ಆರಂಭಿಸಿದ ತಕ್ಷಣ ಅದರ ಸುತ್ತಲೂ ಪರಿಸರ ವ್ಯವಸ್ಥೆಯು ಸಿದ್ಧವಾಗಲಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಆದ್ದರಿಂದ ಕಾರ್ಮಿಕರ ಪ್ರಕಾರ ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಇದರ ಜೊತೆಗೆ ತಮಿಳುನಾಡಿನಲ್ಲಿ ಟಾಟಾ ಹೈಟೆಕ್ ಎಲೆಕ್ಟ್ರಾನಿಕ್ ಉತ್ಪಾದನಾ ಘಟಕವೂ ಸ್ಥಾಪನೆಯಾಗಲಿದೆ. ಈ ಬಗ್ಗೆ ETAuto ವರದಿ ಮಾಡಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಟಾಟಾ ಮೋಟಾರ್ಸ್ ಕಂಪನಿಯ ಇತರ ಸುದ್ದಿಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಶೀಘ್ರದಲ್ಲೇ ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನಲ್ಲಿ ಫ್ರಾಂಚೈಸಿ ವಾಹನ ಸ್ಕ್ರ್ಯಾಪೇಜ್ ಕೇಂದ್ರವನ್ನು ಸ್ಥಾಪಿಸಲು ತೆರೆಯಲಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಗುಜರಾತ್ ಸರ್ಕಾರದ ಸಹಾಯದಿಂದ ಕಂಪನಿಯು ತನ್ನ ಮೊದಲ ಸ್ಕ್ರ್ಯಾಪಿಂಗ್ ಘಟಕವನ್ನು ಸ್ಥಾಪಿಸಲಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಕಂಪನಿಯು ಗುಜರಾತ್‌ನಲ್ಲಿ ಸ್ಕ್ರ್ಯಾಪಿಂಗ್ ಘಟಕಗಳನ್ನು ಸ್ಥಾಪಿಸಲು ಫ್ರಾಂಚೈಸಿಗಳನ್ನು ಆಹ್ವಾನಿಸಿದೆ. ಫ್ರಾಂಚೈಸಿಗಳನ್ನು ತೆಗೆದುಕೊಳ್ಳಲು ಬಯಸುವ ಪಾಲುದಾರರಿಗೆ ಕಂಪನಿಯು ಉದ್ದೇಶ ಪತ್ರಗಳನ್ನು (ಲೆಟರ್ ಆಫ್ ಇನ್ ಟೆಂಟ್ ) ಕಳುಹಿಸುತ್ತಿದೆ. ಅಹಮದಾಬಾದ್ ನಲ್ಲಿರುವ ಸ್ಕ್ರ್ಯಾಪೇಜ್ ಘಟಕವನ್ನು ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳಿಗಾಗಿ ಅಭಿವೃದ್ಧಿಪಡಿಸಲಾಗುವುದು.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಈ ಘಟಕವು ವಾರ್ಷಿಕ 36,000 ವಾಹನಗಳನ್ನು ಮರುಬಳಕೆ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಒಂದು ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 25,000 ಟ್ರಕ್‌ಗಳು ಹಾನಿಗೊಳಗಾಗುತ್ತವೆ. ಅವುಗಳನ್ನು ಸ್ಕ್ರ್ಯಾಪ್ ಮಾಡಲು ದೇಶದಲ್ಲಿ ಸಾಕಷ್ಟು ಸ್ಕ್ರ್ಯಾಪಿಂಗ್ ಘಟಕಗಳಿಲ್ಲ.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ವಾಣಿಜ್ಯ ವಾಹನ ವಿಭಾಗದ ಅಧ್ಯಕ್ಷರಾದ ಗಿರೀಶ್ ವಾಘ್, ಟಾಟಾ ಮೋಟಾರ್ಸ್ ಯುರೋಪಿಯನ್ ತಜ್ಞರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅವರ ಸಹಾಯದಿಂದ ಅಹಮದಾಬಾದ್‌ನಲ್ಲಿ ಸ್ಕ್ರ್ಯಾಪಿಂಗ್ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿದೆ. ನಾವು ಕಂಪನಿಯ ಫ್ರಾಂಚೈಸ್ ವ್ಯವಸ್ಥೆ ಮೂಲಕ ಸ್ಕ್ರ್ಯಾಪಿಂಗ್ ಘಟಕವನ್ನು ನಿಯೋಜಿಸುತ್ತಿದ್ದೇವೆ ಎಂದು ಹೇಳಿದರು.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ವಾಣಿಜ್ಯ ವಾಹನಗಳ ಮಾರಾಟದ ದೃಷ್ಟಿಕೋನವನ್ನು ವಿವರಿಸಿದ ವಾಘ್, ಮೊದಲ ತ್ರೈಮಾಸಿಕದಲ್ಲಿ ಉದ್ಯಮವು 44% ನಷ್ಟು ಬೆಳೆದಿದೆ. ಕಂಪನಿಯು ಉದ್ಯಮಕ್ಕಿಂತ ಹೆಚ್ಚು ಬೆಳೆದಿದೆ ಎಂದು ಹೇಳಿದರು.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಈ ವರ್ಷ ಜಿಡಿಪಿ ಬೆಳವಣಿಗೆ ದರವು ಶೇಕಡಾ 9 - 10 ರಷ್ಟಿರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಆರ್‌ಬಿಐ ಸೂಚಿಸಿದಂತೆ, ಉದ್ಯಮವು ಹಿಂದಿನ ವರ್ಷಕ್ಕಿಂತ ಶೇಕಡಾ 20 ರಷ್ಟು ಬೆಳೆಯುವ ನಿರೀಕ್ಷೆಗಳಿವೆ ಎಂದು ಅವರು ಹೇಳಿದರು. ಪ್ರಮುಖ ವಾಣಿಜ್ಯ ವಾಹನ ವಿಭಾಗದಲ್ಲಿ ವಿವಿಧ ಮಾದರಿಗಳ ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಆವೃತ್ತಿಗಳನ್ನು ಸೇರಿದಂತೆ ಹಲವು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಕಂಪನಿ ಸಿದ್ದತೆ ನಡೆಸುತ್ತಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಜಾಗತಿಕ ಚಿಪ್ ಕೊರತೆಗೆ ಸಂಬಂಧಿಸಿದಂತೆ ಟಾಟಾ ಮೋಟಾರ್ಸ್ ದಿನನಿತ್ಯದ ಆಧಾರದ ಮೇಲೆ ಸಮಸ್ಯೆಯನ್ನು ನಿಭಾಯಿಸುತ್ತಿದ್ದು, ಇದು ಕಂಪನಿಯ ಸಣ್ಣ ವಾಣಿಜ್ಯ ವಾಹನಗಳು ಹಾಗೂ ಮಧ್ಯಂತರ ವಾಣಿಜ್ಯ ವಾಹನಗಳ ಉತ್ಪಾದನೆಯ ಮೇಲೆ ಇನ್ನೂ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು. ಅಂದ ಹಾಗೆ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಯಾಣಿಕ ಕಾರು ಗ್ರಾಹಕರಿಗೆ ಆಕರ್ಷಕ ಹಣಕಾಸು ಆಯ್ಕೆಗಳನ್ನು ಒದಗಿಸಲು ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಪಾಲುದಾರಿಕೆ ಮಾಡಿ ಕೊಂಡಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಈ ಒಪ್ಪಂದದ ಭಾಗವಾಗಿ, ಬ್ಯಾಂಕ್ ಆಫ್ ಇಂಡಿಯಾ (BOI) ಟಾಟಾ ಮೋಟಾರ್ಸ್ ಗ್ರಾಹಕರಿಗೆ 6.85% ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಿದೆ. ಈ ಯೋಜನೆಯು ವಾಹನದ ಒಟ್ಟು ವೆಚ್ಚದ 90% ವರೆಗೆ ಹಣಕಾಸು ಒದಗಿಸುತ್ತದೆ. 7 ವರ್ಷಗಳ ಮರುಪಾವತಿಯ ಅವಧಿಯಲ್ಲಿ ಪ್ರತಿ ಲಕ್ಷಕ್ಕೆ ರೂ. 1,502 ರಿಂದ ಆರಂಭವಾಗುವ ವಿಶೇಷ ಇಎಂಐ ಆಯ್ಕೆಯ ಪ್ರಯೋಜನವನ್ನು ಗ್ರಾಹಕರಿಗೆ ನೀಡಲಾಗುವುದು.

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲು ಮುಂದಾದ Tata Group

ಇನ್ನು ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ 21 ಹೊಸ ವಾಣಿಜ್ಯ ವಾಹನಗಳನ್ನು ಪರಿಚಯಿಸಿದೆ. ಪ್ರಯಾಣಿಕರ ಸಾರಿಗೆ ಹಾಗೂ ಸರಕು ವಿಭಾಗದಲ್ಲಿ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಕಂಪನಿಯು ಈ ಹೊಸ ವಾಣಿಜ್ಯ ವಾಹನಗಳನ್ನು ಪರಿಚಯಿಸಿದೆ. ಟಾಟಾದ ಹೊಸ ಕಾರ್ಗೋ ವಾಹನಗಳಲ್ಲಿ ಲಘು, ಮಧ್ಯಮ ಹಾಗೂ ಭಾರೀ ತೂಕದ ವಾಹನಗಳು ಸೇರಿವೆ.

Most Read Articles

Kannada
English summary
Tata group to set up semiconductor production unit in india details
Story first published: Saturday, November 27, 2021, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X