ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಎಸ್‌ಯುವಿ ಕಾರು ಮಾದರಿಯಲ್ಲಿ ಬಿಎಸ್-6 ವರ್ಷನ್ ಬಿಡುಗಡೆ ನಂತರ ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ಹೊಸ ಕಾರಿನಲ್ಲಿ ಮತ್ತೆರಡು ಹೊಸ ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಹ್ಯಾರಿಯರ್ ಫೇಸ್‌ಲಿಫ್ಟ್ ಆವೃತ್ತಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಮಧ್ಯಮ ಕ್ರಮಾಂಕದಲ್ಲಿ ಮತ್ತೆರಡು ಹೊಸ ಆಟೋಮ್ಯಾಟಿಕ್ ಆವೃತ್ತಿಗಳನ್ನು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ. ಜೊತೆಗೆ ಪ್ರಮುಖ ವೆರಿಯೆಂಟ್‌ಗಳ ತಾಂತ್ರಿಕ ಸೌಲಭ್ಯಗಳನ್ನು ಉನ್ನತೀಕರಿಸುವ ಸುಳಿವು ನೀಡಿದ್ದು, ಹ್ಯಾರಿಯರ್ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಮತ್ತು ಕ್ಯಾಮೊ ಎಡಿಷನ್ ಕೂಡಾ ಗ್ರಾಹಕರನ್ನು ಸೆಳೆಯುತ್ತಿವೆ.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಸ್ಪೆಷಲ್ ಎಡಿಷನ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಇದೀಗ ಹೊಸ ಆಟೋಮ್ಯಾಟಿಕ್ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಎಕ್ಸ್‌ಟಿ ಹಾಗೂ ಎಕ್ಸ್‌ಜೆಡ್ ಮಾದರಿಗಳಲ್ಲಿ ಆಟೋಮ್ಯಾಟಿಕ್ ಆವೃತ್ತಿಗಳು ಬಿಡುಗಡೆಯಾಗಬಹುದಾಗಿದೆ.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಸದ್ಯ ಮಾರುಕಟ್ಟೆಯಲ್ಲಿ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿರುವುದರಿಂದ ಪ್ರತಿ ವೆರಿಯೆಂಟ್‌ನಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ನೀಡುತ್ತಿರುವ ಟಾಟಾ ಕಂಪನಿಯು ಹೊಸ ಆವೃತ್ತಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಜೊತೆಗೆ ಹೊಸ ಕಾರು ಮಾದರಿಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಉನ್ನತೀಕರಣ ಮಾಡುತ್ತಿದ್ದು, ಇದೀಗ ಹ್ಯಾರಿಯರ್ ಮಾದರಿಯಲ್ಲಿ ಆಟೋಮ್ಯಾಟಿಕ್ ಮಾದರಿಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲಿದೆ.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಇನ್ನು ಹ್ಯಾರಿಯರ್ ಎಸ್‌ಯುವಿ ಮಾದರಿಯು ಸದ್ಯ ಸ್ಟ್ಯಾಂಡರ್ಡ್, ಡಾರ್ಕ್, ಕ್ಯಾಮೊ ಎಡಿಷನ್‌ ಒಳಗೊಂಡಂತೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.09 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಬರೋಬ್ಬರಿ 24 ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

2.0-ಲೀಟರ್ ಟರ್ಬೋ ಡೀಸೆಲ್ ಎಂಜಿನ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹ್ಯಾರಿಯರ್ ಕಾರು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಡೀಸೆಲ್ ಎಂಜಿನ್ ಮಾದರಿಯಲ್ಲೇ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಹ್ಯಾರಿಯರ್ ಕಾರು ಶೀಘ್ರದಲ್ಲೇ ಪೆಟ್ರೋಲ್ ಮಾದರಿಯನ್ನು ಸಹ ಪಡೆದುಕೊಳ್ಳಲಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಬಲಿಷ್ಠ ಕಾರು ಮಾದರಿಯಾಗಿದೆ.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಹ್ಯಾರಿಯರ್ ಫೇಸ್‌ಲಿಫ್ಟ್ ಆವೃತ್ತಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಸೇರಿದಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಜೊತೆಗೆ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಹೊಸ ಕಾರಿನ ಬೆಲೆಯು ತುಸು ದುಬಾರಿಯಾಗಿದ್ದರೂ ಸಹ ಪ್ರೀಮಿಯಂ ಫೀಚರ್ಸ್‌ಗಳು ಫೇಸ್‌ಲಿಫ್ಟ್ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡಲಿದ್ದು, ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಹಕಾರಿಯಾಗಿದೆ.

ಹ್ಯಾರಿಯರ್ ಎಸ್‌‌ಯುವಿಯಲ್ಲಿ ಮತ್ತೆರಡು ಆಟೋಮ್ಯಾಟಿಕ್ ವೆರಿಯೆಂಟ್ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಮೊನ್ನೆಯಷ್ಟೇ ಬಿಡುಗಡೆಯಾದ ನವೀಕೃತ ಹ್ಯಾರಿಯರ್ ಡಾರ್ಕ್ ಎಡಿಷನ್ ಮಾದರಿಯು ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, ಹೊಸ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ.18.04 ಲಕ್ಷ ಬೆಲೆ ಹೊಂದಿವೆ.

Most Read Articles

Kannada
English summary
Tata harrier will update with new two automatic variants soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X