ಹೊಸ ಫೀಚರ್ಸ್ ಹೊಂದಿರುವ ಟಾಟಾ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಎಸ್‌ಯುವಿ ಸೇರಿದಂತೆ ಪ್ರಮುಖ ಕಾರು ಮಾದರಿಯಲ್ಲಿ ಬಿಎಸ್-6 ವರ್ಷನ್ ಬಿಡುಗಡೆ ನಂತರ ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಕಂಪನಿಯು ಇದೀಗ ಹ್ಯಾರಿಯರ್ ಜೊತೆ ಇತ್ತೀಚೆಗೆ ಬಿಡುಗಡೆಗೊಂಡಿದ್ದ ಸಫಾರಿ ಹೊಸ ಮಾದರಿಯಲ್ಲೂ ಉನ್ನತೀಕರಿಸಿದ ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ ಸದ್ಯ ಟಾಟಾ ಹ್ಯಾರಿಯರ್ ಮತ್ತು ನ್ಯೂ ಜನರೇಷನ್ ಸಫಾರಿ ಕಾರುಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಎಸ್‌ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿರುವ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು ವಿವಿಧ ವೆರಿಯೆಂಟ್‌ಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದ್ದು, ಇದೀಗ ಎಕ್ಸ್‌ಟಿಎ ಪ್ಲಸ್ ವೆರಿಯೆಂಟ್ ಹೊಸ ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಆವೃತ್ತಿಗಳು ಎಕ್ಸ್ಎಂಎ ಮತ್ತು ಎಕ್ಸ್‌ಜೆಡ್ಎ ನಡುವಿನ ಸ್ಥಾನ ಪಡೆದುಕೊಂಡಿದ್ದು, ಆಟೋಮ್ಯಾಟಿಕ್ ಆವೃತ್ತಿಯಾಗಿರುವ ಹೊಸ ವೆರಿಯೆಂಟ್‌ಗಳು ಪನೊರಮಿಕ್ ಸನ್‌ರೂಫ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿವೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ವೆರಿಯೆಂಟ್ ಅನ್ನು ಎಕ್ಸ್‌ಟಿಎ ಪ್ಲಸ್ ಸ್ಟ್ಯಾಂಡರ್ಡ್(ಎಕ್ಸ್‌ಶೋರೂಂ ಪ್ರಕಾರ ರೂ. 19.14 ಲಕ್ಷಕ್ಕೆ) ಎಕ್ಸ್‌ಟಿಎ ಪ್ಲಸ್ ಡಾರ್ಕ್ ಎಡಿಷನ್(ಎಕ್ಸ್‌ಶೋರೂಂ ಪ್ರಕಾರ ರೂ. 19.34 ಲಕ್ಷ) ಗಳಲ್ಲಿ ಪರಿಚಯಿಸಿದ್ದು, ಸಫಾರಿ ಎಕ್ಸ್‌ಟಿಎ ಪ್ಲಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 20.08 ಲಕ್ಷ ಬೆಲೆ ಹೊಂದಿದೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಎಕ್ಸ್‌ಟಿಎ ಪ್ಲಸ್ ಮಾದರಿಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಪನೋರಮಿಕ್ ಸನ್‌ರೂಫ್ ಸೌಲಭ್ಯ ಹೊರತುಪಡಿಸಿ ಇನ್ನುಳಿದ ಮಾದರಿಗಳಲ್ಲಿರುವಂತೆ ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಆವೃತ್ತಿಗಳು ಮುಂಚೂಣಿ ಸಾಧಿಸಲಿವೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹ್ಯಾರಿಯರ್ ಮತ್ತು ನ್ಯೂ ಜನರೇಷನ್ ಮಾದರಿಗಳು ಒಂದೇ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಂಡಿದ್ದು, ಎರಡು ಕಾರುಗಳಲ್ಲೂ ಹಲವಾರು ತಾಂತ್ರಿಕ ಒಂದೇ ಆಗಿವೆ. ಸಫಾರಿ ಕಾರಿನಲ್ಲಿ 7 ಸೀಟರ್ ಮತ್ತು ಹ್ಯಾರಿಯರ್‌ನಲ್ಲಿ 5 ಸೀಟರ್ ಸೌಲಭ್ಯವನ್ನು ಹೊರತುಪಡಿಸಿ ಎರಡು ಕಾರುಗಳಲ್ಲೂ ಬಹುತೇಕ ಫೀಚರ್ಸ್‌ಗಳು ಸರಿಸಮನಾಗಿವೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಸಫಾರಿ ಕಾರಿನಲ್ಲಿ 7 ಸೀಟರ್ ಸೌಲಭ್ಯ ನೀಡಿರುವ ಹಿನ್ನಲೆಯಲ್ಲಿ ಮೂರನೇ ಸಾಲಿಗಾಗಿ ತುಸು ವ್ಹೀಲ್ ಬೆಸ್ ಹೆಚ್ಚಳವಾಗಿರುವುದನ್ನು ಹೊರತುಪಡಿಸಿ ಹ್ಯಾರಿಯರ್ ಮಾದರಿಯಂತೆಯೇ ಅಭಿವೃದ್ದಿಗೊಂಡಿದ್ದು, ಹೊಸ ವೆರಿಯೆಂಟ್‌ಗಳು ಗ್ರಾಹಕರನ್ನು ಆಕರ್ಷಿಸಲಿವೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇನ್ನು ಹ್ಯಾರಿಯರ್ ಎಸ್‌ಯುವಿ ಮಾದರಿಯು ಸದ್ಯ ಸ್ಟ್ಯಾಂಡರ್ಡ್, ಡಾರ್ಕ್, ಕ್ಯಾಮೊ ಎಡಿಷನ್‌ ಒಳಗೊಂಡಂತೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.09 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಬರೋಬ್ಬರಿ 26 ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

2.0-ಲೀಟರ್ ಟರ್ಬೋ ಡೀಸೆಲ್ ಎಂಜಿನ್‌ನಲ್ಲಿ ಖರೀದಿಗೆ ಲಭ್ಯವಿರುವ ಹ್ಯಾರಿಯರ್ ಕಾರು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಜೊತೆಗೆ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಹೊಸ ಕಾರಿನ ಬೆಲೆಯು ತುಸು ದುಬಾರಿಯಾಗಿದ್ದರೂ ಸಹ ಪ್ರೀಮಿಯಂ ಫೀಚರ್ಸ್‌ಗಳು ಫೇಸ್‌ಲಿಫ್ಟ್ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡಲಿದ್ದು, ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಹಕಾರಿಯಾಗಿದೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹಾಗೆಯೇ 6 ಸೀಟರ್ ಮತ್ತು 7 ಸೀಟರ್ ಹೊಂದಿರುವ ಸಫಾರಿ ಕಾರು ಮಾದರಿಯು ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಮಾದರಿಗಳೊಂದಿಗ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಟಿಎ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ವೆರಿಯೆಂಟ್‌ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.01 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಸಫಾರಿ ಎಸ್‌ಯುವಿಯಲ್ಲೂ ಹ್ಯಾರಿಯರ್ ಮಾದರಿಯಲ್ಲಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 2 ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಹೈ ಎಂಡ್ ಮಾದರಿಯಾಗಿರುವ ಅಡ್ವೆಂಚರ್ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಯ ಅನುಸಾರವಾಗಿ ಆಫ್ ರೋಡ್ ಪರ್ಫಾಮೆನ್ಸ್‌ಗಾಗಿ 4x4 ಡ್ರೈವ್ ಸಿಸ್ಟಂ ಮಾದರಿಯನ್ನು ಸಹ ಪರಿಚಯಿಸುವ ಯೋಜನೆಯಲ್ಲಿದೆ.

Most Read Articles

Kannada
English summary
Tata harrier xta safari xta launched in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X