Harrier ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

Tata Motors ಕಂಪನಿಯು ಕಳೆದ ಒಂದು ವರ್ಷದ ಅವಧಿಯಲ್ಲಿ Harrier ಎಸ್‌ಯುವಿ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ಹೊಸ ಕಾರಿನಲ್ಲಿ ಡೇಟೋನಾ ಗ್ರೆ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

ಡೇಟೋನಾ ಬಣ್ಣದ ಆಯ್ಕೆಯನ್ನು ಮೊದಲ ಬಾರಿಗೆ Safari ಮಾದರಿಗಾಗಿ ಬಿಡುಗಡೆ ಮಾಡಿದ್ದ Tata Motors ಕಂಪನಿಯು ಇದೀಗ Harrier ಮಾದರಿಯಲ್ಲೂ ಪರಿಚಯಿಸಿದ್ದು, ಹೊಸ ಬಣ್ಣದ ಆಯ್ಕೆಯನ್ನು ಪ್ರತಿ ವೆರಿಯೆಂಟ್‌ನಲ್ಲೂ ಖರೀದಿ ಮಾಡಬಹುದಾಗಿದೆ. Harrier ಕಾರು ಮಾದರಿಯಲ್ಲಿ ಡೇಟೋನಾ ಜೊತೆ ಇನ್ನು ಐದು ಹೊಸ ಬಣ್ಣದ ಆಯ್ಕೆಗಳನ್ನು ನೀಡಲಾಗುತ್ತಿದ್ದು, ಹೊಸ ಬಣ್ಣದ ಆಯ್ಕೆಗಾಗಿ ಕಂಪನಿಯು ಯಾವುದೇ ದರ ಏರಿಕೆ ಮಾಡಿಲ್ಲ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

ಫೇಸ್‌ಲಿಫ್ಟ್ ಮಾದರಿಯಲ್ಲಿ ಹೊಸ ಬಣ್ಣದ ಆಯ್ಕೆಗಳು ಐಷಾರಾಮಿ ಲುಕ್ ಪಡೆದುಕೊಂಡಿದ್ದು, Harrier ಮಾದರಿಯಲ್ಲಿ ಡೇಟೋನಾ ಗ್ರೇ ಜೊತೆಗೆ ಕ್ಯಾಮೊ ಗ್ರೀನ್, ಡಾರ್ಕ್ ಎಡಿಷನ್, ಓರ್ಕಾಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಬಣ್ಣಗಳ ಆಯ್ಕೆ ನೀಡಲಾಗುತ್ತಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

Harrier ಓರ್ಕಾಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಮಾದರಿಗಳಲ್ಲಿ Tata ಕಂಪನಿಯು ಆಕರ್ಷಕ ಡ್ಯುಯಲ್ ಟೋನ್ ಬ್ಲ್ಯಾಕ್ ರೂಫ್ ಜೋಡಿಸಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 22 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಬಿಡುಗಡೆ ನಂತರ Harrier ಎಸ್‌ಯುವಿ ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಸೇರಿದಂತೆ ಮಹತ್ವದ ಬದಲಾವಣೆಗಳನ್ನು ಪಡೆದುಕೊಂಡಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

ಜೊತೆಗೆ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಹೊಸ ಕಾರಿನ ಬೆಲೆಯು ತುಸು ದುಬಾರಿಯಾಗಿದ್ದರೂ ಸಹ ಹೊಸ ಮಾದರಿಯ ಫೀಚರ್ಸ್‌ಗಳು ಫೇಸ್‌ಲಿಫ್ಟ್ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡಿದ್ದು, ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಾಕಷ್ಟು ಸಹಕಾರಿಯಾಗಲಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

Harrier ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.09 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದರಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 17.06 ಲಕ್ಷದಿಂದ ಆರಂಭಗೊಳ್ಳಲಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

ಇದರಲ್ಲಿ ಬ್ಲ್ಯಾಕ್ ಎಡಿಷನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 18.04 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.09 ಲಕ್ಷ ಬೆಲೆ ಹೊಂದಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

Harrier ಎಸ್‌ಯುವಿ ಮಾದರಿಯು ಕಂಪನಿಯ ಹೊಸ 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

ಸದ್ಯ ಡೀಸೆಲ್ ಎಂಜಿನ್ ಮಾದರಿಯಲ್ಲೇ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ Harrier ಕಾರು ಶೀಘ್ರದಲ್ಲೇ ಪೆಟ್ರೋಲ್ ಮಾದರಿಯನ್ನು ಪಡೆದುಕೊಳ್ಳಲಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಬಲಿಷ್ಠ ಕಾರು ಮಾದರಿಯಾಗಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

ಇನ್ನು Tata ಕಂಪನಿಯು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ Harrier ಮತ್ತು ನ್ಯೂ ಜನರೇಷನ್ Safari ಕಾರುಗಳ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಇತ್ತೀಚೆಗೆ ಎಕ್ಸ್‌ಟಿಎ ಪ್ಲಸ್ ವೆರಿಯೆಂಟ್‌ಗಳನ್ನು ಪರಿಚಯಿಸಿತ್ತು.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

ಎಸ್‌ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿರುವ Harrie ಮತ್ತು Safari ಕಾರುಗಳ ವಿವಿಧ ವೆರಿಯೆಂಟ್‌ಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದ್ದು, ಇದೀಗ ಎಕ್ಸ್‌ಟಿಎ ಪ್ಲಸ್ ವೆರಿಯೆಂಟ್ ಹೊಸ ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

Harrier ಎಕ್ಸ್‌ಟಿಎ ಪ್ಲಸ್ ಮತ್ತು Safari ಎಕ್ಸ್‌ಟಿಎ ಪ್ಲಸ್ ಆವೃತ್ತಿಗಳು ಎಕ್ಸ್ಎಂಎ ಮತ್ತು ಎಕ್ಸ್‌ಜೆಡ್ಎ ನಡುವಿನ ಸ್ಥಾನ ಪಡೆದುಕೊಂಡಿದ್ದು, ಆಟೋಮ್ಯಾಟಿಕ್ ಆವೃತ್ತಿಯಾಗಿರುವ ಹೊಸ ವೆರಿಯೆಂಟ್‌ಗಳು ಪನೊರಮಿಕ್ ಸನ್‌ರೂಫ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿವೆ.

Harrier ಎಸ್‌ಯುವಿ ಕಾರು ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ Tata Motors

Tata Motors ಕಂಪನಿಯು Harrier ಎಕ್ಸ್‌ಟಿಎ ಪ್ಲಸ್ ವೆರಿಯೆಂಟ್ ಅನ್ನು ಎಕ್ಸ್‌ಟಿಎ ಪ್ಲಸ್ ಸ್ಟ್ಯಾಂಡರ್ಡ್(ಎಕ್ಸ್‌ಶೋರೂಂ ಪ್ರಕಾರ ರೂ. 19.14 ಲಕ್ಷಕ್ಕೆ) ಎಕ್ಸ್‌ಟಿಎ ಪ್ಲಸ್ ಡಾರ್ಕ್ ಎಡಿಷನ್(ಎಕ್ಸ್‌ಶೋರೂಂ ಪ್ರಕಾರ ರೂ. 19.34 ಲಕ್ಷ) ಗಳಲ್ಲಿ ಪರಿಚಯಿಸಿದ್ದು, Safari ಎಕ್ಸ್‌ಟಿಎ ಪ್ಲಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 20.08 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Tata introduced daytona grey colour option for harrier suv
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X