ಹೊಸ ಪಾಲುದಾರಿಕೆಯೊಂದಿಗೆ 3,500 ಯುನಿಟ್ ಟಾಟಾ ಇವಿ ಕಾರು ಖರೀದಿಸಿದ ಬ್ಲೂಸ್ಮಾರ್ಟ್

ಟಾಟಾ ಮೋಟಾರ್ಸ್(Tata Motors) ಕಂಪನಿಯು ಬ್ಲೂಸ್ಮಾರ್ಟ್ ಮೊಬಿಲಿಟಿ(Blusmart Mobility)ಯೊಂದಿಗೆ ಹೊಸ ಪಾಲುದಾರಿಕೆ ಘೋಷಣೆ ಮಾಡಿದ್ದು, ಹೊಸ ಪಾಲುದಾರಿಕೆ ಯೋಜನೆ ಅಡಿಯಲ್ಲಿ ಟಾಟಾ ಕಂಪನಿಯು ಬ್ಲೂಸ್ಮಾರ್ಟ್ ಕಂಪನಿಗೆ 3,500 ಯುನಿಟ್ ಇವಿ ಕಾರುಗಳನ್ನು ಒದಗಿಸಲಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಟಾಟಾ ಮೋಟಾರ್ಸ್ ಕಂಪನಿಯು ಪ್ಯಾಸೆಂಜರ್ ಫ್ಲೀಟ್ ವಿಭಾಗಕ್ಕಾಗಿ ವಿಶೇಷವಾಗಿ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರನ್ನು ಇದೀಗ ಬ್ಲೂಸ್ಮಾರ್ಟ್ ಪಾಲುದಾರಿಕೆ ಯೋಜನೆ ಅಡಿ ಫ್ಲೀಟ್ ಆಪರೇಟರ್‌ಗಳಿಗೆ ಒದಗಿಸಲು ನಿರ್ಧರಿಸಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಹೊಸ ಒಪ್ಪಂದದೊಂದಿಗೆ ಟಾಟಾ ಮೋಟಾರ್ಸ್ ಫ್ಲೀಟ್ ವಿಭಾಗದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದ ಮೊದಲ ವಾಹನ ತಯಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಪಾಲುದಾರಿಕೆಯು ಭಾರತದಲ್ಲಿ ಫ್ಲೀಟ್ ವಿಭಾಗದಲ್ಲಿ ಎಲೆಕ್ಟ್ರಿಕ್ ಕಾರುಗಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಟಾಟಾ ಮೋಟಾರ್ಸ್ ಭರವಸೆ ವ್ಯಕ್ತಪಡಿಸಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಹೆಚ್ಚುತ್ತಿರುವ ಇಂಧನಗಳ ಪರಿಣಾಮ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದರಿಂದ ಗ್ರಾಹಕರು ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಹೊಸ ಪಾಲುದಾರಿಕೆಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನ ವಿಭಾಗದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಟಾಟಾ ಮೋಟಾರ್ಸ್ ಕಂಪನಿಯು ಫ್ಲೀಟ್ ಗ್ರಾಹಕರಿಗಾಗಿಯೇ ಪ್ರತ್ಯೇಕವಾಗಿ ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಸೆಡಾನ್ ಅನ್ನು ಅಭಿವೃದ್ಧಿಪಡಿಸಿದ್ದು, ಇದೀಗ ಹೊಸ ಪಾಲುದಾರಿಕೆಯೊಂದಿಗೆ ಬ್ಲೂಸ್ಮಾರ್ಟ್ ಮೊಬಿಲಿಟಿ ಕಂಪನಿಯು ಹೊಸ ಇವಿ ಕಾರಗಳನ್ನು ಫ್ಲೀಟ್ ಪ್ಯಾಸೆಂಜರ್ ಸೇವೆಗಳಲ್ಲಿ ಹೊಸ ಕಾರನ್ನು ಸೇರ್ಪಡೆಗೊಳಿಸಲಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಕಾರು ಉತ್ತಮ ಶ್ರೇಣಿ, ವೇಗದ ಚಾರ್ಜಿಂಗ್ ಪರಿಹಾರ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಮತ್ತು ಸೌಕರ್ಯದೊಂದಿಗೆ ಬರುತ್ತದೆ. ಫ್ಲೀಟ್ ಆಪರೇಟರ್‌ಗಳಿಗೆ ಇದು ವಿಶ್ವಾಸಾರ್ಹ ಕಡಿಮೆ ವೆಚ್ಚದ ಎಲೆಕ್ಟ್ರಿಕ್ ಕಾರ್ ಆಗಿದ್ದು, ಇದರ ಚಾಲನೆಯ ವೆಚ್ಚವು ಪೆಟ್ರೋಲ್ ಕಾರ್‌ಗಿಂತ ಕಡಿಮೆಯಿರುತ್ತದೆ. ಹೊಸ ಇವಿ ಕಾರು ಅತಿ ಫ್ಲೀಟ್ ಆಪರೇಟರ್‌ಗಳ ಲಾಭವನ್ನು ಹೆಚ್ಚಿಸಲು ಸಹಕಾರಿಯಾಗಲಿದ್ದು, ಹೊಸ ಕಾರು ಡೀಸೆಲ್ ಕಾರುಗಳಿಂತಲೂ ಶೇ. 60 ರಷ್ಟು ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಟಾಟಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇತ್ತೀಚೆಗೆ ಹೊಸ ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಟಿಗೋರ್ ಇವಿ ಆಧರಿಸಿ ಎಕ್ಸ್‌ಪ್ರೆಸ್-ಟಿ ಮಾದರಿಯನ್ನು ಫ್ಲೀಟ್ ಗ್ರಾಹಕರಿಗಾಗಿಯೇ ಪ್ರತ್ಯೇಕವಾಗಿ ಅಭಿವೃದ್ದಿಗೊಳಿಸಿದ್ದು, XM, XZ, XM + ಹಾಗೂ XZ + ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಕಾರಿನಲ್ಲಿರುವ ಪ್ರಮುಖ ಲಕ್ಷಣವೆಂದರೆ ಈ ಕಾರು 21.5 ಕಿ.ವ್ಯಾ ಹಾಗೂ 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದ್ದು, 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಒಂದು ಮಾದರಿಯ ಬೆಲೆ ರೂ. 9.54 ಲಕ್ಷಗಳಾದರೆ, ಮತ್ತೊಂದು ಮಾದರಿಯ ಬೆಲೆ ರೂ. 10.04 ಲಕ್ಷಗಳಾಗಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

21.5 ಕಿ.ವ್ಯಾ ಬ್ಯಾಟರಿ ಹೊಂದಿರುವ ಇತರಎರಡು ಮಾದರಿಗಳ ಬೆಲೆ ಕ್ರಮವಾಗಿ ರೂ. 10.14 ಲಕ್ಷ ಹಾಗೂ ರೂ.10.64 ಲಕ್ಷಗಳಾಗಿದೆ. 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 165 ಕಿ.ಮೀಗಳವರೆಗೆ ಚಲಿಸುತ್ತದೆ. ಇನ್ನು 21.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಗರಿಷ್ಠ 213 ಕಿ.ಮೀಗಳವರೆಗೆ ಚಲಿಸುತ್ತದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಈ ಬ್ಯಾಟರಿಗಳನ್ನು 90 ರಿಂದ 110 ನಿಮಿಷಗಳಲ್ಲಿ 0 - 80% ವರೆಗೂ ಚಾರ್ಜ್ ಮಾಡಬಹುದು ಎಂದು ಟಾಟಾ ಕಂಪನಿ ಹೇಳಿದೆ. 15 ಆಂಪಿಯರ್ ಎಲೆಕ್ಟ್ರಿಕ್ ಚಾರ್ಜರ್ ಹಾಗೂ ಫಾಸ್ಟ್ ಚಾರ್ಜರ್ ಗಳಿಂದ ಈ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದು. ವಾಣಿಜ್ಯ ಬಳಕೆಗಾಗಿ ಈ ಕಾರಿನ ಸುತ್ತಲೂ ಬಿಳಿ ಬಣ್ಣದೊಂದಿಗೆ ನೀಲಿ ಸ್ಪರ್ಶವನ್ನು ನೀಡಲಾಗಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಇದರಿಂದ ನೋಡುಗರಿಗೆ ಈ ಕಾರು ಎಲೆಕ್ಟ್ರಿಕ್ ಕಾರು ಎಂದು ತಿಳಿಯುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಒಳ ಭಾಗದಲ್ಲಿ ನೀಲಿ ಬಣ್ಣವನ್ನು ನೀಡಲಾಗಿದೆ. ಈ ನೀಲಿ ಹೈಲೈಟ್‌ಗಳೇ ಎಲೆಕ್ಟ್ರಿಕ್ ಕಾರುಗಳನ್ನು ಟಾಟಾ ಕಂಪನಿಯ ಇತರೆ ಫ್ಯೂಯಲ್ ಕಾರುಗಳಿಂದ ಪ್ರತ್ಯೇಕಿಸುತ್ತವೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಈ ಹೊಸ ಕಮರ್ಷಿಯಲ್ ಎಲೆಕ್ಟ್ರಿಕ್ ಕಾರಿನ ಒಳಾಂಗಣ ಕ್ಯಾಬಿನ್ ಅನ್ನು ಪ್ರೀಮಿಯಂ ಗುಣಮಟ್ಟದ ಕಪ್ಪು ಬಣ್ಣದಲ್ಲಿರುವ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ನಂತಹ ಫೀಚರ್ ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಈ ಎಲೆಕ್ಟ್ರಿಕ್ ಕಾರು ಡ್ಯುಯಲ್ ಏರ್‌ಬ್ಯಾಗ್‌, ಇಬಿಡಿ ಹೊಂದಿರುವ ಎಬಿಎಸ್‌ನಂತಹ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಈಗಾಗಲೇ ಹೇಳಿದಂತೆ ಎಕ್ಸ್‌ಪ್ರೆಸ್ ಟಿ ಎಲೆಕ್ಟ್ರಿಕ್ ಕಾರ್ ಅನ್ನು ವಾಣಿಜ್ಯ ಬಳಕೆಗಾಗಿ ಮಾತ್ರ ಪರಿಚಯಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರ್ ಅನ್ನು ವೈಯಕ್ತಿಕ ಬಳಕೆಗೆ ಮಾರಾಟ ಮಾಡುವುದಿಲ್ಲ. ವಾಣಿಜ್ಯ ಬಳಕೆಗಾಗಿ ಈ ಎಲೆಕ್ಟ್ರಿಕ್ ಕಾರ್ ಅನ್ನು ಕಾರ್ಪೊರೇಶನ್‌ಗಳು, ಬಾಡಿಗೆ ಕಾರ್ ಕಂಪನಿಗಳು ಹಾಗೂ ಸರ್ಕಾರಿ ಏಜೆನ್ಸಿಗಳಿಗೆ ಮಾರಾಟ ಮಾಡಲಾಗುತ್ತದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಹೆಚ್ಚಿನ ಸಂಖ್ಯೆಯಲ್ಲಿ ಈ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಕಾರ್ಪೊರೇಟ್ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಗಳಿಗೆ ಟಾಟಾ ಕಂಪನಿಯು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ. ಫೇಮ್ 2 ಯೋಜನೆಯಡಿಯಲ್ಲಿ ದೊರೆಯುವ ಸಬ್ಸಿಡಿಯ ನಂತರ ಎಕ್ಸ್‌ಪ್ರೆಸ್ ಟಿ ಎಲೆಕ್ಟ್ರಿಕ್ ಕಾರಿನ ಬೆಲೆ ರೂ. 9.54 ಲಕ್ಷಗಳಾಗಲಿದೆ.

ಎಕ್ಸ್‌ಪ್ರೆಸ್ ಟಿ ಇವಿ ಕಾರು

ಈ ಸಬ್ಸಿಡಿ ಸಾರ್ವಜನಿಕ ಬಳಕೆ ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ನೋಂದಾಯಿಸುವ ವಾಹನಗಳಿಗೆ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿಯಲ್ಲಿ ನೀಡುವ ಅನುದಾನವಾಗಿದೆ. ಇದರ ಹೊರತಾಗಿ ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಮಾರಾಟವಾಗುವ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುತ್ತಿವೆ.

Most Read Articles

Kannada
English summary
Tata motors and blusmart mobility partner to expand the all electric fleet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X