ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

ಕರೋನಾ ವೈರಸ್ ಪರಿಣಾಮ ಸಾಕಷ್ಟು ಇಳಿಕೆ ಕಂಡಿದ್ದ ವಾಣಿಜ್ಯ ವಾಹನಗಳ ಮಾರಾಟವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ದೇಶದ ಮುಂಚೂಣಿ ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗವು ವಾಹನಗಳ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದೆ.

ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

ದೇಶಿಯ ಮಾರುಕಟ್ಟೆಯಲ್ಲಿನ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಸದ್ಯ ಮೊದಲ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದರೂ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇನ್ನು ಕೂಡಾ ಸಾಕಷ್ಟು ಬೆಳವಣಿಗೆ ಸಾಧಿಸಬೇಕಿದೆ. ಪ್ರಯಾಣಿಕರ ವಾಹನ ಮಾರಾಟ ಸುಧಾರಣೆಗೊಂಡದ್ದರೂ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇನ್ನು ಕೂಡಾ ನೀರಿಕ್ಷಿತ ಮಟ್ಟದ ವಾಹನಗಳ ಮಾರಾಟಕ್ಕಾಗಿ ಪರದಾಟುತ್ತಿರುವ ವಾಹನ ಕಂಪನಿಗಳು ಮಾರಾಟ ಸುಧಾರಣೆಗಾಗಿ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

ಹೊಸ ಅಭಿಯಾನದಡಿ ವಾಣಿಜ್ಯ ವಾಹನ ಖರೀದಿದಾರರಿಗೆ ಹಲವಾರು ಆಫರ್‌ಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವು ಸರಳ ಸಾಲಸೌಲಭ್ಯಗಳ ಆಯ್ಕೆ ನೀಡುತ್ತಿದೆ.

ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

ಸಂಕಷ್ಟ ಪರಿಸ್ಥಿತಿಯಲ್ಲಿ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಆಕರ್ಷಕ ಲೋನ್ ಆಫರ್‌ಗಳನ್ನು ನೀಡುತ್ತಿರುವ ಕಂಪನಿಯು ಸರಳ ಸಾಲ ಮರುಪಾವತಿ ಆಯ್ಕೆಗಳನ್ನು ನೀಡುತ್ತಿದೆ.

ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ಜೊತೆಗೂಡಿ ವಿವಿಧ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸದಾಗಿ ಕರ್ನಾಟಕ ಬ್ಯಾಂಕ್ ಜೊತೆಗೂಡಿ ಗರಿಷ್ಠ ಅವಧಿಗೆ ವಿವಿಧ ಲೋನ್ ಆಫರ್ ನೀಡುತ್ತಿದೆ. ಹೊಸ ಯೋಜನೆಯಿಂದಾಗಿ ವಾಹನ ಮಾರಾಟವನ್ನು ಮತ್ತಷ್ಟು ಸರಳಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಎಸ್‌ಬಿಐ ಬ್ಯಾಂಕ್ ಮೂಲಕ ಆಕರ್ಷಕ ಬಡ್ಡಿದರದಲ್ಲಿ ಲೋನ್ ಆಫರ್‌ಗಳನ್ನು ಖಚಿತಪಡಿಸುತ್ತಿದೆ.

ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

ಟಾಟಾ ಹೊಸ ವಾಹನಗಳ ಖರೀದಿ ಮೇಲೆ ಎಸ್‌ಬಿಐ ಬ್ಯಾಂಕ್ ಮೂಲಕ ಶೇ.85 ರಷ್ಟು ಆನ್ ರೋಡ್ ದರದ ಮೇಲೆ ಸಾಲ ಸೌಲಭ್ಯ ದೊರೆಯಲಿದ್ದು, ವಿವಿಧ ವಾಹನಗಳ ಸಾಲ ಮೊತ್ತದ ಮೇಲೆ ಗರಿಷ್ಠ 7 ವರ್ಷಗಳ ಮರುಪಾವತಿ ಅವಕಾಶ ನೀಡುತ್ತಿದೆ.

ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

ಎಸ್‌ಬಿಐ ಬ್ಯಾಂಕ್ ಜೊತೆಗಿನ ಹೊಸ ಲೋನ್ ಆಫರ್‌ಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಟಾಟಾ ವಾಣಿಜ್ಯ ವಾಹನಗಳ ವ್ಯಾಪಾರ ಘಟಕದ ಅಧ್ಯಕ್ಷ ಗಿರೀಶ್ ವಾಘ್ ಅವರು, ಹೊಸ ಸಾಲ ಸೌಲಭ್ಯವು ಗ್ರಾಹಕರ ಆಯ್ಕೆ ಹೆಚ್ಚಿಸುವುದರ ಜೊತೆಗೆ ವಾಹನ ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ವಾಹನಗಳ ಉತ್ಪಾದನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರಯಾಣಿಕ ವಾಹನಗಳ ಜೊತೆಗೆ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲೂ ಹಲವಾರು ಹೊಸತನದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

ಟಾಟಾ ಮೋಟಾರ್ಸ್ ಕಂಪನಿಯ ಹೊಸ 'ಪವರ್ ಆಫ್ 6' ತತ್ವದಡಿ ಹೊಸ ವಾಣಿಜ್ಯ ವಾಹನಗಳಿಗೆ ಗರಿಷ್ಠ ಕಾರ್ಯಕ್ಷಮತೆ, ಅರಾಮದಾಯಕ ಚಾಲನೆ, ಅನುಕೂಲ ಮತ್ತು ಸಂಪರ್ಕದ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಟಾಟಾ ವಾಣಿಜ್ಯ ವಾಹನಗಳ ಖರೀದಿಗಾಗಿ ಸುಲಭ ಸಾಲ-ಸೌಲಭ್ಯಗಳನ್ನು ಘೋಷಿಸಿದ ಎಸ್‌ಬಿಐ

'ಪವರ್ ಆಫ್ 6' ತತ್ವದಡಿ ಟಾಟಾ ಮೋಟಾರ್ಸ್ ಕಂಪನಿಯು ವಾಣಿಜ್ಯ ವಾಹನ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ತಲೆಮಾರಿನ ವೈಶಿಷ್ಯತೆಗಳೊಂದಿಗೆ ಮಾಲೀಕತ್ವ ವೆಚ್ಚಗಳನ್ನು ಪರಿಣಾಮಕಾರಿ ತಗ್ಗಿಸಿ ಲಾಭದಾಯಕ ಅಂಶಗಳನ್ನು ಹೆಚ್ಚಿಸುತ್ತಿದೆ.

More from DriveSpark

Article Published On: Saturday, March 27, 2021, 23:23 [IST]
English summary
Tata motors and SBI enters into partnership for financial assistance details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+