'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಹೊಸ ಪಂಚ್(Punch) ಮೈಕ್ರೊ ಎಸ್‌ಯುವಿ ಕಾರು ಮಾದರಿಯನ್ನು ಇದೇ ತಿಂಗಳು 20ರಂದು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಅನಾವರಣಗೊಂಡಿರುವ ಹೊಸ ಕಾರನ್ನು ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಳಿಸಲು ಸಿದ್ದವಾಗಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಹೊಸ ಪಂಚ್ ಕಾರನ್ನು ಬಿಡುಗಡೆ ಮಾಡುವ ಮುನ್ನ ಟಾಟಾ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ಕಾರನ್ನು ಪ್ರದರ್ಶನಗೊಳಿಸುತ್ತಿದ್ದು, ಹೊಸ ಕಾರು ಬಿಡುಗಡೆಗಾಗಿ ಕಂಪನಿಯು ವಿಶೇಷ ಅಭಿಯಾನವೊಂದನ್ನು ಕೈಗೊಂಡಿದೆ. ಪಂಚಾಥಾನ್(PUNCHATHON) ಹಮ್ಮಿಕೊಂಡಿದ್ದು, ಹೊಸ ಅಭಿಯಾನದಲ್ಲಿ ಭಾಗಿಯಾಗುವ ಗ್ರಾಹಕರಿಗೆ ಪಂಚ್ ಕಾರನ್ನು ಗೆಲ್ಲುವ ಅವಕಾಶ ನೀಡಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಹೌದು, ಟಾಟಾ ಕಂಪನಿಯು ದೇಶದ ವಿವಿಧ ನಗರಗಳಲ್ಲಿ ನಡೆಯಲಿರುವ ಪಂಚಾಥಾನ್‌ನಲ್ಲಿ ಭಾಗಿಯಾಗುವ ಗ್ರಾಹಕರು ಹೊಸ ಕಾರಿನ ಕುರಿತಾಗಿ ಚಿಕ್ಕದಾದ ವಿಡಿಯೋ ಅಥವಾ ರಿಲ್ ಮೂಲಕ ತಮ್ಮ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಬೇಕಾಗುತ್ತದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಹೊಸ ಪಂಚ್ ಕಾರಿನ ವಿಡಿಯೋ ಅಥವಾ ರಿಲ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಾಗ ಟಾಟಾ ಮೋಟಾರ್ಸ್ ಮತ್ತು ಪಂಚಾಥಾನ್ ಹ್ಯಾಶ್‌ಟ್ಯಾಗ್ ಬಳಕೆ ಮಾಡಬೇಕಿದ್ದು, ಅತ್ಯುತ್ತಮ ಮಾಹಿತಿಯುಳ್ಳ ಮತ್ತು ಕಾರಿನ ಗರಿಷ್ಠ ಮಾಹಿತಿ ಪ್ರದರ್ಶಿಸುವ ವಿಡಿಯೋಗಳನ್ನು ಆಯ್ಕೆ ಮಾಡಲಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಅತ್ಯುತ್ತಮ ಮಾಹಿತಿಯುಳ್ಳ ವಿಡಿಯೋ ಕ್ರಿಯೆಟರ್ಸ್‌ಗಳಿಗೆ ಹೊಸ ಕಾರನ್ನು ಉಚಿತವಾಗಿ ವಿತರಿಸುವುದಾಗಿ ಹೇಳಿಕೊಂಡಿದ್ದು, ಇಂದಿನಿಂದ ಜೈಪುರ್‌ನಲ್ಲಿ ಹೊಸ ಕಾರು ಪ್ರದರ್ಶಿಸಿರುವ ಟಾಟಾ ಕಂಪನಿಯು ಮುಂದಿನ ಕೆಲವು ನಿಗದಿತ ದಿನಾಂಕದಂದು ಮುಂಬೈ, ಬೆಂಗಳೂರು,ದೆಹಲಿ, ಚೆನ್ನೈ, ಹೈದ್ರಾಬಾದ್, ಅಹಮದಾಬಾದ್, ಜೈಪುರ್, ಇಂಧೋರ್ ನಗರಗಳಲ್ಲಿ ಪ್ರದರ್ಶನ ಮಾಡಲಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಕಾರು ಪ್ರದರ್ಶನಗೊಳ್ಳುವ ನಿಗದಿತ ಅವಧಿಯಲ್ಲಿ ಆಯಾ ರಾಜ್ಯಗಳಲ್ಲಿ ವಿಡಿಯೋ ಮಾಡಲು ಕಂಪನಿಯೇ ವಿಶೇಷ ಸೌಲಭ್ಯ ಕಲ್ಪಿಸಲಿದ್ದು, ಪಂಚ್ ಕಾರು ಗೆಲ್ಲಲು ರಿಲ್ ಸ್ಟಾರ್‌ಗಳಿಗೆ ಇದೊಂದು ಅದ್ಭುತ ಅವಕಾಶ ಎನ್ನಬಹುದು.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಇನ್ನು ಹೊಸ ಪಂಚ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತ್ಯುತ್ತಮ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಕಾರು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳಲಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಪಂಚ್ ಕಾರಿನಲ್ಲಿ ಪ್ಯೂರ್ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಮಾದರಿಯಾಗಲಿದ್ದು, ವಿವಿಧ 12 ಮಾದರಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಇದರೊಂದಿಗೆ ಹೊಸ ಪಂಚ್ ಕಾರಿನಲ್ಲಿರುವ ಫೀಚರ್ಸ್‌ಗಳು, ಕಾರಿನ ಚಾಲನಾ ಶೈಲಿ ಮತ್ತು ವಿವಿಧ ಬಣ್ಣಗಳ ಆಯ್ಕೆಯು ಗ್ರಾಹಕರನ್ನು ಸೆಳೆಯಲಿದ್ದು, ಮಾರುಕಟ್ಟೆಯಲ್ಲಿರುವ ಪ್ರಮುಖ ಎಂಟ್ರಿ ಲೆವಲ್ ಕಾರು ಮಾದರಿಗಳಿಗೆ ಟಾಟಾ ಪಂಚ್ ಭರ್ಜರಿ ಪೈಪೋಟಿ ನೀಡಲಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಪಂಚ್ ಮೈಕ್ರೊ ಎಸ್‌ಯುವಿ ಕಾರಿನಲ್ಲಿ ಟಾಟಾ ಕಂಪನಿಯು ಟಿಯಾಗೋ ಮಾದರಿಯಲ್ಲಿರುವ 1.2-ಲೀಟರ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಹೊಸ ಕಾರನ್ನು ಟೊರಾರ್ನಾಡೊ ಬ್ಲ್ಯೂ, ಟೊಪಿಕಲ್ ಮಿಸ್ಟ್, ಡೇ ಟೋನಾ ಗ್ರೆ, ಮಿಟಿಯೊರ್ ಬ್ರೊನ್ಜ್, ಆಟೊಮಿಕ್ ಆರೇಂಜ್, ಆರ್ಕಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಸೇರಿ ಪ್ರಮುಖ ಏಳು ಬಣ್ಣಗಳ ಆಯ್ಕೆಯಲ್ಲಿ ಪರಿಚಯಿಸಲಾಗುತ್ತಿದ್ದು, ಹೊಸ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಐ10 ನಿಯೋಸ್ ಮಾದರಿಯಲ್ಲಿಯೇ ವ್ಹೀಲ್ ಬೆಸ್ ಹೊಂದಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಹೊಸ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಹೊಸ ಕಾರಿನ ಟಾಪ್ ಎಂಡ್ ಮಾದರಿಗಳಲ್ಲಿ ಐರಾ ಕಾರ್ ಟೆಕ್ನಾಲಜಿ ನೀಡಲಾಗಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಪಂಚ್ ಕಾರಿನಲ್ಲಿ ವಿಭಜಿತವಾಗಿರುವ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್, ಹ್ಯುಮಿನಿಟಿ ಲೈನ್ ಗ್ರಿಲ್, ಬಂಪರ್‌ಗೆ ಹೊಂದಿಕೊಂಡಿರುವ ಬಾಡಿ ಕ್ಲಾಡಿಂಗ್, ವ್ಹೀಲ್ ಆರ್ಚ್, ಹೊರಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, ವೆರಿಯೆಂಟ್‌ಗಳಿಗೆ ಅನುಗುಣವಾಗಿ 15 ಮತ್ತು 16-ಇಂಚಿನ ಅಲಾಯ್ ವ್ಹೀಲ್, ಕ್ರಿಸ್ ಲೈನ್ ಹೊಂದಿರುವ ಬ್ಯಾನೆಟ್, ರೂಫ್ ರೈಲ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಹಾಗೆಯೇ ಹೊಸ ಕಾರಿನಲ್ಲಿ ಟಾಟಾ ಕಂಪನಿಯು ಡ್ಯುಯಲ್ ಟೋನ್ ಇಂಟಿರಿಯರ್ ಜೊತೆಗೆ 7.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಸ್ಕ್ವಾರಿಷ್ ಏರ್ ಕಾನ್ ವೆಂಟ್ಸ್, ತ್ರಿ ಸ್ಪೋಕ್ ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವೀಲ್ಹ್, ಹ್ವಾಕ್ ಕಂಟ್ರೋಲ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಟಾಚೊ ಮೀಟರ್, ಅನಲಾಗ್ ಸ್ಪೀಡೋ ಮೀಟರ್ ಸೇರಿದಂತೆ ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಜೋಡಿಸಿದೆ.

'ಪಂಚಾಥಾನ್' ಅಭಿಯಾನದಲ್ಲಿ Tata Punch ಕಾರು ಗೆಲ್ಲುವ ಅವಕಾಶ

ಜೊತೆಗೆ ಟಾಟಾ ಕಂಪನಿಯು ಎಂಟ್ರಿ ಲೆವಲ್ ಮಾದರಿಯಲ್ಲೂ ಉತ್ತಮ ಸೇಫ್ಟಿ ಫೀಚರ್ಸ್‌ಗಳನ್ನು ನೀಡಿದ್ದು, ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಡ್ಯಯಲ್ ಫ್ರಂಟ್ ಏರ್‌ಬ್ಯಾಗ್, ಟ್ರಾಕ್ಷನ್ ಕಂಟ್ರೊಲ್, ಹಿಲ್ ಅಸಿಸ್ಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಟೈರ್ ಪ್ರೆಷರ್ ಮಾನಿಟಿಂಗ್ ಸಿಸ್ಟಂ, ಹೈ ಸ್ಪೀಡ್ ಅಲರ್ಟ್ ಸೌಲಭ್ಯಗಳಿಲಿವೆ.

Most Read Articles

Kannada
English summary
Tata motors announced punchathon contest across india
Story first published: Wednesday, October 6, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X