ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನೆಕ್ಸಾನ್ ಇವಿ(Nexon EV), ಟಿಗೋರ್ ಇವಿ(Tigor EV) ಮತ್ತು ಎಕ್ಸ್‌ಪ್ರೆಸ್-ಟಿ ಇವಿ(XPres-t EV ಕಾರು ಮಾದರಿಗಳ ಮಾರಾಟದೊಂದಿಗೆ ಹೊಸ ಮೈಲಿಗಲ್ಲು ಸಾಧಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯನ್ನು ಪರಿಚಯಿಸುವ ಮೂಲಕ ಕ್ಯಾಬ್ ಸೇವಾ ವಿಭಾಗದಲ್ಲೂ ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ ನಂತರ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಇವಿ ವಾಹನಗಳ ಮೂಲಕ ಉತ್ತಮ ಬೇಡಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

2019ರಲ್ಲಿ ಮೊದಲ ಬಾರಿಗೆ ಪ್ರಯಾಣಿಕ ಬಳಕೆಯ ಎಲೆಕ್ಟ್ರಿಕ್ ಕಾರು ಪರಿಚಯಿಸಿದ ನಂತರ ಕಂಪನಿಯು ಇದುವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ನೆಕ್ಸಾನ್ ಇವಿ ಕಾರು ಕಂಪನಿಯ ಇವಿ ವಾಹನ ಉತ್ಪಾದನಾ ಯೋಜನೆಗೆ ಹೊಸ ಆಯಾಮ ನೀಡಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕಂಪನಿಯು ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಆರಂಭಿಸಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿಅಭಿವೃದ್ದಿಪಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಇದೀಗ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಆರಂಭಿಸಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯನ್ನು ರೂ. 700 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಕಂಪನಿಯು ಇವಿ ವಾಹನಗಳ ಎಂಜಿನ್‌, ಮೋಟಾರ್‌, ಬಿಡಿಭಾಗಗಳು, ಪರಿಕರಗಳು, ಪರಿಕರಗಳ ಸ್ಥಾಪನೆ, ಸ್ವಾಧೀನಪಡಿಸಿಕೊಳ್ಳುವಿಕೆ, ಜೊತೆಗೆ ಜೋಡಣೆ, ನಿರ್ಮಾಣ, ತಯಾರಿಕೆ, ಮಾರಾಟ, ಮಾರಾಟದ ನಂತರದ ಸೇವೆಗಳು, ಮಾರ್ಕೆಟಿಂಗ್ ಮತ್ತು ಸೇವಾ ಸೌಲಭ್ಯಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಬಹುತೇಕ ವಾಹನ ಕಂಪನಿಗಳು ಪ್ರತ್ಯೇಕ ವಿಭಾಗಗಳನ್ನು ತೆರೆಯುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ಇದೀಗ ಅಂಗಸಂಸ್ಥೆಯ ಮೂಲಕ ಇವಿ ಕಾರುಗಳ ಮಾರಾಟದಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸಲಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.71 ಪಾಲು ಹೊಂದಿದ್ದು, ಇಂಧನಗಳ ಬೆಲೆ ಹೆಚ್ಚುತ್ತಿರುವುದರಿಂದ ಎಲೆಕ್ಟ್ರಿಕ್ ಕಾರಿಗೆ ಬೇಡಿಕೆಯಲ್ಲಿ ಸಾಕಷ್ಟು ಏರಿಕೆಯಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಆರಂಭದಲ್ಲಿ ಟಿಗೋರ್ ಇವಿ ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ತದನಂತರ ನೆಕ್ಸಾನ್ ಇವಿ ಮಾದರಿಯನ್ನು ಪರಿಚಯಿಸಿದ್ದು, ಕಂಪನಿಯು ಇತ್ತೀಚೆಗೆ ವಾಣಿಜ್ಯ ಬಳಕೆದಾರರಿಗಾಗಿ ಹೊಸದಾಗಿ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯ ಮಾರಾಟಕ್ಕೆ ಚಾಲನೆ ನೀಡಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಟಿಗೋರ್ ಇವಿ ಮಾದರಿಯನ್ನು ಇತ್ತೀಚೆಗೆ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡಲಾಗಿದ್ದು, ಟಿಗೋರ್ ಇವಿ ಕಾರು ನೆಕ್ಸಾನ್ ಇವಿ ಮಾದರಿಯಲ್ಲೇ ಅತ್ಯುತ್ತಮ ಮೈಲೇಜ್, ಪರ್ಫಾಮೆನ್ಸ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಹೊಸ ನೆಕ್ಸಾನ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹ್ಯುಂಡೈ ಕೊನಾ ಕಾರುಗಳಿಗೆ ಪೈಪೋಟಿಯಾಗಿ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದೇ ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಈ ಮೊದಲು ಪ್ರತಿ ತಿಂಗಳಿಗೆ 300 ರಿಂದ 400 ಯುನಿಟ್ ಸರಾಸರಿಯಾಗಿ ಮಾರಾಟಗೊಳ್ಳುತ್ತಿದ್ದ ಟಾಟಾ ನೆಕ್ಸಾನ್ ಇವಿ ಕಾರು ಇದೀಗ ಕಳೆದ ಪ್ರತಿ ತಿಂಗಳು ಸರಾಸರಿಯಾಗಿ 1 ಸಾವಿರದಿಂದ ಒಂದೂವರೆ ಸಾವಿರ ಯುನಿಟ್ ಮಾರಾಟಗೊಳ್ಳುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿಯೇ ಪ್ರತ್ಯೇಕ ಅಂಗಸಂಸ್ಥೆ ತೆರೆದ ಟಾಟಾ ಮೋಟಾರ್ಸ್

ಟಾಟಾ ಇವಿ ಕಾರುಗಳಲ್ಲಿ ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವನ್ನು ಪ್ರಮುಖ ಆಕರ್ಷಣೆಯಾಗಿದ್ದು, ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದೆ. ಹೊಸ ಪವರ್‌ಟ್ರೈನ್‌ ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳಿಂದ ಕೂಡಿದೆ.

Most Read Articles

Kannada
English summary
Tata motors announced tpeml subsidiary division for electric vehicles details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X