ನಿರ್ದೇಶಕರ ಮಂಡಳಿಯಲ್ಲಿ ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ದೇಶದ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಆಂತರಿಕ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸುವ ದೃಷ್ಠಿಯಿಂದ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದೆ.

ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ಟಾಟಾ ಉತ್ಪನ್ನಗಳ ಜನಪ್ರಿಯತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಇಒ ಗುಂಟರ್ ಕಾರ್ಲ್ ಬುಟ್ಶೆಕ್ ಅವರ ಅಧಿಕಾರ ಅವಧಿಯು ಈ ತಿಂಗಳು ಕೊನೆಗೊಳ್ಳಲಿದ್ದು, ಅಧಿಕಾರ ಅವಧಿ ಮುಕ್ತಾಯಗೊಂಡರೂ ಗುಂಟರ್ ಕಾರ್ಲ್ ಬುಟ್ಶೆಕ್ ಅವರು ಈ ವರ್ಷದ ಹಣಕಾಸು ವರ್ಷದ ಅವಧಿಯ ಮುಗಿಯುವ ತನಕ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ.

ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ಆಟೋ ಉದ್ಯಮದಲ್ಲಿ ಸುಮಾರು 25 ವರ್ಷಗಳ ಅನುಭವ ಹೊಂದಿರುವ ಗುಂಟರ್ ಕಾರ್ಲ್ ಬುಟ್ಶೆಕ್ ಅವರು ವಿಶ್ವದ ಪ್ರಮುಖ ಆಟೋ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದು, ವೈಯಕ್ತಿಕ ಕಾರಣಗಳಿಗಾಗಿ ಇತ್ತೀಚೆಗೆ ತಮ್ಮ ತಾಯ್ನಾಡು ಜರ್ಮನಿಗೆ ಸ್ಥಳಾಂತರಗೊಳ್ಳುವ ಅಭಿಲಾಷೆ ವ್ಯಕ್ತಪಡಿದ್ದರು.

ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ಕಳೆದ 5 ವರ್ಷಗಳ ಹಿಂದೆ ಟಾಟಾ ಮೋಟಾರ್ಸ್ ಕಂಪನಿಯ ಎಂಡಿ ಮತ್ತು ಸಿಇಓ ಸ್ಥಾನ ವಹಿಸಿಕೊಂಡಿದ್ದಾಗ ಅಕ್ಷರಶಃ ಪ್ರತಿಸ್ಪರ್ಧಿ ಕಂಪನಿಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದ ಟಾಟಾ ಕಂಪನಿಗೆ ಮರುಜೀವ ನೀಡುವಲ್ಲಿ ಗುಂಟರ್ ಕಾರ್ಲ್ ಬುಟ್ಶೆಕ್ ಪಾತ್ರ ಮಹತ್ತರವಾಗಿದೆ.

ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ಕಳೆದ ಐದು ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನಗಳು ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ತಂದಿರುವ ಗುಂಟರ್ ಕಾರ್ಲ್ ಬುಟ್ಶೆಕ್ ಅವರು ಹೊಸ ಉತ್ಪನ್ನಗಳ ಮೂಲಕ ಕಂಪನಿಯ ಜನಪ್ರಿಯತೆಯನ್ನು ಹೆಚ್ಚಿಸಿದ್ದಾರೆ.

ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ಕಳೆದ ಕೆಲ ವರ್ಷಗಳ ಹಿಂದೆ ಕನಿಷ್ಠ ಮಟ್ಟದ ವಾಹನಗಳ ಮಾರಾಟಕ್ಕೂ ಪರದಾಡುತ್ತಿದ್ದ ಟಾಟಾ ಕಂಪನಿಯು ಇದೀಗ ವಾಣಜ್ಯ ವಾಹನಗಳ ವಿಭಾಗದಲ್ಲಿ ಗರಿಷ್ಠ ಮಾರಾಟದೊಂದಿಗೆ ಮೊದಲ ಸ್ಥಾನವನ್ನು ಮತ್ತು ಪ್ಯಾಸೆಂಜರ್ ಕಾರು ಮಾರಾಟದಲ್ಲಿ ಮೂರನೇ ಕಾಯ್ದುಕೊಂಡಿದೆ.

ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ಟಾಟಾ ವಾಹನ ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುವಲ್ಲಿ ಯಶಸ್ವಿಯಾಗಿರುವ ಗುಂಟರ್ ಕಾರ್ಲ್ ಬುಟ್ಶೆಕ್ ಅವರು ಇದೀಗ ಕಂಪನಿಗೆ ಉತ್ತಮ ಬೇಡಿಕೆ ಹರಿದುಬರುತ್ತಿರುವಾಗಲೇ ಎಂಡಿ ಮತ್ತು ಸಿಇಒ ಸ್ಥಾನದಿಂದ ನಿರ್ಗಮಿಸುತ್ತಿದ್ದು, ಈ ವರ್ಷದ ಹಣಕಾಸು ಅಂತ್ಯವರೆಗೆ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ.

ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ಗುಂಟರ್ ಕಾರ್ಲ್ ಬುಟ್ಶೆಕ್ ಸ್ಥಾನ ತೆರುವುಗೊಳ್ಳುತ್ತಿರುವುದರಿಂದ ಅವರ ಸ್ಥಾನಕ್ಕೆ ಶ್ರೀ ಗಿರೀಶ್ ವಾಘ್ ಅವರನ್ನು ಜುಲೈ 1, 2021 ರಿಂದ ಟಾಟಾ ಮೋಟಾರ್ಸ್ ಲಿಮಿಟೆಡ್ ಮಂಡಳಿಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ಗಿರೀಶ್ ವಾಘ್ ಅವರ ನೇತೃತ್ವದಲ್ಲಿ ವಾಣಿಜ್ಯ ವಾಹನಗಳ ವಿಭಾಗವನ್ನು ಮತ್ತು ಶ್ರೀ ಶೈಲೇಶ್ ಚಂದ್ರ ನೇತೃತ್ವದ ಪ್ರಯಾಣಿಕರ ವಾಹನ ವಿಭಾಗದ ವ್ಯಾಪಾರ ಘಟಕದ ಉಸ್ತುವಾರಿಯಾಗಿ ನೇಮಕಗೊಳಿಸಲಾಗಿದ್ದು, ಎನ್ ಚಂದ್ರಶೇಖರನ್ ಅವರು ಕಂಪನಿಯ ಅಧ್ಯಕ್ಷ ಸ್ಥಾನದಲ್ಲಿ ಈ ಹಿಂದಿನಂತೆ ಮುಂದುವರಿಯಲಿದ್ದಾರೆ.

ಹಲವು ಹೊಸ ಬದಲಾವಣೆಗಳನ್ನು ತಂದ ಟಾಟಾ ಮೋಟಾರ್ಸ್

ಎನ್ ಚಂದ್ರಶೇಖರನ್ ಅವರು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ವಿಭಾಗ, ಪ್ಯಾಸೆಂಜರ್ ಕಾರು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಮೇಲೆ ಉಸ್ತುವಾರಿ ವಹಿಸುತ್ತಿದ್ದು, ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ಬದಲಾವಣೆಗಾಗಿ ಹಲವಾರು ಹೊಸ ಯೋಜನೆಗಳನ್ನು ಜಾರಿ ಮಾಡಲು ಸಿದ್ದವಾಗಿವೆ.

Most Read Articles

Kannada
English summary
Tata Motors Ltd announces changes to its Board of Directors. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X