ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಸಾರಥಿ ನೇಮಕ

ದೇಶಯ ಜನಪ್ರಿಯ ಕಾರು ಮಾರಾಟ ಕಂಪನಿಯಾಗಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನ ಮತ್ತು ವಾಣಿಜ್ಯ ವಾಹನ ವಿಭಾಗದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ತನ್ನ ಹೊಸ ಯೋಜನೆಗಳ ವಿಸ್ತರಣೆಯೊಂದಿಗೆ ಹೊಸ ಸಾರಥಿಯನ್ನು ನೇಮಕಗೊಳಿಸಿದೆ.

ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಸಾರಥಿ ನೇಮಕ

ಟಾಟಾ ಮೋಟಾರ್ಸ್ ವರ್ಲ್ಡ್ ವೈಡ್ ವಿಭಾಗದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ಹೊಸದಾಗಿ ಮಾರ್ಕ್ ಲಿಸ್ಟೊಸೆಲ್ಲಾ ಅವರನ್ನು ನೇಮಕಗೊಳಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಗುಂಟರ್ ಕಾರ್ಲ್ ಬಟ್ಶೆಕ್ ಅವರ ಸ್ಥಾನದಲ್ಲಿ ಮಾರ್ಕ್ ಲಿಸ್ಟೊಸೆಲ್ಲಾ ಮುಂದುವರಿಯಲಿದ್ದಾರೆ. ಗುಂಟರ್ ಕಾರ್ಲ್ ಬಟ್ಶೆಕ್ ಅವರ ಐದು ವರ್ಷಗಳ ಸೇವಾ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಮಾರ್ಕ್ ಲಿಸ್ಟೊಸೆಲ್ಲಾ ನೇಮಕಗೊಳಿಸಲಾಗಿದ್ದು, ಜುಲೈ 1ರಂದು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರು ಅಧಿಕಾರವಹಿಸಿಕೊಳ್ಳಲಿದ್ದಾರೆ.

ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಸಾರಥಿ ನೇಮಕ

ಮಾರ್ಕ್ ಲಿಸ್ಟೊಸೆಲ್ಲಾ ಅವರ ನೇಮಕ ಕುರಿತಂತೆ ಟಾಟಾ ಅಧ್ಯಕ್ಷರಾಗಿರುವ ಎನ್.ಚಂದ್ರಶೇಖರ್ ಅವರು ಖಚಿತಪಡಿಸಿದ್ದು, ಅನುಭವಿ ಆಟೋಮೋಟಿವ್ ತಂತ್ರಜ್ಞರಾಗಿರುವ ಮಾರ್ಕ್ ಲಿಸ್ಟೊಸೆಲ್ಲಾ ಅವರನ್ನು ಟಾಟಾ ಮೋಟಾರ್ಸ್‌ಗೆ ಸ್ವಾಗತಿಸಲು ಖುಷಿಯಾಗುತ್ತಿದೆ ಎಂದಿದ್ದಾರೆ.

ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಸಾರಥಿ ನೇಮಕ

ವಾಣಿಜ್ಯ ವಾಹನಗಳ ಅಭಿವೃದ್ದಿಯಲ್ಲಿ ಆಳವಾದ ಜ್ಞಾನ ಮತ್ತು ಪರಿಣತಿಯನ್ನು ಹೊಂದಿರುವ ಮಾರ್ಕ್ ಲಿಸ್ಟೊಸೆಲ್ಲಾ ಅವರು ಭಾರತದಲ್ಲೂ ವ್ಯಾಪಕ ಕಾರ್ಯಾಚರಣೆಯ ಅನುಭವದೊಂದಿಗೆ ಟಾಟಾ ಮೋಟಾರ್ಸ್ ಬೆಳವಣಿಗೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಎನ್.ಚಂದ್ರಶೇಖರ್ ಅವರು ಹೊಸ ಸಿಇಒ ನೇಮಕ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಸಾರಥಿ ನೇಮಕ

ಜೊತೆಗೆ ಸಿಇಒ ಸ್ಥಾನದಿಂದ ನಿರ್ಗಮನವಾಗಿರುವ ಗುಂಟರ್ ಕಾರ್ಲ್ ಬಟ್ಶೆಕ್ ಅವರ ಕಾರ್ಯನಿರ್ವಹಣೆಗೂ ಮೆಚ್ಚುಗೆ ವ್ಯಕ್ತಪಡಿಸಿರುವ ಟಾಟಾ ಅಧ್ಯಕ್ಷ ಎನ್.ಚಂದ್ರಶೇಖರ್ ಅವರು, ಐದು ವರ್ಷಗಳ ನಿಮ್ಮ ಸೇವೆಯು ಟಾಟಾ ಮೋಟಾರ್ಸ್ ಕಂಪನಿಯ ಬೆಳವಣಿಯಲ್ಲಿ ಅಪಾರವಾಗಿದ್ದು, ಹಲವು ಸಂಕಷ್ಟದ ನಡುವೆಯೂ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ಗುಂಟರ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದಿದ್ದಾರೆ.

MOST READ: ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಗ್ರೀನ್ ಸಿಗ್ನಲ್

ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಸಾರಥಿ ನೇಮಕ

ಇನ್ನು ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಸಿಇಒ ಆಗಿ ನೇಮಕವಾಗಿರುವ ಮಾರ್ಕ್ ಲಿಸ್ಟೊಸೆಲ್ಲಾ ಅವರು ಆಟೋ ಉದ್ಯಮದಲ್ಲಿನ ತಮ್ಮ ಆಳವಾದ ಜ್ಞಾನದೊಂದಿಗೆ ವಿಶ್ವದ ಪ್ರಮುಖ ಪ್ರಮುಖ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದೀಗ ಟಾಟಾ ಕುಟುಂಬವನ್ನು ಸೇರ್ಪೆಡೆಯಾಗುತ್ತಿದ್ದಾರೆ.

ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಸಾರಥಿ ನೇಮಕ

ಟಾಟಾ ಮೋಟಾರ್ಸ್ ಸೇರ್ಪೆಡೆಗೂ ಮುನ್ನ ಮಿಟ್ಸುಬಿಷಿ ಒಡೆತನದ ಫುಸೊ ಟ್ರಕ್ ಮತ್ತು ಬಸ್ ಕಾರ್ಪೊರೇಶನ್‌ನ ಅಧ್ಯಕ್ಷರಾಗಿದ್ದ ಮಾರ್ಕ್ ಲಿಸ್ಟೊಸೆಲ್ಲಾ ಅವರು ಈ ಹಿಂದೆ ಮರ್ಸಿಡಿಸ್ ಬೆಂಝ್ ಮಾತೃಸಂಸ್ಥೆಯಾದ ಡೈಮ್ಲರ್ ಕಂಪನಿಯ ವಾಣಿಜ್ಯ ವಾಹನಗಳ ವಿಭಾಗದ ಏಷ್ಯಾದ ಡೈಮ್ಲರ್ ಟ್ರಕ್ ಮಾರಾಟ ವಿಭಾಗದಲ್ಲೂ ಅಧ್ಯಕ್ಷಗಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಸಾರಥಿ ನೇಮಕ

ಇದೀಗ ಭಾರತದಲ್ಲಿ ವೇಗವಾಗಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಜವಾಬ್ದಾರಿ ವಹಿಸಿಕೊಂಡಿರುವ ಮಾರ್ಕ್ ಲಿಸ್ಟೊಸೆಲ್ಲಾ ಅವರು ಜುಲೈ 1ರಿಂದ ಅಧಿಕೃತವಾಗಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು, ತಂತ್ರಜ್ಞಾನ ಸುಧಾರಣೆ ಮತ್ತು ಲಾಭದಾಯಕ ವ್ಯವಹಾರದಲ್ಲಿ ಪ್ರಮುಖ ಪಾತ್ರವಹಿಸಿಲಿದ್ದಾರೆ.

Most Read Articles

Kannada
English summary
Tata Motors Appoints Marc Llistosella As New CEO & Managing Director. Read in Kannada.
Story first published: Saturday, February 13, 2021, 15:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X