ಉತ್ಪಾದನಾ ಘಟಕ ಸ್ಥಗಿತದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಭಾರತದಲ್ಲಿ ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಕೆಲವು ದಿನಗಳ ಹಿಂದೆ ಪ್ರತಿ ದಿನ ಸಾವಿರದ ಲೆಕ್ಕದಲ್ಲಿ ವರದಿಯಾಗುತ್ತಿದ್ದ ಕರೋನಾ ವೈರಸ್ ಸೋಂಕಿತರ ಸಂಖ್ಯೆ ಈಗ ಪ್ರತಿದಿನ 2 ಲಕ್ಷದ ಗಡಿ ದಾಟುತ್ತಿದೆ.

ಉತ್ಪಾದನಾ ಘಟಕ ಸ್ಥಗಿತದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಕರೋನಾ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಕರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಕಾರಣಕ್ಕೆ ಪುಣೆಯಲ್ಲಿರುವ ಟಾಟಾ ಮೋಟಾರ್ಸ್ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿತ್ತು.

ಉತ್ಪಾದನಾ ಘಟಕ ಸ್ಥಗಿತದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಈಗ ಈ ಬಗ್ಗೆ ಟಾಟಾ ಮೋಟಾರ್ಸ್ ಕಂಪನಿಯು ಸ್ಪಷ್ಟನೆಯನ್ನು ನೀಡಿದೆ. ಕಂಪನಿಯು ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ಸೀಮಿತ ಸಂಖ್ಯೆಯ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಉತ್ಪಾದನಾ ಘಟಕ ಸ್ಥಗಿತದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಮಹಾರಾಷ್ಟ್ರ ಸರ್ಕಾರದ ಬ್ರೇಕ್ ದಿ ಚೈನ್ ಆದೇಶದಡಿ ಕಾರ್ಯನಿರ್ವಹಿಸುತ್ತಿದೆ. ಮಹಾರಾಷ್ಟ್ರ ಸರ್ಕಾರದ ಬ್ರೇಕ್ ದಿ ಚೈನ್ ಆದೇಶದಲ್ಲಿ ತಿಳಿಸಿರುವ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಪುಣೆ ಘಟಕದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಕಂಪನಿ ತಿಳಿಸಿದೆ.

ಉತ್ಪಾದನಾ ಘಟಕ ಸ್ಥಗಿತದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್ ಬಳಕೆ, ಫೇಸ್ ಮಾಸ್ಕ್ ಬಳಕೆಯಂತಹ ಸುರಕ್ಷತಾ ಕ್ರಮ ಹಾಗೂ ಎಲ್ಲಾ ಆರೋಗ್ಯ ಮಾನದಂಡಗಳನ್ನುಪಾಲಿಸಿ ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಾಗಿ ಕಂಪನಿ ತಿಳಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಉತ್ಪಾದನಾ ಘಟಕ ಸ್ಥಗಿತದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಕಂಪನಿಯು ನೌಕರರ ಸುರಕ್ಷತೆಯ ಬಗ್ಗೆ ತುಂಬಾ ಜಾಗರೂಕತೆ ವಹಿಸಿದೆ. ಉತ್ಪಾದನಾ ಘಟಕದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ಅಗತ್ಯವಾದ ಪರೀಕ್ಷಾ ನಿಯಮಗಳನ್ನು ಮುಂದುವರಿಸಿರುವುದಾಗಿ ಕಂಪನಿ ಹೇಳಿದೆ.

ಉತ್ಪಾದನಾ ಘಟಕ ಸ್ಥಗಿತದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಕಾರ್ಯನಿರ್ವಹಿಸುವ ಉದ್ಯೋಗಿಗಳಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ಅಂತಹ ನೌಕರರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಸಂಪರ್ಕವನ್ನು ಪತ್ತೆಹಚ್ಚಲು ಎಲ್ಲಾ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಉತ್ಪಾದನಾ ಘಟಕ ಸ್ಥಗಿತದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ನಮ್ಮ ವೈದ್ಯಕೀಯ ತಂಡವು ಸ್ಥಳೀಯ ಆರೋಗ್ಯ ಪ್ರಾಧಿಕಾರದೊಂದಿಗೆ ಉತ್ಪಾದನಾ ಘಟಕದಲ್ಲಿ ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಕಂಪನಿಯು 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಉದ್ಯೋಗಿಗಳಿಗೆ ಲಸಿಕೆ ಹಾಕಲು ಆರಂಭಿಸಿದೆ.

ಉತ್ಪಾದನಾ ಘಟಕ ಸ್ಥಗಿತದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ಮಹೀಂದ್ರಾ ಅಂಡ್ ಮಹೀಂದ್ರಾ, ಟಾಟಾ ಮೋಟಾರ್ಸ್, ಇಸುಝು, ಮರ್ಸಿಡಿಸ್ ಬೆಂಝ್, ಫೋಕ್ಸ್‌ವ್ಯಾಗನ್, ಬಜಾಜ್, ಜೆಬಿಎಂ ಮುಂತಾದ ಕಂಪನಿಗಳ ಉತ್ಪಾದನಾ ಘಟಕವಿರುವ ಪುಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿತ್ತು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tata Motors clarifies about production halt in Pune plant. Read in Kannada.
Story first published: Tuesday, April 20, 2021, 9:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X