ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಎಲ್ಲಾ ವಾಣಿಜ್ಯ ವಾಹನಗಳ ಬೆಲೆಯನ್ನು ಜನವರಿ 1ರಿಂದ ಹೆಚ್ಚಿಸಲಿದೆ. ಕಂಪನಿಯು ಜನವರಿ 1 ರಿಂದ ಈ ವಾಹನಗಳ ಬೆಲೆಯಲ್ಲಿ 2.5% ನಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಿದೆ. ವಾಹನ ತಯಾರಿಕೆಯಲ್ಲಿ ಬಳಸುವ ಉಕ್ಕು, ಅಲ್ಯೂಮಿನಿಯಂ ಹಾಗೂ ಇತರ ಬೆಲೆ ಬಾಳುವ ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಕಂಪನಿಯು ಬೆಲೆ ಹೆಚ್ಚಿಸಲು ನಿರ್ಧರಿಸಿದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಆಟೋಮೊಬೈಲ್ ವಲಯದಲ್ಲಿ ನಡೆಯುತ್ತಿರುವ ಸೆಮಿಕಂಡಕ್ಟರ್ ಚಿಪ್ ಕೊರತೆಯ ಹೊರತಾಗಿಯೂ ಟಾಟಾ ಮೋಟಾರ್ಸ್ ನವೆಂಬರ್ ತಿಂಗಳಿನಲ್ಲಿ ಪ್ರಚಂಡ ಮಾರಾಟವನ್ನು ದಾಖಲಿಸಿದೆ. ಕಂಪನಿಯು ಕಳೆದ ತಿಂಗಳು 28,027 ಯುನಿಟ್ ಪ್ರಯಾಣಿಕ ವಾಹನಗಳ ಮಾರಾಟದೊಂದಿಗೆ 32% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಟಾಟಾ ಮೋಟಾರ್ಸ್‌ ಕಂಪನಿಯ ನವೆಂಬರ್ ತಿಂಗಳ ಮಾರಾಟವು ಕಳೆದ ವರ್ಷದ ನವೆಂಬರ್ ತಿಂಗಳಿಗಿಂತ ಹೆಚ್ಚಾಗಿದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಕಂಪನಿಯು 2020ರ ನವೆಂಬರ್ ತಿಂಗಳಿನಲ್ಲಿ 21,228 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಈ ಪ್ರಮಾಣವು ಈ ವರ್ಷದ ಅಕ್ಟೋಬರ್ ತಿಂಗಳ ಮಾರಾಟಕ್ಕಿಂತ ಕಡಿಮೆಯಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯು 33,925 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿತ್ತು. ಟಾಟಾ ಮೋಟಾರ್ಸ್‌ ಕಂಪನಿಗೆ ಪ್ರಮುಖವಾದ ವಿಷಯವೆಂದರೆ ಅದರ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿರುವುದು.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

2020ರ ನವೆಂಬರ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು ಟಾಟಾ ಮೋಟಾರ್ಸ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ 324% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು ಕಳೆದ ತಿಂಗಳು 1,751 ಯುನಿಟ್ ಟಿಗೊರ್ ಹಾಗೂ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಕಂಪನಿಯು ಕಳೆದ ತಿಂಗಳು ಭಾರತದಲ್ಲಿ ಇತರ ಕಾರು ತಯಾರಕ ಕಂಪನಿಗಳಿಗಿಂತ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಟಾಟಾ ಮೋಟಾರ್ಸ್‌ ಕಂಪನಿಯು ಅತ್ಕೋಬರ್ ತಿಂಗಳಿನಲ್ಲಿ 1,586 ಯುನಿಟ್‌ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿತ್ತು. ನವೆಂಬರ್ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟವು ಅಕ್ಟೋಬರ್ ತಿಂಗಳಿಗಿಂತ 10% ಗಿಂತ ಹೆಚ್ಚಾಗಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ನವೆಂಬರ್‌ನಲ್ಲಿ ಟಾಟಾ ಮೋಟಾರ್ಸ್‌ ಕಂಪನಿಯು ಒಟ್ಟು 58,073 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇವುಗಳಲ್ಲಿ ವಾಣಿಜ್ಯ ವಾಹನಗಳೂ ಸೇರಿವೆ. ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿನ ಮಾರಾಟವು 20% ನಷ್ಟು ಹೆಚ್ಚಾಗಿದೆ. ಆದರೆ ಮಾರಾಟ ಪ್ರಮಾಣವು ಈ ವರ್ಷದ ಅಕ್ಟೋಬರ್ ತಿಂಗಳಿಗಿಂತ ಕಡಿಮೆಯಾಗಿದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 67,829 ಯುನಿಟ್‌ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಟಾಟಾ ಮೋಟಾರ್ಸ್ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಪಂಚ್ ಮೈಕ್ರೋ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಮೈಕ್ರೋ ಎಸ್‌ಯುವಿಯು ಬಿಡುಗಡೆಯಾದ ಮೊದಲ ತಿಂಗಳಲ್ಲೇ 8,453 ಯುನಿಟ್‌ ಮಾರಾಟವನ್ನು ದಾಖಲಿಸಿದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 5.49 ಲಕ್ಷಗಳಾಗಿದೆ. ಈ ಎಸ್‌ಯುವಿಯಲ್ಲಿ ಡೈನಾ ಪ್ರೊ ತಂತ್ರಜ್ಞಾನ ಹೊಂದಿರುವ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 86 ಬಿ‌ಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಟಾ ಪಂಚ್ 5 ಸ್ಪೀಡ್ ಮ್ಯಾನುಯಲ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಗಳೊಂದಿಗೆ ಮಾರಾಟವಾಗುತ್ತದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗಷ್ಟೇ ತನ್ನ Tiago, Tiago NRG, Tigor, Altroz ಹಾಗೂ Nexon EVಗಳ ಬೆಲೆಯನ್ನು ಹೆಚ್ಚಿಸಿದೆ. ಆದರೆ Safari, Harrier, Punch ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಟಿಯಾಗೊ ಹ್ಯಾಚ್‌ಬ್ಯಾಕ್ ಕಾರಿನ XE ಮಾದರಿಯನ್ನು ಹೊರತುಪಡಿಸಿ, ಟಿಗೊರ್ ಕಾಂಪ್ಯಾಕ್ಟ್ ಸೆಡಾನ್‌ನ ಎಲ್ಲಾ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಮಾದರಿಗಳ ಬೆಲೆಯಲ್ಲಿ ರೂ. 3,000 ಗಳಷ್ಟು ಹೆಚ್ಚಳವಾಗಿದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಇತ್ತೀಚೆಗೆ ಬಿಡುಗಡೆಯಾದ Tiago NRG ಯ AMT ಆವೃತ್ತಿಯ ಬೆಲೆ ರೂ. 3,000ಗಳಷ್ಟು ಏರಿಕೆಯಾಗಿದೆ. Altroz ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಅನ್ನು 1.2 ಲೀಟರ್ ಪೆಟ್ರೋಲ್, 1.2 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮಾದರಿಯ ಬೆಲೆಯನ್ನು ರೂ. 1,500 ಗಳಿಂದ ರೂ. 5,500 ಗಳವರೆಗೆ ಹೆಚ್ಚಿಸಲಾಗಿದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಡೀಸೆಲ್ ಮಾದರಿಗಳು ಈಗ ರೂ. 400 ರಿಂದ ರೂ. 5,000 ಗಳಷ್ಟು ದುಬಾರಿಯಾಗಿದ್ದರೆ, ಟರ್ಬೊ ಪೆಟ್ರೋಲ್ ಮಾದರಿಗಳ ಬೆಲೆಗಳು ರೂ. 2,500 ಗಳಿಂದ ರೂ. 8,500 ವರೆಗೆ ಹೆಚ್ಚಳವಾಗಿವೆ. ಹೊಸದಾಗಿ ಬಿಡುಗಡೆಯಾದ XE + ಮಾದರಿಗಳ ಬೆಲೆ ಬದಲಾಗಿಲ್ಲ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 6.34 ಲಕ್ಷಗಳಾಗಿದೆ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯ ಆಯ್ದ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳ ಬೆಲೆಯನ್ನು ರೂ. 11,500 ಗಳವರೆಗೆ ಹೆಚ್ಚಿಸಲಾಗಿದೆ. ಆದರೆ ಟಾಪ್ ಎಂಡ್ ಮಾದರಿಗಳಾದ XZ + ಹಾಗೂ XZA + ಮಾದರಿಗಳಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿಲ್ಲ.

ಜನವರಿ 1 ರಿಂದ ಹೆಚ್ಚಾಗಲಿದೆ Tata Motors ಕಮರ್ಷಿಯಲ್ ವಾಹನಗಳ ಬೆಲೆ

ಟಾಟಾ ಮೋಟಾರ್ಸ್ ಕಂಪನಿಯು ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನಲ್ಲಿ ಫ್ರಾಂಚೈಸಿ ಅಡಿಯಲ್ಲಿ ವಾಹನ ಸ್ಕ್ರ್ಯಾಪೇಜ್ ಕೇಂದ್ರವನ್ನು ತೆರೆಯಲು ಮುಂದಾಗಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಗುಜರಾತ್ ಸರ್ಕಾರದ ಸಹಾಯದಿಂದ ಕಂಪನಿಯು ತನ್ನ ಮೊದಲ ಸ್ಕ್ರ್ಯಾಪಿಂಗ್ ಘಟಕವನ್ನು ತೆರೆಯಲಿದೆ. ಕಂಪನಿಯು ಗುಜರಾತ್‌ನಲ್ಲಿ ಸ್ಕ್ರ್ಯಾಪಿಂಗ್ ಘಟಕಗಳನ್ನು ಸ್ಥಾಪಿಸಲು ಫ್ರಾಂಚೈಸಿಗಳನ್ನು ಆಹ್ವಾನಿಸಿದೆ. ಫ್ರಾಂಚೈಸಿಗಳನ್ನು ತೆಗೆದುಕೊಳ್ಳಲು ಬಯಸುವ ಪಾಲುದಾರರಿಗೆ ಕಂಪನಿಯು ಉದ್ದೇಶ ಪತ್ರಗಳನ್ನು ಕಳುಹಿಸುತ್ತಿದೆ.

Most Read Articles

Kannada
English summary
Tata motors commercial vehicles price to increase from 1st january 2022 details
Story first published: Tuesday, December 7, 2021, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X