ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ಸಫಾರಿ ಎಸ್‍ಯುವಿಯ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿತು. ಇದು ಕಾಸ್ಮೆಟಿಕ್ ಬದಲಾವಣೆಗಳನ್ನು ಮತ್ತು ಹೆಚ್ಚುವರಿ ಫೀಚರ್ಸ್‌ಗಳನ್ನು ಪಡೆಯುತ್ತದೆ. ಈ ಕೆಲವು ಫೀಚರ್ಸ್‌ಗಳು ಅಡ್ವೆಂಚರ್ ಎಡಿಷನ್ ಕೂಡ ಪಡೆಯಲಿದೆ ಎಂದು ನಿರೀಕ್ಷಿಸುತ್ತೇವೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಗೋಲ್ಡ್ ಎಡಿಷನ್ ಸಫಾರಿಯ ಹೊಸ ಟಾಪ್-ಎಂಡ್ ರೂಪಾಂತರವಾಗಿದೆ, ಆದರೆ ಇದಕ್ಕಿಂತ ಮೊದಲು ಅಡ್ವೆಂಚರ್ ಎಡಿಷನ್ ಟಾಪ್-ಎಂಡ್ ರೂಪಾಂತರವಾಗಿತ್ತು. ಹೊಸ ಟಾಟಾ ಸಫಾರಿಯ ಅಡ್ವೆಂಚರ್ ಎಡಿಷನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು ಏರ್ ಪ್ಯೂರಿಫೈಯರ್ ಅನ್ನು ಪಡೆಯುತ್ತದೆ ಎಂದು ನಿರೀಕ್ಷಿಸುತ್ತೇವೆ. ಟಾಟಾ ಮೋಟಾರ್ಸ್ ಈ ಫೀಚರ್ಸ್ ಗಳನ್ನು ಇತರ ರೂಪಾಂತರಗಳಿಗೆ ದಾರಿ ಮಾಡಿಕೊಡುತ್ತವೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಸಫಾರಿ ಎಸ್‍ಯುವಿಯ ಗೋಲ್ಡ್ ಎಡಿಷನ್ ಇನ್ನೂ ಸ್ವಲ್ಪ ಹೆಚ್ಚು ಫೀಚರ್ಸ್ ಗಳನ್ನು ಪಡೆಯುತ್ತದೆ. ಇದರಲ್ಲಿ ಮೇಲೆ ತಿಳಿಸಿದ ಫೀಚರ್ಸ್ ಗಳು ಮತ್ತು ಸಿಂಪಿ ವೈಟ್ ಡೈಮಂಡ್ ಕ್ವಿಲ್ಟೆಡ್ ಲೆದರ್ ಅಪ್‌ಹೋಲ್ಸ್ಟರಿ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಇದು ಮೊದಲ ಮತ್ತು ಎರಡನೇ ಸಾಲಿಗೆ ಸೆಗ್ಮೆಂಟ್ ವೆಂಟಿಲೇಟೆಡ್ ಸೀಟುಗಳಲ್ಲಿ ಮೊದಲ ಸ್ಥಾನ ಪಡೆಯುತ್ತದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಅಡ್ವೆಂಚರ್ ಎಡಿಷನ್ ಟ್ರೊಪಿಕಲ್ ಮಿಸ್ಟ್ ಎಂಬ ವಿಶೇಷ ಬಣ್ಣವನ್ನು ಹೊಂದಿದೆ. ಟಾಟಾ ಮೋಟಾರ್ಸ್ ಪ್ರಕಾರ, ಈ ಬಣ್ಣವು ನಮ್ಮ ದೇಶದ ರೋಮಾಂಚಕ ಭೂದೃಶ್ಯಗಳಲ್ಲಿ ಇರುವ ಶ್ರೀಮಂತ ಮತ್ತು ವೈವಿಧ್ಯಮಯ ಸಸ್ಯಗಳಿಂದ ಸ್ಫೂರ್ತಿ ಪಡೆದಿದೆ. ಎಸ್‌ಯುವಿಯ ಹೊರಭಾಗದಲ್ಲಿರುವ ಎಲ್ಲಾ ಕ್ರೋಮ್ ಬ್ಲ್ಯಾಕ್ ಬಣ್ಣದಲ್ಲಿದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಆದ್ದರಿಂದ ಹೆಡ್‌ಲ್ಯಾಂಪ್ ಸುತ್ತಲೂ, ಡೋರ್ ಹ್ಯಾಂಡಲ್‌ಗಳು, ವಿಂಗ್ ಮಿರರ್‌ಗಳು, ಟ್ರೈ-ಎರೋ ಫ್ರಂಟ್ ಗ್ರಿಲ್ ಮತ್ತು ಮುಂಭಾಗದಲ್ಲಿ ಸಫಾರಿ ಬ್ಯಾಡ್ಜಿಂಗ್ ಹಾಗೂ ಹಿಂಭಾಗ ಬ್ಲ್ಯಾಕ್ ಬಣ್ಣದಲ್ಲಿದೆ. ಇನ್ನು ಈ ಎಸ್‍ಯುವಿಯು ಮುಂಭಾಗದ ಸ್ಕಿಡ್ ಪ್ಲೇಟ್ ಕೂಡ ಈಗ ಬ್ಲ್ಯಾಕ್ ಬಣ್ಣದಲ್ಲಿದೆ, ಇದರ ಅಲಾಯ್ ವ್ಹೀಲ್‌ಗಳ ವಿನ್ಯಾಸ ಮತ್ತು ಗಾತ್ರ ಒಂದೇ ಆಗಿರುತ್ತದೆ, ಆದರೆ ಈಗ ಅವು ಚಾರ್‌ಕೋಲ್ ಗ್ರೇ ಬಣ್ಣದಲ್ಲಿದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಈ ಎಸ್‍ಯುವಿಯ ಒಳಭಾಗದಲ್ಲಿ ಕೆಲವು ಬದಲಾವಣೆಗಳನ್ನು ಪಡೆಯುತ್ತದೆ. ಆದ್ದರಿಂದ, ಈಗ ಐವರಿ ವೈಟ್ ಅಪ್ಹೋಲ್ಸ್ಟರಿಯನ್ನು ಅರ್ತಿ ಬ್ರೌನ್ ಅಪ್ಹೋಲ್ಸ್ಟರಿಯಿಂದ ಬದಲಾಯಿಸಲಾಗಿದೆ. ಇದರಲ್ಲಿ ಸ್ಟೀರಿಂಗ್ ವೀಲ್‌ನಲ್ಲಿ ಪಿಯಾನೋ ಬ್ಲ್ಯಾಕ್ ಫಿನಿಶಿಂಗ್‌ಗಳು, ಎಸಿ ವೆಂಟ್‌ಗಳು, ಸೆಂಟರ್ ಕನ್ಸೋಲ್, ಹ್ಯಾಂಡ್ ಹ್ಯಾಂಡಲ್ ಸುತ್ತುವರಿದ ಮತ್ತು ಸ್ವಿಚ್‌ಗಳು ಮತ್ತು ನಾಬ್ಸ್ ಗಳಿವೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಸಫಾರಿಯ ಎರಡು ಗೋಲ್ಡ್ ಎಡಿಷನ್ ಗಳಿವೆ. ಇದು ವೈಟ್ ಗೋಲ್ಡ್ ಮತ್ತು ಬ್ಲ್ಯಾಕ್ ಗೋಲ್ಡ್ ಆಗಿದೆ, ವೈಟ್ ಗೋಲ್ಡ್ ನಲ್ಲಿ ಗೋಲ್ಡ್ ಅಸ್ಸೆಂಟ್ ಗಳೊಂದಿಗೆ ಒಳಾಂಗಣಕ್ಕೆ ಮಾಂಟ್ ಬ್ಲಾಂಕ್ ಮಾರ್ಬಲ್ ಫಿನಿಶ್ ಪಡೆಯುತ್ತದೆ. ಹೊರಭಾಗವದಲ್ಲಿ ಬ್ಲ್ಯಾಕ್ ರೂಫ್ ನೊಂದಿಗೆ ಫ್ರಾಸ್ಟ್ ವೈಟ್‌ನ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಇನ್ನು ಎಸ್‌ಯುವಿಯ ಹೊರಭಾಗದಲ್ಲಿ ಗೋಲ್ಡ್ ಅಸ್ಸೆಂಟ್ ಗಳಿವೆ. ಈ ಎಸ್‍ಯುವಿಯ ಒಳಾಂಗಣವು ಬ್ಲ್ಯಾಕ್ ಮಾರ್ಬಲ್ ಬಣ್ಣದಲ್ಲಿ ಗೋಲ್ಡ್ ಅಸ್ಸೆಂಟ್ ಗಳೊಂದಿಗೆ ಫಿನಿಶಿಂಗ್ ಹೊಂದಿದೆ. ಅಪ್ಹೋಲ್ಸ್ಟರಿಯ ಬಣ್ಣವು ಎರಡೂ ರೂಪಾಂತರಗಳಲ್ಲಿ ಒಂದೇ ಆಗಿರುತ್ತದೆ. ಗೋಲ್ಡ್ ಎಡಿಷನ್‌ಗಳು ಮತ್ತು ಅಡ್ವೆಂಚರ್ ಎಡಿಷನ್ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಪಡೆಯುವುದಿಲ್ಲ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಇವುಗಳಲ್ಲಿ ಫಿಯೆಟ್‌ನಿಂದ ಪಡೆದ 2.0-ಕೈರೋಟೆಕ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್‌ನಲ್ಲಿ ನಾವು ನೋಡಿದ ಅದೇ ಎಂಜಿನ್ ಇದು. ಈ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ,

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಟಾಟಾ ಸಫಾರಿ ಇನ್ನು ಈ ಎಸ್‍ಯುವಿಯು ಒಮೆಗಾ ಆರ್ಗಿಟೆಕ್ಚರ್ ನಿಂದ ಸಂಯೋಜಿಸುತ್ತದೆ. ಲ್ಯಾಂಡ್ ರೋವರ್‌ನ ಪ್ರಸಿದ್ಧ ಡಿ8 ಪ್ಲಾಟ್‌ಫಾರ್ಮ್‌ನಿಂದ ಹೊಸ ಸಫಾರಿ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸಲಾಗಿದೆ. ಈ ಹೊಸ ಟಾಟಾ ಸಫಾರಿ ಎಸ್‍ಯುವಿಯು ಹ್ಯಾರಿಯರ್ ಮಾದರಿಗೆ ಹೋಲುವ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಿಂದ ಸಿ-ಪಿಲ್ಲರ್ ವರೆಗೆ, ಈ ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎರಡೂ ಬಹುತೇಕ ಒಂದೇ ರೀತಿ ಇದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಅವುಗಳ ನಡುವೆ ಇರುವ ಏಕೈಕ ಬದಲಾವಣೆಯೆಂದರೆ ಸಫಾರಿಗಳಲ್ಲಿ ಕಂಡುಬರುವ ಹೊಸ ಟ್ರೈ-ಏರೋ ಮೆಷ್ ಗ್ರಿಲ್ ಆಗಿದೆ. ಈ ಹೊಸ ಸಫಾರಿ ಎಸ್‌ಯುವಿ ಹ್ಯಾರಿಯರ್‌ನಂತೆಯೇ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಇದರೊಂದಿಗೆ ಇಂಟಿಗ್ರೇಟೆಡ್ ಟರ್ನ್ ಇಂಡೀಗೆಟರ್ ಗಳೊಂದಿಗೆ ಮೇಲಿರುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಇದು ಒಳಗೊಂಡಿದೆ, ಅದರ ಕೆಳಗೆ ಮುಖ್ಯ ಕ್ಸೆನಾನ್ ಎಚ್‌ಐಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಗಳಿವೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ Tata Safari Adventure ಎಡಿಷನ್

ಈ ಎಸ್‍ಯುವಿ ಫಾಗ್ ಲ್ಯಾಂಪ್ ಗಳನ್ನು ಅದೇ ಹೌಸಿಂಗ್‌ನಲ್ಲಿ ಹೆಡ್‌ಲ್ಯಾಂಪ್ ಯುನಿಟ್ ಗಿಂತ ಸ್ವಲ್ಪ ಕೆಳಗೆ ಹೊಂದಿದೆ. ಮುಂಭಾಗದ ಬಂಪರ್‌ಗಳಲ್ಲಿ ಸಫಾರಿ ಕ್ಲಾಡಿಂಗ್ ಹೊಂದಿದ್ದು, ಇದು ಸೆಂಟ್ರಲ್ ಇನ್ ಟೆಕ್ ಅನ್ನು ಹೊಂದಿದೆ. ಜೊತೆಗೆ ಕೆಳಭಾಗದಲ್ಲಿ ಸಿಲ್ವರ್ ಫಿನಿಶಿಂಗ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿರುತ್ತದೆ. ಹಿಂಭಾಗದ ಮಧ್ಯಭಾಗದಲ್ಲಿ ಎಲ್ಇಡಿ ಸ್ಟಾಪ್ ಲೈಟ್ ಹೊಂದಿರುವ ರೂಫ್-ಮೌಂಟಡ್ ಸ್ಪಾಯ್ಲರ್ ಹೊಂದಿದೆ. ಇನ್ನು ಒಟ್ಟಿನಲ್ಲಿ ಟಾಟಾ ಸಫಾರಿ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

Article Published On: Wednesday, September 22, 2021, 19:58 [IST]
English summary
Tata motors could be update safari adventure edition with some new features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+