ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಇಂಧನ ಬೆಲೆ ಏರಿಕೆಯ ಬಳಿಕ ಎಲೆಕ್ಟ್ರಿಕ್ ಕಾರುಗಳು ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಈ ನಡುವೆ ಟಾಟಾ ಮೋಟಾರ್ಸ್ 10 ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಗುಜರಾತ್ ಸರ್ಕಾರಕ್ಕೆ ಎನರ್ಜಿ ಎಫಿಶಿಯನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ನೊಂದಿಗೆ ಟೆಂಡರ್ ಒಪ್ಪಂದದ ಭಾಗವಾಗಿ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಭಾನುವಾರ ಗುಜರಾತ್‌ನ ಸರ್ಕಾರಿ ಅಧಿಕಾರಿಗಳಿಗೆ ವಾಹನಗಳನ್ನು ಹಸ್ತಾಂತರಿಸಲಾಯಿತು. ಈ ನೆಕ್ಸಾನ್ ಎಲೆಕ್ಟ್ರಿಕ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಗಳನ್ನು ರಾಜ್ಯದ ಹಿರಿಯ ಸರ್ಕಾರಿ ಅಧಿಕಾರಿಗಳು ಬಳಸುತ್ತಾರೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಹಸ್ತಾಂತರಿಸುವ ವೇಳೆ ಗುಜರಾತ್ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕೈಗಾರಿಕೆಗಳು ಮತ್ತು ಗಣಿ ಇಲಾಖೆ) ಮತ್ತು ಎಂಡಿ ಸರ್ದಾರ್ ಸರೋವರ್ ನರ್ಮದಾ ನಿಗಮ್ ಅವರು ಉಪಸ್ಥಿತಿತರಿದ್ದರು.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಗುಜರಾತ್‌ನ ನರ್ಮದಾ ದಡದಲ್ಲಿರುವ ದೇಶದ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಬಾಯಿ ಪಟೇಲ್‌ರ ಪ್ರತಿಮೆ 597 ಅಡಿ ಎತ್ತರದ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಇದು ಗುಜರಾತ್‌ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ, ಈ ಕೆವಡಿಯಾ ಪ್ರದೇಶದಲ್ಲಿ ಶೀಘ್ರದಲ್ಲೇ ಭಾರತದ ಮೊದಲ ಇ-ವಾಹನ-ಮಾತ್ರ ಪ್ರದೇಶವಾಗಲಿದೆ ಈ ಗುರಿಯತ್ತ ತಲುಪಲು ಇದು ಕೂಡ ಒಂದು ಹೆಜ್ಜೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪಾಲುದಾರ ಸಿಪ್ರಾಡಿ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನೇಪಾಳದಲ್ಲಿ ನೆಕ್ಸನ್ ಎಲೆಕ್ಟ್ರಿಕ್ ಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್‌ಝಡ್‍ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ನೇಪಾಳದಲ್ಲಿ ಬಿಡುಗಡೆಗೊಂಡ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯು ಎನ್‌ಪಿಆರ್ 35.99 ಲಕ್ಷವಾಗಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರು ಸಾಮಾನ್ಯ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯಿಂದ ಸ್ಟೈಲಿಂಗ್ ಅನ್ನು ಪಡೆದುಕೊಂಡಿದೆ. ಆದರೆ ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ಅದಕ್ಕೆ ಅನುಗುಣವಾಗಿ ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಕೂಡ ನಡೆಸಿದ್ದಾರೆ. 2020ರ ಜನವರಿಯಲ್ಲಿ ಮೊದಲ ಬಾರಿಗೆ ಭಾರತದಲ್ಲಿ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಪರಿಚಯಿಸಿದರು.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಈ ನೆಕ್ಸಾನ್ ಎಲೆಕ್ಟ್ರಿಕ್ ಭಾರತದಲ್ಲಿ ಹೆಚ್ಚು ಮಾರಾಟವಾದ ಪ್ರಯಾಣಿಕರ ಎಲೆಕ್ಟ್ರಿಕ್ ಕಾರು ಆಗಿದೆ. ಅಲ್ಲದೇ ಇದು ಜಿಪ್ಟ್ರಾನ್ ತಂತ್ರಜ್ಞಾನವನ್ನು ಆಧರಿಸಿದ ಮೊದಲ ವಾಹನವಾಗಿದ್ದು, ಮುಂಬರುವ ಟಾಟಾ ಇವಿಗಳಿಗೆ ಕಾರಣವಾಗಿದೆ. ಭಾರತದಲ್ಲಿ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನೆಕ್ಸಾನ್ ಇವಿ ಶೇ.6.8 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಗಳಿಸಿದೆ. ಈಗಗಾಲೇ ನೆಕ್ಸಾನ್ ಎಲೆಕ್ಟ್ರಿಕ್ ಮಾದರಿಯ 4,500 ಯುನಿಟ್ ಗಳನ್ನು ಮಾರಾಟಗೊಳಿಸಿವೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಸನ್‌ರೂಫ್, ರೈನ್ ಸೆನ್ಸಾಸಿಂಗ್, ಇಂಟಿಗ್ರೇಟೆಡ್ ಟರ್ನ್ ಇಂಡೀಕೇಟರ್, ಎಲ್ಲಾ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ ಅಂಡ್ ಗೋ, ಕೂಲ್ಡ್ ಗ್ಲೋವ್ ಬಾಕ್ಸ್, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ,

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಈ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದ್ದು, ಇದಕ್ಕಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಅನ್ನು ನೀಡಿದ್ದಾರೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಈ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಸಿಂಕ್ರೊನಸ್ ಮೋಟರ್ ಅನ್ನು ಹೊಂದಿದೆ. ಇದರಲ್ಲಿ 30.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಇವಿ ಮಾದರಿಯು ಒಟ್ಟು 127 ಬಿಹೆಚ್‌ಪಿ ಮತ್ತು 245 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು ಕೇವಲ 9.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಆರ್ಎಐ ಪ್ರಕಾರ ಈ ನೆಕ್ಸಾನ್ ಇವಿ ಮಾದರಿಯು 312 ಕಿ.ಮೀ ರೇಂಜ್ ಅನ್ನು ಹೊಂದಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಇತ್ತೀಚೆಗೆ ಟಾಟಾ ಮೋಟಾರ್ಸ್ ಗುಜರಾತ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅನ್ವಯ ಟಾಟಾ ಮೋಟಾರ್ಸ್ ಅಹಮದಾಬಾದ್‌ನಲ್ಲಿ ನೋಂದಾಯಿತ ವಾಹನ ಸ್ಕ್ರಾಪಿಂಗ್ ಘಟಕವನ್ನು ಸ್ಥಾಪಿಸಲಿದೆ. ಪ್ಯಾಸೆಂಜರ್ ಹಾಗೂ ಕಮರ್ಷಿಯಲ್ ವಾಹನಗಳಿಗಾಗಿ ಈ ಸ್ಕ್ರ್ಯಾಪಿಂಗ್ ಘಟಕಗಳು ಕಾರ್ಯ ನಿರ್ವಹಿಸಲಿವೆ. ಈ ಕೇಂದ್ರಗಳಲ್ಲಿ ವಾರ್ಷಿಕವಾಗಿ 36,000 ಹಳೆಯ ವಾಹನಗಳನ್ನು ಮರುಬಳಕೆ ಮಾಡಬಹುದು.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ, ಕಂಪನಿಯು ಗುಜರಾತ್ ಸರ್ಕಾರದ ಬಂದರು ಹಾಗೂ ಸಾರಿಗೆ ಇಲಾಖೆಯೊಂದಿಗೆ ಒಂದು ಎಂಒಯುಗೆ ಸಹಿ ಹಾಕಿದೆ. ಗುಜರಾತ್ ಸರ್ಕಾರದ ನಿಯಮಗಳು ಹಾಗೂ ರಸ್ತೆ ಮತ್ತು ಸಾರಿಗೆ ಇಲಾಖೆಯು ಸೂಚಿಸಿದ ಕರಡು ನೀತಿಯ ಪ್ರಕಾರ ಇಲಾಖೆಯು ಸ್ಕ್ರ್ಯಾಪಿಂಗ್ ಕೇಂದ್ರಗಳಿಗೆ ಅಗತ್ಯವಾದ ಅನುಮೋದನೆಗಳನ್ನು ನೀಡುತ್ತದೆ. ಇನ್ನು ಹಳೆಯ ವಾಹನಗಳು ರಸ್ತೆಗಳಲ್ಲಿ ಸಂಚಾರವನ್ನು ಮುಂದುವರಿಸಲು ಫಿಟ್ನೆಸ್ ಪರೀಕ್ಷೆಯನ್ನು ತೆರವುಗೊಳಿಸುವುದು ಕಡ್ಡಾಯವಾಗಿದ್ದು, ವಿಫಲವಾದರೆ ಅಂತಹ ವಾಹನವನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್ ಸರ್ಕಾರಕ್ಕೆ ವಿತರಿಸಿದ ಟಾಟಾ ಮೋಟಾರ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಈ ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍ಯುವಿಯು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಂಜಿ ಝಡ್ ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.

Most Read Articles

Kannada
English summary
Tata motors delivered nexon ev 10 units to gujarat government
Story first published: Tuesday, August 17, 2021, 18:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X