ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

Tata Motors ಕಂಪನಿಯು ತನ್ನ Tata Nexon EV ಗಳನ್ನು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ಗೆ ವಿತರಿಸಿದೆ. Tata Nexon EVಗಳನ್ನು ಕೇಂದ್ರ ಸರ್ಕಾರದ ಉದ್ಯಮವಾದ ಎನರ್ಜಿ ಎಫಿಶಿಯನ್ಸಿ ಸರ್ವಿಸಸ್ ಲಿಮಿಟೆಡ್ (ಇಇಎಸ್ಎಲ್) ನೊಂದಿಗಿನ ಒಪ್ಪಂದದ ಅಡಿಯಲ್ಲಿ ನೀಡಲಾಗಿದೆ. Tata Motors ಇತ್ತೀಚೆಗೆ Nexon EV ಯ 10 ಯುನಿಟ್ ಗಳನ್ನು ಗುಜರಾತ್ ಸರ್ಕಾರದ ಕೆಲವು ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

Tata Nexon EV ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ಎಂಬುದು ಗಮನಾರ್ಹ. Tata Nexon EV ಕಡಿಮೆ ಬೆಲೆ ಹಾಗೂ ಪೂರ್ತಿಯಾಗಿ ಚಾರ್ಜ್ ಆದ ನಂತರ ಹೆಚ್ಚು ದೂರ ಚಲಿಸುವ ಕಾರಣಕ್ಕೆ ಸಾಕಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು Tata Motors ಕಂಪನಿಯು ಸಕ್ರಿಯವಾಗಿ ಪ್ರಮುಖ ಪಾತ್ರ ವಹಿಸುತ್ತಿದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

Tata Motors ಕಂಪನಿಯು Tata Power, Tata Chemicals, Tata Auto Components, Tata Motors Finance ಹಾಗೂ Kroma ಸೇರಿದಂತೆಇತರ ಕೆಲವು Tata ಗ್ರೂಪ್ ಕಂಪನಿಗಳೊಂದಿಗೆ ಸೇರಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಕೊಡುಗೆ ನೀಡುತ್ತಿದೆ, ಇದನ್ನು Tata Universe ಎಂದು ಕರೆಯಲಾಗುತ್ತದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

Tata Motors ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ತನ್ನ ವಾಹನಗಳನ್ನು ನಿರಂತರವಾಗಿ ಅಪ್ ಡೇಟ್ ಮಾಡುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ Tata Motors ಕಂಪನಿಯು ಭಾರತೀಯ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೆಚ್ಚು ದೂರ ಚಲಿಸುವ Nexon EV ಎಲೆಕ್ಟ್ರಿಕ್ ಕಾರ್ ಅನ್ನು ಮಾರಾಟ ಮಾಡುತ್ತಿರುವುದು. Tata Nexon EV ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ 70% ನಷ್ಟು ಪಾಲನ್ನು ಹೊಂದಿದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

Tata Motors ಕಂಪನಿಯು ಸದ್ಯಕ್ಕೆ ಭಾರತದಲ್ಲಿ 6,000 ಕ್ಕೂ ಹೆಚ್ಚು Nexon EV ಗಳನ್ನು ಬಿಡುಗಡೆಗೊಳಿಸಿದೆ. Tata Nexon EV ಕಂಪನಿಯ ಮಹತ್ವಾಕಾಂಕ್ಷೆಯ ಎಲೆಕ್ಟ್ರಿಕ್ ಕಾರ್ ಆಗಿದ್ದು, ಈ ಕಾರ್ ಅನ್ನು ಶೂನ್ಯ ಹೊರಸೂಸುವಿಕೆ, ದೀರ್ಘ ಡ್ರೈವ್ ಸರಣಿ ಹಾಗೂ ಹೆಚ್ಚು ಸುರಕ್ಷತಾ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

Tata Nexon EV ಯಲ್ಲಿ ಅಳವಡಿಸಿರುವ ಪರ್ಮಾನೆಂಟ್ ಮ್ಯಾಗ್ನೆಟ್ ಎಲೆಕ್ಟ್ರಿಕ್ ಮೋಟರ್ ಗರಿಷ್ಠ 129 ಬಿ‌ಹೆಚ್‌ಪಿ ಪವರ್ ಹಾಗೂ 245 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೋಟರ್ ಐಪಿ 27 ಗುಣಮಟ್ಟದ ಡಸ್ಟ್ ಹಾಗೂ ವಾಟರ್ ಪ್ರೂಫ್ ಫೀಚರ್ ಗಳೊಂದಿಗೆ ಬರುವ 30.2 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

ಈ ಕಾರು ಕೇವಲ 9.58 ಸೆಕೆಂಡುಗಳಲ್ಲಿ ಗಂಟೆಗೆ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತಿದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನ ಚಾರ್ಜಿಂಗ್ ಸಮಯದ ಬಗ್ಗೆ ಹೇಳುವುದಾದರೆ, ಡಿಸಿ ಫಾಸ್ಟ್ ಚಾರ್ಜರ್‌ನಿಂದ ಈ ಕಾರ್ ಅನ್ನು ಕೇವಲ 60 ನಿಮಿಷಗಳಲ್ಲಿ 0 - 80% ವರೆಗೂ ಚಾರ್ಜ್ ಮಾಡಬಹುದು. Tata Nexon EV ಪೂರ್ತಿಯಾಗಿ ಚಾರ್ಜ್ ಆದ ನಂತರ 312 ಕಿ.ಮೀಗಳವರೆಗೆ ಚಲಿಸುತ್ತದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

Tata Motors ಕಂಪನಿಯು Tata Nexon EVಯನ್ನು ಜಿಪ್ಟ್ರಾನ್ ಪ್ಲಾಟ್‌ಫಾರಂನಲ್ಲಿ ನಿರ್ಮಿಸಿದೆ. Tata Tigor EV ಯನ್ನು ಸಹ ಇದೇ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿದೆ. Nexon EV ಡ್ಯುಯಲ್ ಪಾಡ್ ಹೆಡ್ ಲ್ಯಾಂಪ್ಸ್, ಎಲ್‌ಇಡಿ ಟೇಲ್ ಲೈಟ್ಸ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

ಇದರ ಜೊತೆಗೆ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್ ಮೆಂಟ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸನ್ ರೂಫ್, ರೈನ್ ಸೆನ್ಸಿಂಗ್ ವೈಪರ್, ಲೆದರ್ ಕವರ್ಡ್ ಸ್ಟೀಯರಿಂಗ್ ವ್ಹೀಲ್, ಕ್ಲೈಮೇಟ್ ಕಂಟ್ರೋಲ್ ಹೊಂದಿರುವ ಪುಶ್ ಬಟನ್ ಸ್ಟಾರ್ಟ್ ಸೇರಿದಂತೆ ಹಲವು ಫೀಚರ್ ಗಳನ್ನು ಸಹ ಹೊಂದಿದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

Tata Motors ಕಂಪನಿಯು ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ತನ್ನ ಎರಡನೇ ಕಾರು ಮಾದರಿಯಾದ Tigor EV ಯನ್ನು ಇಂದು ದೇಶಿಯಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ Tigor EV ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಿರುವುದರಿಂದ ವಾಹನ ಸವಾರರು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. Nexon EV ಮೂಲಕ ಈಗಾಗಲೇಬೇಡಿಕೆ ಪಡೆದುಕೊಂಡಿರುವ Tata Motors ಕಂಪನಿಯು Tigor EVಯ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯೊಂದಿಗೆ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಮುನ್ಸಿಪಲ್ ಕಾರ್ಪೊರೇಶನ್‌ಗೆ Tata Nexon ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ Tata Motors

Tata Motors ಕಂಪನಿಯು ಇತ್ತೀಚಿಗಷ್ಟೇ ತನ್ನ Tata Safari ಎಸ್‌ಯುವಿಯನ್ನು ನೆರೆ ರಾಷ್ಟ್ರ ನೇಪಾಳದಲ್ಲಿಯೂ ಬಿಡುಗಡೆಗೊಳಿಸಿದೆ. Tata Motors ಕಂಪನಿಯ ಕಾರುಗಳಿಗೆ ಭಾರತದಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲಿಯೂ ಬೇಡಿಕೆ ಇರುವುದು ಇದರಿಂದ ಸಾಬೀತಾಗಿದೆ.

Most Read Articles

Kannada
English summary
Tata motors delivers nexon ev to greater mumbai municipal corporation details
Story first published: Tuesday, August 31, 2021, 16:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X