ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ವಿಶ್ವದ ಅತಿ ದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ (Tata Motors) ತನ್ನ ವಾಹನಗಳ ಕಾಯುವ ಅವಧಿ ಎರಡು ತಿಂಗಳಿಂದ ಆರು ತಿಂಗಳವರೆಗೆ ಇರಲಿದೆ ಎಂದು ಹೇಳಿದೆ. ಚಿಪ್ ಗಳಿಗೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಆರು ತಿಂಗಳವರೆಗೆ ಹಾಗೂ ಇತರ ವಾಹನಗಳಿಗೆ ಎರಡು ತಿಂಗಳವರೆಗೆ ಕಾಯುವ ಅವಧಿ ಇರಲಿದೆ ಎಂದು ಟಾಟಾ ಮೋಟಾರ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಇದರಿಂದ ಈಗ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳನ್ನು ಬುಕ್ ಮಾಡುವ ಗ್ರಾಹಕರು ಅವುಗಳ ವಿತರಣೆ ಪಡೆಯಲು ಆರು ತಿಂಗಳವರೆಗೆ ಕಾಯಬೇಕಾಗುತ್ತದೆ. ಅದೇ ರೀತಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದಿರುವ ಟಾಟಾ ಮೋಟಾರ್ಸ್ ಕಾರುಗಳನ್ನು ಬುಕ್ ಮಾಡಿದರೆ ಅವುಗಳ ವಿತರಣೆ ಪಡೆಯಲು ಎರಡು ತಿಂಗಳವರೆಗೆ ಕಾಯಬೇಕಾಗುತ್ತದೆ. ವಿಶ್ವದಾದ್ಯಂತ ವಾಹನ ತಯಾರಕ ಕಂಪನಿಗಳಿಗೆ ಚಿಪ್‌ಗಳ ಕೊರತೆ ಎದುರಾಗಿದೆ.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಇದರಿಂದ ವಾಹನ ತಯಾರಕ ಕಂಪನಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಭಾರತೀಯ ವಾಹನ ತಯಾರಕ ಕಂಪನಿಗಳು ಸಹ ಇದಕ್ಕೆ ಹೊರತಾಗಿಲ್ಲ. ಇತರ ಕಾರು ತಯಾರಕ ಕಂಪನಿಗಳಂತೆ ಟಾಟಾ ಮೋಟಾರ್ಸ್ ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ಈ ಪ್ರಕಟಣೆಯನ್ನು ಹೊರಡಿಸಿದೆ. ಚಿಪ್‌ಗಳ ಕೊರತೆಯಿಂದ ಹೊಸ ವಾಹನಗಳ ಉತ್ಪಾದನೆಯನ್ನು ಮುಂದುವರಿಸಲು ಸಾಧ್ಯವಾಗದೇ ವಾಹನ ತಯಾರಕ ಕಂಪನಿಗಳು ತತ್ತರಿಸುತ್ತಿವೆ.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಇದರಿಂದ ಪ್ರೀ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಸಕಾಲದಲ್ಲಿ ಹೊಸ ವಾಹನಗಳನ್ನು ತಲುಪಿಸಲು ವಿಳಂಬವಾಗುತ್ತಿದೆ. ಚಿಪ್ ಕೊರತೆಯು ಕಂಪನಿಯ ಐಷಾರಾಮಿ ಜಾಗ್ವಾರ್ ಲ್ಯಾಂಡ್ ರೋವರ್‌ ಕಾರಿನ ಸುಮಾರು 1,25,000 ಆರ್ಡರ್ ಮೇಲೆ ಪರಿಣಾಮ ಬೀರಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಕಂಪನಿಯು ಸದ್ಯಕ್ಕೆ ಲಾಭದಾಯಕ ವಾಹನಗಳ ಮೇಲೆ ಹೆಚ್ಚು ಗಮನ ಹರಿಸಿದೆ.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಇದೇ ವೇಳೆ ಕಾಯುವ ಸಮಯವನ್ನು ಕಡಿಮೆ ಮಾಡಲು ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಿರುವುದಾಗಿ ಕಂಪನಿ ಹೇಳಿದೆ. ಈ ಜಾಗತಿಕ ಸಮಸ್ಯೆಯು ಇನ್ನೂ ಹಲವು ದಿನಗಳು ಮುಂದುವರೆಯುವ ಸಾಧ್ಯತೆಗಳಿವೆ. ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತದೆ. ಒಟ್ಟಾರೆ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಕಂಪನಿಯು 71% ನಷ್ಟು ಪಾಲನ್ನು ಹೊಂದಿದೆ.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಈ ಪ್ರಮಾಣವು ಟಾಟಾ ಮೋಟಾರ್ಸ್ ಕಂಪನಿಯ ಎಲೆಕ್ಟ್ರಿಕಲ್ ಕಾರಿಗಳಿಗಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ನೆಕ್ಸಾನ್ (Nexon)ಇವಿ ಹಾಗೂ Tigor ಇವಿ ಟಾಟಾ ಮೋಟಾರ್ಸ್‌ ಕಂಪನಿಯ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕಾರುಗಳಾಗಿವೆ. ಇವುಗಳಲ್ಲಿ ಟಿಗೋರ್ ಇವಿ ಕಡಿಮೆ ಬೆಲೆಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೂ ಮುನ್ನ ನೆಕ್ಸಾನ್ ಇವಿ ದೇಶದ ಅಗ್ಗದ ಎಲೆಕ್ಟ್ರಿಕ್ ಕಾರ್ ಆಗಿತ್ತು.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಈ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ರೂ. 13,99,000 ಗಳಾಗಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು XM, XZ Plus ಹಾಗೂ XZ Plus Lux ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಲೆಕ್ಟ್ರಿಕ್ ಕಾರು ಡಾರ್ಕ್ ಬ್ಲ್ಯಾಕ್ ಆಯ್ಕೆಗಳೊಂದಿಗೂ ಲಭ್ಯವಿದೆ. ಈ ಆಯ್ಕೆಯು XZ Plus ಹಾಗೂ XZ Plus Lux ಮಾದರಿಗಳಲ್ಲಿ ಲಭ್ಯವಿದೆ.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಇನ್ನು Tigor ಇವಿ, ನೆಕ್ಸಾನ್ ಇವಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನ ಬೆಲೆ ಆರಂಭಿಕ ಬೆಲೆ ರೂ. 11.99 ಲಕ್ಷಗಳಾಗಿದೆ. ಈ ಎಲೆಕ್ಟ್ರಿಕ್ ಕಾರ್ ಅನ್ನು XE, XM, XZ Plus ಹಾಗೂ XZ Plus DT ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ XZ Plus DT Y ಮಾದರಿಯು ಹೆಚ್ಚು ಬೆಲೆಯನ್ನು ಹೊಂದಿದೆ.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಈ ಮಾದರಿಯಲ್ಲಿ ಗ್ಲೋಸಿ ಬ್ಲ್ಯಾಕ್ ರೂಫ್, ರೇರ್ ಪಾರ್ಕ್ ಅಸಿಸ್ಟ್, 17.78 ಸೆಂ.ಮೀ ಕನೆಕ್ಟ್ ನೆಕ್ಸ್ಟ್ ಫ್ಲೋಟಿಂಗ್ ಡ್ಯಾಶ್ ಟಾಪ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್, ಪ್ರೀಮಿಯಂ ಹಾರ್ಮನ್ ಸೌಂಡ್ ಸಿಸ್ಟಂ, 30 ಕ್ಕೂ ಹೆಚ್ಚು ಕನೆಕ್ಟಿವಿಟಿ ಫೀಚರ್ ಸೇರಿದಂತೆ ಹಲವು ಅಲ್ಟ್ರಾ ಮಾಡರ್ನ್ ಫೀಚರ್ ಗಳನ್ನು ನೀಡಲಾಗಿದೆ. ಈ ಕಾರಣಕ್ಕೆ ಈ ಮಾದರಿಯ ಬೆಲೆ ಇತರ ಮಾದರಿಗಳಿಗಿಂತ ದುಬಾರಿಯಾಗಿದೆ.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಾಟಾ ಪಂಚ್ ಮೈಕ್ರೊ ಎಸ್‌ಯುವಿಯನ್ನು ಕೆಲವು ದಿನಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದ ಮೊದಲ ತಿಂಗಳಿನಲ್ಲಿಯೇ ಈ ಮೈಕ್ರೊ ಎಸ್‌ಯುವಿಯ 8 ಸಾವಿರಕ್ಕೂ ಹೆಚ್ಚು ಯುನಿಟ್ ಗಳನ್ನು ವಿತರಿಸಲಾಗಿದೆ. ಹೊಸ ಪಂಚ್ ಎಸ್‌ಯುವಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಇದುವರೆಗೂ ಸುಮಾರು ಇಪತ್ತು ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದಿದೆ.

ಎಲೆಕ್ಟ್ರಿಕ್ ಕಾರುಗಳ ಕಾಯುವ ಅವಧಿಯನ್ನು ವಿಸ್ತರಿಸಿದ Tata Motors

ಅಕ್ಟೋಬರ್ ತಿಂಗಳಿನಲ್ಲಿ ಈ ಹೊಸ ಎಸ್‌ಯುವಿಯ ಸುಮಾರು 8,000 ಯುನಿಟ್ ಗಳನ್ನು ವಿತರಿಸಲಾಗಿದೆ. ಪಂಚ್ ಮೈಕ್ರೊ ಎಸ್‌ಯುವಿಯನ್ನು ಪ್ರಮುಖ ನಾಲ್ಕು ಮಾದರಿಗಳಲ್ಲಿ ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಪಂಚ್ ಮೈಕ್ರೊ ಎಸ್‌ಯುವಿಯು, ಮೈಕ್ರೊ ಎಸ್‌ಯುವಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರುಗಳಿಗೂ ಪ್ರಬಲ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
Tata motors extends waiting period for electric cars details
Story first published: Tuesday, November 2, 2021, 17:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X