ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಕೋವಿಡ್ ಪರಿಣಾಮ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಏರಿಳಿತ ಕಂಡುಬಂದರೂ ಆಟೋ ಉತ್ಪಾದನಾ ಕ್ಷೇತ್ರ ಮಾತ್ರ ಗರಿಷ್ಠ ಮಟ್ಟದ ಬೆಳವಣಿಗೆ ಸಾಧಿಸುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ದೇಶದ ಜನಪ್ರಿಯ ಟಾಟಾ ಮೋಟಾರ್ಸ್(Tata Motors) ಕಂಪನಿಯು ಸಹ ಹೊಸ ಕಾರುಗಳ ಮಾರಾಟದಲ್ಲಿ ಕಳೆದ ಒಂದು ವರ್ಷದಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಳೆದ ವರ್ಷದ ಕಾರು ಮಾರಾಟ ಪ್ರಮಾಣಕ್ಕಿಂತಲೂ ಇದೀಗ ಮೂರು ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಗ್ರಾಹಕರ ಬೇಡಿಕೆ ಪೂರೈಕೆ ಸಹಕಾರಿಯಾಗುವಂತೆ ಮಾರಾಟ ಮಳಿಗೆಗಳು ಮತ್ತು ಸೇವಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಇಂದು ಒಂದೇ ದಿನದ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ ವಿವಿಧ ನಗರಗಳಲ್ಲಿ ಸುಮಾರು 70 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಹೊಸದಾಗಿ ಚಾಲನೆ ಪಡೆದುಕೊಂಡ 70 ಶೋರೂಂಗಳಲ್ಲಿ ಅರ್ಧಕ್ಕೂ ಹೆಚ್ಚು ಶೋರೂಂಗಳು ಮಾರಾಟ ಸೌಲಭ್ಯದ ಜೊತೆಗೆ ಗ್ರಾಹಕರ ಸೇವಾ ಕೇಂದ್ರಗಳನ್ನು ಸಹ ಒಂದೇ ಸೂರಿನಡಿನಲ್ಲಿ ತೆರದಿದ್ದು, ಟಾಟಾ ಕಂಪನಿಯು ಹೊಸದಾಗಿ 53 ಶೋರೂಂಗಳನ್ನು ಪ್ರಥಮ ಬಾರಿಗೆ ಟೈರ್ 2 ನಗರಗಳಲ್ಲಿ ಆರಂಭಿಸಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಇನ್ನುಳಿದ 32 ಶೋರೂಂಗಳ ಪೈಕಿ ನಮ್ಮ ಬೆಂಗಳೂರಿನಲ್ಲಿ(7), ಚೆನ್ನೈನಲ್ಲಿ(5) , ಹೈದ್ರಾಬಾದ್‌ನಲ್ಲಿ(4) ಮತ್ತು ಕೊಚ್ಚಿಯಲ್ಲಿ(4) ಶೋರೂಂಗಳಿಗೆ ಚಾಲನೆ ನೀಡಲಾಗಿದ್ದು, ಹೊಸ ಶೋರೂಂಗಳೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ದೇಶಾದ್ಯಂತ ಒಟ್ಟು 980 ಮಾರಾಟ ಮಳಿಗೆಗಳನ್ನು ಹೊಂದಿಂತಾಗಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ದೇಶಾದ್ಯಂತ ಹರಡಿಕೊಂಡಿರುವ 980 ಟಾಟಾ ಶೋರೂಂಗಳಲ್ಲಿ 272 ಶೋರೂಂಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಂಪನಿಯ ಕಾರು ಮಾರಾಟದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದಲೇ ಶೇ. 28ರಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಕಾರುಗಳ ಮಾರಾಟದಲ್ಲಿನ ವಾರ್ಷಿಕ ಬೆಳವಣಿಗೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕಳೆದ 9 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಮಾದರಿಗಳು ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡಲಿವೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಸದ್ಯ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನಕ್ಕೇರಿರುವ ಟಾಟಾ ಕಂಪನಿಯು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಮತ್ತಷ್ಟು ಹೊಸ ಕಾರುಗಳ ಮೂಲಕ ಪ್ರತಿ ತಿಂಗಳು 40 ಸಾವಿರ ಯುನಿಟ್ ಮಾರಾಟ ಗುರಿಹೊಂದಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಸದ್ಯ ಮಾರುಕಟ್ಟೆಯಲ್ಲಿರುವ ಟಿಯಾಗೊ, ಟಿಗೋರ್, ಟಿಗೋರ್ ಇವಿ, ಆಲ್‌ಟ್ರೊಜ್, ನೆಕ್ಸಾನ್, ನೆಕ್ಸಾನ್ ಇವಿ, ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಾರುಗಳ ಬೇಡಿಕೆಗೆ ಪೂರಕವಾಗಿ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಕೋವಿಡ್ 2ನೇ ಅಲೆಯು ತಗ್ಗಿದ ನಂತರ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಮಾರಾಟವು ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ಕಳೆದ ತಿಂಗಳು ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಶೇ.53 ರಷ್ಟು ಬೆಳವಣಿಗೆ ಸಾಧಿಸಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಟಾಟಾ ಮೋಟಾರ್ಸ್ ಕಂಪನಿಯು ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಕಳೆದ ಮೂರು ತಿಂಗಳಿನಿಂದ ಹೊಸ ಕಾರುಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಶೇ. 53 ರಷ್ಟು ಬೆಳವಣಿಯೊಂದಿಗೆ ಸುಮಾರು 54,190 ವಾಹನಗಳನ್ನು ಮಾರಾಟ ಮಾಡಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಈ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು 2020ರ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟಕ್ಕಿಂತಲೂ 2021ರ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ್ದು, ಪ್ರಯಾಣಿಕರ ವಾಹನ ಮಾರಾಟದಲ್ಲಿ ಶೇ. 51 ರಷ್ಟು ಏರಿಕೆಯಾಗಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಪ್ರಯಾಣಿಕರ ಕಾರು ವಿಭಾಗದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಒಟ್ಟು 28,018 ಯುನಿಟ್ ಮಾರಾಟದೊಂದಿಗೆ ಕಳೆದ ವರ್ಷದ ಅಗಸ್ಟ್ ಅವಧಿಗಿಂತ ಶೇ.51 ರಷ್ಟು ಬೆಳವಣಿಗೆ ಸಾಧಿಸಿದ್ದು, ತಿಂಗಳ ಕಾರು ಮಾರಾಟದಲ್ಲಿ ಜುಲೈ ಅವಧಿಗಿಂತಲೂ ಅಗಸ್ಟ್‌ನಲ್ಲಿ ಶೇ.7ರಷ್ಟು ಕುಸಿತ ಅನುಭವಿಸಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಆದರೆ ಅಚ್ಚರಿ ಎಂಬಂತೆ ಟಾಟಾ ಮೋಟಾರ್ಸ್ ಕಂಪನಿಯ ಇವಿ ವಾಹಗಳಿಗೆ ಭರ್ಜರಿ ಬೇಡಿಕೆ ಹರಿದುಬಂದಿದ್ದು, ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮೂಲಕ ಟಾಟಾ ಕಂಪನಿಯು ಅಗಸ್ಟ್‌ನಲ್ಲಿ 1,022 ಯುನಿಟ್ ಮೂಲಕ ಕಳೆದ ವರ್ಷದ ಅಗಸ್ಟ್ ಅವಧಿಗಿಂತಲೂ ಶೇ.234 ರಷ್ಟು ಬೆಳವಣಿಗೆ ಸಾಧಿಸಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ದಿನ 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದ Tata Motors

ಇನ್ನು ವಾಣಿಜ್ಯ ವಾಹನ ವಿಭಾಗದಲ್ಲೂ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಅಗಸ್ಟ್ ಅವಧಿಯಲ್ಲಿ ಒಟ್ಟು 29,781 ಯುನಿಟ್ ಮಾರಾಟ ಮಾಡಿದೆ. ಇದರಲ್ಲಿ 3,609 ಯುನಿಟ್ ವಾಹನಗಳು ವಿದೇಶಿ ಮಾರುಕಟ್ಟೆಗೂ ರಫ್ತುಗೊಂಡಿದ್ದು, ವಾಣಿಜ್ಯ ವಾಹನ ಮಾರಾಟವು ಶೇ. 66 ರಷ್ಟು ಬೆಳವಣಿಗೆ ಕಂಡಿದೆ.

Most Read Articles

Kannada
English summary
Tata motors inaugurates 70 new sales outlets in a single day details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X