ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ನೇಪಾಳದಲ್ಲಿ ಸಿಪ್ರಾದಿ ಟ್ರೇಡಿಂಗ್ ಪ್ರೈವೇಟ್ ಸಹಭಾಗಿತ್ವದಲ್ಲಿ ತನ್ನ ಹೊಸ ಟಿಯಾಗೋ ಎನ್‌ಆರ್‌ಜಿ ಕಾರನ್ನು ಬಿಡುಗಡೆಗೊಳಿಸಿದೆ, ಈ ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ(Tata Tiago NRG) ಕಾರು ಆಕರ್ಷಕ ವಿನ್ಯಾಸ, ಗರಿಷ್ಠ ಸುರಕ್ಷತೆ ಮತ್ತು ಅತ್ಯಾಧುನಿಕ ಪೀಚರ್ಸ್ ಗಳನ್ನು ಒಳಗೊಂಡಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಕಾರು ತಯಾರಕರು ಇದನ್ನು "ತಮ್ಮ ಹ್ಯಾಚ್‌ಬ್ಯಾಕ್‌ನಿಂದ ಸ್ಪೋರ್ಟಿ ಎಸ್‌ಯುವಿಯನ್ನು ಬಯಸುವ ಯುವ ಗ್ರಾಹರಿಗೆ ಮತ್ತು ಕಾರ್ಯಕ್ಷಮತೆಯ ಕಾರು ಪ್ರೀಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ" ಎಂದು ಹೇಳುತ್ತಾರೆ. 'ಅರ್ಬನ್ ಟಫ್‌ರೋಡರ್' ಆಗಿ ಸ್ಥಾನ ಪಡೆದಿರುವ ಟಾಟಾ ಟಿಯಾಗೋ ಎನ್‌ಆರ್‌ಜಿ ಅಗ್ರೇಸಿವ್ ಫ್ರಂಟ್ ವಿಸೇಜ್ ಅನ್ನು ಹೊಂದಿದೆ ಮತ್ತು ಇದು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಕಠಿಣ ರಸ್ತೆ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಕಾರಿನ ಬೆಲೆಯು ಸಿಪ್ರಾಡಿ ಡೀಲರ್ ನೆಟ್‌ವರ್ಕ್‌ನಲ್ಲಿ 33.75 ಲಕ್ಷ ಎನ್‌ಪಿಆರ್‌ನಲ್ಲಿ ಲಭ್ಯವಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಈ ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಕಾರು ಜಾಗತಿಕ NCAP 4-ಸ್ಟಾರ್ ವಯಸ್ಕರ ಸುರಕ್ಷತೆ ರೇಟಿಂಗ್‌ನೊಂದಿಗೆ ಸುರಕ್ಷಿತ ಕಾರು ಆಗಿದೆ. ಈ ಹೊಸ ಹ್ಯಾಚ್‌ಬ್ಯಾಕ್ ಗ್ರೀನ್, ಫೈರ್ ರೆಡ್, ಸ್ನೋ ವೈಟ್ ಮತ್ತು ಕ್ಲೌಡಿ ಗ್ರೇ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ನೇಪಾಳದಲ್ಲಿ ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಬಿಡುಗಡೆಗೊಳಿಸಿ ಟಾಟಾ ಮೋಟಾರ್ಸ್‌ನ ಪಿವಿಐಬಿ ಮುಖ್ಯಸ್ಥ ಶ್ರೀ ಮಯಾಂಕ್ ಬಾಲ್ಡಿ ಮಾತನಾಡಿ, ನೇಪಾಳದಲ್ಲಿ ನಮ್ಮ ಅತ್ಯಂತ ಪ್ರಿಯವಾದ ಹ್ಯಾಚ್‌ಬ್ಯಾಕ್‌ನ ಟಾಟಾ ಎನ್‌ಆರ್‌ಜಿಯನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಅಭಿವ್ಯಕ್ತಿಶೀಲ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಸುರಕ್ಷಿತ ಕಾರು ಆಗಿದ್ದು, ಪ್ರತಿ ದಿನವೂ ವಿಭಿನ್ನ ಪ್ರಭಾವವನ್ನು ಸೃಷ್ಟಿಸಲು ಬಯಸುವವರಿಗೆ ರಚಿಸಲಾಗಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ನ್ಯೂ ಫಾರೆವರ್ ಶ್ರೇಣಿಗೆ ಒಂದು ಹೊಸ ಹೊಸ ಸೇರ್ಪಡೆ, ಎನ್‌ಆರ್‌ಜಿ ಹ್ಯಾಚ್ ವಿಭಾಗದಲ್ಲಿ ಹೆಚ್ಚು ಎಸ್‍ಯುವಿ ತರಹದ ಗುಣಲಕ್ಷಣಗಳನ್ನು ತರುವ ಹೆಚ್ಚುತ್ತಿರುವ ಪ್ರವೃತ್ತಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ನೇಪಾಳದಲ್ಲಿರುವ ನಮ್ಮ ಗ್ರಾಹಕರಿಗೆ ಸ್ಪೋರ್ಟಿ, ಸಾಹಸಮಯ ಮತ್ತು ಸಂತೋಷಕರವಾದ ಸವಾರಿಯನ್ನು ನೀಡಲು ಎಲ್ಲಾ ಹೊಸ ಎನ್‌ಆರ್‌ಜಿ ಸಂಪೂರ್ಣವಾಗಿ ಸಜ್ಜಾಗಿದೆ. ಮತ್ತು ಉತ್ಪನ್ನ ಕುಟುಂಬಕ್ಕೆ ಈ ಹೊಸ ಸೇರ್ಪಡೆಗೆ ಮತ್ತೊಂದು ಯಶಸ್ವಿ ಸ್ವಾಗತಕ್ಕಾಗಿ ನಾವು ಆಶಿಸುತ್ತೇವೆ ಎಂದು ಹೇಳಿದರು.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಹಳೆಯ ಆವೃತ್ತಿಗಿಂತಲೂ ಆಕರ್ಷಕ ವಿನ್ಯಾಸ ಪಡೆದುಕೊಂಡಿದೆ. ಹೊರಭಾಗದ ಪ್ರಮುಖ ತಾಂತ್ರಿಕ ಅಂಶಗಳು ಬದಲಾವಣೆಗೊಂಡಿವೆ. ಈ ಹೊಸ ಕಾರಿನಲ್ಲಿ ಈ ಬಾರಿ 15-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್ಸ್ ಮತ್ತು ಬ್ಲ್ಯಾಕ್ ಔಟ್ ರೂಫ್ ಅನ್ನು ಹೊಂದಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಈ ಹೊಸ ಕಾರಿನ ಆಫ್ ರೋಡ್ ಸಾಮರ್ಥ್ಯ ಹೆಚ್ಚಿಸಲು ಡ್ಯುಯಲ್ ಪಾತ್ ಸಸ್ಷೆಷನ್ ನೀಡಲಾಗಿದ್ದು, ಈ ಮೂಲಕ ಹೊಸ ಕಾರಿನಲ್ಲಿ 181 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಜೊತೆಗೆ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ. ಟಿಯಾಗೋ ಎನ್‌ಆರ್‌ಜಿ ವರ್ಷನ್‌ನಲ್ಲಿ ಸ್ಟ್ಯಾಂಡರ್ಡ್ ಮಾದರಿಯೆಂತೆ ಹಲವಾರು ತಾಂತ್ರಿಕ ಅಂಶಗಳನ್ನು ಒಳಭಾಗದಲ್ಲೂ ಸೇರ್ಪಡೆಗೊಳಿಸಲಾಗಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಹೊಸ ಕಾರಿನಲ್ಲಿ ಚಾರ್ಕೊಲ್ ಬ್ಲ್ಯಾಕ್ ಇಂಟಿರಿಯರ್ ನೀಡಿರುವುದು ಮತ್ತಷ್ಟು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲಿದೆ. ಇದರಲ್ಲಿ ಚಾರ್ಕೊಲ್ ಬ್ಲ್ಯಾಕ್ ಇಂಟಿರಿಯರ್‌ನೊಂದಿಗೆ ಫ್ಯಾಬ್ರಿಕ್ ಸೀಟ್, ಡಿಕೊ ಸ್ಟಿಚಿಂಗ್, ಕಾಂಟ್ರಾಸ್ಟ್ ಎಸಿ ವೆಂಟ್ಸ್, 8-ಸ್ಪೀಕರ್ಸ್ ಹರ್ಮನ್ ಸೌಂಡ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಪುಶ್ ಸ್ಟಾರ್ಟ್ ಬಟನ್ ನೀಡಲಾಗಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.ತ್ರಿ ಸಿಲಿಂಡರ್ ಹೊಂದಿರುವ ರಿವೊಟ್ರಾನ್ 1.2-ಲೀಟರ್ ಪೆಟ್ರೋಲ್ ಎಂಜಿನ್ 84.5 ಬಿಎಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಉತ್ತಮ ಎಂಜಿನ್ ಪರ್ಫಾಮೆನ್ಸ್‌ನೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಇನ್ನು ಕಳೆದ ವರ್ಷದಿಂದ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳು ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಟಾಟಾದ ಜನಪ್ರಿಯ ಆಲ್‌‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಆಲ್‌‌ಟ್ರೊಜ್ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ. ಟಾಟಾ ಆಲ್‌‌ಟ್ರೊಜ್ ಒಂದು ಲಕ್ಷದ ಯುನಿಟ್ ಅನ್ನು ಪುಣೆಯಲ್ಲಿನ ಉತ್ಪಾದನಾ ಘಟಕದಿಂದ ಉತ್ಪಾದಿಸಿದ್ದಾರೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಕೊರೋನಾ ಸಂಕಷ್ಟದ ನಡುವೆ ಕೇವಲ 20 ತಿಂಗಳಲ್ಲಿ ಒಂದು ಲಕ್ಷ ಆಲ್‌‌ಟ್ರೊಜ್ ಕಾರು ಟಾಟಾ ಉತ್ಪಾದಿಸಿದೆ. 2022ರ ಹಣಕಾಸು ವರ್ಷದಲ್ಲಿ, ಟಾಟಾ ಆಲ್‌‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಅಗ್ರ ಎರಡು ಸ್ಥಾನಗಳಿಗೆ ಏರಿತು. 2021ರ ಮಾರ್ಚ್ ತಿಂಗಳಿನಲ್ಲಿ ಆಲ್‌‌ಟ್ರೊಜ್ 7,550 ಯೂನಿಟ್‌ಗಳು ಮಾರಾಟವಾಗಿತ್ತು. ಇದು ಪ್ರತಿ ತಿಂಗಳು ಸರಾಸರಿ 6,000 ಯೂನಿಟ್‌ಗಳು ಮಾರಾಟವಾಗುತ್ತಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಆಕರ್ಷಕ ವಿನ್ಯಾಸದ Tata Tiago NRG ಕಾರು

ಇನ್ನು ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಹೊಸ ಟಿಯಾಗೋ ಎನ್ಆರ್‌ಜಿ ಕಾರು ಮಾದರಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ಸ್ ನೀಡಲಾಗಿದೆ. ಇದರಲ್ಲಿ ಎಬಿಎಸ್, ಇಬಿಡಿ ಮತ್ತು ಡ್ಯುಯಲ್ ಏರ್‌ಬ್ಯಾಗ್ ಕಡ್ಡಾಯವಾಗಿ ನೀಡಲಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೊಲ್, ಡೇ ಅಂಡ್ ನೈಟ್ ಐಆರ್‌ವಿಎಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೀಟ್ ಬೆಲ್ಟ್ ಅಲರ್ಟ್ ಸೇರಿದಂತೆ ಹಲವಾರು ಫೀಚರ್ಸ್ ಗಳನ್ನು ಹೊಂದಿವೆ. ಈ ಹ್ಯಾಚ್‌ಬ್ಯಾಕ್ ಪ್ರಿಯರಿಗೆ ಹೊಸ ಕಾರಿನ ವಿನ್ಯಾಸ ಮತ್ತು ಫೀಚರ್ಸ್‌ಗಳು ಗಮನಸೆಳೆಯಲಿವೆ.

Most Read Articles

Kannada
English summary
Tata motors introduced new tata tiago nrg in nepal price details
Story first published: Wednesday, September 29, 2021, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X