ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಅನ್ನು ಪರಿಚಯಿಸುತ್ತಿದೆ. ಇದರ ಅಡಿಯಲ್ಲಿ ಕಂಪನಿಯು ಫ್ಲೀಟ್ ಆಪರೇಟರ್'ಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೆಡಾನ್ ಹಾಗೂ ಎಸ್‌ಯುವಿಗಳನ್ನು ಕಂಪನಿಯು ಪರಿಚಯಿಸುತ್ತಿದೆ.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಈ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ಟಾಟಾ ಮೋಟಾರ್ಸ್ ಹೇಳಿದೆ. ಎಕ್ಸ್‌ಪ್ರೆಸ್ ಬ್ರಾಂಡ್‌ನಡಿಯಲ್ಲಿ ಮೊದಲ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಈ ಕಾರು ಎಲೆಕ್ಟ್ರಿಕ್ ಸೆಡಾನ್ ಆಗಿದ್ದು, ಅದನ್ನು ಎಕ್ಸ್‌ಪ್ರೆಸ್ ಟಿ ಎಂದು ಕರೆಯಲಾಗುತ್ತದೆ. ಈ ಕಾರು ಕಾರ್ಪೊರೇಟ್ ಹಾಗೂ ಸರ್ಕಾರಿ ಗ್ರಾಹಕರಿಗೆ ಪ್ರತ್ಯೇಕವಾಗಿ ಲಭ್ಯವಾಗಲಿದೆ. ಈ ಎಲೆಕ್ಟ್ರಿಕ್ ಸೆಡಾನ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ ಹೆಚ್ಚು ವ್ಯಾಪ್ತಿ ಚಲಿಸುವುದರ ಜೊತೆಗೆ ಹೆಚ್ಚು ಸುರಕ್ಷತಾ ಫೀಚರ್'ಗಳನ್ನು ಹೊಂದಿದೆ.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಈ ಕಾರನ್ನು ಚಲಾಯಿಸುವ ವೆಚ್ಚವೂ ತೀರಾ ಕಡಿಮೆ ಇರಲಿದೆ. ಇದರಿಂದ ಫ್ಲೀಟ್ ಆಪರೇಟರ್‌ಗಳಿಗೆ ಲಾಭವೂ ಹೆಚ್ಚಲಿದೆ. ಟಾಪ್ ಎಂಡ್ ಮಾದರಿಗಳಲ್ಲಿ 90 ನಿಮಿಷಗಳಲ್ಲಿ 0 - 80% ವರೆಗೂ ಚಾರ್ಜ್ ಮಾಡಬಹುದು.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಇನ್ನು ಲೋ ಎಂಡ್ ಮಾದರಿಗಳಲ್ಲಿ 110 ನಿಮಿಷಗಳಲ್ಲಿ 0 - 80% ವರೆಗೂ ಚಾರ್ಜ್ ಮಾಡಬಹುದು. ಈ ಕಾರುಗಳಲ್ಲಿ 15 ಆಂಪ್ಸ್ ದೇಶೀಯ ಸಾಕೆಟ್‌ನಿಂದ ಚಾರ್ಜ್ ಮಾಡುವ ಸೌಲಭ್ಯ ನೀಡಲಾಗುವುದು.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಈ ಕಾರುಗಳಲ್ಲಿ ಸಿಂಗಲ್ ಸ್ಪೀಡ್ ಗೇರ್‌ಬಾಕ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್-ಇಬಿಡಿ, ಏರ್ ಕಂಡಿಷನಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗುತ್ತದೆ.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಈ ಕಾರುಗಳ ಇಂಟಿರಿಯರ್'ನಲ್ಲಿ ಪ್ರೀಮಿಯಂ ಬ್ಲ್ಯಾಕ್ ಅಪ್ ಹೊಲೆಸ್ಟರಿ ಹೊಂದಿರುವ ಬ್ಲೂ ಅಸೆಂಟ್ ನೀಡಲಾಗುವುದು. ಕಾರಿನ ಎಕ್ಸ್'ಟಿರಿಯರ್'ನಲ್ಲಿ ಹಲವು ಹೊಸ ವಿನ್ಯಾಸ ಅಂಶಗಳನ್ನು ಬಳಸಲಾಗುವುದು.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಈ ಕಾರುಗಳು ಟಾಟಾ ಮೋಟಾರ್ಸ್ ಕಂಪನಿಯ ಇತರ ಕಾರುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಲಿವೆ. ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷದ ಜೂನ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 43,704 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಈ ಮೂಲಕ ಮಾರಾಟ ಪ್ರಮಾಣವು 111% ನಷ್ಟು ಹೆಚ್ಚಾಗಿದೆ. ಪ್ರಯಾಣಿಕರ ವಾಹನ ವಿಭಾಗದಲ್ಲಿ ಕಂಪನಿಯು ಜೂನ್‌ ತಿಂಗಳಿನಲ್ಲಿ 24,110 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

2020ರ ಜೂನ್ ತಿಂಗಳಿನಲ್ಲಿ 11,419 ಯುನಿಟ್‌ ಕಾರುಗಳು ಮಾರಾಟವಾಗಿದ್ದವು. ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಕಾರು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸುತ್ತಿದೆ. ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಂಪನಿಗಳ ನಂತರ ಟಾಟಾ ಮೋಟಾರ್ಸ್ ದೇಶದಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಕಂಪನಿಯು ಕೆಲವು ವರ್ಷಗಳಿಂದ ತನ್ನ ಕಾರುಗಳನ್ನು ನಿರಂತರವಾಗಿ ಸುಧಾರಿಸುತ್ತಿದೆ. ಟಾಟಾ ಮೋಟಾರ್ಸ್ ಹ್ಯಾಚ್‌ಬ್ಯಾಕ್‌ ಸೆಗ್ ಮೆಂಟಿನ ಜೊತೆಗೆ ಎಸ್‌ಯುವಿ ಸೆಗ್ ಮೆಂಟಿನಲ್ಲಿಯೂ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಮಾಲಿನ್ಯ ಮುಕ್ತ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಿದೆ. ಇತ್ತೀಚೆಗಷ್ಟೇ ಕಂಪನಿಯು 2025ರ ವೇಳೆಗೆ 10 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು.

ಫ್ಲೀಟ್ ಗ್ರಾಹಕರಿಗಾಗಿ ಎಕ್ಸ್‌ಪ್ರೆಸ್ ಬ್ರಾಂಡ್ ಪರಿಚಯಿಸಿದ ಟಾಟಾ ಮೋಟಾರ್ಸ್

ಈಗ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಹಾಗೂ ಟಿಗೊರ್ ಎಂಬ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
English summary
Tata Motors introduces new brand for fleet customers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X