ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಟಾಟಾ ಮೋಟಾರ್ಸ್ (Tata Motors) ಕಂಪನಿಯು ಶೀಘ್ರದಲ್ಲೇ ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನಲ್ಲಿ ಫ್ರಾಂಚೈಸಿ ವಾಹನ ಸ್ಕ್ರ್ಯಾಪೇಜ್ ಕೇಂದ್ರವನ್ನು ಸ್ಥಾಪಿಸಲು ತೆರೆಯಲಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಗುಜರಾತ್ ಸರ್ಕಾರದ ಸಹಾಯದಿಂದ ಕಂಪನಿಯು ತನ್ನ ಮೊದಲ ಸ್ಕ್ರ್ಯಾಪಿಂಗ್ ಘಟಕವನ್ನು ಸ್ಥಾಪಿಸಲಿದೆ. ಕಂಪನಿಯು ಗುಜರಾತ್‌ನಲ್ಲಿ ಸ್ಕ್ರ್ಯಾಪಿಂಗ್ ಘಟಕಗಳನ್ನು ಸ್ಥಾಪಿಸಲು ಫ್ರಾಂಚೈಸಿಗಳನ್ನು ಆಹ್ವಾನಿಸಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಫ್ರಾಂಚೈಸಿಗಳನ್ನು ತೆಗೆದುಕೊಳ್ಳಲು ಬಯಸುವ ಪಾಲುದಾರರಿಗೆ ಕಂಪನಿಯು ಉದ್ದೇಶ ಪತ್ರಗಳನ್ನು (ಲೆಟರ್ ಆಫ್ ಇನ್ ಟೆಂಟ್ ) ಕಳುಹಿಸುತ್ತಿದೆ. ಅಹಮದಾಬಾದ್ ನಲ್ಲಿರುವ ಸ್ಕ್ರ್ಯಾಪೇಜ್ ಘಟಕವನ್ನು ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳಿಗಾಗಿ ಅಭಿವೃದ್ಧಿಪಡಿಸಲಾಗುವುದು. ಈ ಘಟಕವು ವಾರ್ಷಿಕ 36,000 ವಾಹನಗಳನ್ನು ಮರುಬಳಕೆ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಒಂದು ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 25,000 ಟ್ರಕ್‌ಗಳು ಹಾನಿಗೊಳಗಾಗುತ್ತವೆ. ಅವುಗಳನ್ನು ಸ್ಕ್ರ್ಯಾಪ್ ಮಾಡಲು ದೇಶದಲ್ಲಿ ಸಾಕಷ್ಟು ಸ್ಕ್ರ್ಯಾಪಿಂಗ್ ಘಟಕಗಳಿಲ್ಲ. ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ವಾಣಿಜ್ಯ ವಾಹನ ವಿಭಾಗದ ಅಧ್ಯಕ್ಷರಾದ ಗಿರೀಶ್ ವಾಘ್, ಟಾಟಾ ಮೋಟಾರ್ಸ್ ಯುರೋಪಿಯನ್ ತಜ್ಞರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಅವರ ಸಹಾಯದಿಂದ ಅಹಮದಾಬಾದ್‌ನಲ್ಲಿ ಸ್ಕ್ರ್ಯಾಪಿಂಗ್ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿದೆ. ನಾವು ಕಂಪನಿಯ ಫ್ರಾಂಚೈಸ್ ವ್ಯವಸ್ಥೆ ಮೂಲಕ ಸ್ಕ್ರ್ಯಾಪಿಂಗ್ ಘಟಕವನ್ನು ನಿಯೋಜಿಸುತ್ತಿದ್ದೇವೆ ಎಂದು ಹೇಳಿದರು. ವಾಣಿಜ್ಯ ವಾಹನಗಳ ಮಾರಾಟದ ದೃಷ್ಟಿಕೋನವನ್ನು ವಿವರಿಸಿದ ವಾಘ್, ಮೊದಲ ತ್ರೈಮಾಸಿಕದಲ್ಲಿ ಉದ್ಯಮವು 44% ನಷ್ಟು ಬೆಳೆದಿದೆ. ಕಂಪನಿಯು ಉದ್ಯಮಕ್ಕಿಂತ ಹೆಚ್ಚು ಬೆಳೆದಿದೆ ಎಂದು ಹೇಳಿದರು.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಈ ವರ್ಷ ಜಿಡಿಪಿ ಬೆಳವಣಿಗೆ ದರವು ಶೇಕಡಾ 9 - 10 ರಷ್ಟಿರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಆರ್‌ಬಿಐ ಸೂಚಿಸಿದಂತೆ, ಉದ್ಯಮವು ಹಿಂದಿನ ವರ್ಷಕ್ಕಿಂತ ಶೇಕಡಾ 20 ರಷ್ಟು ಬೆಳೆಯುವ ನಿರೀಕ್ಷೆಗಳಿವೆ ಎಂದು ಅವರು ಹೇಳಿದರು. ಪ್ರಮುಖ ವಾಣಿಜ್ಯ ವಾಹನ ವಿಭಾಗದಲ್ಲಿ ವಿವಿಧ ಮಾದರಿಗಳ ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಆವೃತ್ತಿಗಳನ್ನು ಸೇರಿದಂತೆ ಹಲವು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಕಂಪನಿ ಸಿದ್ದತೆ ನಡೆಸುತ್ತಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಜಾಗತಿಕ ಚಿಪ್ ಕೊರತೆಗೆ ಸಂಬಂಧಿಸಿದಂತೆ ಟಾಟಾ ಮೋಟಾರ್ಸ್ ದಿನನಿತ್ಯದ ಆಧಾರದ ಮೇಲೆ ಸಮಸ್ಯೆಯನ್ನು ನಿಭಾಯಿಸುತ್ತಿದ್ದು, ಇದು ಕಂಪನಿಯ ಸಣ್ಣ ವಾಣಿಜ್ಯ ವಾಹನಗಳು ಹಾಗೂ ಮಧ್ಯಂತರ ವಾಣಿಜ್ಯ ವಾಹನಗಳ ಉತ್ಪಾದನೆಯ ಮೇಲೆ ಇನ್ನೂ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು. ಅಂದ ಹಾಗೆ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಯಾಣಿಕ ಕಾರು ಗ್ರಾಹಕರಿಗೆ ಆಕರ್ಷಕ ಹಣಕಾಸು ಆಯ್ಕೆಗಳನ್ನು ಒದಗಿಸಲು ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಪಾಲುದಾರಿಕೆ ಮಾಡಿ ಕೊಂಡಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಈ ಒಪ್ಪಂದದ ಭಾಗವಾಗಿ, ಬ್ಯಾಂಕ್ ಆಫ್ ಇಂಡಿಯಾ (BOI) ಟಾಟಾ ಮೋಟಾರ್ಸ್ ಗ್ರಾಹಕರಿಗೆ 6.85% ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಿದೆ. ಈ ಯೋಜನೆಯು ವಾಹನದ ಒಟ್ಟು ವೆಚ್ಚದ 90% ವರೆಗೆ ಹಣಕಾಸು ಒದಗಿಸುತ್ತದೆ. 7 ವರ್ಷಗಳ ಮರುಪಾವತಿಯ ಅವಧಿಯಲ್ಲಿ ಪ್ರತಿ ಲಕ್ಷಕ್ಕೆ ರೂ. 1,502 ರಿಂದ ಆರಂಭವಾಗುವ ವಿಶೇಷ ಇಎಂಐ ಆಯ್ಕೆಯ ಪ್ರಯೋಜನವನ್ನು ಗ್ರಾಹಕರಿಗೆ ನೀಡಲಾಗುವುದು.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಇನ್ನು ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ 21 ಹೊಸ ವಾಣಿಜ್ಯ ವಾಹನಗಳನ್ನು ಪರಿಚಯಿಸಿದೆ. ಪ್ರಯಾಣಿಕರ ಸಾರಿಗೆ ಹಾಗೂ ಸರಕು ವಿಭಾಗದಲ್ಲಿ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಕಂಪನಿಯು ಈ ಹೊಸ ವಾಣಿಜ್ಯ ವಾಹನಗಳನ್ನು ಪರಿಚಯಿಸಿದೆ. ಟಾಟಾದ ಹೊಸ ಕಾರ್ಗೋ ವಾಹನಗಳಲ್ಲಿ ಲಘು, ಮಧ್ಯಮ ಹಾಗೂ ಭಾರೀ ತೂಕದ ವಾಹನಗಳು ಸೇರಿವೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಇದೇ ವೇಳೆ ಸಣ್ಣ ಹಾಗೂ ದೊಡ್ಡ ಬಸ್‌ಗಳ ಜೊತೆಗೆ ವಾಣಿಜ್ಯ ಪ್ರಯಾಣಿಕ ವಾಹನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಸಹ ಪರಿಚಯಿಸಲಾಗಿದೆ. ಟಾಟಾ ಮೋಟಾರ್ಸ್‌ನ ಹೊಸ ವಾಣಿಜ್ಯ ವಾಹನಗಳ ಬಗ್ಗೆ ಹೇಳುವುದಾದರೆ, ಪ್ರಯಾಣಿಕ ವಿಭಾಗದಲ್ಲಿ 5 ಲಘು ವಾಹನ, 7 ಮಧ್ಯಮ ಮತ್ತು ಭಾರೀ ವಾಹನ, 5 ಪಿಕಪ್ ವಾಹನ ಹಾಗೂ 5 ಪ್ರಯಾಣಿಕ ವಾಹನಗಳನ್ನು ಪರಿಚಯಿಸಲಾಗಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 33,926 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು 2020ರ ಅಕ್ಟೋಬರ್ ನಲ್ಲಿ ಕೇವಲ 23,600 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಟಾಟಾ ಮೋಟಾರ್ಸ್ ಕಂಪನಿಯ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 43.8% ನಷ್ಟು ಪ್ರಗತಿ ದಾಖಲಿಸಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ನೆಕ್ಸಾನ್ (Nexon) ಕಳೆದ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಟಾಟಾ ಮೋಟಾರ್ಸ್ ಕಂಪನಿಯ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೆಕ್ಸಾನ್ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಟಾಟಾ ನೆಕ್ಸಾನ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ Maruti Suzuki Vitara Brezza, Kia Sonet, Hyundai Venue, Mahindra XUV 300, Nissan Magnite, Renault Kiger ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಟಾಟಾ ನೆಕ್ಸಾನ್ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಟಾಟಾ ನೆಕ್ಸಾನ್ ಈ ಪ್ರಶಸ್ತಿ ಪಡೆದ ಮೊದಲ ಮೇಡ್ ಇನ್ ಇಂಡಿಯಾ ಕಾರು ಎಂಬುದು ಗಮನಾರ್ಹ. ಟಾಟಾ ಮೋಟಾರ್ಸ್ ಈ ವರ್ಷದ ಅಕ್ಟೋಬರ್‌ನಲ್ಲಿ 10,096 ಯುನಿಟ್ ನೆಕ್ಸಾನ್ ಕಾರುಗಳನ್ನು ಮಾರಾಟ ಮಾಡಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಈ ಪ್ರಮಾಣವು 2020ರ ಅಕ್ಟೋಬರ್ ತಿಂಗಳಿನಲ್ಲಿ ಕೇವಲ 6,888 ಯುನಿಟ್'ಗಳಾಗಿತ್ತು. ನೆಕ್ಸಾನ್ ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತ ಈ ವರ್ಷ 46.5% ನಷ್ಟು ಹೆಚ್ಚಳವಾಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಟಾಟಾ ಪಂಚ್ (Punch) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯನ್ನು ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಯಾದ ಮೊದಲ ತಿಂಗಳಲ್ಲೇ ಟಾಟಾ ಮೋಟಾರ್ಸ್ ಪಂಚ್ ಕಾರಿನ 8,453 ಯುನಿಟ್'ಗಳನ್ನು ಮಾರಾಟ ಮಾಡಿದೆ. ಟಾಟಾ ಪಂಚ್ ಕಡಿಮೆ ಬೆಲೆಯನ್ನು ಹೊಂದಿದೆ.

ಸ್ಕ್ರ್ಯಾಪೇಜ್ ಕೇಂದ್ರ ತೆರೆಯಲು ಫ್ರಾಂಚೈಸಿಗಳನ್ನು ಆಹ್ವಾನಿಸಿದ Tata Motors

ಈ ಕಾರು ಸಹ ನೆಕ್ಸಾನ್ ಕಾರಿನಂತೆ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಮುಂಬರುವ ದಿನಗಳಲ್ಲಿ ಪಂಚ್ ಅತಿ ಹೆಚ್ಚು ಮಾರಾಟವಾಗುವ ಟಾಟಾ ಕಾರು ಎಂಬ ಹೆಗ್ಗಳಿಕೆಯನ್ನು ಪಡೆಯುವ ಸಾಧ್ಯತೆಗಳಿವೆ. ಈ ಪಟ್ಟಿಯಲ್ಲಿ Tata Altroz ಕಾರು ಮೂರನೇ ಸ್ಥಾನದಲ್ಲಿದೆ.

Most Read Articles

Kannada
English summary
Tata motors invites franchisees to setup vehicle scrappage centers details
Story first published: Thursday, November 18, 2021, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X