ನ್ಯೂ ಜನರೇಷನ್ ಅಲ್ಟ್ರಾ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ನ್ಯೂ ಜನರೇಷನ್ ಅಲ್ಟ್ರಾ ಸೀರಿಸ್‌ನಲ್ಲಿರುವ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್‌ಗಳನ್ನು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಗೊಳಿಸಿದೆ.

ನ್ಯೂ ಜನರೇಷನ್ ಅಲ್ಟ್ರಾ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಬಿಡುಗಡೆಗೊಳಿಸಿ ಟಾಟಾ ಮೋಟಾರ್ಸ್

ಮಧ್ಯಮ ಮತ್ತು ಲಘು ವಾಣಿಜ್ಯ ಟ್ರಕ್ ಮಾದರಿಗಳಾಗಿರುವ ಅಲ್ಟ್ರಾ ಸೀರಿಸ್ ಟಿ.6, ಟಿ.7 ಮತ್ತು ಟಿ.9 ಆವೃತ್ತಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೇಡಿಕೆಯೆಂತೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಿದ್ದು, ಟಾಟಾ ಮೋಟಾರ್ಸ್ ಕಂಪನಿಯ ಹೊಸ 'ಪವರ್ ಆಫ್ 6' ತತ್ವದಡಿ ಹೊಸ ವಾಹನಗಳಿಗೆ ಗರಿಷ್ಠ ಕಾರ್ಯಕ್ಷಮತೆ, ಅರಾಮದಾಯಕ ಚಾಲನೆ, ಅನುಕೂಲ ಮತ್ತು ಸಂಪರ್ಕದ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ.

ನ್ಯೂ ಜನರೇಷನ್ ಅಲ್ಟ್ರಾ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಬಿಡುಗಡೆಗೊಳಿಸಿ ಟಾಟಾ ಮೋಟಾರ್ಸ್

'ಪವರ್ ಆಫ್ 6' ತತ್ವದಡಿ ಟಾಟಾ ಮೋಟಾರ್ಸ್ ಕಂಪನಿಯು ವಾಣಿಜ್ಯ ವಾಹನ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ತಲೆಮಾರಿನ ವೈಶಿಷ್ಯತೆಗಳೊಂದಿಗೆ ಮಾಲೀಕತ್ವ ವೆಚ್ಚಗಳನ್ನು ಪರಿಣಾಮಕಾರಿ ತಗ್ಗಿಸಿ ಲಾಭದಾಯಕ ಅಂಶಗಳನ್ನು ಹೆಚ್ಚಿಸುತ್ತಿದೆ.

ನ್ಯೂ ಜನರೇಷನ್ ಅಲ್ಟ್ರಾ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಬಿಡುಗಡೆಗೊಳಿಸಿ ಟಾಟಾ ಮೋಟಾರ್ಸ್

ಅಡ್ವಾನ್ಸ್ ಟೆಕ್ನಾಲಜಿಯೊಂದಿಗೆ ಅಭಿವೃದ್ದಿಪಡಿಸಲಾಗಿರುವ ಹೊಸ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಮಾದರಿಗಳು ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ವಾಹನ ದಟ್ಟಣೆಯಿಂದ ಕೂಡಿರುವ ನಗರಪ್ರದೇಶಗಳಲ್ಲೂ ಸುಲಭ ಸಂಚರಿಸಲು ಸಾಧ್ಯವಾಗುವಂತೆ ಅಭಿವೃದ್ದಿಪಡಿಸಲಾಗಿದೆ.

ನ್ಯೂ ಜನರೇಷನ್ ಅಲ್ಟ್ರಾ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಬಿಡುಗಡೆಗೊಳಿಸಿ ಟಾಟಾ ಮೋಟಾರ್ಸ್

ಲಾಜಿಸ್ಟಿಕ್ ಕಂಪನಿಗಳ ಬೇಡಿಕೆಯ ಅನುಸಾರವಾಗಿ ಹೊಸ ಟ್ರಕ್ ಮಾದರಿಗಳನ್ನು ಮಾಡ್ಯೂಲರ್ ಚಾರ್ಸಿಸ್ ಜೋಡಣೆ ಮಾಡಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆ ಅನುಸಾರವಾಗಿ ನಾಲ್ಕು ಟೈರ್ ಮತ್ತು ಆರು ಟೈರ್ ಮಾದರಿಯನ್ನು ಖರೀದಿಸಬಹುದಾಗಿದೆ. ಸರಕು ಸಾಗಾಣಿಕೆಯ ಡಕ್ ವ್ಯಾಪ್ತಿಯು ವಿವಿಧ ಟ್ರಕ್‌ಗಳಿಗೆ ಅನುಗುಣವಾಗಿ 10 ಅಡಿಯಿಂದ 20 ಅಡಿ ಉದ್ದ, 1,900ಎಂಎಂ ಅಗಲ ಹೊಂದಿದ್ದು, ಟ್ರಕ್‌ಗಳ ವಿನ್ಯಾಸವು ಈ ಹಿಂದಿಗಿಂತಲೂ ಸಾಕಷ್ಟು ಆಕರ್ಷಕವಾಗಿವೆ.

ನ್ಯೂ ಜನರೇಷನ್ ಅಲ್ಟ್ರಾ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಬಿಡುಗಡೆಗೊಳಿಸಿ ಟಾಟಾ ಮೋಟಾರ್ಸ್

ಹೊಸ ಟ್ರಕ್‌ಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ಏರ್ ಬ್ರೇಕ್, ಬೆಸ್ಟ್ ಇನ್ ಸೆಗ್ಮೆಂಟ್ ಎನ್‌ವಿಹೆಚ್ ಲೆವಲ್ಸ್, ಮ್ಯೂಜಿಕ್ ಸಿಸ್ಟಂ, ಯುಎಸ್‌ಬಿ ಚಾರ್ಜಿಂಗ್ ಫೋರ್ಟ್, ಸ್ಪಷ್ಟ ಗೋಚರ ಹೊಂದಿರುವ ಹೆಡ್‌ಲ್ಯಾಂಪ್ಸ್, ಎಲ್ಇಡಿ ಟೈಲ್ ಲ್ಯಾಂಪ್ಸ್ ಜೋಡಿಸಲಾಗಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ನ್ಯೂ ಜನರೇಷನ್ ಅಲ್ಟ್ರಾ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಬಿಡುಗಡೆಗೊಳಿಸಿ ಟಾಟಾ ಮೋಟಾರ್ಸ್

ಇದರೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ವಾಣಿಜ್ಯ ವಾಹನಗಳ ನಿರ್ವಹಣಾ ಕಂಪನಿಗಳಿಗೆ ನೇರವಾಗಲು ಕನೆಕ್ವೆಡ್ ಫೀಚರ್ಸ್ ನೀಡಲಿದ್ದು, ಕನೆಕ್ಟೆಡ್ ಫೀಚರ್ಸ್‌ಗಳು ವಾಣಿಜ್ಯ ವಾಹನಗಳ ನಿರ್ವಹಣೆಯನ್ನು ಮತ್ತಷ್ಟು ಸರಳಗೊಳಿಸುತ್ತದೆ.

ನ್ಯೂ ಜನರೇಷನ್ ಅಲ್ಟ್ರಾ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಬಿಡುಗಡೆಗೊಳಿಸಿ ಟಾಟಾ ಮೋಟಾರ್ಸ್

ಎಂಜಿನ್ ಮತ್ತು ನಿರ್ವಹಣೆ

ಟಾಟಾ ಕಂಪನಿಯು ಹೊಸ ಟ್ರಕ್‌ ಮಾದರಿಗಳಲ್ಲಿ ಬಿಎಸ್-6 ವೈಶಿಷ್ಟ್ಯತೆಯ ನಾಲ್ಕು ಸಿಲಿಂಡರ್‌ ಪ್ರೇರಣೆಯ 4ಎಸ್‌ಪಿಸಿಆರ್ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 100-ಬಿಎಚ್‌ಪಿ ಮತ್ತು 300-ಎನ್ಎಂ ಉತ್ಪಾದನಾ ಶಕ್ತಿಯೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನ್ಯೂ ಜನರೇಷನ್ ಅಲ್ಟ್ರಾ ಟಿ.6, ಟಿ.7 ಮತ್ತು ಟಿ.9 ಸ್ಮಾರ್ಟ್ ಟ್ರಕ್ ಬಿಡುಗಡೆಗೊಳಿಸಿ ಟಾಟಾ ಮೋಟಾರ್ಸ್

ಉತ್ತಮ ಇಂಧನ ದಕ್ಷತೆಯಿಂದಾಗಿ ನಿರ್ವಹಣಾ ವೆಚ್ಚಗಳು ಸಾಕಷ್ಟು ಕಡಿತಗೊಳ್ಳಲಿದ್ದು, ಟಾಟಾ ಕಂಪನಿಯು ಹೊಸ ಟ್ರಕ್‌ಗಳ ಮೇಲೆ 3 ವರ್ಷ ಅಥವಾ 3 ಲಕ್ಷ ಕಿ.ಮೀ ಮೇಲೆ ವಾರಂಟಿ ಘೋಷಣೆ ಮಾಡಿದೆ. ಹಾಗೆಯೇ ವಾಣಿಜ್ಯ ವಾಹನಗಳಿಗೆ ತುರ್ತು ಸೇವೆಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ಉದ್ದೇಶದೊಂದಿಗೆ ಸಂಪೂರ್ಣ ಸೇವಾ 2.0 ಮತ್ತು ಟಾಟಾ ಸಮರ್ಥ್ ಪ್ಯಾಕೇಜ್‌ಗಳನ್ನು ಸಹ ನೀಡುತ್ತಿದೆ.

Most Read Articles

Kannada
English summary
Tata Motors Launched New Ultra Sleek T.Series Range Of Trucks. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X