ಕೋವಿಡ್ ಲಸಿಕೆ ಸಾಗಾಣಿಕೆಗಾಗಿ ವಿಶೇಷ ಟ್ರಕ್ ಅಭಿವೃದ್ದಿಪಡಿಸಿದ ಟಾಟಾ ಮೋಟಾರ್ಸ್
ಕೋವಿಡ್ 19 ವಿರುದ್ದದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಮತ್ತೊಮ್ಮೆ ಲಸಿಕೆ ವಿತರಣೆಯಲ್ಲಿ ಮಹತ್ವದ ಪಾತ್ರವಹಿಸಲು ಸಿದ್ದವಾಗಿದ್ದು, ಲಸಿಕೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವುದಕ್ಕಾಗಿಯೇ ವಿಶೇಷ ಟ್ರಕ್ ಸಿದ್ದಪಡಿಸಿದೆ.

ಕರೋನಾ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ದೇಶಾದ್ಯಂತ ವ್ಯಾಕ್ಸಿನ್ ವಿತರಣೆಗೆ ಚಾಲನೆ ನೀಡಲಾಗಿದ್ದು, ಸುರಕ್ಷಿತವಾಗಿ ಲಸಿಕೆಯನ್ನು ಸಾಗಾಣಿಕೆ ಮಾಡುವುದು ಸಾಕಷ್ಟು ಸವಾಲುಗಳಿಂದ ಕೂಡಿದೆ. ಲಸಿಕೆಯನ್ನು ಸುರಕ್ಷಿತವಾಗಿ ಸಾಗಿಸಲು ಅಗತ್ಯ ಸೌಲಭ್ಯಗಳನ್ನು ಹೊಂದಿರುವ ವಾಹನಗಳ ಬಳಕೆಯು ಅಗತ್ಯವಾಗಿದ್ದು, ಪ್ರತ್ಯೇಕವಾಗಿ ವ್ಯಾಕ್ಸಿನ್ ಸಾಗಾಣಿಕೆಗಾಗಿಯೇ ವಿವಿಧ ಆಟೋ ಕಂಪನಿಯು ವಿಶೇಷ ಟ್ರಕ್‌ಗಳನ್ನು ಸಿದ್ದಪಡಿಸುತ್ತಿವೆ.

ಟಾಟಾ ಮೋಟಾರ್ಸ್ ಕಂಪನಿಯು ಸಹ ಕೋವಿಡ್ ವ್ಯಾಕ್ಸಿನ್ ಸುರಕ್ಷಿತ ಸಾಗಾಣಿಕೆಗೆ ಅನುಕೂಲಕರವಾಗುವಂತೆ ಹೊಸ ಟ್ರಕ್‌ಗಳನ್ನು ಸಿದ್ದಪಡಿಸಿದ್ದು, ಹೊಸ ಟ್ರಕ್ ಮಾದರಿಗಳು ವ್ಯಾಕ್ಸಿನ್ ಸಾಗಾಣಿಕೆಗಾಗಿಯೇ ವಿಶೇಷ ಸೌಲಭ್ಯಗಳನ್ನು ಒಳಗೊಂಡಿವೆ.

ಕೋವಿಡ್ ಲಸಿಕೆಯನ್ನು ಸುರಕ್ಷಿತವಾಗಿ ಸಾಗಿಸಲು ಅಗತ್ಯ ಸೌಲಭ್ಯ ಹೊಂದಿರುವ ಹೊಸ ಟ್ರಕ್ ಮಾದರಿಗಳನ್ನು ಅಭಿವೃದ್ದಿಪಡಿಸಲು ಪ್ರಮುಖ ಮಾರ್ಗಸೂಚಿಗಳನ್ನು ನೀಡಿದ್ದ ಕೇಂದ್ರ ಸರ್ಕಾರದ ಸಲಹೆಯೆಂತೆ ವಿಶೇಷ ಟ್ರಕ್‌ಗಳನ್ನು ನಿರ್ಮಾಣ ಮಾಡಲಾಗಿದೆ.

ಲಸಿಕೆ ಸಾಗಾಣಿಕೆಯ ಸಮಯದಲ್ಲಿ ಸೂಕ್ತವಾದ ತಾಪಮಾನವನ್ನು ಕಾಯ್ದುಕೊಳ್ಳುವ ಅವಶ್ಯವಿದ್ದು, ನಿಗದಿತ ತಾಪಮಾನವನ್ನು ಕಾಪಾಡಿಕೊಳ್ಳಲು ಹೊಸದಾಗಿ ಅಭಿವೃದ್ಧಿಪಡಿಸಿದ ಶೈತ್ಯೀಕರಣ ಘಟಕಗಳನ್ನು ಲಸಿಕೆ ವಿತರಣಾ ಟ್ರಕ್‌ಗಳಲ್ಲಿ ಜೋಡಣೆ ಮಾಡಲಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಲಸಿಕೆ ವಿತರಣೆಗಾಗಿ ಮತ್ತಷ್ಟು ಸಹಕಾರಿಯಾಗುವ ಉದ್ದೇಶದಿಂದ ಮೂರು ಮಾದರಿಯ ಟ್ರಕ್‌ಗಳನ್ನು ಅಭಿವೃದ್ದಿಗೊಳಿಸಿದ್ದು, ಲಸಿಕೆ ಸಾಗಾಣಿಕೆಯಲ್ಲಿ ಹೊಸ ಟ್ರಕ್‌ಗಳು ಸಾಕಷ್ಟು ಅನೂಕರವಾಗಲಿವೆ.

ಅಂತರ್‌ರಾಜ್ಯಗಳ ನಡುವೆ ಲಸಿಕೆ ಸಾಗಾಣಿಕೆ ಹೆವಿ ಡ್ಯೂಟಿ ಟ್ರಕ್‌ಗಳನ್ನು, ಅಂತರ್‌ಜಿಲ್ಲೆಗಳ ನಡುವಿನ ಲಸಿಕೆ ಸಾಗಾಣಿಕೆಗಾಗಿ ಮಧ್ಯಮ ಗಾತ್ರದ ಟ್ರಕ್‌ಗಳನ್ನು ಮತ್ತು ನಗರಪ್ರದೇಶಗಳಲ್ಲಿ ಸುಲಭವಾಗಿ ಸಾಗಿಸಲು ಅನುಕೂಲಕವಾಗುವಂತೆ ಲೈಟ್‌ವೆಟ್ ಟ್ರಕ್‌ಗಳನ್ನು ಹೊಸ ಮಾರ್ಗಸೂಚಿ ಅನುಸಾರವಾಗಿ ಸಿದ್ದಪಡಿಸಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಹೊಸ ಟ್ರಕ್‌ಗಳ ಕಂಟೇನರ್‌ಗಳಲ್ಲಿ ವಿಶೇಷವಾದ ಗ್ಲಾಸ್ ರೀನ್‌ಫೋರ್ಸ್ಡ್ ಪ್ಲಾಸ್ಟಿಕ್ ಮತ್ತು ಎಕ್ಸ್‌ಪಿಎಸ್ ಫೋಮ್ ಅನ್ನು ಬಳಕೆ ಮಾಡಲಾಗಿದ್ದು, ಹೊಸ ಸೌಲಭ್ಯಗಳು ಲಸಿಕೆಯನ್ನು ಗರಿಷ್ಠ ಸುರಕ್ಷತೆಯೊಂದಿಗೆ ಸಾಗಾಣಿಕೆ ಮಾಡಲು ಅನುಕೂಲಕವಾಗಿದೆ.

ಜೊತೆಗೆ ಕಂಟೇನರ್‌ಗಳನ್ನು ನಿರ್ವಹಣೆಗಾಗಿ ಪ್ರತ್ಯೇಕ ತಂಡವನ್ನು ಹೊಂದಿರುವ ಟಾಟಾ ಕಂಪನಿಯು ಲಸಿಕೆ ಸಾಗಾಣಿಕೆ ವೇಳೆ ಯಾವುದೇ ತೊಂದರೆಯಾಗದಂತೆ ಸಾಕಷ್ಟು ಮುನ್ನೆಚ್ಚೆರಿಕೆ ವಹಿಸಲಿದ್ದು, ಕನೆಕ್ಟೆಡ್ ಫೀಚರ್ಸ್‌ಗಳ ಮೂಲಕ ಲಸಿಕೆ ಸಾಗಾಣಿಕೆಯ ಮೇಲೆ ನಿಗಾಯಿಡಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇನ್ನು ದೇಶಾದ್ಯಂತ ಸದ್ಯ ಮೇಡ್ ಇನ್ ಇಂಡಿಯಾ ನಿರ್ಮಾಣದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದ್ದು, ಇದುವರೆಗೆ ಭಾರತದಲ್ಲಿ ಸುಮಾರು 14 ಲಕ್ಷ ಜನ ಫ್ರಂಟ್ ವಾರಿರ್ಯಸ್‌ಗೆ ಲಸಿಕೆ ನೀಡಲಾಗಿದೆ. ಶೀಘ್ರದಲ್ಲೇ ಎರಡನೇ ಹಂತದ ಲಸಿಕೆ ವಿತರಣೆಗೆ ಸಿದ್ದತೆ ನಡೆಸಲಾಗುತ್ತಿದ್ದು, ಎರಡನೇ ಹಂತದ ಯಶಸ್ವಿಗಾಗಿ ಸಾಕಷ್ಟು ತಯಾರಿಗಳನ್ನು ನಡೆಸಲಾಗುತ್ತಿದೆ.


Click it and Unblock the Notifications