ಲಾಕ್‌ಡೌನ್ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಂಡು ಟಾಟಾ ಮೋಟಾರ್ಸ್
ಕಳೆದ ತಿಂಗಳು ಕೋವಿಡ್ 2ನೇ ಅಲೆಯ ಪರಿಣಾಮ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ ಪರಿಣಾಮ ಆಟೋ ಉದ್ಯಮವು ಸಹ ಹಿನ್ನಡೆ ಅನುಭವಿಸಿದೆ. ಬಹುತೇಕ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಕುಸಿತ ಕಂಡಿದ್ದರೂ ಪ್ರಮುಖ ಕಾರುಗಳ ಮಾರಾಟದಲ್ಲಿ ತುಸು ಸ್ಥಿರತೆ ಕಾಯ್ದುಕೊಂಡಿದೆ.

ಮೇ ಅವಧಿಯಲ್ಲಿ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ವಿಧಿಸಿದ್ದರೂ ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಮಾರಾಟ ಪ್ರಕ್ರಿಯೆ ಕೈಗೊಂಡ ಟಾಟಾ ಮೋಟಾರ್ಸ್ ಕಂಪನಿಯು ಒಟ್ಟು 24,552 ವಾಹನಗಳ ಮಾರಾಟ ಮಾಡಿದ್ದು, ಕಳೆದ ವರ್ಷದ ಮೇ ಅವಧಿಯಲ್ಲಿನ ವಾಹನ ಮಾರಾಟಕ್ಕೆ ಹೊಲಿಕೆ ಮಾಡಿದರೆ ಶೇ. 456 ಹೆಚ್ಚಳವಾಗುತ್ತದೆ. ಆದರೆ ಕಳೆದ ವರ್ಷವು ಲಾಕ್‌ಡೌನ್ ಮತ್ತು ವಾಹನ ಉತ್ಪಾದನೆ ಸ್ಥಗಿತದಿಂದ ವಾಹನ ಮಾರಾಟ ವಿರಳವಾಗಿತ್ತು. ಹೀಗಾಗಿ ಈ ವರ್ಷದ ಏಪ್ರಿಲ್ ಅವಧಿಯ ಕಾರು ಮಾರಾಟಕ್ಕೆ ಹೋಲಿಕೆ ಮಾಡಿದರೆ ಮೇ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡಿದೆ.

ಪ್ಯಾಸೆಂಜರ್ ಕಾರುಗಳ ಮಾರಾಟ ವಿಭಾಗದಲ್ಲೂ ಸಹ ಕಳೆದ ಏಪ್ರಿಲ್ ಅವಧಿಗಿಂತ ಮೇ ಅವಧಿಯಲ್ಲಿ ಶೇ.40 ರಷ್ಟು ಕುಸಿತ ಕಂಡಿದ್ದು, ಮೇ ಅವಧಿಯಲ್ಲಿ ಟಾಟಾ ಕಂಪನಿಯು ಒಟ್ಟು 15,185 ಕಾರುಗಳನ್ನು ಮಾರಾಟ ಮಾಡಿದೆ.

ಕೋವಿಡ್ ಆತಂಕದಿಂದ ಆಟೋ ಉದ್ಯಮವು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಇದರ ನಡುವೆ ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ವಾಹನ ಖರೀದಿಗೆ ಆಸಕ್ತಿ ತೋರುವುದರ ಜೊತೆಗೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿರುವುದು ಆಟೋ ಕಂಪನಿಗಳಿಗೆ ಉತ್ತಮ ಆಯ್ಕೆಯಾಗುತ್ತಿದೆ.

ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿರುತ್ತದೆ.

ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದ್ದು, ಇದೀಗ ಟಾಟಾ ಕಂಪನಿಯು ಸಹ ಶೋರೂಂಗಳು ಆರಂಭವಿಲ್ಲವಾದರೂ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಒಂದಿಷ್ಟು ಬೇಡಿಕೆ ಪಡೆದುಕೊಂಡಿದೆ.
MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಹೊಸ ವಾಹನ ಖರೀದಿಗಾಗಿ ಬಹುತೇಕ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಹೊಸ ಪ್ರಯತ್ನವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಸಾಕಷ್ಟು ಪ್ರಯೋಜಕಾರಿಯಾಗಿದೆ.

ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.
MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಕೋವಿಡ್ 19 ಹರಡುವಿಕೆಗೂ ಮೊದಲೇ ಹಲವಾರು ವಿವಿಧ ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್ ತೆರೆದಿದ್ದರೂ ಸಹ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕರೋನಾ ವೈರಸ್ ಹೆಚ್ಚಳವಾಗುತ್ತಿದ್ದಂತೆ ಸಾಮಾಜಿಕ ಅಂತರ ಅಗತ್ಯವಾಯಿತೋ ಆಗಿನಿಂದ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಳವಾಗುತ್ತಿದೆ.


Click it and Unblock the Notifications