Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

ಅಮೆರಿಕಾದಲ್ಲಿ ಕೇಂದ್ರ ಕಚೇರಿ ಹೊಂದಿರುವ Ford ಕಂಪನಿಯು 1990 ರ ದಶಕದಿಂದಲೂ ದೇಶಿಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿತ್ತು. ಭಾರತದಲ್ಲಿರುವ ವಿದೇಶಿ ಆಟೋಮೊಬೈಲ್ ಕಂಪನಿಗಳಲ್ಲಿ Ford ಕಂಪನಿಯು ಸಹ ಮುಂಚೂಣಿಯಲ್ಲಿತ್ತು. ಕೆಲವು ವರದಿಗಳ ಪ್ರಕಾರ Ford ಕಂಪನಿಯು ಕಳೆದ 10 ವರ್ಷಗಳಿಂದ ಭಾರತದಲ್ಲಿ ಸುಮಾರು 2 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

Ford ಕಂಪನಿಯು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕಾ ಮೂಲದ ಖ್ಯಾತ ಕಾರು ತಯಾರಕ ಕಂಪನಿಯಾದ Ford ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಕಳೆದ ತಿಂಗಳು ಪ್ರಕಟಿಸಿತ್ತು. ಕಂಪನಿಯು ದೇಶದ ಜನಪ್ರಿಯ ಕಾರು ಮಾದರಿಗಳಾದ Ecosport, Figo, Aspire, Endeavour ಸೇರಿದಂತೆ ಎಲ್ಲಾ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

Ford ಕಂಪನಿಯ ಈ ನಿರ್ಧಾರವು ಭಾರತದ Ford ಗ್ರಾಹಕರಿಗೆ ಆಘಾತವನ್ನುಂಟು ಮಾಡಿದೆ. ಅದರಲ್ಲೂ Ford ಕಂಪನಿಯ ಉದ್ಯೋಗಿಗಳು ಅತಂತ್ರಕ್ಕೆ ಸಿಲುಕಿದ್ದು,ಅವರ ಭವಿಷ್ಯ ಪ್ರಶ್ನಾರ್ಹವಾಗಿದೆ. ಈ ಸನ್ನಿವೇಶದಲ್ಲಿ ಭಾರತೀಯ ವಾಹನ ಉದ್ಯಮದ ದೈತ್ಯ ಕಂಪನಿಗಳಲ್ಲಿ ಒಂದಾದ Tata Motors, ಚೆನ್ನೈನಲ್ಲಿರುವ Ford ಕಂಪನಿಯ ಉತ್ಪಾದನಾ ಘಟಕವನ್ನು ಖರೀದಿಸಲಿದೆ ಎಂದು ವರದಿಯಾಗಿದೆ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

Ford ಕಂಪನಿಯು 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ಚೆನ್ನೈ ಹಾಗೂ ಗುಜರಾತ್'ನ ಸನಂದ್ ನಲ್ಲಿ ಉತ್ಪಾದನಾ ಘಟಕಗಳನ್ನು ತೆರೆದಿತ್ತು. ಈಗ Tata Motors ಕಂಪನಿಯು ಚೆನ್ನೈನಲ್ಲಿರುವ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಟಾಟಾ ಸಮೂಹದ ಅಧ್ಯಕ್ಷರು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

ಫೋರ್ಡ್ ಘಟಕಗಳ ಸ್ವಾಧೀನದ ಬಗ್ಗೆ ಭೇಟಿಯ ವೇಳೆ ಮಾತುಕತೆ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ಭೇಟಿಯ ಸಂದರ್ಭದಲ್ಲಿ ತಮಿಳುನಾಡಿನ ಗ್ರಾಮೀಣಾಭಿವೃದ್ಧಿ ಹಾಗೂ ಕೈಗಾರಿಕಾ ಸಚಿವರಾದ ಡಿ.ಎಂ.ಅನ್ಪರಸನ್ ಹಾಗೂ ಮುಖ್ಯ ಕಾರ್ಯದರ್ಶಿ ಈರಾಯನ್ಪು ಭಾಗವಹಿಸಿದ್ದರು. ಮಾತುಕತೆಯ ಪ್ರಮುಖ ಅಂಶಗಳ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

ಅಲ್ಲದೆ ಮಾತುಕತೆಯ ಫಲಶ್ರುತಿ ಏನು ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. Ford ಕಂಪನಿಯು ಭಾರತದಲ್ಲಿನ ತನ್ನ ಎಲ್ಲಾ ವ್ಯಾಪಾರ ಹಾಗೂ ವಹಿವಾಟುಗಳನ್ನು ಜೊತೆಗೆ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಿದೆ. ಇದೇ ವೇಳೆ ಚೆನ್ನೈ ಉತ್ಪಾದನಾ ಘಟಕವನ್ನು ವಿದೇಶಗಳಿಗೆ ರಫ್ತು ಮಾಡುವ ಆಟೋಮೋಟಿವ್ ಎಂಜಿನ್ ಉತ್ಪಾದನೆಗೆ ಬಳಸುವುದಾಗಿ ತಿಳಿಸಿದೆ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

Ford ಕಂಪನಿಯು ಭಾರತದಿಂದ ಹೊರ ಹೋಗಲು ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಕಾಣದೇ ಕುಸಿತ ಅನುಭವಿಸಿರುವುದೇ ಪ್ರಮುಖ ಕಾರಣವೆಂದು ಹೇಳಲಾಗಿದೆ. ಆರಂಭದಲ್ಲಿ ಲಕ್ಷಾಂತರ ಯುನಿಟ್ ವಾಹನಗಳನ್ನು ಉತ್ಪಾದಿಸುತ್ತಿದ್ದ ಕಂಪನಿಯು ಇತ್ತೀಚೆಗೆ ಕೇವಲ ಸಾವಿರಾರು ಯುನಿಟ್ ವಾಹನಗಳನ್ನು ಮಾತ್ರ ಉತ್ಪಾದಿಸುತ್ತಿತ್ತು. ಅವುಗಳಲ್ಲಿ ಹೆಚ್ಚಿನ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

ಇನ್ನು Ford ಡೀಲರ್‌ಗಳು ಭಾರತದ ಪ್ರಮುಖ ಬ್ಯಾಂಕ್‌ಗಳಿಂದ ರೂ. 150 ಕೋಟಿಗಳವರೆಗೆ ಸಾಲ ಪಡೆದಿದ್ದಾರೆ. ಈಗ ಅದನ್ನು ಹೇಗೆ ಮರು ಪಾವತಿಸುವುದು ಎಂಬ ಚಿಂತೆ ಅವರನ್ನು ಕಾಡುತ್ತಿದೆ. 1,000 ಕಾರುಗಳಲ್ಲದೇ ಕೆಲವು ಡೆಮೊ ಕಾರುಗಳು ಸಹ ಫೋರ್ಡ್ ಡೀಲರ್‌ಶಿಪ್‌ಗಳ ಬಳಿಯಿವೆ. ಹಲವಾರು ಕೊಡುಗೆ ಹಾಗೂ ರಿಯಾಯಿತಿಗಳನ್ನು ನೀಡುತ್ತಿದ್ದರೂ ಯಾರೂ ಸಹ ಈ ಕಾರುಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

ಹಳೆಯ Ford ವಿತರಕರು ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯಿಂದ ಪಾರಾಗಬಹುದು. ಆದರೆ ಹೊಸದಾಗಿ Ford ಡೀಲರ್ ಶಿಪ್ ಪಡೆದವರು ಹೆಚ್ಚು ಪರಿಣಾಮ ಅನುಭವಿಸ ಬೇಕಾಗುತ್ತದೆ. Ford ಕಂಪನಿಯು ಕೊನೆಯದಾಗಿ 5 ತಿಂಗಳ ಹಿಂದೆ ಹೊಸ ವಿತರಕರನ್ನು ನೇಮಿಸಿತು. ಅವರು ದೊಡ್ಡ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಫಾಡಾ ಎಚ್ಚರಿಕೆ ನೀಡಿದೆ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

ಮಾರಾಟದಲ್ಲಿ ಕುಸಿತ ಅನುಭವಿಸಿದ ಕಾರಣ ಕಂಪನಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಈ ಹಿನ್ನೆಲೆಯಲ್ಲಿ ಕಂಪನಿಯು ಭಾರತವನ್ನು ಸಂಪೂರ್ಣವಾಗಿ ತೊರೆಯುವ ನಿರ್ಧಾರವನ್ನು ತೆಗೆದು ಕೊಂಡಿತು. ತಮಿಳುನಾಡು ಮುಖ್ಯಮಂತ್ರಿಗಳು ಮಾಡಿದ ಮನವಿಯ ಮೇರೆಗೆ Ford ಘಟಕವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು Tata Motors ಆರಂಭಿಸಿದೆ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

ತಮಿಳುನಾಡಿನಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಅಲ್ಲಿನ ರಾಜ್ಯ ಸರ್ಕಾರವು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. Tata Motors ಕಂಪನಿಯು ಸದ್ಯಕ್ಕೆ ತನ್ನ Punch ಎಂಬ ಹೊಸ ಮೈಕ್ರೋ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಕಂಪನಿಯು ಇತ್ತೀಚಿಗಷ್ಟೇ ಈ ಮೈಕ್ರೋ ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಗ್ರಾಹಕರಲ್ಲಿ ಈ ಮೈಕ್ರೋ ಎಸ್‌ಯುವಿಯ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Ford ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ Tata Motors

Punch ಮೈಕ್ರೋ ಎಸ್‌ಯುವಿಯು ದೀಪಾವಳಿ ಹಬ್ಬಕ್ಕೆ ಮುನ್ನ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಭಾರತದಲ್ಲಿ ಈಗಾಗಲೇ Punch ಮೈಕ್ರೋ ಎಸ್‌ಯುವಿಯ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ. ಗ್ರಾಹಕರು ರೂ. 21,000 ಪಾವತಿಸಿ ಈ ಮೈಕ್ರೋ ಎಸ್‌ಯುವಿಯನ್ನು ಪ್ರೀ ಬುಕ್ಕಿಂಗ್ ಮಾಡಬಹುದು. ಈ ಕಾರು ಸಹ ಕಂಪನಿಯ ಇತರ ಕಾರುಗಳಂತೆ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆದು ಜನಪ್ರಿಯವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Tata motors planning to acquire ford company s chennai unit details
Story first published: Thursday, October 7, 2021, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X