ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ದೇಶಿಯ ಮಾರುಕಟ್ಟೆಯಲ್ಲಿನ ಹೊಸ ವಾಹನಗಳ ಮಾರಾಟವು ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್(Tata Motors) ಕಂಪನಿಯು ಶೇ.39 ರಷ್ಟು ಬೆಳವಣಿಗೆಯೊಂದಿಗೆ 32,339 ಯನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಟಾಟಾ ಮೋಟಾರ್ಸ್ ಕಂಪನಿಯು ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಕಳೆದ ಕೆಲ ತಿಂಗಳಿನಿಂದ ಹೊಸ ಕಾರುಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39 ರಷ್ಟು ಬೆಳವಣಿಯೊಂದಿಗೆ ಪ್ರಮುಖ ಕಾರು ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಅಕ್ಟೋಬರ್ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 32,339 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಾರಾಟಗೊಂಡಿದ್ದ 24,652 ಯುನಿಟ್‌ಗಿಂತಲೂ ಶೇ.39 ರಷ್ಟು ಹೆಚ್ಚಳವಾಗಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

2021ರ ಅಕ್ಟೋಬರ್ ಅವಧಿಯಲ್ಲಿನ ಒಟ್ಟು ವಾಹನ ಮಾರಾಟದಲ್ಲಿ ಶೇ.31 ರಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಮೋಟಾರ್ಸ್ ಕಂಪನಿಯು 65,151 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಾರಾಟಗೊಂಡಿದ್ದ 49,669 ಯನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಕಳೆದ ಕೆಲ ತಿಂಗಳಿನಿಂದ ಟಾಟಾ ಕಾರುಗಳಿಗೆ ಉತ್ತಮ ಬೇಡಿಕೆ ದಾಖಲಾಗುತ್ತಿರುವುದೇ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಪ್ರಯಾಣಿಕ ಕಾರು ಮಾರಾಟದಲ್ಲಿ ಮಾತ್ರವಲ್ಲದೆ ಟಾಟಾ ಕಂಪನಿಯು ಈ ಬಾರಿ ವಾಣಿಜ್ಯ ವಾಹನ ಮಾರಾಟದಲ್ಲೂ ಶೇ.18 ರಷ್ಟು ಮುನ್ನಡೆ ಸಾಧಿಸಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಕೋವಿಡ್ 2ನೇ ಅಲೆ ಪರಿಣಾಮ ತಗ್ಗಿದ್ದ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಪಂಚ್ ಮೈಕ್ರೊ ಎಸ್‌ಯುವಿ ಸಹ ಟಾಟಾ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ತಂದುಕೊಟ್ಟಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಕೋವಿಡ್ ಪರಿಣಾಮ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಏರಿಳಿತ ಕಂಡುಬಂದರೂ ಆಟೋ ಉತ್ಪಾದನಾ ಕ್ಷೇತ್ರ ಮಾತ್ರ ಗರಿಷ್ಠ ಮಟ್ಟದ ಬೆಳವಣಿಗೆ ಸಾಧಿಸುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಟಾಟಾ ಮೋಟಾರ್ಸ್ ಕಂಪನಿಯು ಸಹ ಹೊಸ ಕಾರುಗಳ ಮಾರಾಟದಲ್ಲಿ ಕಳೆದ ಒಂದು ವರ್ಷದಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಳೆದ ವರ್ಷದ ಕಾರು ಮಾರಾಟ ಪ್ರಮಾಣಕ್ಕಿಂತಲೂ ಇದೀಗ ಮೂರು ಪಟ್ಟು ಹೆಚ್ಚಳವಾಗಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಹೀಗಾಗಿ ಗ್ರಾಹಕರ ಬೇಡಿಕೆ ಪೂರೈಕೆ ಸಹಕಾರಿಯಾಗುವಂತೆ ಮಾರಾಟ ಮಳಿಗೆಗಳು ಮತ್ತು ಸೇವಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಇತ್ತೀಚೆಗೆ ಕಂಪನಿಯು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ ವಿವಿಧ ನಗರಗಳಲ್ಲಿ ಸುಮಾರು 70 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಹೊಸದಾಗಿ ಚಾಲನೆ ಪಡೆದುಕೊಂಡ 70 ಶೋರೂಂಗಳಲ್ಲಿ ಅರ್ಧಕ್ಕೂ ಹೆಚ್ಚು ಶೋರೂಂಗಳು ಮಾರಾಟ ಸೌಲಭ್ಯದ ಜೊತೆಗೆ ಗ್ರಾಹಕರ ಸೇವಾ ಕೇಂದ್ರಗಳನ್ನು ಸಹ ಒಂದೇ ಸೂರಿನಡಿನಲ್ಲಿ ತೆರೆದಿದ್ದು, ಟಾಟಾ ಕಂಪನಿಯು ಹೊಸದಾಗಿ 53 ಶೋರೂಂಗಳನ್ನು ಪ್ರಥಮ ಬಾರಿಗೆ ಟೈರ್ 2 ನಗರಗಳಲ್ಲಿ ಆರಂಭಿಸಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಇನ್ನುಳಿದ 32 ಶೋರೂಂಗಳ ಪೈಕಿ ನಮ್ಮ ಬೆಂಗಳೂರಿನಲ್ಲಿ(7), ಚೆನ್ನೈನಲ್ಲಿ(5) , ಹೈದ್ರಾಬಾದ್‌ನಲ್ಲಿ(4) ಮತ್ತು ಕೊಚ್ಚಿಯಲ್ಲಿ(4) ಶೋರೂಂಗಳಿಗೆ ಚಾಲನೆ ನೀಡಲಾಗಿದ್ದು, ಹೊಸ ಶೋರೂಂಗಳೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ದೇಶಾದ್ಯಂತ ಒಟ್ಟು 980 ಮಾರಾಟ ಮಳಿಗೆಗಳನ್ನು ಹೊಂದಿಂತಾಗಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ದೇಶಾದ್ಯಂತ ಹರಡಿಕೊಂಡಿರುವ 980 ಟಾಟಾ ಶೋರೂಂಗಳಲ್ಲಿ 272 ಶೋರೂಂಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಂಪನಿಯ ಕಾರು ಮಾರಾಟದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದಲೇ ಶೇ. 28ರಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಕಾರುಗಳ ಮಾರಾಟದಲ್ಲಿನ ವಾರ್ಷಿಕ ಬೆಳವಣಿಗೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕಳೆದ 9 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಮಾದರಿಗಳು ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡುತ್ತಿವೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

ಹೊಸ ಪಂಚ್ ಕಾರು ಮಾದರಿಯು ಮೈಕ್ರೊ ಎಸ್‌ಯುವಿ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಮೈಕ್ರೊ ಎಸ್‌ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುತ್ತಿದೆ.

ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.39ರಷ್ಟು ಬೆಳವಣಿಗೆ ಸಾಧಿಸಿದ Tata Motors

1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ವಿವಿಧ ಮಾದರಿಗಳ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.09 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Tata motors registered car sales of 33925 units in october
Story first published: Tuesday, November 2, 2021, 1:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X