ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಕೋವಿಡ್ 2ನೇ ಅಲೆಯು ತಗ್ಗಿದ ನಂತರ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಮಾರಾಟವು ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ಕಳೆದ ತಿಂಗಳು ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಟಾಟಾ ಮೋಟಾರ್ಸ್(Tata Motors) ಕಂಪನಿಯು ಶೇ.53 ರಷ್ಟು ಬೆಳವಣಿಗೆ ಸಾಧಿಸಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಟಾಟಾ ಮೋಟಾರ್ಸ್(Tata Motors) ಕಂಪನಿಯು ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಕಳೆದ ಮೂರು ತಿಂಗಳಿನಿಂದ ಹೊಸ ಕಾರುಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಶೇ. 53 ರಷ್ಟು ಬೆಳವಣಿಯೊಂದಿಗೆ ಸುಮಾರು 54,190 ವಾಹನಗಳನ್ನು ಮಾರಾಟ ಮಾಡಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಈ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು 2020ರ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟಕ್ಕಿಂತಲೂ 2021ರ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ್ದು, ಪ್ರಯಾಣಿಕರ ವಾಹನ ಮಾರಾಟದಲ್ಲಿ ಶೇ. 51 ರಷ್ಟು ಏರಿಕೆಯಾಗಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ಹೊಸ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಪ್ರಯಾಣಿಕರ ಕಾರು ವಿಭಾಗದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಒಟ್ಟು 28,018 ಯುನಿಟ್ ಮಾರಾಟದೊಂದಿಗೆ ಕಳೆದ ವರ್ಷದ ಅಗಸ್ಟ್ ಅವಧಿಗಿಂತ ಶೇ.51 ರಷ್ಟು ಬೆಳವಣಿಗೆ ಸಾಧಿಸಿದ್ದು, ತಿಂಗಳ ಕಾರು ಮಾರಾಟದಲ್ಲಿ ಜುಲೈ ಅವಧಿಗಿಂತಲೂ ಅಗಸ್ಟ್‌ನಲ್ಲಿ ಶೇ.7ರಷ್ಟು ಕುಸಿತ ಅನುಭವಿಸಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಆದರೆ ಅಚ್ಚರಿ ಎಂಬಂತೆ ಟಾಟಾ ಮೋಟಾರ್ಸ್ ಕಂಪನಿಯ ಇವಿ ವಾಹಗಳಿಗೆ ಭರ್ಜರಿ ಬೇಡಿಕೆ ಹರಿದುಬಂದಿದ್ದು, ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮೂಲಕ ಟಾಟಾ ಕಂಪನಿಯು ಅಗಸ್ಟ್‌ನಲ್ಲಿ 1,022 ಯುನಿಟ್ ಮೂಲಕ ಕಳೆದ ವರ್ಷದ ಅಗಸ್ಟ್ ಅವಧಿಗಿಂತಲೂ ಶೇ.234 ರಷ್ಟು ಬೆಳವಣಿಗೆ ಸಾಧಿಸಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಇನ್ನು ವಾಣಿಜ್ಯ ವಾಹನ ವಿಭಾಗದಲ್ಲೂ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಅಗಸ್ಟ್ ಅವಧಿಯಲ್ಲಿ ಒಟ್ಟು 29,781 ಯುನಿಟ್ ಮಾರಾಟ ಮಾಡಿದೆ. ಇದರಲ್ಲಿ 3,609 ಯುನಿಟ್ ವಾಹನಗಳು ವಿದೇಶಿ ಮಾರುಕಟ್ಟೆಗೂ ರಫ್ತುಗೊಂಡಿದ್ದು, ವಾಣಿಜ್ಯ ವಾಹನ ಮಾರಾಟವು ಶೇ. 66 ರಷ್ಟು ಬೆಳವಣಿಗೆ ಕಂಡಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಾಹನ ಮಾರಾಟವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಪ್ರಮುಖ ಕಾರುಗಳ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ಹೊಸ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕೋವಿಡ್ 2ನೇ ಅಲೆ ಪರಿಣಾಮ ತಗ್ಗಿರುವ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ಹೊಸ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಟಾಟಾ ಮೋಟಾರ್ಸ್ ಕಂಪನಿಯು ಈಗಾಗಗಲೇ ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವು ಸರಳ ಸಾಲಸೌಲಭ್ಯಗಳ ಆಯ್ಕೆ ನೀಡುತ್ತಿದ್ದು, ಇದೀಗ ಸುಂದರಂ ಫೈನಾನ್ಸ್ ಜೊತೆಗೂಡಿ ಹೊಸ ಮಾದರಿಯ ಸಾಲಸೌಲಭ್ಯಗಳನ್ನು ಘೋಷಿಸಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ಹೊಸ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಆಕರ್ಷಕ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಕಂಪನಿಯು ಸುಂದರಂ ಫೈನಾನ್ಸ್ ಮೂಲಕ ಪ್ರಮುಖ ಕಾರುಗಳಿಗೆ ಸರಳ ಸಾಲ ಸೌಲಭ್ಯಗಳೊಂದಿಗೆ ಅತಿ ಕಡಿಮೆ ಇಎಂಐ ಆಯ್ಕೆಗಳನ್ನು ನೀಡುತ್ತಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ಹೊಸ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ಜೊತೆಗೂಡಿ ವಿವಿಧ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸುಂದರಂ ಫೈನಾನ್ಸ್ ಮೂಲಕ ಗರಿಷ್ಠ 7 ವರ್ಷಗಳ ಅವಧಿಗೆ ಶೇ.100 ರಷ್ಟು ಎಕ್ಸ್‌ಶೋರೂಂ ದರದ ಮೇಲೆ ಲೋನ್ ಆಫರ್ ನೀಡುತ್ತಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ಹೊಸ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಜೊತೆಗೆ ಕಿಸಾನ್ ಕಾರ್ ಸ್ಕೀಮ್ ಮೂಲಕ ರೈತ ಕುಟುಂಬದ ಹಿನ್ನಲೆಯುಳ್ಳ ಗ್ರಾಹಕರಿಗೆ 6 ಕಂತುಗಳ ಪಾವತಿಗೆ ಹೆಚ್ಚುವರಿ ಕಾಲಾವಕಾಶ ನೀಡಿದ್ದು, ಲೋನ್ ಮರುಪಾವತಿಯ ಸಂದರ್ಭ ಪ್ರತಿ ವರ್ಷ ಒಂದು ಕಂತನ್ನು ನೀವು ಅನುಕೂಲಕರವಾದ ಸಂದರ್ಭದಲ್ಲಿ ಮರುಪಾವತಿ ಮಾಡಬಹುದಾಗಿದೆ.

ಕಳೆದ ತಿಂಗಳು ಅಗಸ್ಟ್ ಅವಧಿಯ ಹೊಸ ವಾಹನ ಮಾರಾಟದಲ್ಲಿ ಶೇ.53ರಷ್ಟು ಬೆಳವಣಿಗೆ ಸಾಧಿಸಿದ Tata Motors

ಹಾಗೆಯೇ ಟಾಟಾ ಹೊಸ ಕಾರುಗಳನ್ನು ಖರೀದಿಸುವ ಗ್ರಾಹಕರು ಕಂಪನಿಯ ವಿನೂತನ ಕ್ಲಿಕ್ ಟು ಡ್ರೈವ್ ವಾಹನ ಖರೀದಿ ಪ್ಲ್ಯಾಟ್‌ಫಾರ್ಮ್ ಮೂಲಕವು ಸಾಲ ಸೌಲಭ್ಯಕ್ಕೆ ಅರ್ಹತೆ ಪಡೆದುಕೊಳ್ಳಬಹುದಾಗಿದ್ದು, ಸಾಲ ಮರುಪಾವತಿ ಅವಧಿಯು ಸಾಲದ ಮೊತ್ತ ಮತ್ತು ವಿವಿಧ ವೆರಿಯೆಂಟ್‌ಗಳನ್ನು ಆಧರಿಸಿ ಬದಲಾಗಲಿದೆ.

Most Read Articles

Kannada
English summary
Tata motors registered domestic sales of 54 190 units in august 2021
Story first published: Thursday, September 2, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X